ಕೊರೋನ ವೈರಸ್ ಹರಡುತ್ತಿರುವ ಭೀತಿಯ ಹಿನ್ನಲೆಯಲ್ಲಿ ಶಾಲಾ ಕಾಲೇಜುಗಳನ್ನು ಬಂದ್ ಮಾಡಲಾಗಿತ್ತು. ಇದೀಗ ಕೊರೋನ ವೈರಸ್ ಕಡಿಮೆ ಆಗುತ್ತಿರುವ ಕಾರಣ ಪುನಃ ಶಾಲಾ ಕಾಲೇಜುಗಳನ್ನು ಪ್ರಾರಂಭಿಸಲಾಗಿದೆ. 2020-2021 ನೇ ಸಾಲಿನ ವಿದ್ಯಾರ್ಥಿಗಳು ಉಚಿತ ಬಸ್ ಪಾಸ್ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಕಂಪ್ಯೂಟರ್ ನಲ್ಲಿ ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

2020-21ನೇ ಸಾಲಿನ ವಿದ್ಯಾರ್ಥಿಗಳು ಬಸ್ ಪಾಸ್ ಗಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ. ಕಂಪ್ಯೂಟರ್ ನಲ್ಲಿ ಬ್ರೌಸರ್ ನಲ್ಲಿ ಸೇವಾ ಸಿಂಧು ಎಂದು ಟೈಪ್ ಮಾಡಿ ನಂತರ ಸೇವಾ ಸಿಂಧು ವೆಬ್ ಸೈಟ್ ಓಪನ್ ಆಗುತ್ತದೆ. ನ್ಯೂ ರಿಜಿಸ್ಟ್ರೇಷನ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ರಿಜಿಸ್ಟ್ರೇಷನ್ ಮಾಡಬೇಕು. ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ಅಪ್ಲೈ ಫಾರ್ ಸರ್ವಿಸ್ ಎಂಬ ಆಪ್ಷನ್ ಕಾಣಿಸುತ್ತದೆ ಅದನ್ನು ಕ್ಲಿಕ್ ಮಾಡಿ ನಂತರ ವ್ಯೂ ಆಲ್ ಅವೈಲೇಬಲ್ ಸರ್ವಿಸ್ ಆಪ್ಷನ್ ಕ್ಲಿಕ್ ಮಾಡಿದಾಗ ವಿಂಡೊ ಓಪನ್ ಆಗುತ್ತದೆ. ನಂತರ ಸರ್ಚ್ ಬಾರ್ ನಲ್ಲಿ ಸ್ಟೂಡೆಂಟ್ ಎಂದು ಟೈಪ್ ಮಾಡಿದಾಗ ಎನ್ ಡಬ್ಲ್ಯೂಕೆಎಸ್ ಆರ್ ಟಿಸಿ, ಕೆಆರ್ ಟಿಸಿ ಎಂಬ ಆಪ್ಷನ್ ಬರುತ್ತದೆ.

ಕೆಎಸ್ಆರ್ಟಿಸಿ ಆಪ್ಷನ್ ಕ್ಲಿಕ್ ಮಾಡಿದಾಗ ವಿಂಡೊ ಓಪನ್ ಆಗುತ್ತದೆ. ಅಲ್ಲಿ ಡಿಕ್ಲರೇಷನ್ ಸರ್ಟಿಫಿಕೇಟ್ ಫಾರ್ಮ್ ದ್ ಎಜುಕೇಷನಲ್ ಇನ್ಸ್ಟಿಟ್ಯೂಟ್ ಬರುತ್ತದೆ ಅದನ್ನು ಡೌನ್ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಬೇಕು. ನಂತರ ಫಾರ್ಮ್ ತುಂಬಬೇಕು. ವಿದ್ಯಾರ್ಥಿಯು ಹೋಗುತ್ತಿರುವ ಶಾಲೆಯ ಸೀಲ್ ಹಾಕಿಸಿ ಸ್ಕ್ಯಾನ್ ಮಾಡಿಟ್ಟುಕೊಳ್ಳಬೇಕು. ನಂತರ ಪ್ರೊಸೀಡ್ ಟು ಅಪ್ಲೈ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ಅಪ್ಲಿಕೇಷನ್ ಓಪನ್ ಆಗುತ್ತದೆ.

ಅಪ್ಲಿಕೇಷನ್ ನಲ್ಲಿ ಯಾವ ಯಾವ ಬಸ್ಸಿನಲ್ಲಿ ವಿದ್ಯಾರ್ಥಿಗಳು ಪ್ರಯಾಣಿಸಬಹುದು, ಯಾವ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಬಸ್ ಪಾಸ್ ಸಿಗುತ್ತದೆ ಎಂಬ ಮಾಹಿತಿ ಇರುತ್ತದೆ, ಕೆಳಗಡೆ ಫಾರ್ಮ್ ನಲ್ಲಿ ವಿದ್ಯಾರ್ಥಿಯ ಹೆಸರು, ಮೊಬೈಲ್ ನಂಬರ್, ವಿಳಾಸ, ಯಾವ ತರಗತಿ, ಓದುತ್ತಿರುವ ವಿದ್ಯಾಸಂಸ್ಥೆಯ ಹೆಸರು, ಬಸ್ ಡಿಪೊ ಇನ್ನಿತರ ಮಾಹಿತಿಗಳನ್ನು ತುಂಬಿ ಫೋಟೋವನ್ನು ಅಪ್ಲೋಡ್ ಮಾಡಬೇಕು. ನಂತರ ಐ ಅಗ್ರಿ ಎಂಬ ಆಪ್ಷನ್ ಕ್ಲಿಕ್ ಮಾಡಿ ಕ್ಯಾಪ್ಚರ್ ಕೋಡ್ ಎಂಟ್ರಿ ಮಾಡಿ ಸಬ್ ಮಿಟ್ ಕೊಡಬೇಕು.

ನಂತರ ಎಡ್ಮಿಷನ್ ಮಾಡಿದ ರಿಸಿಪ್ಟ್, ಆಧಾರ್ ಕಾರ್ಡ್, ಫೀಸ್ ತುಂಬಿದ ರಿಸಿಪ್ಟ್, ಫೋಟೋ ಸ್ಕ್ಯಾನ್ ಮಾಡಿ ಅಟ್ಯಾಚ್ ಮಾಡಬೇಕು, ಎಲ್ಲ ಡಾಕ್ಯೂಮೆಂಟ್ಸ್ ಗೆ ಓದುತ್ತಿರುವ ಸಂಸ್ಥೆಯ ಸೀಲ್, ಸಿಗ್ನೀಚರ್ ಬೇಕಾಗುತ್ತದೆ. ನಂತರ ಅಕ್ನೊಲೇಜ್ ಮೆಂಟ್ ಕಾಪಿಯನ್ನು ವಿದ್ಯಾರ್ಥಿಗೆ ಸಂಬಂಧಿಸಿದ ಬಸ್ ಘಟಕಕ್ಕೆ ಹೋಗಿ ಪಾಸ್ ವಿತರಿಸುವ ಕೌಂಟರ್ ನಲ್ಲಿ ಸಬ್ ಮಿಟ್ ಮಾಡಬೇಕು. ನಂತರ ನಿಮ್ಮ ಅಪ್ಲಿಕೇಷನ್ ಅನ್ನು ಅಪ್ರೂವಲ್ ಮಾಡಿ ಪಾಸ್ ನೀಡುತ್ತಾರೆ. ಈ ಮಾಹಿತಿ ವಿದ್ಯಾರ್ಥಿಗಳಿಗೆ ಉಪಯುಕ್ತವಾಗಿದ್ದು ಎಲ್ಲ ವಿದ್ಯಾರ್ಥಿಗಳಿಗೆ ತಪ್ಪದೆ ತಿಳಿಸಿ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave a Reply

Your email address will not be published. Required fields are marked *