ಆತ್ಮೀಯ ಓದುಗರೇ ನಾವುಗಳು ಇಲ್ಲಿ ತಿಳಿಸಲು ಬಯಸುತ್ತಿರುವ ವಿಚಾರ ಕೆಲವರಿಗೆ ಹಾಗೂ ಅವರ ಜೀವನಕ್ಕೆ ಉಪಯೋಗವಾಗುವಂತಿದೆ ಹಾಗಾಗಿ ನಿಮ್ಮ ಈ ಮಾಹಿತಿ ಹಂಚಿಕೊಳ್ಳಲು ಬಯಸಿದ್ದೇವೆ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಜೀವನಕ್ಕೆ ಸ್ಪೂರ್ತಿ ಸಿಗಬಹುದು ಮೌರ್ಯ ಸಾಮ್ರಾಜ್ಯದ ಸ್ಥಾಪನೆಗೆ ಕಾರಣರಾದ ಚಾಣಕ್ಯ ಯಾರಿಗೆ ತಾನೇ ಗೊತ್ತಿರಲ್ಲ ಹೇಳಿ ಎಲ್ಲರಿಗೂ ತಿಳಿದಿರುವಂತೆ ಚಾಣಕ್ಯ ಹೆಸರೇ ತಿಳಿಸುವಂತೆ ಬುದ್ಧಿವಂತ ಎಂದು.

ಚಾಣಕ್ಯನಿಗೆ ಕೌಟಿಲ್ಯ, ವಿಷ್ಣು ಗುಪ್ತ ಎಂಬ ಹೆಸರುಗಳು ಸಹ ಇವೆ. ಈ ಚಾನಕ್ಯನನ್ನು ಭಾರತದ ಮೊದಲ ಅರ್ಥ ಶಾಸ್ತ್ರಜ್ಞ ಎನ್ನಬಹುದು. ಅರ್ಥ ಶಾಸ್ತ್ರ ಎಂದರೆ ನಮ್ಮ ತಲೆಗೆ ಬರುವ ಯೋಚನೆ ಎಕನಾಮಿಕ್ಸ್ ಹಣಕಾಸಿನ ವಿಚಾರ. ಆದ್ರೆ ಕೌಟಿಲ್ಯ ಅಥವಾ ಚಾಣಕ್ಯ ಬರೆದಿರುವ ಅರ್ಥಶಾಸ್ತ್ರ ಪುಸ್ತಕದಲ್ಲಿ ರಾಜಕೀಯದ ಬಗ್ಗೆ ವಿವರಿಸಲಾಗಿದೆ. ಅದರಲ್ಲಿಯೇ ರಾಜಕೀಯದ ಒಂದು ಭಾಗವಾಗಿ ಒಬ್ಬ ರಾಜ ತನ್ನ ರಾಜ್ಯದ ಜನತೆಯ ಒಳಿತಿಗಾಗಿ ಹೇಗೆ ಹಣವನ್ನು ವ್ಯಯ ಮಾಡಬೇಕು ಎಂಬುದನ್ನು ಸಹ ತಿಳಿಸಿದ್ದಾರೆ. ಇವರ ಅರ್ಥ ನೀತಿಗಳು ತುಂಬಾನೇ ಪ್ರಸಿದ್ಧಿ ಹೊಂದಿದೆ ಈ ನೀತಿಗಳು ನಮಗೆ ಈಗಿನ ಆಧುನಿಕ ಯುಗದಲ್ಲಿ ಅಳವಡಿಸಿಕೊಂಡರೆ ತುಂಬಾ ಪ್ರಯೋಜನಕಾರಿ ಅಂತು ಹೌದು. ಅದಕ್ಕಾಗಿ ಕೆಲವು ಸೂತ್ರಗಳಿವೆ ಅದನ್ನ ತಿಳಿದುಕೊಳ್ಳೋಣ ಬನ್ನಿ.

ನಮ್ಮ ಈಗಿನ ಸಮಾಜದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಅನುಸಾರವಾಗಿ ಒಂದು ಕಥೆ ಇದೆ. ಒಂದು ಊರಿನಲ್ಲಿ ಹಾವು ಎಲ್ಲರಿಗೂ ಕಚ್ಚತಾ ಇರತ್ತೆ ಇದರಿಂದಾಗಿ ಆ ಊರಿನ ಜನರೆಲ್ಲ ಮನೆಯಿಂದ ಹೊರಗೆ ಹೋಗೋಕೆ ಭಯ ಪಡಿಕೆ ಶುರು ಮಾಡ್ತಾರೆ, ಹೀಗೆ ನಡೀತಾ ಇದ್ದಾಗ ಆ ಊರಿಗೆ ಒಬ್ಬ ಸನ್ಯಾಸಿ ಬರ್ತಾರೆ ಸನ್ಯಾಸಿ ಬಂದಾಗ ಊರಿನ ಜನ ಅವರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಾಗ ಆ ಸನ್ಯಾಸಿ ಹಾವಿಗೆ ನೀನು ಹೀಗೆ ಎಲ್ಲರನ್ನೂ ಕಚ್ಚಿ ಸಾಯಸ್ತಾ ಇದ್ರೆ ನಾನು ನಿಂಗೆ ಕಲ್ಲಾಗುವಂತೆ ಶಾಪ ಕೊಡ್ತೀನಿ ಅಂತ ಹೇಳ್ತಾನೆ. ಪಾಪ ಆ ಹಾವು ಸನ್ಯಾಸಿ ಎಲ್ಲಿ ತನಗೆ ಕಲ್ಲಾಗುವಂತೆ ಎಲ್ಲಿ ಶಾಪ ಕೊಟ್ಬಿಟ್ರೆ ಅಂತ ಹೆದರಿ ಅವತ್ತಿಂದ ಯಾರ ತಂಟೆಗೂ ಹೋಗದೆ ತನ್ನ ಪಾಡಿಗೆ ತಾನು ಸುಮ್ನೆ ಇರ್ತಾ ಇತ್ತು.

ಆ ಹಾವು ಸುಮ್ನೆ ಇರೋದು ನೋಡಿ ಆ ಊರಿನ ಮಕ್ಕಳೆಲ್ಲ ಅದನ್ನ ಎತ್ಕೊಂಡು ಆಟ ಆಡೋದು ಅದಕ್ಕೆ ಕಲ್ಲು ಎಸೆಯೋದು ಎಲ್ಲಾ ಮಾಡ್ತಾ ಇದ್ರು ಹೀಗೆ ಮಾಡ್ತಾ ಇದ್ದಾಗ ಒಂದು ದಿನ ಅದೇ ಸನ್ಯಾಸಿ ಅಲ್ಲಿ ಬಂದಾಗ ಅವರು ಹಾವನ್ನ ನೋಡಿ ಅಚ್ಚರಿ ಆಗತ್ತೆ ಅಲ್ಲಿನ ಮಕ್ಳು ಅದಕ್ಕೆ ಕಲ್ಲು ಒಗಿಯೋದ ನೋಡ್ತಾರೆ ಆ ಹಾವು ಕೂಡ ಸನ್ಯಾಸಿಯನ್ನು ನೋಡಿ, ನೋಡು ನಿನ್ನ ಮಾತು ಕೇಳಿ ಸುಮ್ನೆ ಇದ್ದಿದ್ದಕ್ಕೆ ನಂಗೆ ಇವತ್ತು ಈ ಪರಿಸ್ಥಿತಿ ಬಂದಿದೆ ಎಂದಿತು. ಆ ಹಾವಿನ ಮಾತು ಕೇಳಿ ಸನ್ಯಾಸಿ ನಾನು ನಿಂಗೆ ಯಾರಿಗೂ ಕಚ್ಚಿ ಸಾಯಿಸಬೇಡ ಅಂತ ಹೇಳಿದ್ದೆ ಹೊರತು ನಿನ್ನ ಹೆಡೆಯೆತ್ತಿ ಬಸ್ಸುಗುಟ್ಟಿ ಯಾರನ್ನೂ ಹೆದರಿಸಬೇಡ ಅಂತ ಏನು ಹೇಳಲಿಲ್ಲ ಎಂದರು.

ಈ ಕತೆಯನ್ನ ಯಾಕೆ ಹೇಳ್ತಿದೀವಿ ಅಂದ್ರೆ ಇಂದಿನ ಆಧುನಿಕ ಜಗತ್ತಿನಲ್ಲಿ ನಾವು ಯಾರಿಗೂ ಏನೂ ತೊಂದರೆ ಮಾಡದೆ ನಮ್ಮಷ್ಟಕ್ಕೆ ನಾವಿದ್ದರು ಬೇಕು ಅಂತಲೇ ನಮಗೆ ತೊಂದರೆ ಉಂಟು ಮಾಡುವ ಕೆಲವು ಜನರು ಇರುತ್ತಾರೆ, ನಾವು ಅಂಥವರ ಜೊತೆ ಸೇಣೆಸಾಡಬೇಕಾದ ಪರಿಸ್ಥಿತಿ ಧೈರ್ಯ ಎರಡೂ ನಮ್ಮಲ್ಲಿ ಇರಬೇಕು. ಚಾಣಕ್ಯನ ನೀತಿ ಕೂಡ ನಮಗೆ ಇದನ್ನೇ ಹೇಳಿಕೊಡತ್ತೆ.

ನಾವು ತುಂಬಾ ಒಳ್ಳೆಯವರಾಗಿ ಇದ್ದರೆ ಈ ಜಗತ್ತು ನಮ್ಮನ್ನ ಅವರಿಗೆ ತಕ್ಕಂತೆ ಬಳಸಿಕೊಂಡು ಆಮೇಲೆ ವೇಸ್ಟ್ ಪೇಪರ್ ತರ ಬಿಸಾಕ್ತಾರೆ. ಹಾಗಾಗಿ ನಾವು ರಾಜ ಸತ್ಯಹರಿಶಂದ್ರನ ಹಾಗೇ ತುಂಬಾ ಒಳ್ಳೆಯವರು ಆಗಿರೋದು ಬೇಡ ಹಾಗೆ ಕೆಟ್ಟವರು ಆಗೋದು ಬೇಡ. ಅಂದ್ರೆ ಬದುಕುವ ಜೀವನ ನಡೆಸುವ ಕೌಶಲ್ಯವನ್ನು ರೂಢಿಸಿಕೊಂಡು, ಅನಾವಶ್ಯಕ ಯಾರು ನಮ್ಮ ತಂಟೆಗೆ ಬರದಂತೆ ನೋಡಿಕೊಂಡು ಹೋಗಬೇಕು.

ಇನ್ನು ಕೌಟಿಲ್ಯ ಹೇಳುವ ಎರಡನೇ ನಿಯಮ ಏನಪ್ಪಾ ಅಂದ್ರೆ, ಗೆಳೆತನದಲ್ಲಿ ಸ್ವಾರ್ಥ. ಹೌದು ಸ್ವಾರ್ಥ ಅನ್ನೋದು ಈಗಿನ ಕಾಲದ್ದಲ್ಲ ಹಿಂದಿನ ಕಾಲದಿಂದಲೂ ಸ್ವಾರ್ಥ ಮನುಷರಲ್ಲಿತ್ತು. ತನ್ನ ಸ್ವಾರ್ಥ ಸಾಧನೆಗಾಗಿ ಒಬ್ಬ ವ್ಯಕ್ತಿ ಎಂತಾ ನೀಚ ಮಟ್ಟಕ್ಕೂ ಇಳಿಯಬಲ್ಲ. ಸ್ನೇಹಿತರಲ್ಲಿ ಸಹ ಸ್ವಾರ್ಥ ಇರತ್ತೆ ಯಾವತ್ತೂ ಇಲ್ದೆ ಇರೋ ಸ್ನೇಹ ಒಂದು ದಿನ ಅತಿಯಾಗಿ ಸ್ನೇಹಿತರ ಜೊತೆ ಒಡನಾಟ ಮಾಡ್ತಾ ಇದ್ದಾರೆ ಅಂದ್ರೆ ಅದರಲ್ಲೇ ನಾವು ತಿಳ್ಕೋ ಬೇಕು ಅವರಿಗೆ ನಮ್ಮಿಂದ ಏನೂ ಒಂದು ಕೆಲ್ಸ ಆಗ್ಬೇಕು ಅದಕ್ಕೆ ಹೀಗೆಲ್ಲ ತೀರಾ ಒಡನಾಟ ಮಾಡ್ತಾ ಇದ್ದಾರೆ ಎಂದು. ಹಾಗಾಗಿ ಸ್ನೇಹ ಮಾಡುವ ಮೊದಲು ಅದರಲ್ಲೂ ದೊಡ್ಡ ದೊಡ್ಡ ಹುದ್ದೆಯಲ್ಲಿ ಇರುವವರು ನಮಗೆ ಈ ವ್ಯಕ್ತಿ ಸರಿಯಾಗಿ ಕಾರ್ಯ ನಿರ್ವಹಿಸುವ, ಪ್ರಾಮಾಣಿಕ ವ್ಯಕ್ತಿ ಎನಿಸಿದಾಗ ಮಾತ್ರ ಅವರೊಂದಿಗೆ ಸ್ನೇಹ ಸಂಬಂಧ ಬೆಳೆಸಿ.

ಚಾಣಕ್ಯ ಹೇಳುವ ಮೂರನೇ ಸೂತ್ರ ಎಂದರೆ, ರಹಸ್ಯ. ಹೌದು ನಮ್ಮ ನಮ್ಮ ರಹಸ್ಯಗಳು ಅಂದ್ರೆ ಸೀಕ್ರೇಟ್ ನ ಯಾರ ಜೊತೆಗೂ ಹೇಳಿಕೊಳ್ಳಬೇಡಿ ಅಂತ ಹೇಳ್ತಾರೆ ಚಾಣಕ್ಯ. ಕಾರಣ ಇಷ್ಟೇ ಜನರು ತಮ್ಮ ಲಾಭಕ್ಕೆ ಅನುಗುಣವಾಗಿ ಬದಲಾಗುತ್ತಾರೆ ಹೀಗಾಗಿ ಯಾವುದೇ ಸಂದರ್ಭದಲ್ಲೂ ನಮ್ಮ ಯಾವುದೇ ರಹಸ್ಯಗಳನ್ನು ಯಾರಲ್ಲೂ ಹೇಳಿಕೊಳ್ಳಬಾರದು ಎನ್ನುತ್ತಾರೆ ಶಾಲೆ, ಕಾಲೇಜ್, ಕಂಪನಿಗಳಲ್ಲಿ ಕೆಲಸ ಮಾಡುವವರ ಜೊತೆ ಹೀಗೆ ಯಾರ ಜೊತೆಗೂ ನಮ್ಮ ರಹಸ್ಯಗಳನ್ನು ಹೆಳಿಕೊಳ್ಳಬಾರದು ಯಾಕಂದ್ರೆ ಅವ್ರು ಇವತ್ತು ನಮ್ಮವರ ಹಾಗೇ ಇದ್ದು ನಾಳೆ ದಿನ ತಮ್ಮ ಬಣ್ಣ ಬದಲಿಸುತ್ತಾರೆ. ಹಾಗಾಗಿ ಯಾರ ಬಳಿಯೂ ನಮ್ಮ ಗುಟ್ಟು ರಹಸ್ಯ ಹೇಳಿಕೊಳ್ಳಬಾರದು. ಅದರಲ್ಲೂ ನಮ್ಮ ಕೌಟುಂಬಿಕ ವಿಷಯ ಬ್ಯುಸಿನೆಸ್ ವಿಷ್ಯ ಇಂತವುಗಳು ಆದಷ್ಟು ನಮ್ಮಲ್ಲೇ ಇದ್ದರೆ ಒಳಿತು.

ಇನ್ನು ಚಾಣಕ್ಯ ಹೇಳುವ ನಾಲ್ಕನೇ ಸೂತ್ರ ಎಂದರೆ, ಯಾವುದೇ ಒಂದು ಕೆಲ್ಸ ಮಾಡಲು ಶುರು ಮಾಡಿದ ಮೇಲೆ ಅದನ್ನ ಅರ್ಧಕ್ಕೆ ಬಿಡಬೇಡಿ. ಆರಂಭ ಅಂತ ಇದ್ದ ಮೇಲೆ ಅಂತ್ಯವೂ ಇರಲೇ ಬೇಕು ಹಾಗೇ ಯಾವುದೇ ಒಂದು ಕೆಲಸ ಶುರು ಆದರೂ ಅದು ಕೊನೆಗೊಳ್ಳಲೆ ಬೇಕು. ಹಾಗೇ ಕೆಲ್ಸ ಪ್ರಾರಂಭಿಸಿದಾಗ ಮಧ್ಯದಲ್ಲಿ ಅಯ್ಯೋ ನನ್ನಿಂದ ಈ ಕೆಲ್ಸ ಆಗಲ್ಲ ಎಂದು ಅರ್ಧಕ್ಕೆ ಬಿಡುವುದಲ್ಲ ಪ್ರಾಮಾಣಿಕತೆ, ಶ್ರದ್ಧೆ ಭಕ್ತಯಿಂದ ಪೂರ್ಣಗೊಳಿಸಬೇಕು. ಪ್ರಾಮಾಣಿಕತೆಗೆ ಬೆಲೆ ಜಾಸ್ತಿ ಹಾಗೇ ನಾವು ಶ್ರದ್ಧೆ ಪ್ರಾಮಾಣಿಕತೆ ಇಂದ ಮಾಡಿದ ಕೆಲಸಕ್ಕೆ ದೇವರು ಒಂದಲ್ಲ ಒಂದು ದಿನ ಫಲ ಕೊಡುತ್ತಾನೆ. ಕೆಲವರು ತಮ್ಮ ಪ್ರಾಮಾಣಿಕ ಪ್ರಯತ್ನದಿಂದ ಮೇಲೆ ಬಂದು ಯಶಸ್ಸು ಗಳಿಸುತ್ತಾರೆ ಇನ್ನು ಕೆಲವರು ಸೋಲುತ್ತಾರೆ. ನಿರಂತರ ಪ್ರಾಮಾಣಿಕ ಪರಿಶ್ರಮದಿಂದ ಮಾತ್ರ ಜಯ ನಮ್ಮದಾಗುತ್ತದೆ.

ಆಚಾರ್ಯ ಚಾಣಕ್ಯ ಅರ್ಥತ್ ಕೌಟಿಲ್ಯ ಇಂಥದ್ದೇ ಹಲವಾರು ನಿಯಮಗಳನ್ನು ತಿಳಿಸಿದ್ದಾರೆ. ಅವುಗಳನ್ನು ನಾವು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಾವು ಸಹ ಯಶಸ್ಸು ಕಾಣುವುದರಲ್ಲಿ ಯಾವುದೇ ಸಂದೇಹವಿಲ್ಲ.

ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466

Leave a Reply

Your email address will not be published. Required fields are marked *