ಏಲಕ್ಕಿ ಅನ್ನೋದು ಅಡುಗೆಗೆ ಬಳಸುವ ಮಸಾಲೆ ಪದಾರ್ಥವಾಗಿದೆ, ಆತ್ಮೀಯ ಸ್ನೇಹಿತರೆ ಅಡುಗೆಗೆ ಬಳಸುವಂತ ಪ್ರತಿ ಸಾಮಗ್ರಿಗಳು ಕೂಡ ತನ್ನದೆಯಾದ ವಿಶೇಷತೆ ಹಾಗೂ ಮಹತ್ವವನ್ನು ಹೊಂದಿದೆ. ಏಲಕ್ಕಿಯನ್ನು ನಾವುಗಳು ವಿವಿಧ ಬಗೆಯ ಅಡುಗೆಗಳಲ್ಲಿ ಬಳಸುತ್ತೇವೆ. ಆದ್ರೆ ಈ ಏಲಕ್ಕಿಯನ್ನು ಪ್ರತಿದಿನ ಒಂದರಂತೆ ಸಂಜೆ ಬೆಳಗ್ಗೆ ಬಾಯಲ್ಲಿ ಹಾಕಿಕೊಳ್ಳುವುದು ಉತ್ತಮ ಯಾಕೆಂದರೆ ಒಂದು ಏಲಕ್ಕಿಯನ್ನು ಜಗಿದು ತಿನ್ನೋದ್ರಿಂದ ಮಾನಸಿಕ ಒತ್ತಡ ನಿವಾರಣೆಯಾಗುತ್ತದೆ ಹಾಗೂ ಇಡಿ ದಿನ ಲವಲವಿಕೆಯಿಂದ ಇರಲು ಸಾಧ್ಯವಾಗುತ್ತದೆ.
ಇನ್ನು ಏಲಕ್ಕಿಯನ್ನು ತಿನ್ನೋದ್ರಿಂದ ದೈಹಿಕ ಸಮಸ್ಯೆಗಳಿಗೆ ಕಡಿವಾಣ ಹಾಕುವುದು ಇನ್ನು ಅಜೀರ್ಣತೆ ಸಮಸ್ಯೆ ಇದ್ರೆ ಏಲಕ್ಕಿಯನ್ನು ಒಂದು ಅಥವಾ ಎರಡು ಜಗಿದು ತಿನ್ನುವುದರಿಂದ ಅಜೀರ್ಣತೆ ನಿವಾರಣೆಯಾಗುತ್ತದೆ. ಏಲಕ್ಕಿ ಬೀಜವನ್ನು ಜಗಿದು ತಿನ್ನುವುದರಿಂದ ತಿನ್ನುವುದರಿಂದ ಸಾಮಾನ್ಯವಾಗಿ ಕಾಡುವಂತ ತಲೆನೋವು ಮತ್ತು ಒತ್ತಡ ನಿವಾರಿಸುತ್ತದೆ.
ಊಟದ ನಂತರ ಒಂದೆರಡು ಏಲಕ್ಕಿಯನ್ನು ಜಗಿದು ತಿನ್ನುವುದರಿಂದ ಸೇವಿಸಿದಂತ ಆಹಾರ ಜೀರ್ಣವಾಗಲು ಸಹಕಾರಿ, ದೇಹದಲ್ಲಿ ವಿಷಕಾರಕಗಳು ಉತ್ಪತ್ತಿಯಾಗುವುದಿಲ್ಲ, ಇದರ ಸೇವನೆಯಿಂದ ದೇಹದಲ್ಲಿ ರಕ್ತ ಪರಿಚಲನೆ ಸರಾಗವಾಗಿ ನಡೆಯುತ್ತದೆ. ಪುರುಷರು ರಾತ್ರಿ ಮಲಗುವ ಮುನ್ನ ಒಂದೆರಡು ಏಲಕ್ಕಿಯನ್ನು ಬಾಯಲ್ಲಿ ಹಾಕಿಕೊಂಡು ಸಂಗಾತಿಯೊಂದಿಗೆ ಸೇರಿದರೆ ಯಾವುದೇ ಒತ್ತಡವಿಲ್ಲದೆ ಹೆಚ್ಚಿನ ಸುಖ ಪಡೆಯಬಹುದಾಗಿದೆ ಅನ್ನೋದು ತಜ್ಞರ ಮಾತು. ನಿಶ್ಯಕ್ತಿ ನಿವಾರಣೆಗೆ ಏಲಕ್ಕಿ ಸಹಕಾರಿ ಅಷ್ಟೇ ಅಲ್ಲದೆ ಬಾಯಿಹುಣ್ಣು, ವಾಂತಿ, ಕೆಮ್ಮು, ಗ್ಯಾಸ್ ಸ್ಟ್ರಿಕ್ ಸಮಸ್ಯೆಗಳಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.