ಚಾಣುಕ್ಯನು ಕೌಟಿಲ್ಯ ಎಂದು ಪ್ರಸಿದ್ಧಿಯಾಗಿದ್ದಾನೆ ಕೌಟಿಲ್ಯನ ನೀತಿಯನ್ನು ಬಹಳಸ್ಟು ಜನರ ಅನುಸರಿಸುತ್ತಾರೆ ಭಾರತ ಕಂಡ ಶ್ರೇಷ್ಠ ತಂತ್ರಜ್ಞರು ತತ್ವಜ್ಞಾನಿಗಳು ಅರ್ಥಶಾಸ್ತ್ರಜ್ಞರು ಮತ್ತು ಶಿಕ್ಷಕರಲ್ಲಿ ಒಬ್ಬರು ಚಾಣಕ್ಯ ಅವರು ಸಾಕಷ್ಟು ಜೀವನ ಪಾಠಗಳನ್ನು ತಿಳಿಸಿದ್ದಾರೆ ಅವರ ಮನಸ್ಸಿನ ಅಭಿಪ್ರಾಯವನ್ನು ಹೀಗೆಂದು ತಿಳಿಯಲು ಯಾರಿಗೂ ಸಾಧ್ಯವಿರಲಿಲ್ಲ ಬಹಳ ರಹಸ್ಯವಾಗಿ ಕೆಲಸ ಮಾಡುತ್ತಾರೆ ಬಹುದೂರದ ಅಲೋಚನೆ ಹೊಂದಿದ್ದರು
ಯಾವ ಕೆಲಸದಲ್ಲಿಯೇ ಆಗಲಿ ಆತ ಇಟ್ಟ ಗುರಿ ಮಾಡಿದ ಅಂದಾಜು ಎಂದೂ ತಪ್ಪುತ್ತಿರಲಿಲ್ಲ ಹೊರನೋಟಕ್ಕೆ ತುಂಬ ಕಠಿಣ ಸ್ವಭಾವದವರು. ಅಪಾರ ಲೋಕಾನುಭವವಿದ್ದವನು ಜೀವನಕ್ಕೆ ಬೇಕಾದ ನೀತಿ ಪಾಠಗಳನ್ನು ಹಾಗೂ ಮೌಲ್ಯಗಳನ್ನು ಯಾವುದೇ ವ್ಯಕ್ತಿ ರಾಜಕೀಯ ಕೌಟುಂಬಿಕ ಹಾಗೂ ಅರ್ಥ ಶಾಸ್ತ್ರದಲ್ಲಿ ಹೀಗೆ ಅನೇಕ ವಿಭಾಗದಲ್ಲಿ ಹೇಗೆ ಇರಬೇಕು ಎಂಬುದನ್ನು ತಿಳಿಸಿದ್ದಾರೆ ನಾವು ಈ ಲೇಖನದ ಮೂಲಕ ಕೌಟಿಲ್ಯನ ನಾಲ್ಕು ನೀತಿಗಳನ್ನು ತಿಳಿದುಕೊಳ್ಳೋಣ.
ಚಾಣುಕ್ಯನು ಕೌಟಿಲ್ಯ ಎಂದು ಪ್ರಸಿದ್ಧಿಯಾಗಿದ್ದಾನೆ ಕೌಟಿಲ್ಯನ ನೀತಿಯನ್ನು ಬಹಳಸ್ಟು ಜನರ ಅನುಸರಿಸುತ್ತಾರೆ ಸಮಾಜದಲ್ಲಿ ಅರ್ಥ ಶಾಸ್ತ್ರ ಕುಟುಂಬದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಹೀಗೆ ಜೀವನದ ವಿವಿಧ ಕ್ಷೇತ್ರಗಳ ಬಗ್ಗೆ ಹೇಗಿರಬೇಕು ಹಾಗೂ ಹೇಗೆ ಬದುಕಬೇಕು ಎನ್ನುವುದು ಹಾಗೆ ಸುಖ ಜೀವನದ ಹಲವು ರಹಸ್ಯಗಳ ಕುರಿತು ಕೌಟಿಲ್ಯನು ತನ್ನ ನೀತಿಯಲ್ಲಿ ಭಾರತದ ಇತಿಹಾಸದಲ್ಲಿ ಕೌಟಿಲ್ಯನನ್ನು ಶ್ರೇಷ್ಠ ಪಂಡಿತ ಎಂದು ಕರೆಯಲಾಗಿದೆ .ಹಾಗೆಯೇ ಅವರು ನಾಲ್ಕು ಮಾತನ್ನು ಹೇಳಬಾರದು ಎಂದು ಹೇಳಿದ್ದಾರೆ ಅವು ಯಾವುದು ಎಂದರೆ ನಮ್ಮ ಜೀವನದಲ್ಲಿ ಅದ ಅಪಮಾನವನ್ನು ಯಾರೊಂದಿಗೂ ಹೇಳಬಾರದು ನಾವು ಬೇರೆಯವರಿಗೆ ಹೇಳಿದರೆ ಅದನ್ನು ಪದೆ ಪದೆ ಕೇಣಕಿ ಅಪಹಾಸ್ಯ ಮಾಡುತ್ತಾರೆ ಕೆಲವಷ್ಟು ಜನರು ನಮ್ಮನ್ನು ಅವಮಾನ ಮಾಡಬೇಕು ಎಂದು ಕಾಯುತ್ತಾ ಇರುತ್ತಾರೆ ಹಾಗಾಗಿ ನಾವು ಯಾವಾಗಲೂ ನಮಗಾದ ಅಪಮಾನವನ್ನು ಯಾರಿಗೂ ಹೇಳಬಾರದು ಸಂತೋಷದ ವಿಚಾರಗಳನ್ನು ಹಂಚಿಕೊಳ್ಳಬೇಕು ಆದ ಅಪಮಾನ ಕನಸು ಎಂದು ತಿಳಿದು ಮರೆತು ಬಿಡಬೇಕು .
ಮನೆ ಮತ್ತು ಕುಟುಂಬದ ಗುಟ್ಟು ಯಾರ ಮುಂದೆಯೂ ಹೇಳಬಾರದು ಮನೆಯಲ್ಲಿ ನಡೆಯುವ ಹಲವು ಮಾತುಗಳು ಹೊರಗಿನವರು ಹೇಳುವ ಮಾತುಗಳಿಂದಲೇ ನಡೆಯುತ್ತದೆ ಕುಟುಂಬದ ಸಣ್ಣ ಪುಟ್ಟ ವಿಚಾರಗಳನ್ನು ಇನ್ನೊಬ್ಬರ ಮುಂದೆ ಹೇಳುವುದರಿಂದ ಬೇರೆಯವರು ಅದರ ಲಾಭ ಪಡೆದು ಕುಟುಂಬದ ಕಲಹಕ್ಕೆ ಕಾರಣ ರಾಗುತ್ತಾರೆ ಇದರಿಂದ ಮನಸ್ಸಿಗೆ ದುಃಖ ಹಾಗೂ ಅಶಾಂತಿ ಉಂಟಾಗುತ್ತದೆ ಹಾಗೆಯೇ ಹೆಂಡತಿಯ ವಿಷಯವಾಗಿ ಯಾರ ಮುಂದೆಯೂ ಚರ್ಚೆ ಮಾಡಬಾರದು ಕೇಳಿದವರು ಹೆಂಡತಿಯನ್ನು ಅಪಮಾನ ಮಾಡುತ್ತಾರೆ ಹೆಂಡತಿಗೆ ಅಪಮಾನ ಆದರೆ ಗಂಡನಿಗೆ ಅಪಮಾನ ಆದಂತೆ .ಹಾಗೆಯೇ ಮನಸ್ಸಿಗೆ ದುಃಖ ಆದಾಗ ಸಣ್ಣ ಸಣ್ಣ ವಿಷಗಳನ್ನು ಎಲ್ಲರ ಮುಂದೆ ಹೇಳುತ್ತ ಹೋದರೆ ಜೀವನದಲ್ಲಿ ಬಹಳಷ್ಟು ನಷ್ಟವನ್ನು ಎದುರಿಸಬೇಕಾಗುತ್ತದೆ ಬೇರೆಯವರಿಗೆ ತೊಂದರೆಯನ್ನು ಕೇಳುವ ಸಮಯ ಇಲ್ಲದಿದ್ದರೂ ಮುಂದೆ ಹು ಎಂದು ನಂತರ ಅಪಹಾಸ್ಯ ಮಾಡುತ್ತಾರೆ ಹೀಗಾಗಿ ಎಲ್ಲರ ಮುಂದೆ ದುಃಖಗಳನ್ನು ಹೇಳಬಾರದು .
ಯಾರು ಆತ್ಮೀಯರು ವಿಶ್ವಾಸ ವುಳ್ಳವರಲ್ಲಿ ಮಾತ್ರ ಹೇಳಬೇಕು ಹಾಗೆಯೇ ಯಾರಿಗೆ ಹಣ ಕಾಸಿನ ತೊಂದರೆ ಇದ್ದರೆ ಯಾರ ಮುಂದೆಯೂ ಹೇಳಬಾರದು ಇಂಥ ಸಂದರ್ಭದಲ್ಲಿ ಸಹಾಯ ಮಾಡುವ ಜನರು ಸಹಾಯ ಮಾಡುವುದನ್ನು ಬಿಟ್ಟು ಅಪಹಾಸ್ಯ ಮಾಡುತ್ತಾರೆ ಅತಿಯಾದ ಹಣ ಕಾಸಿನ ತೊಂದರೆಯನ್ನು ಅನುಭವಿಸಿ ಸೋತೆ ಎಂದು ಕೊಳ್ಳಬಾರದು ಪ್ರಪಂಚ ಬದಲಾಗುತ್ತ ಇರುತ್ತದೆ ಅದನ್ನೇ ಚಿಂತಿಸಬಾರದು .ಹೂವುಗಳ ಸುಗಂಧವು ಗಾಳಿಯ ದಿಕ್ಕಿನಲ್ಲಿ ಮಾತ್ರ ಹರಡುತ್ತದೆ. ಆದರೆ ವ್ಯಕ್ತಿಯ ಒಳ್ಳೆಯತನವು ಎಲ್ಲಾ ದಿಕ್ಕುಗಳಲ್ಲಿಯೂ ಹರಡುತ್ತದೆ. ಆದುದರಿಂದ ಯಾವಾಗಲೂ ಎಲ್ಲರಿಗೂ ಒಳ್ಳೆಯದನ್ನೆ ಮಾಡಿ. ಒಬ್ಬ ಮನುಷ್ಯನ ದೇಹ ಸಾಯಬಹುದು, ಆದರೆ ಅವರು ಮಾಡಿದ ಒಳ್ಳೆಯ ಕೆಲಸ ಸದಾ ಕಾಲ ಅಮರವಾಗಿರುತ್ತದೆ.ಎಂದು ಕೌಟಿಲ್ಯ ತಿಳಿಸಿದ್ದಾರೆ.