ಒಂದು ದಿನ ಗೌತಮ ಬುದ್ಧ ಒಂದು ಸ್ಥಳದಲ್ಲಿ ಕೂತು ತನ್ನ ಅನುಯಾಯಿಗಳಿಗೆ ಉಪದೇಶ ನೀಡುತ್ತಿದ್ದರು. ಜನರು ತಮ್ಮ ಕಷ್ಟಗಳನ್ನು ಹಾಗೂ ತಾವು ಎದುರಿಸುತ್ತಿರುವ ಕಷ್ಟಗಳನ್ನ ಬುದ್ಧನ ಬಳಿ ಹೇಳಿಕೊಳ್ಳುತ್ತಿದ್ದರು ಮತ್ತು ಅದಕ್ಕೊಂದು ಸೂಕ್ತ ಪರಿಹಾರವನ್ನು ಪಡೆದುಕೊಂಡು ಬರುತ್ತಿದ್ದರು. ಇದೆಲ್ಲವನ್ನೂ ದೂರದಿಂದ ನಿಂತು ಸೂಕ್ಷ್ಮವಾಗಿ ಗಮನಿಸುತ್ತಿದ್ದ ಒಬ್ಬ ಬಡ ಭಿಕ್ಷುಕ. ಇದೆಲ್ಲಾ ನೋಡುತ್ತಿದ್ದ ಅವನಿಗೆ ತುಂಬಾ ಆಶ್ಚರ್ಯ ಏಕೆಂದರೆ ಬುದ್ಧನ ಬಳಿ ಹೋಗುವಾಗ ಜನ ದುಃಖಿತರಾಗಿರುತ್ತಾರೆ ಹಾಗೂ ಅವರು ಅಲ್ಲಿಂದ ಮರಳಿ ಬರುವಾಗ ಜಗತ್ತಿನ ಸಂತೋಷವೆಲ್ಲಾ ತಮ್ಮ ಬಳಿಯೇ ಇದೆ ಎಂಬಂತೆ ಸಂತೋಷದಿಂದ ಬರುತ್ತಾರೆ ಇದು ಹೇಗೆ ಎಂದು ದಿಗ್ಭ್ರಮೆಗೊಳ್ಳುತ್ತಾನೆ. ತಾನು ಕೂಡಾ ಒಳಗಡೆ ಹೋಗಿ ತನ್ನ ಸಮಸ್ಯೆಗಳಿಗೆ ಬುದ್ಧನ ಬಳಿ ಪರಿಹಾರ ಕೇಳಬೇಕು ಎಂದುಕೊಳ್ಳುತ್ತಾನೆ.

ಕಾರಣ ಆ ಭಿಕ್ಷುಕ ಕೂಡ ಜೀವನದಲ್ಲಿ ತುಂಬಾ ನೊಂದು ಬೆಂದಿರುತ್ತಾನೆ. ಅವನಿಗೂ ಸಾಕಷ್ಟು ಕಷ್ಟ ಸಮಸ್ಯೆಗಳಿರುತ್ತವೆ ಹಾಗಾಗಿ ಬುದ್ಧನಲ್ಲಿಗೆ ಬರುತ್ತಾನೆ. ತುಂಬಾ ಜನ ಅವರ ಸಮಸ್ಯೆಗಳನ್ನ ಬುದ್ಧನ ಬಳಿ ಹೇಳಿಕೊಳ್ಳುತ್ತಾ ಅದಕ್ಕೆ ಪರಿಹಾರ ಕಂಡುಕೊಳ್ಳುತ್ತಿರುತ್ತಾರೆ. ಹಾಗೆ ಭಿಕ್ಷುಕನ ಸರದಿ ಬಂದಾಗ ಆತ ಬುದ್ಧನ ಬಳಿ ತನ್ನ ದುಃಖವನ್ನು ಹೇಳಿಕೊಳ್ಳುತ್ತಾನೆ. “ಬುದ್ಧದೇವ ನನ್ನ ಪ್ರಕಾರ ಈ ಊರಿನಲ್ಲಿ ಎಲ್ಲರೂ ಸಂತೋಷದಿಂದ ಇದ್ದಾರೆ. ಸಮೃದ್ಧ ಜೀವನ ನಡೆಸುತ್ತಿದ್ದಾರೆ. ಆದರೆ ನಾನ್ಯಾಕೆ ಬಡವನಾಗೆ ಇದ್ದೇನೆ ಮತ್ತು ದುಃಖದಲ್ಲೇ ಇದ್ದೇನೆ” ಅಂತ ಕೇಳುತ್ತಾನೆ.

ಆಗ ಗೌತಮ ಬುದ್ಧ ನಗೆಬೀರಿ ಹೇಳುತ್ತಾರೆ “ಜೀವನದಲ್ಲಿ ನೀನು ಯಾರಿಗೂ ಏನನ್ನೂ ಕೊಟ್ಟಿಲ್ಲ ಮತ್ತು ಅದಕೆ ಬಡವನಾಗೆ ಇದೀಯಾ” ಎನ್ನುತ್ತಾರೆ. ಆಗ ಭಿಕ್ಷುಕನಿಗೆ ಬುದ್ಧನ ಮಾತುಗಳು ಅಚ್ಚರಿ ಆಗಿ ಅಲ್ಲ ಗುರುವೇ ಕೊಡಲು ಏನಿದೆ ನನ್ನ ಬಳಿ ನಾನೇ ಒಂದು ಹೊತ್ತಿನ ಊಟಕ್ಕೆ ಪರದಾಡುತ್ತಾ ಇದ್ದೇನೆ. ಭಿಕ್ಷೆ ಬೇಡಿ ತಿಂತೀನಿ ಅಂತದರಲ್ಲಿ ನಾನು ಯಾರಿಗೆ ಏನು ಕೊಡಲು ಸಾಧ್ಯ ಅಂದಾಗ ಭಗವಾನ್ ಬುದ್ಧ ಮತ್ತೆ ಮುಗಳ್ನಕ್ಕು ಹೇಳುತ್ತಾರೆ ನೀನೊಬ್ಬ ಅಜ್ಞಾನಿ ನಿನ್ನ ಬಳಿ ಏನಿದೆ ಎಂಬುದೇ ನಿನಗೆ ಗೊತ್ತಿಲ್ಲ.

ಆ ದೇವರು ನಿನಗೆ ಸಾಕಷ್ಟು ಕೊಟ್ಟಿದ್ದಾನೆ ಜನರ ಜೊತೆ ಹಂಚಿಕೊಳ್ಳಲು. ನಿನ್ನ ಮುಖದ ನಗುವನ್ನ ಇನ್ನೊಬ್ಬರಿಗೆ ಹಂಚಬಹುದು. ನಿನಾಡುವ ಮಾತುಗಳಿಂದ ಜನರಿಗೆ ಖುಷಿಯನ್ನು ಕೊಡಬಹುದು. ನಿನ್ನ ಭರವಸೆಯ ಮಾತುಗಳಿಂದ ಜನರಿಗೆ ಹುಮ್ಮಸ್ಸನ್ನು ನೀಡಬಹುದು. ಯಾರಿಗೆ ಯಾವ ಸಮಯದಲ್ಲಿ ಅವಶ್ಯಕತೆ ಇದೆಯೋ ಅಂತವರಿಗೆ ಆತ್ಮವಿಶ್ವಾಸವನ್ನು ಕೊಡಬಹುದು.

ನಿನ್ನ ಹತ್ತಿರ ಉತ್ತಮ ದೇಹವಿದೆ. ನಿನ್ನ ಕೈಗಳಿಂದ ಇನ್ನೊಬ್ಬರಿಗೆ ಸಹಾಯ ಮಾಡಬಹುದು. ಇಷ್ಟೆಲ್ಲಾ ಇದ್ದರೂ ಕೂಡ ನನ್ನ ಬಳಿ ಏನಿದೆ ಅನ್ನುತ್ತಿಯಾ ಎಂದಾಗ ಭಿಕ್ಷುಕ ಏನು ಮಾತನಾಡಲು ಆಗದೇ ಮೌನಿಯಾಗುತ್ತಾನೆ ಭಿಕ್ಷುಕ. ಬುದ್ಧ ಹೇಳಿದ ಮಾತುಗಳನ್ನೆಲ್ಲಾ ಮೆಲಕು ಹಾಕುತ್ತಾನೆ ಆಗ ಅವನಿಗೆ ಅರ್ಥವಾಗುತ್ತೆ ನನ್ನ ಬಳಿ ಏನಿಲ್ಲವೋ ಅದಕ್ಕಾಗಿ ಪಶ್ಚಾತ್ತಾಪ ಪಟ್ಟನೆ ಹೊರತು ನನ್ನ ಬಳಿ ಇರುವುದರ ಕಡೆಗೆ ನಾನು ಗಮನವೇ ನೀಡಿಲ್ಲ. ಇದು ಅರ್ಥವಾದ ಕ್ಷಣ ಭಿಕ್ಷುಕನಿಗೆ ಒಳಗಿನಿಂದ ಸಂತೋಷ ಉಕ್ಕಿ ಹರಿಯುತ್ತದೆ.

ಹಾಗಾಗಿ ಸ್ನೇಹಿತರೆ ಯಾವಾಗಲೂ ನಗುತ್ತಿರುವ ವ್ಯಕ್ತಿ, ನಮ್ಮನ್ನ ಪ್ರೋತ್ಸಾಹಿಸುವ, ಹುರಿದುಂಬಿಸುವ ವ್ಯಕ್ತಿ ಕಂಡರೆ ಯಾರಿಗೆ ಇಷ್ಟ ಆಗಲ್ಲ ಹೇಳಿ. ಇದು ಅರ್ಥ ಮಾಡಿಕೊಳ್ಳುವಂತಹದ್ದು ನಮ್ಮ ಬಳಿ ಏನಿದೆಯೋ ಅದಕ್ಕಾಗಿ ಖುಷಿ ಪಡಬೇಕು ಇರದೆ ಇರುವುದರ ಬಗ್ಗೆ ಚಿಂತಿಸಿ ಫಲವಿಲ್ಲ. ಈ ಕಥೆ ನಿಮಗೆಲ್ಲ ಒಂದು ಒಳ್ಳೆಯ ಸಂದೇಶ ನೀಡಿದೆ ಎಂದು ಭಾವಿಸುತ್ತೇನೆ. ನಿಮ್ಮ ಸಮಯವನ್ನ ಈ ಲೇಖನ ಓದಲು ಮಿಸಲಿಟ್ಟಿದ್ದಕ್ಕೇ ಧನ್ಯವಾದಗಳು.

ಶ್ರೀ ಕಾಳಿಕಾ ದುರ್ಗಾ ಜೋತಿಷ್ಯ ಪೀಠ
ಪ್ರಧಾನ್ ತಾಂತ್ರಿಕ ಶ್ರೀ ಶ್ರೀನಿವಾಸ್ ರಾಘವನ್ ಆಚಾರ್ಯರು ಇವರು ನಿಮ್ಮ ಎಲ್ಲಾ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಶಾಶ್ವತ ಪರಿಹಾರ ಸೂಚಿಸುತ್ತಾರೆ 9900555458. ಅಮಾವಾಸ್ಯೆಯ (ಅಮಾವಾಸ್ಯೆಯ ದಿನ) ರಾತ್ರಿಯ ಈ ಯಾಗವು ಸಂಪೂರ್ಣವಾಗಿ ಪ್ರಯೋಜನಕಾರಿಯಾಗಿದೆ ಮತ್ತು ಋಣಭಾರದ ಸಮಸ್ಯೆಗಳನ್ನು ನಾಶಪಡಿಸುತ್ತದೆ ಶತ್ರುಸಂಹಾರ, ಮಾಟ-ಮಂತ್ರ ಸೇರಿದಂತೆ ಶತ್ರುಗಳಿಂದ ಉಂಟಾಗುವ ದೋಷಗಳನ್ನು ಓಡಿಸಿ ಕಾನೂನು ವಿಷಯಗಳಲ್ಲಿ ವಿಜಯವನ್ನು ಖಚಿತಪಡಿಸಿಕೊಳ್ಳಿ ಹಿಂದಿನ ಜನ್ಮದ ಪಾಪಗಳನ್ನು ಕೊನೆಗೊಳಿಸಿ (ಪೂರ್ವ ಜನ್ಮ ಪಾಪ ನಿವಾರ್ಥಿ) ಪೂರ್ವಜರ ಶಾಪ (ಪಿತೃ ದೋಷ) ರೋಗಗಳನ್ನು ಕೊನೆಗೊಳಿಸಿ ರಘು ದೋಷ ಶಾಂತಿ ಮತ್ತು ನಿಮಗೆ ಜೀವನದಲ್ಲಿ ಬಹಳಷ್ಟು ಸಂತೋಷ, ಶಾಂತಿ, ಸೌಕರ್ಯ ಮತ್ತು ಸಮೃದ್ಧಿಯನ್ನು ಒದಗಿಸುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!