ಚಾಣಕ್ಯನನ್ನು ಕೌಟಿಲ್ಯ ಎಂದು ಕೂಡ ಕರೆಯುತ್ತಾರೆ. ಪ್ರಸಿದ್ಧ ಗ್ರಂಥವಾದ ಅರ್ಥಶಾಸ್ತ್ರ ಗ್ರಂಥದ ಬರಹಗಾರರು ಇವರಾಗಿದ್ದಾರೆ. ಚಾಣಕ್ಯ ಅವರ ನೀತಿಯಲ್ಲಿ ಜೀವನವನ್ನು ನಡೆಸುವ ಅನೇಕ ಅಂಶಗಳನ್ನು ಕಾಣುತ್ತೇವೆ. ಚಾಣಕ್ಯ ಅವರ ಪ್ರಕಾರ ಮದುವೆಯಾಗುವ ಹೆಣ್ಣುಮಕ್ಕಳಿಗೆ ಯಾವೆಲ್ಲಾ ಗುಣಗಳಿರಬೇಕು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಅರ್ಥಶಾಸ್ತ್ರ ಗ್ರಂಥದ ಕರ್ತೃ ಚಾಣಕ್ಯ ಅವರು ತಮ್ಮ ನೀತಿ ಗ್ರಂಥದಲ್ಲಿ ಜೀವನಕ್ಕೆ ಬೇಕಾಗುವ ಕೆಲವು ಮೌಲ್ಯಗಳನ್ನು ಅನುಸರಿಸಬೇಕಾದ ಅಂಶಗಳನ್ನು ತಿಳಿಸಿದ್ದಾರೆ. ಚಾಣಕ್ಯ ನೀತಿಯ ಪ್ರಕಾರ ಕೆಲವು ಗುಣಗಳನ್ನು ಹೊಂದಿರುವ ಮಹಿಳೆಯರು ಇಡಿ ಕುಟುಂಬವನ್ನು ಸಂತೋಷದಿಂದ ಇಡುತ್ತಾರೆ. ಒಂದು ವೇಳೆ ಯಾವುದೆ ತೊಂದರೆ ಬಂದರೂ ಶೀಘ್ರ ಪರಿಹಾರ ಕಂಡುಕೊಳ್ಳುತ್ತಾರೆ. ಅವರ ಮಕ್ಕಳು ಸಹ ಅತ್ಯಂತ ಯಶಸ್ವಿ ಮತ್ತು ಸಂತೋಷದ ಜೀವನವನ್ನು ನಡೆಸುತ್ತಾರೆ.
ವಿದ್ಯಾವಂತ ಮತ್ತು ಸುಸಂಸ್ಕೃತ ಮಹಿಳೆ ಧಾರ್ಮಿಕ ಗ್ರಂಥಗಳ ಜ್ಞಾನವಿರುವವರಾಗಿರುತ್ತಾರೆ ಹಾಗಿದ್ದಾಗ ಸರಿ ಮತ್ತು ತಪ್ಪುಗಳ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತದೆ. ಅಂತಹ ಮಹಿಳೆ ಉತ್ತಮವಾಗಿ ವರ್ತಿಸುತ್ತಾಳೆ ಮತ್ತು ಮಕ್ಕಳನ್ನು ಸುಸಂಸ್ಕೃತರನ್ನಾಗಿ ಮಾಡುತ್ತಾರೆ. ಹಣವನ್ನು ಉಳಿಸುವ ಗುಣ ಮಹಿಳೆಗೆ ಇರಬೇಕು. ಸ್ವಲ್ಪ ಹಣವನ್ನು ಉಳಿಸುವ ಗುಣವಿದ್ದರೆ ಅಂಥಹ ಮಹಿಳೆ ತುಂಬಾ ಅದೃಷ್ಟಶಾಲಿಯಾಗಿರುತ್ತಾಳೆ. ಹಣ ಉಳಿಸುವ ಪ್ರವೃತ್ತಿಯನ್ನು ಬೆಳೆಸಿಕೊಂಡರೆ ನಮ್ಮ ಕಷ್ಟಕಾಲದಲ್ಲಿ ಪ್ರಯೋಜನಕ್ಕೆ ಬರುತ್ತದೆ. ಸಂವೇದನಾಶೀಲ ಮಹಿಳೆ ತನ್ನ ಕುಟುಂಬವನ್ನು ಪ್ರತಿ ಕಷ್ಟದಿಂದ ರಕ್ಷಿಸುತ್ತಾಳೆ. ಮಹಿಳೆಗೆ ಇರುವ ಕೆಲವು ಪ್ರಮುಖ ಗುಣಗಳಲ್ಲಿ ತಾಳ್ಮೆಯೂ ಒಂದು ಪ್ರಮುಖ ಗುಣವಾಗಿದೆ.
ಯಾವ ಮಹಿಳೆಗೆ ತಾಳ್ಮೆಯಿರುತ್ತದೆಯೊ ಅವಳ ಪತಿ ಬಹಳ ಅದೃಷ್ಟಶಾಲಿ ಏಕೆಂದರೆ ಅಂತಹ ಮಹಿಳೆ ತಾಳ್ಮೆಯಿಂದ ಪ್ರತಿ ಕಷ್ಟವನ್ನು ಎದುರಿಸುತ್ತಾಳೆ. ಎಂಥಹ ಕಷ್ಟ ಬಂದರೂ ತನ್ನ ಪತಿಗೆ ಬೆನ್ನೆಲುಬಾಗಿ ನಿಂತುಕೊಳ್ಳುತ್ತಾಳೆ. ಕಷ್ಟದ ಸಮಯದಲ್ಲಿ ಪತಿಗೆ ಪತ್ನಿಯ ನೆರವು ಸಿಕ್ಕಿದರೆ ಕಷ್ಟವನ್ನು ಅರ್ಧ ಗೆದ್ದಂತೆಯೆ ಎಂಬ ಮಾತನ್ನು ನಾವು ಕೇಳಿರುತ್ತೇವೆ ಅದು ಅಕ್ಷರಶಃ ನಿಜವಾಗಿದೆ. ಮಹಿಳೆ ಮದುವೆಯಾದ ನಂತರ ಗಂಡನ ಮನೆಗೆ ಬರುತ್ತಾಳೆ ಅವಳು ಗಂಡನ ಮನೆಯವರ ಸಂತೋಷವನ್ನು ಬಯಸುವವಳು ಆಗಿರಬೇಕು.
ಗಂಡನ ಸುಖ-ದುಃಖಗಳಲ್ಲಿ ತಾನು ಭಾಗಿಯಾಗಬೇಕು. ಗಂಡನ ಮನೆಯ ಕಷ್ಟಗಳನ್ನು ನೆರೆಹೊರೆಯವರ ಹತ್ತಿರ ಆಗಲಿ ಅಥವಾ ತವರುಮನೆಯಲ್ಲಿ ಆಗಲಿ ಹೇಳಿಕೊಳ್ಳಬಾರದು. ಮದುವೆಯಾಗುವ ಪ್ರತಿಯೊಂದು ಹೆಣ್ಣು ಕೆಲವು ಗುಣಗಳನ್ನು ಹೊಸದಾಗಿ ಕಲಿತುಕೊಳ್ಳಬೇಕು ಇನ್ನು ಕೆಲವು ಗುಣಗಳನ್ನು ಬದಲಾಯಿಸಿಕೊಳ್ಳಬೇಕು. ಈ ಮಾಹಿತಿಯನ್ನು ಎಲ್ಲಾ ಹೆಣ್ಣುಮಕ್ಕಳು ಪಾಲಿಸುವುದು ಒಳ್ಳೆಯದು.