ಸಾಮಾನ್ಯವಾಗಿ ಕೆಲವು ಜನರ ತಪ್ಪು ಹವ್ಯಾಸಗಳನ್ನ ನೋಡಿ ನಾಚಿಕೆಯಿಲ್ಲದವರು ಅಂತಾ ಬೈಯ್ಯುತ್ತೇವೆ ಆದರೆ ಆಚಾರ್ಯ ಚಾಣಕ್ಯ ನು ನಾಚಿಕೆಯಿಲ್ಲದ ಜೀವಿಗಳನ್ನು ತುಂಬಾ ಬುದ್ಧಿವಂತರು ಅಂತಾ ಹೇಳಿದ್ದಾರೆ. ಕೆಲವು ವಿಷಯದಲ್ಲಿ ನಾಚಿಕೆಯಿಲ್ಲದವರು ಜೀವನದಲ್ಲಿ ಮಹಾನ್ ಕಾರ್ಯಗಳನ್ನು ಮಾಡುತ್ತಾರಂತೆ ಹಾಗೂ ಸುಖೀ ಜೀವನ ನಡೆಸುತ್ತಾರೆ ಎಂದು ಹೇಳುತ್ತಾರೆ.ಚಿಕ್ಕ ಚಿಕ್ಕ ವಿಷಯದಲ್ಲಿ ನಾಚಿಕೆ ಪಡುವವರು ಯಾವುದೇ ಕಾರ್ಯ ಮಾಡುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.
ಆಚಾರ್ಯ ಚಾಣಕ್ಯರು ಈ ಮೂರು ವಿಷಯದಲ್ಲಿ ನಾಚಿಕೆ ಪಡುವವರಿಕ್ಕಿಂತ ನಾಚಿಕೆ ಪಡದವರು ಹೆಚ್ಚು ಸುಖವಾಗಿರುತ್ತಾರೆ ಅಂತಾ ಹೇಳಿದ್ದಾರೆ.ಮೊದಲನೇಯದಾಗಿ ಯಾರು ಹೆಚ್ಚಾಗಿ ಊಟ ಮಾಡಲು ನಾಚುವರೋ ಅವರು ಹೆಚ್ಚು ಸುಖವಾಗಿ ಇರುವುದಿಲ್ಲ, ಹಸಿವಿನಿಂದ ನರಳಬೇಕಾಗುತ್ತದೆ. ಇದರಿಂದಾಗಿ ಊಟದ ವಿಷಯದಲ್ಲಿ ನಾಚಿಕೆ ಪಡಬಾರದು.
ಎರಡನೇಯದಾಗಿ ಯಾರು ಜ್ಞಾನ ಪಡೆಯಲು , ವಿದ್ಯಾಭ್ಯಾಸ ಪಡೆಯಲು ಸಂಕೋಚ ಪಡುತ್ತಾರೋ ಅವರಿಗೆ ಸರಿಯಾದ ಜ್ಞಾನವೃದ್ಧಿ ಯಾಗುವುದಿಲ್ಲ ಹಾಗಾಗಿ ಜ್ಞಾನದ ವಿಚಾರದಲ್ಲಿ ಹೆಚ್ಚು ಸಂಕೋಚ ಬೇಡ. ಮೂರನೇಯದಾಗಿ ಯಾವ ವ್ಯಕ್ತಿ ಹಣದ ವಿಚಾರದಲ್ಲಿ ನಾಚಿಕೆಪಡುತ್ತಾನೋ ಅ ವ್ಯಕ್ತಿ ಶ್ರೀಮಂತಿಕೆ ಪಡೆಯುವುದಿಲ್ಲ. ಯಾರು ಸಾರ್ವಜನಿಕರ ಅವಮಾನಕ್ಕೆ ವ್ಯಾಪಾರ , ವ್ಯವಹಾರ ಮಾಡಲು ಮುಂದಾಗುವುದಿಲ್ಲ ಅವರು ಆರ್ಥಿಕ ಪ್ರಗತಿ ಹೊಂದುವುದಿಲ್ಲ ಎಂದು ಚಾಣಕ್ಯರು ಹೇಳಿದ್ದಾರೆ.