Cancer sign prediction: ಗ್ರಹಗಳ ಸ್ಥಾನ ಬದಲಾವಣೆಯಿಂದಾಗಿ ಹನ್ನೆರಡು ರಾಶಿಗಳ ಫಲಾಫಲಗಳಲ್ಲಿ ಬದಲಾವಣೆ ಕಂಡು ಬರುತ್ತದೆ ಕೆಲವರಿಗೆ ಶುಭ ಹಾಗೂ ಅಶುಭ ಮತ್ತು ಮಿಶ್ರ ಫಲಗಳಿಂದ ಕೂಡಿ ಇರುತ್ತದೆ ಹಾಗಾಗಿ ಎಲ್ಲರಿಗೂ ಒಂದೇ ತೆರನಾಗಿ ಫಲಾಗಳು ಲಭಿಸುವುದು ಇಲ್ಲ 2023 ಜೂನ್ ತಿಂಗಳಲ್ಲಿ ಕರ್ಕಾಟಕ ರಾಶಿಯವರಿಗೆ ಶುಭಕರವಾಗಿ ಇರುತ್ತದೆ ಹಾಗೆಯೇ ಅಂದು ಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ ಜೂನ್ ತಿಂಗಳು ಕರ್ಕಾಟಕ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ

ವ್ಯಾಪಾರ ವ್ಯವಹಾರದಲ್ಲಿ ಹೆಚ್ಚಿನ ಲಾಭ ಕಂಡು ಬರುತ್ತದೆ ಹೆಚ್ಚಿನ ಧನ ಪ್ರಾಪ್ತಿ ಆಗುವುದರಿಂದ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ವಿವಾಹ ನಿರೀಕ್ಷೆಯಲ್ಲಿರುವ ಅವಿವಾಹಿತರಿಗೆ ವಿವಾಹ ಭಾಗ್ಯ ಕಂಡು ಬರುವ ಸಾಧ್ಯತೆ ಇರುತ್ತದೆ. ಕರ್ಕಾಟಕ ರಾಶಿಯವರಿಗೆ ಜೀವನದಲ್ಲಿ ಸಾಕಷ್ಟು ಬದಲಾವಣೆ ಕಂಡು ಬರುತ್ತದೆ ಹಿಂದಿನ ಕಷ್ಟಗಳು ದೂರ ಆಗಿ ಸಂತೋಷಮಯ ಜೀವನ ಇವರದ್ದಾಗಿರುತ್ತದೆ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತದೆ ನಾವು ಈ ಲೇಖನದ ಮೂಲಕ 2023 ಜೂನ್ ತಿಂಗಳಲ್ಲಿ ಕರ್ಕಾಟಕ ರಾಶಿಯ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಜೂನ್ 7 ರಿಂದ 24ರ ತನಕ ವೃಷಭ ರಾಶಿಯಲ್ಲಿ ತೃತಿಯಾಧಿಪತಿಯಾಗಿರುವ ಬುಧ ಗ್ರಹದ ಸಂಚಾರ ಆಗುತ್ತದೆ ಇದರಿಂದಾಗಿ ಪ್ರಭಾವಿ ವ್ಯಕ್ತಿಗಳಿಂದ ಕರ್ಕಾಟಕ ರಾಶಿಯವರಿಗೆ ಅನುಕೂಲ ಕಂಡು ಬರುತ್ತದೆ ಪ್ರಭಾವಿ ವ್ಯಕ್ತಿಗಳಿಂದ ಒಳ್ಳೆಯ ಲಾಭವನ್ನು ಪಡೆದುಕೊಳ್ಳುತ್ತಾರೆ ಅಷ್ಟಮ ಶನಿಯಿಂದಾಗಿ ಅನೇಕ ಸಣ್ಣ ಪುಟ್ಟ ತೊಂದರೆಗಳು ಬರುತ್ತದೆ ಹಾಗಾಗಿ ಶನೀಶ್ವರನ ಆರಾಧನೆ ಮಾಡಬೇಕು ಜೂನ್ ತಿಂಗಳ ಮೊದಲೆರಡು ವಾರಗಳು ಧನಾಧಿಪತಿಯಾದ ರವಿ ಗ್ರಹ ವೃಷಭ ಸ್ಥಾನದಲ್ಲಿ ಇರುತ್ತಾನೆ ಇದೊಂದು ಲಾಭ ಸ್ಥಾನವಾಗಿದೆ ರವಿ ಬಲ ಕಂಡು ಬರುತ್ತದೆ ಇದರಿಂದಾಗಿ ವಿಧ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಸಿಗುತ್ತದೆ.

ಕರ್ಕಾಟಕ ರಾಶಿಯ ಹಿರಿಯರಿಗೆ ಮಕ್ಕಳು ಕೆಲಸದಲ್ಲಿ ನೆರವಾಗುತ್ತಾರೆ ಹಾಗಾಗಿ ಜೂನ್ ತಿಂಗಳು ಕರ್ಕಾಟಕ ರಾಶಿಯವರಿಗೆ ಅನುಕೂಲಕರವಾಗಿ ಇರುತ್ತದೆ ವಿದ್ಯಾರ್ಥಿಗಳಿಗೆ ಕಾಲೇಜುಗಳಲ್ಲಿ ಗವರ್ನಮೆಂಟ್ ಸಿಟ್ ಸಹ ಸಿಗುವ ಸಾಧ್ಯತೆ ಇರುತ್ತದೆ ಹೆಚ್ಚಿನ ಫಲಗಳಿಗಾಗಿ ಕೆಂಪು ವಸ್ತ್ರದಲ್ಲಿ ಭಾನುವಾರದಂದು ಗೋದಿಯನ್ನು ದಾನ ಮಾಡಬೇಕು ಜೂನ್ ತಿಂಗಳಲ್ಲಿ ಶುಕ್ರ ಗ್ರಹ ಕರ್ಕಾಟಕ ರಾಶಿಯಲ್ಲಿ ಇರುತ್ತಾನೆ ಇದರಿಂದ ಕರ್ಕಾಟಕ ರಾಶಿಯ ಸ್ತ್ರೀಯರಿಗೆ ಆಕರ್ಷಣೆ ಜಾಸ್ತಿ ಆಗುತ್ತದೆ

ಅವಿವಾಹಿತರಿಗೆ ವಿವಾಹ ವಿಷಯದಲ್ಲಿ ಅನುಕೂಲಕರವಾಗಿ ಇರುತ್ತದೆ ಸಪ್ತಮ ಸ್ಥಾನದಲ್ಲಿ ಶುಕ್ರ ಇರುವುದರಿಂದ ಅನುಕೂಲಕರವಾಗಿ ಇರುತ್ತದೆ ಜೂನ್ ತಿಂಗಳಲ್ಲಿ ಜೀವನಶೈಲಿಯಲ್ಲಿ ಬದಲಾವಣೆ ಕಂಡುಬರುತ್ತದೆ ಹಣಕಾಸಿನ ವ್ಯವಹಾರದಲ್ಲಿ ಹೆಚ್ಚಿನ ಗಮನ ಹರಿಸಬೇಕು ಶನಿ ಮತ್ತು ಶುಕ್ರನ ಆರಾಧನೆ ಮಾಡಬೇಕು ಇದರಿಂದ ಹೆಚ್ಚಿನ ಫಲಗಳು ಲಭಿಸುತ್ತದೆ ಶುಕ್ರವಾರದಂದು ದುರ್ಗಾ ದೇವಸ್ಥಾನಕ್ಕೆ ಹೋಗಬೇಕು ಹಾಗೆಯೇ ಕುಂಕುಮಾರ್ಚನೆ ಮಾಡಿಸಬೇಕು ಇದರಿಂದ ಒಳ್ಳೆಯ ಫಲ ಲಭಿಸುತ್ತದೆ

ತುಪ್ಪದ ದೀಪವನ್ನು ಹಚ್ಚಬೇಕು ರವಿ ಗ್ರಹವು ಮೊದಲೆರಡು ವಾರದಲ್ಲಿ ಕರ್ಕಾಟಕ ರಾಶಿಯವರಿಗೆ ಲಾಭ ಸ್ಥಾನದಲ್ಲಿ ಇರುತ್ತದೆ .ಹಣಕಾಸಿನ ಹರಿವು ಕಂಡು ಬರುತ್ತದೆ ಬಂದ ಹೆಚ್ಚಿನ ಹಣವನ್ನು ಹೆಲ್ತ್ ಇನ್ಸೂರೆನ್ಸ್ ಗೆ ಹಾಕಬೇಕು ಹಾಗೆಯೇ ಬರುವ ಹಣವನ್ನು ಸಾಲ ಇದ್ದರೆ ತೀರಿಸಿಕೊಳ್ಳಬೇಕು ಉಳಿತಾಯದ ಕಡೆಗೆ ಗಮನ ಹರಿಸಬೇಕು ಸಾಲ ತೀರಿಸಲು ರವಿಯ ಬಲದಿಂದ ಸಾಧ್ಯ ಆಗುತ್ತದೆ

ಬುಧ ಗ್ರಹ ಕರ್ಮ ಸ್ಥಾನದಲ್ಲಿ ಇರುತ್ತಾನೆ ಬುಧಾದಿತ್ಯ ಯೋಗ ಕಂಡು ಬರುತ್ತದೆ ಬುದ್ದಿವಂತಿಕೆ ಶಕ್ತಿ ಹೆಚ್ಚಾಗುತ್ತದೆ ಒಳ್ಳೆಯ ಮಾತುಗಾರರಾಗುತ್ತಾರೆ ದೇವತಾ ಆರಾಧನೆ ಮಾಡಬೇಕು ಹೀಗೆ ಕರ್ಕಾಟಕ ರಾಶಿಯವರಿಗೆ ಜೂನ್ ತಿಂಗಳಿನಲ್ಲಿ ಶುಭಕರವಾಗಿ ಇರುತ್ತದೆ ಆರ್ಥಿಕ ಸ್ಥಿತಿಯಲ್ಲಿ ಸುಧಾರಣೆ ಕಂಡು ಬರುತ್ತದೆ ಅಂದುಕೊಂಡ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಂಡು ಬರುತ್ತದೆ .

Leave a Reply

Your email address will not be published. Required fields are marked *