ಆರೋಗ್ಯದ ದೃಷ್ಟಿಯಿಂದ ಬಹಳ ಉಪಕಾರಿಯಾಗಿರುವ ಕ್ಯಾರೆಟ್ ಬೇಡಿಕೆ ಕಡಿಮೆಯಾಗದ ತರಕಾರಿಗಳ ಪೈಕಿ ಒಂದಾಗಿದೆ ಇನ್ನೂ ಬಗೆ ಬಗೆಯ ರುಚಿಕರ ಆಹಾರ ಪದಾರ್ಥಗಳನ್ನು ತಯಾರಿಸುವಲ್ಲಿ ಕ್ಯಾರೆಟ್ ತನ್ನದೇ ಆದ ಪಾತ್ರವನ್ನು ನಿರ್ವಹಿಸುತ್ತದೆ ರುಚಿಗಷ್ಟೇ ಅಲ್ಲ, ಆರೋಗ್ಯಕಾರಿಯಾಗಿಯೂ ಕ್ಯಾರೆಟ್ ವಿಟಮಿನ್ ಎ ವಿಟಮಿನ್ ಇ ಮೇಗ್ನಿಶಿಯಮ್ ಕ್ಯಾಲ್ಸಿಯಮ್ ಕಬ್ಬಿಣದ ಅಂಶ ವಿಟಮಿನ್ ಕೆ ವಿಟಮಿನ್ ಸಿ ಪೋಟಾಸಿಯಮ್ ಮ್ಯಾಂಗನೀಸ್ ಸೇರಿದಂತೆ ಹಲವು ದೇಹಕ್ಕೆ ಬೇಕಾದ ಅವಶ್ಯಕ ಪೋಷಕಾಂಶಗಳನ್ನು ಒಳಗೊಂಡಿರುವ ಉತ್ತಮ ತರಕಾರಿಯಾಗಿದೆ ಮತ್ತು ಕ್ಯಾರೆಟ್ ನ ಸೇವನೆಯಿಂದ ಆರೋಗ್ಯದ ಮೇಲಾಗುವ ಪರಿಣಾಮಗಳ ಬೆಗ್ಗೆ ತಿಳಿದುಕೊಳ್ಳೋಣ ಬನ್ನಿ.
ಕ್ಯಾರೆಟ್ ಒಂದು ವಿಟಮಿನ್ ಎ ಯುಕ್ತ ತರಕಾರಿಯಾದ್ದರಿಂದ ಕ್ಯಾರೆಟ್ ನ ಸೇವನೆ ಕಣ್ಣಿನ ಆರೋಗ್ಯವನ್ನು ವೃದ್ಧಿಸುವಲ್ಲಿ ಸಹಾಯ ಮಾಡುತ್ತದೆ ಮತ್ತು ಬಹಳ ಮುಖ್ಯವಾಗಿ ಕಣ್ಣಿನ ದೃಷ್ಟಿದೋಷ ಇರುಳುಗಣ್ಣು ರೋಗ ಬಾರದಂತೆ ತಡೆಯುತ್ತದೆ, ಅಲ್ಲದೆ ದೇಹದಲ್ಲಿರುವ ರಕ್ತವನ್ನು ಶುದ್ಧಿಗೊಳಿಸುವಲ್ಲಿ ಕ್ಯಾರೆಟ್ ಉತ್ತಮ ರೀತಿಯಲ್ಲಿ ಪಾತ್ರವಹಿಸುತ್ತದೆ ಮತ್ತು ರಕ್ತದಲ್ಲಿರುವ ಆಸಿಡ್ ಗಳನ್ನು ಕ್ಯಾರೆಟ್ನಲ್ಲಿರುವ ಆಲ್ಕಾಲೈನ್ ಗಳು ಸಮತೋಲನದಲ್ಲಿ ಇಡಲು ಸಹಾಯಕಾರಿಯಾಗಿವೆ.
ಕ್ಯಾರೆಟ್ ನಲ್ಲಿ ಹೆಚ್ಚಿನ ಪೋಷಕಾಂಶಗಳು ಇದ್ದರೂ ಕ್ಯಾರೆಟ್ ಒಂದು ಕಡಿಮೆ ಕ್ಯಾಲರಿಯುಕ್ತ ತರಕಾರಿಯಾಗಿದೆ ಆದ್ದರಿಂದ ತೂಕ ಇಳಿಸುವ ಪ್ರಯತ್ನದಲ್ಲಿರುವವರು ನಿಯಮಿತವಾದ ಕ್ಯಾರೆಟ್ ನ ಸೇವನೆಯಿಂದ ತಮ್ಮ ತೂಕವನ್ನು ಆರೋಗ್ಯಕರವಾಗಿ ಕಡಿಮೆ ಮಾಡಿಕೊಳ್ಳಬಹುದು, ಕ್ಯಾರೆಟ್ ಒಂದು ಕರಗುವ ನಾರಿನ ತರಕಾರಿಯಾದ್ದರಿಂದ ರಕ್ತದಲಿರುವ ಕೆಟ್ಟ ಕೊಳೆಸ್ತ್ರಾಲ್ ಅನ್ನು ಇದು ಶಮನ ಮಾಡುತ್ತದೆ ಮತ್ತು ಹೃದಯಕ್ಕೆ ಸಂಬಂಧಿಸಿದ ಆರೋಗ್ಯವನ್ನು ಕಾಪಾಡುವಲ್ಲಿ ಇದು ನೆರವಾಗುತ್ತದೆ.
ಕ್ಯಾರೆಟ್ನಲ್ಲಿರುವ ಪೊಟ್ಯಾಶಿಯಂ ಉತ್ತಮ ರಕ್ತ ಪರಿಚಲನೆಗೆ ಸಹಾಯ ಮಾಡುತ್ತದೆ ಮತ್ತು ಕ್ಯಾರೆಟ ನಲ್ಲಿರುವ ಉತ್ತಮ ವಿಟಮಿನ್ ಗಳು ಮನುಷ್ಯನ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಯಾವುದೇ ಸೋಂಕು ಮಾನವನ ದೇಹಕ್ಕೆ ತಗುಳದಂತೆ ನೋಡಿಕೊಳ್ಳುತ್ತದೆ, ಕ್ಯಾರೆಟ್ ಜ್ಯೂಸ್ ಕುಡಿಯುವುದರಿಂದ ಸೂರ್ಯನ ನೆರಳಾತೀತ ಕಿರಣಗಳಿಂದ ಚರ್ಮವನ್ನು ರಕ್ಷಿಸಬಹುದು ಮತ್ತು ಕ್ಯಾರೆಟ್ ನೊಂದಿಗೆ ಪಾಲಕ್ ಸೊಪ್ಪು ಮತ್ತು ಬಿಟ್ರೋಟ್ ಸೇರಿಸಿದ ಜ್ಯೂಸ್ ಮಾಡಿ ಕುಡಿಯುವುದರಿಂದ ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಅಷ್ಟೇ ಅಲ್ಲದೆ ಬೊಜ್ಜು ಸಮಸ್ಯೆಯಿಂದ ಬಳಲುತ್ತಿರುವವರು ಕ್ಯಾರೆಟ್ ನ ದಿನನಿತ್ಯದ ಆಹಾರ ಪದಾರ್ಥಗಳಲ್ಲಿ ನಿಯಮಿತವಾಗಿ ಬಳಸುವುದರಿಂದ ಇದು ಜೀರ್ಣ ಕ್ರಿಯೆಗೆ ಸಹಾಯ ಮಾಡುವುದಲ್ಲದೆ ತಮ್ಮ ಬೊಜ್ಜನ್ನು ಉತ್ತಮ ಮತ್ತು ಆರೋಗ್ಯಕರ ರೀತಿಯಲ್ಲಿ ಕರಗಿಸಲು ಇದು ನೆರವಾಗುತ್ತದೆ.