ಅದೃಷ್ಟ ಎನ್ನುವುದು ಯಾರನ್ನು ಹೇಗೆ ಯಾವ ರೀತಿಯಲ್ಲಿ ಮೇಲಕ್ಕೆ ಕರೆದೊಯ್ಯುತ್ತದೆ ಎಂಬುದನ್ನು ಯಾರಿಂದಲೂ ಕೂಡ ಲೆಕ್ಕಾಚಾರ ಅಥವಾ ಊಹಿಸಲು ಸಾಧ್ಯವಿಲ್ಲ ಎಂಬುದಕ್ಕೆ ಇತ್ತೀಚಿಗಷ್ಟೇ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಎಲೆಕ್ಷನ್ನಲ್ಲಿ ಸಿಕ್ಕಿರುವ ಫಲಿತಾಂಶವೇ ಒಂದು ಜೀವಂತ ಉದಾಹರಣೆ ಎಂದು ಹೇಳಬಹುದಾಗಿದೆ.
ಹೌದು ಮಿತ್ರರೇ ಪಶ್ಚಿಮ ಬಂಗಾಳದಲ್ಲಿ ನಡೆದಿರುವ ಎಲೆಕ್ಷನ್ ನಲ್ಲಿ ಬಿಜೆಪಿ ಪಕ್ಷದ ಚಂದನ ಬೌರಿ ಎನ್ನುವ ಮಹಿಳೆ ಎದುರಾಳಿ ಅಭ್ಯರ್ಥಿಯನ್ನು ಸೋಲಿಸುವ ಮೂಲಕ ಈಗ ಚರ್ಚೆಯ ಕೇಂದ್ರ ಬಿಂದು ಆಗಿದ್ದಾಳೆ. ಅಷ್ಟಕ್ಕೂ ಆಕೆ ಚರ್ಚೆ ಆಗುತ್ತಿರುವುದು ಯಾವ ಕಾರಣಕ್ಕಾಗಿ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಹೌದು ಮಿತ್ರರೇ ಚಂದನ ಬೌರಿ ತನ್ನ ಎದುರಾಳಿ ಅಭ್ಯರ್ಥಿ ಆಗಿರುವ ಸಂತೋಷ್ ಕುಮಾರ್ ಮೊಂಡಲ್ ವಿರುದ್ಧ 4000ಕ್ಕೂ ಅಧಿಕ ಮತಗಳಿಂದ ಗೆದ್ದು ಜಯಭೇರಿ ಬಾರಿಸಿದ್ದಾರೆ. ನಿಜಕ್ಕೂ ಹೇಳಬೇಕೆಂದರೆ ಚಂದನ ದಿನಪೂರ್ತಿ ಮನೆ ಕೆಲಸ ಮಾಡಿಕೊಂಡು ಜೀವನ ಸಾಗಿಸುವಂತಹ ಮಹಿಳೆಯಾಗಿದ್ದು ಆಕೆಯ ಗಂಡ ದಿನಗೂಲಿ ಮಾಡುವವನಾಗಿದ್ದಾನೆ. ಹೇಗಿದ್ದರೂ ಕೂಡ ಬಿಜೆಪಿ ಪಕ್ಷದಿಂದ ಎಸ್ಸಿ ಯ ಮೀಸಲು ಅಭ್ಯರ್ಥಿಯಾಗಿ ಕೋಟ್ಯಾಂತರ ಆಸ್ತಿಯನ್ನು ಹೊಂದಿರುವ ಅಭ್ಯರ್ಥಿಯ ವಿರುದ್ಧ ಕಣಕ್ಕಿಳಿದು ಜಯಭೇರಿಯನ್ನು ಭಾರಿಸಿರುವುದು ನಿಜಕ್ಕೂ ಕೂಡ ಎಲ್ಲರ ಆಶ್ಚರ್ಯಕ್ಕೆ ಕಾರಣವಾಗಿದೆ.
ಚಂದನ ಅವರ ವಿದ್ಯಾರ್ಹತೆಯನ್ನು ನೋಡುವುದಾದರೆ ಕೇವಲ 10ನೇ ತರಗತಿ ಪಾಸ್ ಆಗಿದ್ದಾರೆ. ಇನ್ನು ಅವರು ದಿನಕ್ಕೆ 400 ರೂಪಾಯಿಗಳನ್ನು ಮಾತ್ರ ದುಡಿಯುವುದು. ಅವರ ಬ್ಯಾಂಕ್ ಖಾತೆಯಲ್ಲಿರುವ ಹಣ 31 ಸಾವಿರ ರೂಪಾಯಿಗಳ ಆಸು ಪಾಸಿನಲ್ಲಿ ಮಾತ್ರ ಎಂಬುದಾಗಿ ತಿಳಿದು ಬಂದಿದೆ. ತಂದೆಯಿಂದ ಬಳುವಳಿಯಾಗಿ ಬಂದಂತಹ ಮೂರು ಮೇಕೆ ಮತ್ತು ಮೂರು ಹಸು ಬಿಟ್ಟರೆ ಒಂದು ಚಿಕ್ಕ ಮನೆ ಮಾತ್ರ ಇರುವುದು.
ಇವರು ಮನೆ ಕೆಲಸದಾಕೆ ಈಕೆಯ ಗಂಡ ದಿನಗೂಲಿ ಮಾಡುವವನು ಹೇಗಿದ್ದರೂ ಕೂಡ ಈ ಪ್ರಜಾಪ್ರಭುತ್ವದಲ್ಲಿ ಬಡವರು ಕೂಡ ಗೆಲ್ಲಬಹುದು ಎಂಬುದನ್ನು ಚಂದನ ಸಾಬೀತುಪಡಿಸಿ ತೋರಿಸಿದ್ದಾಳೆ. ಪಶ್ಚಿಮ ಬಂಗಾಳದ ರಾಜಕೀಯ ವಲಯದಲ್ಲಿ ಇದೊಂದು ದೊಡ್ಡ ಸುದ್ದಿಯಾಗಿ ಹಾಗೂ ಆಶ್ಚರ್ಯಕರ ಗೆಲುವಾಗಿ ಪರಿಣಮಿಸಿದ್ದು ಹಣ ಇದ್ದರೆ ಮಾತ್ರ ಸಾಲದು ಜನಬೆಂಬಲವೂ ಕೂಡ ಇರಬೇಕು ಎಂಬುದನ್ನು ಈ ಎಲೆಕ್ಷನ್ ಸಾಬೀತುಪಡಿಸಿದೆ ಎಂದು ಹೇಳಬಹುದು.