ನಮ್ಮ ಭಾರತ ಹಲವಾರು ಶ್ರೇಷ್ಠ ವ್ಯಕ್ತಿಗಳನ್ನು ಮತ್ತು ಅವರ ಆದರ್ಶಗಳನ್ನು ನಮಗೆ ಉಡುಗೊರೆಯಾಗಿ ನೀಡಿದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಆಚಾರ್ಯ ಚಾಣಕ್ಯ ಅವರು ಕೂಡ ಒಬ್ಬರು. ಅವರ ಮಾತುಗಳು, ನೀತಿಗಳು ಮತ್ತು ಕಟುವಾದ ಸತ್ಯಗಳು ಅತ್ಯಂತ ಅದ್ಭುತವಾಗಿದೆ. ಮನುಷ್ಯ ಇವುಗಳಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾಗಿದೆ. ಈ ಸಮಾಜದಲ್ಲಿ ಉತ್ತಮವಾಗಿ ಬದುಕಬೇಕು ಎಂದರೆ ಚಾಣಕ್ಯರ ನೀತಿಗಳನ್ನು ಪಾಲಿಸಬೇಕು. ನಾವು ಇಲ್ಲಿ ಕೆಲವು ಚಾಣಕ್ಯರ ನೀತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಮೊದಲು ಮಾಡಿದ ತಪ್ಪಿಗೆ ಚಿಂತೆ ಮಾಡುತ್ತಾ ಕುಳಿತುಕೊಳ್ಳಬಾರದು. ಚಿಂತೆ ಮಾಡುತ್ತಾ ಕುಳಿತರೆ ಸಮಯ ಹಾಳಾಗುತ್ತದೆಯೇ ಹೊರತು ಯಾವುದೇ ಪ್ರಯೋಜನವಿಲ್ಲ. ಹಾಗಾಗಿ ಭವಿಷ್ಯತ್ತಿನ ಬಗ್ಗೆ ಯೋಚನೆ ಮಾಡಿ ಮುಂದಿನ ಕೆಲಸವನ್ನು ಕೈಗೊಳ್ಳಬೇಕು. ಇಲ್ಲವಾದಲ್ಲಿ ಜೀವನದಲ್ಲಿ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಹಾಗೆಯೇ ಅತಿಯಾಗಿ ಹಣದ ಆಸೆಯನ್ನು ಇಟ್ಟುಕೊಳ್ಳಬಾರದು. ಹಣಕ್ಕಾಗಿ ಬೇರೆಯವರಿಗೆ ಮೋಸ ಮಾಡಬಾರದು. ಹಣ ಇಂದು ಬಂದರೆ ನಾಳೆ ಹೋಗುತ್ತದೆ.

ಹಣಕ್ಕಾಗಿ ಬೇರೆಯವರಿಗೆ ನೋವು ಮಾಡಿ ಸ್ವಾರ್ಥ ಭಾವನೆಯಿಂದ ಹಣವನ್ನು ಗಳಿಸಿದರೆ ಯಾವುದೇ ಲಾಭವಿಲ್ಲ. ಮುಂದೆ ಇದರ ಪರಿಣಾಮವನ್ನು ಅನುಭವಿಸಬೇಕಾಗುತ್ತದೆ. ಹಲವು ಬಾರಿ ಕುಡಿಯುವಾಗ ವಿಷವೂ ಕೂಡ ಸಿಹಿಯಾಗಿರುತ್ತದೆ. ಆದ್ದರಿಂದ ಹಣ ಮತ್ತು ಅಧಿಕಾರಕ್ಕೆ ಅತಿಯಾದ ಬೆಲೆ ಕೊಟ್ಟು ಜೀವನ ಮಾಡಬಾರದು. ಸಿಹಿಮಾತುಗಳು ಕಾರ್ಯಗಳಲ್ಲಿ ಯಶಸ್ವಿಗೊಳಿಸುತ್ತದೆ. ಯಾರೊಂದಿಗಾದರೂ ಮಾತನಾಡುವಾಗ ಸೌಮ್ಯದಿಂದ ನಗುಮುಖದೊಂದಿಗೆ ಮಾತನಾಡಬೇಕು. ಏಕೆಂದರೆ ಮಾತು ಜೀವನದಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತದೆ.

ಹಾಗೆಯೇ ಯಾವುದೇ ಕಾರಣಕ್ಕೂ ಇತರರಿಗೆ ದುರ್ಬಲತೆಯ ಬಗ್ಗೆ ಪ್ರದರ್ಶನವನ್ನು ಮಾಡಬಾರದು. ಕೆಲವೊಮ್ಮೆ ಹಣ ಇರುವವರೊಂದಿಗೆ ಅಥವಾ ಅಧಿಕಾರ ಇರುವವರೊಂದಿಗೆ ದುರ್ಬಲತೆಯನ್ನು ಪ್ರದರ್ಶನ ಮಾಡುವ ಸಂಭವ ಬರುತ್ತದೆ. ಇದರಿಂದ ವ್ಯಕ್ತಿಗಳು ಕೀಳರಿಮೆಯಿಂದ ನೋಡುವ ಸಂಭವ ಇರುತ್ತದೆ. ಹಾಗೆಯೇ ಬಲಹೀನ ವ್ಯಕ್ತಿಯನ್ನು ಯಾವಾಗಲೂ ಕಡೆಗಾಣಿಸಬಾರದು. ಬಲಹೀನರಾದವರು ತಾವು ಉದ್ಧಾರ ಆಗುವುದಕ್ಕಿಂತ ಬೇರೆಯವರನ್ನು ಕೆಳಗೆ ಇಳಿಸಲು ಮತ್ತು ಅವರನ್ನು ಕೆಳಮಟ್ಟಕ್ಕೆ ತರುವ ಬಗ್ಗೆ ಯೋಚನೆ ಮಾಡುತ್ತಾರೆ.

Leave a Reply

Your email address will not be published. Required fields are marked *