ನಮ್ಮ ರಾಜ್ಯದ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ಕುಟುಂಬಕ್ಕೆ ಗಂಡಾಂತರ ಕಾದಿದೆ. ಯಡಿಯೂರಪ್ಪನವರ ಮೊಮ್ಮಗಳು ಡಾಕ್ಟರ್ ಸೌಂದರ್ಯ ಆತ್ಮಹತ್ಯೆಗೆ ಶರಣಾಗಿದ್ದಾರೆ ಇದು ರಾಜ್ಯದ ಜನತೆಯಲ್ಲಿ ಆಶ್ಚರ್ಯವನ್ನುಂಟು ಮಾಡಿದೆ. ಸೌಂದರ್ಯ ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ಈ ಲೇಖನದಲ್ಲಿ ನೋಡೋಣ.
30 ವರ್ಷದ ಸೌಂದರ್ಯ ಅವರಿಗೆ 9 ತಿಂಗಳ ಮಗುವಿತ್ತು. ರಾಜ್ಯದ ಮುಖ್ಯಮಂತ್ರಿಯಾಗಿರುವ ಯಡಿಯೂರಪ್ಪ ಅವರ ಕುಟುಂಬದ ಕುಡಿ ಸೌಂದರ್ಯ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು ಯಾರಿಗೂ ನಂಬಲು ಅಸಾಧ್ಯ. ರಾಜಕೀಯ ಹಿನ್ನಲೆ ಹೊಂದಿದ ಕುಟುಂಬದವರು ಆತ್ಮಹತ್ಯೆ ಮಾಡಿಕೊಂಡರೆ ಸಾವಿನ ಹಿಂದೆ ಅನೇಕ ಊಹಾ ಪೋಹಗಳು ಕೇಳಿಬರುತ್ತದೆ. ಸೌಂದರ್ಯ ಅವರು ಕೌಟುಂಬಿಕ ಕಲಹದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಸೌಂದರ್ಯ ಅವರ ತಾಯಿಯ ಅಕ್ಕ ಅರುಣಾದೇವಿ ಅವರು ಖಾಸಗಿ ಸುದ್ದಿ ವಾಹಿನಿಗೆ ಸೌಂದರ್ಯ ಅವರ ಸಾವಿಗೆ ಒಂದಷ್ಟು ಕಾರಣಗಳನ್ನು ಹೇಳಿದ್ದಾರೆ.
ಸೌಂದರ್ಯ ಅವರ ಸಾವಿಗೆ ಆ ಕಾರಣಗಳೆ ಇರಬಹುದು ಎಂದು ಅವರ ಕುಟುಂಬ ಊಹೆ ಮಾಡಿದೆ. ಸೌಂದರ್ಯ ಅವರು ವೃತ್ತಿಯಲ್ಲಿ ವೈದ್ಯರು ಅವರು ಪ್ರತಿಷ್ಠಿತ ಆಸ್ಪತ್ರೆಯಲ್ಲಿ ವೈದ್ಯರಾದ ಡಾಕ್ಟರ್ ನೀರಜ್ ಅವರನ್ನು ವಿವಾಹವಾಗಿದ್ದರು. ನೀರಜ್ ಅವರು ಸಹ ದೊಡ್ಡ ಕುಟುಂಬದ ಹಿನ್ನೆಲೆಯಿಂದ ಬಂದಿದ್ದರು ಹಣದಲ್ಲಿ ಕೊರತೆಯಿರಲಿಲ್ಲ ಮದುವೆಯ ನಂತರ ಸೌಂದರ್ಯ ಅವರು ವೈದ್ಯಕೀಯ ವೃತ್ತಿ ಮಾಡಬೇಕೆಂದು ಇರಲಿಲ್ಲ ಆದರೂ ಸೌಂದರ್ಯ ಅವರು ಫ್ಯಾಷನ್ ಎಂದು ವೃತ್ತಿಯಲ್ಲಿ ಮುಂದುವರೆಯುತ್ತಿದ್ದರು.
ಸೌಂದರ್ಯ ಅವರಿಗೆ 9 ತಿಂಗಳ ಹಿಂದೆ ಒಂದು ಮಗು ಜನಿಸಿತ್ತು ಅಲ್ಲಿಯವರೆಗೆ ಅವರು ಆರೋಗ್ಯವಾಗಿದ್ದರು. ಅವರಿಗೆ ಬಾಣಂತಿ ಸನ್ನಿ ಎಂಬ ಖಾಯಿಲೆ ಅಂಟಿಕೊಳ್ಳುತ್ತದೆ ಈ ಕಾರಣದಿಂದ ಅವರನ್ನು ಒಬ್ಬರೆ ಬಿಡುತ್ತಿರಲಿಲ್ಲ ನೀರಜ್ ವೈದ್ಯರಾಗಿದ್ದರಿಂದ ಹಗಲೆಲ್ಲಾ ಡ್ಯೂಟಿಗೆ ಹೋಗುತ್ತಿದ್ದರು ಆದ್ದರಿಂದ ಸೌಂದರ್ಯ ಅವರ ತಾಯಿ ಪದ್ಮಾವತಿ ಅವರು ಹೆಚ್ಚು ತಮ್ಮ ಮನೆಯಲ್ಲಿ ಆರೈಕೆ ಮಾಡುತ್ತಿದ್ದರು. ಸೌಂದರ್ಯ ಅವರು ಜನವರಿ 27 ರಂದು ಬೆಂಗಳೂರಿನ ವಸಂತನಗರದಲ್ಲಿ ಇರುವ ತಮ್ಮ ಅಪಾರ್ಟ್ಮೆಂಟ್ ಗೆ ಬಂದು ನೆಲೆಸುತ್ತಾರೆ.
ಬಾಣಂತಿ ಸನ್ನಿ ಎನ್ನುವುದು ಒಂದು ಮಾನಸಿಕ ಖಾಯಿಲೆ, ಈ ಖಾಯಿಲೆ ಮಗು ಹುಟ್ಟಿ ಎರಡು ವಾರಗಳಲ್ಲಿ ಕಾಣಿಸಿಕೊಳ್ಳುತ್ತದೆ, ತೀವ್ರತರವಾದ ಖಿನ್ನತೆಗೆ ಒಳಗಾಗುತ್ತಾರೆ ಅವರು ವಿಚಿತ್ರವಾಗಿ ವರ್ತಿಸುತ್ತಾರೆ. ಮಗುವಿನ ಬಗ್ಗೆ ಆಸಕ್ತಿ ಇರುವುದಿಲ್ಲ ಹಾಗೂ ಹೆಚ್ಚು ಭಯ ಪಡುತ್ತಿರುತ್ತಾರೆ. ಈ ಖಾಯಿಲೆ ಕೆಲವು ಬಾಣಂತಿಯರಿಗೆ ಕಂಡುಬರುತ್ತದೆ ಎರಡು ಮೂರು ವಾರದಲ್ಲಿ ಗುಣವಾಗುತ್ತದೆ.
ಇನ್ನು ಕೆಲವರಿಗೆ ಈ ಖಾಯಿಲೆ ಮುಂದುವರೆದು ಸ್ಕ್ರಿಜೋಫ್ರೇನಿಯಾನಂತಹ ಭೀಕರ ಮಾನಸಿಕ ಖಾಯಿಲೆಗೆ ಒಳಗಾಗುತ್ತಾರೆ. ಚೊಚ್ಚಲ ಬಾಣಂತಿಯರಲ್ಲಿ ಈ ಖಾಯಿಲೆ ಕಾಣಿಸುತ್ತದೆ. ಈ ಖಾಯಿಲೆ ಅನುವಂಶೀಯವಾಗಿ ಬರುವ ಸಾಧ್ಯತೆ ಇದೆ. ನ್ಯೂನ್ಯತೆ ಇರುವ ಮಕ್ಕಳು ಹುಟ್ಟಿದಾಗ ತಾಯಿಗೆ ಈ ರೀತಿಯ ಖಿನ್ನತೆ ಕಾಣಿಸುತ್ತದೆ. ಮನೆಯವರಿಂದ ನಿರ್ಲಕ್ಷಕ್ಕೆ ಒಳಗಾದರೆ ಈ ಖಾಯಿಲೆ ಬರಬಹುದು. ಗರ್ಭ ಧರಿಸಿದ ಸಮಯದಲ್ಲಿ ಮೂರ್ಛೆ ರೋಗ, ರಕ್ತದೊತ್ತಡ ಕಾಣಿಸಿಕೊಂಡರೆ ಬಾಣಂತಿ ಸಮಯದಲ್ಲಿ ಬಾಣಂತಿ ಸನ್ನಿ ಕಾಣಿಸಿಕೊಳ್ಳುತ್ತದೆ.
ಗರ್ಭಿಣಿಯಾಗಿದ್ದಾಗ ಸೂಕ್ತ ಆರೈಕೆ ಸಿಗದೆ ಇದ್ದರೆ ಈ ಖಾಯಿಲೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಮಗು ಹೊಂದಲು ಇಷ್ಟವಿಲ್ಲದೆ ಒತ್ತಾಯಕ್ಕೆ ಮಗು ಹುಟ್ಟಿದರೆ ತಾಯಿ ಖಿನ್ನತೆಗೆ ಒಳಗಾಗಬಹುದು. ಬಾಣಂತಿ ಸನ್ನಿ ಕಾಣಿಸಿಕೊಂಡ ಮಹಿಳೆಯರು ಯಾರೊಂದಿಗೂ ಮಾತನಾಡದೆ ಮಂಕಾಗಿರುತ್ತಾರೆ. ಸರಿಯಾಗಿ ಊಟ ಮಾಡುವುದಿಲ್ಲ, ನಿದ್ರೆ ಮಾಡುವುದಿಲ್ಲ. ಯಾವುದೊ ಒಂದು ಭ್ರಮೆಯಲ್ಲಿ ಬದುಕುತ್ತಾರೆ.
ಬಾಣಂತಿ ಸನ್ನಿ ಕಾಣಿಸಿಕೊಂಡ ತಕ್ಷಣ ಚಿಕಿತ್ಸೆ ಕೊಡಿಸಬೇಕು ಪ್ರಾರಂಭಿಕ ಹಂತದಲ್ಲಿ ಚಿಕಿತ್ಸೆ ಕೊಡಿಸಿದರೆ ಗುಣವಾಗುವ ಸಾಧ್ಯತೆಗಳಿವೆ. ಮುಂದುವರೆದರೆ ತೀವ್ರ ಮನೋರೋಗಕ್ಕೆ ಒಳಗಾದರೆ ಹೆಚ್ಚಿನ ಟ್ರೀಟ್ಮೆಂಟ್ ಅಗತ್ಯ ಇರುತ್ತದೆ. ಯಾವಾಗಲೂ ಅವರ ಜೊತೆಯೆ ಇದ್ದು ಅವರನ್ನು ಕಾಳಜಿಯಿಂದ ನೋಡಿಕೊಳ್ಳಬೇಕು. ಗರ್ಭ ಧರಿಸಿದ ಸಮಯದಿಂದ ಅವರನ್ನು ಕಾಳಜಿಯಿಂದ ನೋಡಿಕೊಂಡಾಗ ಅವರು ಖಿನ್ನತೆಗೆ ಒಳಗಾಗುವುದಿಲ್ಲ ಅಂದರೆ ಬಾಣಂತಿ ಸನ್ನಿ ಕಾಣಿಸಿಕೊಳ್ಳುವುದಿಲ್ಲ. ಸೌಂದರ್ಯ ಅವರ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿರುವುದರಿಂದ ಅವರೆ ವಸಂತನಗರದಲ್ಲಿರುವ ಗಂಡನ ಮನೆಯಲ್ಲಿ ಇರುತ್ತೇನೆ ಎಂದು ಹೇಳಿರುವುದರಿಂದ ಅವರನ್ನು ತಾಯಿಯ ಮನೆಯಿಂದ ಕಳುಹಿಸಲಾಯಿತು.
ಮನೆಯಲ್ಲಿ ಸೌಂದರ್ಯ ಹಾಗೂ ಮಗು ಮತ್ತು ಕೆಲಸದವರು ಇದ್ದರು ಅವರು ಆ ಸಮಯದಲ್ಲಿ ಆ ತ್ಮಹ ತ್ಯೆಗೆ ಶರಣಾಗಿದ್ದಾರೆ. ಅವರ ತಾಯಿಯ ಮನೆ ಹುಬ್ಬಳ್ಳಿಯಲ್ಲಿದೆ. ಸೌಂದರ್ಯ ಅವರ ತಂದೆ ವಿಬಿ ಯಮಕನರೆಡಿ, ತಾಯಿ ಪದ್ಮಾವತಿ ಯಡಿಯೂರಪ್ಪ ಅವರ ಎರಡನೇ ಮಗಳು. ನೀರಜ್ ಅವರು ಇದೊಂದು ಅಸಹಜ ಸಾವು ಎಂದು ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾರೆ ಪೊಲೀಸ್ ಈ ಬಗ್ಗೆ ತನಿಖೆ ನಡೆಸಬೇಕು. ದೇಶದ ಪ್ರಧಾನಿ ಮೋದಿ ಅವರು ಯಡಿಯೂರಪ್ಪ ಅವರಿಗೆ ಕರೆ ಮಾಡಿ ಸಾಂತ್ವನ ಹೇಳಿದ್ದಾರೆ, ಮುಖ್ಯಮಂತ್ರಿ ಬೊಮ್ಮಾಯಿ ಅವರು ಯಡಿಯರಪ್ಪನವರನ್ನು ಭೇಟಿ ಮಾಡಿ ಸಾಂತ್ವನ ಹೇಳಿದರು, ಇತರೆ ಗಣ್ಯ ನಾಯಕರು ಯಡಿಯರಪ್ಪನವರಿಗೆ ಸಾಂತ್ವನ ಹೇಳುತ್ತಿದ್ದಾರೆ. ಯಡಿಯೂರಪ್ಪ ಅವರ ಕುಟುಂಬದವರಿಗೆ ಸೌಂದರ್ಯ ಅವರ ಸಾವಿನ ಸುದ್ದಿ ಸಹಿಸಲು ದೇವರು ಶಕ್ತಿ ಕೊಡಲಿ ಎಂದು ಆಶಿಸೋಣ.