ತೈಲಗಳಲ್ಲಿ ಹಲವಾರು ವಿಧ. ಅಡುಗೆಗೆ ಬಳಸುವ ಎಣ್ಣೆ ದೀಪಕ್ಕೆ ಬಳಸುವ ಎಣ್ಣೆ ಹೀಗೇ ಹಲವಾರು ವಿಧದ ಎಣ್ಣೆಗಳಿವೆ. ಅವುಗಳಲ್ಲಿ ಈ ಹರಳೆಣ್ಣೆ ಕೂಡ ಒಂದು. ಇದರಿಂದ ಆಗುವ ಅದ್ಭುತ ಪ್ರಯೋಜನಗಳು ಹಲವಾರು. ಹಾಗಾದ್ರೆ ಇವತ್ತು ಈ ಹರಳೆಣ್ಣೆಯಿಂದ ಏನೆಲ್ಲಾ ಉಪಯೋಗ ಇದೆ ಅನ್ನೋದನ್ನ ನೋಡೋಣ ಬನ್ನಿ.
ಭಾರತೀಯ ಆಯುರ್ವೇದ ಶಾಸ್ತ್ರದಲ್ಲಿ ಅನೇಕ ಸಸ್ಯಗಳಿಂದ ಔಷಧಿಗಳನ್ನು ತಯಾರಿಸಲಾಗುತ್ತದೆ. ಹಾಗೆ ಈ ಹರಳೆಣ್ಣೆ ಕೂಡ ಇದನ್ನು ಔಡಲ ಎಣ್ಣೆ ಅಂತಲೂ ಕರೆಯುತ್ತಾರೆ. ಇದು ಹತ್ತು ಹಲವಾರು ಕಾಯಿಲೆಗಳಿಗೆ ತುಂಬಾ ಒಳ್ಳೆಯದು ಹರಳೆಣ್ಣೆ ಚರ್ಮ ರೋಗಕ್ಕೆ ತುಂಬಾ ಒಳ್ಳೆಯದು.
ಈ ಎಣ್ಣೆಯನ್ನು ದೇಹದ ವಿವಿಧ ಕಾಯಿಲೆಗಳನ್ನು ನಿವಾರಿಸಲು ಬಳಸಲಾಗುತ್ತದೆ. ಹಾಗಾಗಿ ಅದರ ಉಪಯೋಗಗಳ ಬಗ್ಗೆ ತಿಳಿಯೋಣ. ಹರಳೆಣ್ಣೆ ಮೊಡವೆಗಳಿಗೆ ತುಂಬಾ ಪ್ರಯೋಜನಕಾರಿ ರಾತ್ರಿಯ ಹೊತ್ತು ಮುಖಕ್ಕೆ ಹರಳೆಣ್ಣೆಯಿಂದ ಮಸಾಜ್ ಮಾಡಿ ಮಲಗುವ ಮೊನ್ನೆ ತೊಳೆಯಬೇಕು. ಹೀಗೆ ಮಾಡುವುದರಿಂದ ಮೊಡವೆಗಳು ಮಾಯ ಆಗುತ್ತವೆ.
ಇನ್ನು ಎರಡನೆಯದಾಗಿ, ಕಣ್ಣಿನ ಸುತ್ತಲೂ ಆದ ಕಪ್ಪು ಕಲೆಗಳಿಗೆ ಇದು ಬಹಳ ಉಪಯೋಗ. ಕೆಲವು ಜನರಿಗೆ ನಿದ್ರೆಯ ಕೊರತೆಯಿಂದಾಗಿ ಹಾಗೂ ಇನ್ನು ಕೆಲವು ಜನರಿಗೆ ಹಾರ್ಮೋನ್ ಸಮಸ್ಯೆಯಿಂದಾಗಿ ಕೂಡ ಈ ಡಾರ್ಕ್ ಸರ್ಕಲ್ ಆಗುತ್ತದೆ. ಇದಕ್ಕೆ ಹರಳೆಣ್ಣೆಯನ್ನು ತೆಂಗಿನೆಣ್ಣೆಯೊಂದಿಗೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಡಾರ್ಕ್ ಸರ್ಕಲ್ ಕಡಿಮೆ ಆಗುತ್ತದೆ. ಇನ್ನು ಮೂರನೆಯದಾಗಿ ಮಲಬದ್ಧತೆಯನ್ನು ನಿವಾರಿಸುತ್ತದೆ. ಮಲಬದ್ಧತೆ ಇರುವವರು ಒಂದು ಸ್ಪೂನ್ ಹರಳೆಣ್ಣೆಯನ್ನು ಕಿತ್ತಳೆ ರಸದ ಜೊತೆ ಬೆರೆಸಿ ಸೇವಿಸಿದರೆ ಮಲಬದ್ಧತೆ ನಿವಾರಣೆ ಆಗುತ್ತದೆ. ಇದು ಹೊಟ್ಟೆಯನ್ನು ಸ್ವಚ್ಚಗೊಳಿಸಲು ಸಹಾಯಕಾರಿ. ಇನ್ನು ಗ್ಯಾಸ್ಟ್ರಿಕ್ ಸಮಸ್ಯೆ ಇದ್ದರೆ ಕೂಡ ಒಂದು ಚಮಚ ಹರಳೆಣ್ಣೆಯನ್ನು ಕುಡಿಯುವುದರಿಂದ ಗ್ಯಾಸ್ಟ್ರಿಕ್ ಸಮಸ್ಯೆ ಸಹ ದೂರ ಆಗುತ್ತದೆ.
ಇನ್ನು ಕೊನೆಯದಾಗಿ ಬೆನ್ನು ನೋವು ನಿವಾರಣೆಗೆ ಸಹ ಈ ಹರಳೆಣ್ಣೆ ಸಹಕಾರಿ ಆಗಿದೆ. ಹರಳೆಣ್ಣೆಯನ್ನು ಬಿಸಿ ಮಾಡಿ ನೋವಿರುವ ಜಾಗಕ್ಕೆ ಹಚ್ಚಿ ಮಸಾಜ್ ಮಾಡಬೇಕು ಹೀಗೆ ನಿರಂತರವಾಗಿ ಒಂದು ವಾರ ಮಾಡಿದರೆ ಬೆನ್ನು ನೋವು ಕಡಿಮೆ ಆಗುತ್ತದೆ. ಇವು ಹರಳೆಣ್ಣೆಯಿಂದ ನಮ್ಮ ದೇಹಕ್ಕೆ ಆಗುವ ಅತ್ಯಂತ ಪ್ರಯೋಜನಕಾರಿ ಅಂಶಗಳು.