ಜಗತ್ತಿನಲ್ಲಿ ಎರಡನೇ ದೊಡ್ಡ ದೇಶ ಕೆನಡಾ. ಆ ದೇಶಕ್ಕೆ ಹೋದರೆ ಭಾರತದಲ್ಲಿ ಇದ್ದಂತೆ ಅನಿಸುತ್ತದೆ. ಅಲ್ಲಿ ನಮ್ಮ ಭಾರತೀಯರೇ ಹೆಚ್ಚಾಗಿ ಇದ್ದಾರೆ. ಹಾಗಾಗಿ ನಾವು ಇಲ್ಲಿ ಭಾರತೀಯರೇ ಹೆಚ್ಚಾಗಿ ತುಂಬಿರುವ ಕೆನಡಾ ದೇಶದ ವಿಶೇಷ ಸಂಗತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕೆನಡಾ ದೇಶವು ಉತ್ತರಅಮೆರಿಕ ಖಂಡದಲ್ಲಿ ಇರುವ ಸುಂದರ ದೇಶವಾಗಿದೆ. ರಷ್ಯಾದ ನಂತರ ವಿಶ್ವದ ಅತಿ ದೊಡ್ಡ ದೇಶ ಕೆನಡಾ. ಇಡೀ ಯುರೋಪಿಯನ್ ಒಕ್ಕೂಟ ಕೂಡಿಸಿದರೂ ಕೆನಡಾ ಎದುರು ಚಿಕ್ಕದಾಗಿ ಕಾಣುತ್ತದೆ. ಇದು ಮಿನಿ ಇಂಡಿಯಾದಂತೆ ಕಾಣುತ್ತದೆ. ಏಕೆಂದರೆ ಅಲ್ಲಿ ಭಾರತೀಯರು ಹೆಚ್ಚಾಗಿದ್ದಾರೆ. ಇಲ್ಲಿ 7ಲಕ್ಷಕ್ಕೂ ಹೆಚ್ಚು ಸಿಖ್ಖರು ಇದ್ದಾರೆ. ಈ ಸರ್ಕಾರದಲ್ಲಿ ಕೆಲವು ಸಿಖ್ಖರು ಮಂತ್ರಿ ಕೂಡ ಆಗಿದ್ದಾರೆ. ಅಲ್ಲಿನ ಜನಸಂಖ್ಯೆ ಕೇವಲ 3ಕೋಟಿ 76ಲಕ್ಷ ಮಾತ್ರ. ಕರ್ನಾಟಕದ ಅರ್ಧ ಜನಸಂಖ್ಯೆ ಕೂಡ ಅಲ್ಲಿ ಇಲ್ಲ. 1975 ಮತ್ತು 1912ರಲ್ಲಿ ಕೆನಡಾದ ಮೇಲೆ ಅಮೆರಿಕಾ ದಾಳಿ ಮಾಡಿತ್ತು. ಆದರೆ ಯುದ್ಧದಲ್ಲಿ ಗೆದ್ದಿದ್ದು ಕೆನಡಾ. ಇದನ್ನು ‘ಸುಶಿಕ್ಷಿತ ದೇಶ’ ಎಂದು ಕರೆಯಲಾಗುತ್ತದೆ. ಏಕೆಂದರೆ ಅಲ್ಲಿ ಶೇಕಡಾ 95ರಷ್ಟು ಮಂದಿ ಕಾಲೇಜು ಮುಗಿಸಿದ್ದಾರೆ.
ಕೆಲವರ್ಷಗಳ ಹಿಂದೆ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಾವನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ ಈಗ ಕೆನಡಾವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದನ್ನು ‘ಕೆರೆಗಳ ದೇಶ’ ಎಂದು ಕರೆಯಲಾಗುತ್ತದೆ. ಏಕೆಂದರೆ ಜಗತ್ತಿನಲ್ಲಿ ಇರುವ ಕೆರೆಗಳಿಗಿಂತ ಕೆನಡಾದಲ್ಲಿ ಇರುವ ಕೆರೆಗಳ ಸಂಖ್ಯೆಯೇ ಹೆಚ್ಚು. ಮತ್ತೊಂದು ವಿಶೇಷ ಅಂದರೆ ಜಗತ್ತಿನ ಶೇಕಡಾ 20ರಷ್ಟು ಪರಿಶುದ್ಧ ನೀರು ಸಿಗುವುದು ಇಲ್ಲಿ ಮಾತ್ರ. ಕೆನಡಾದ ಉತ್ತರ ಭಾಗ ಸಂಪೂರ್ಣವಾಗಿ ಹಿಮದಿಂದ ಕೂಡಿದೆ. ಹಾಗಾಗಿ ಹೆಚ್ಚಾಗಿ ನಗರಗಳು ದಕ್ಷಿಣದಲ್ಲಿ ಇದೆ. ಅತಿ ಹೆಚ್ಚು ಸಾರಿ ಕೇಳುವುದು ಇಲ್ಲಿಯೇ. ಇಲ್ಲಿ ಯಾರಿಗಾದರೂ ನೋವು ಮಾಡಿದರೆ ಕೋರ್ಟ್ ಗೆ ಹೋಗಿ ಅಪಾಲಜಿ ಲೆಟರ್ ಕೊಡಲೇಬೇಕು. ಇಲ್ಲಿ ಭವಿಷ್ಯ ಹೇಳುವಂತಿಲ್ಲ. ಯಾರಾದರೂ ಹೇಳಿದರೆ ಅವರಿಗೆ ಜೈಲುಶಿಕ್ಷೆ ಖಂಡಿತ. ಜಗತ್ತಿನ ಅತಿ ದೊಡ್ಡ ಗಡಿ ಇಲ್ಲಿ ಇದೆ. ಅದು ಅಮೆರಿಕಾ ಮತ್ತು ಕೆನಡಾದ ನಡುವೆ 8891ಕಿಲೋಮೀಟರ್ ದೂರ ಹೊಂದಿದೆ. ಇಲ್ಲಿ ಕೆಲವು ನಗರಗಳು ಮತ್ತು ಮನೆಗಳು ಅರ್ಧ ಅಮೆರಿಕದಲ್ಲಿ ಇದ್ದರೆ ಅರ್ಧ ಕೆನಡಾದಲ್ಲಿ ಇರುತ್ತವೆ.
‘ಹನಿಮೂನ್ ಕ್ಯಾಪಿಟಲ್ ಆಫ್ ದಿ ವರ್ಲ್ಡ್’ ಎಂದು ಕರೆಸಿಕೊಳ್ಳುವ ನಯಾಗ್ರಾ ಫಾಲ್ಸ್ ಇಲ್ಲಿ ಕೆನಡಾ ಮತ್ತು ಅಮೆರಿಕಾದ ಗಡಿಯಲ್ಲಿ ಇದ್ದು ನಯನ ಮನೋಹರವಾಗಿದೆ. ವಿಮಾನ ನಿಲ್ದಾಣಗಳು ಪ್ರತಿಯೊಂದು ದೇಶದಲ್ಲೂ ಇದೆ. ಆದರೆ ಕೆನಡಾದಲ್ಲಿ ಏರಿಯನ್ ಗಳ ಯು.ಎಫ್.ಓ. ಇದೆ. ಇಲ್ಲಿ ಹಿಮಕರಡಿಗಳು ಹೆಚ್ಚಾಗಿ ಇದ್ದು ಮನೆಗೆ ಬಂದು ಏನಾದರೂ ತಿಂದರೆ ಇವುಗಳಿಗೆ ಜೈಲುಶಿಕ್ಷೆ ಆಗುತ್ತದೆ. ಕೆನಡಾದಲ್ಲಿ ವಾಹನಗಳ ನಂಬರ್ ಪ್ಲೇಟ್ ಕೂಡ ಹಿಮಕರಡಿಗಳ ಆಕಾರದಲ್ಲಿ ಇದೆ. ಇದು ಅತಿ ದೊಡ್ಡ ಕರಾವಳಿ ತೀರವನ್ನು ಹೊಂದಿದ್ದು ಅತೀ ಸುಂದರವಾದ ಬೀಚ್ ಗಳು ಇಲ್ಲಿ ಕಾಣಸಿಗುತ್ತವೆ.