ಬ್ರಹ್ಮಗಂಟು ಖ್ಯಾತಿಯ ಸುಮತಿ ಅವರ ಹೆಸರು, ಯಾವ ಊರಿನವರು ಹಾಗೂ ಅವರ ನಟನೆಯ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಬ್ರಹ್ಮಗಂಟು ಖ್ಯಾತಿಯ ಲಕ್ಕಿ ಅವರ ಅಮ್ಮ ಸುಮತಿಯವರು ನಾಯಕಿಯಾಗಿ 450ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದಾರೆ. ಮೆಘಾ ಧಾರಾವಾಹಿಗಳನ್ನು ನೋಡುತ್ತಿದ್ದ ಕಾಲದಲ್ಲಿ ಇವರು ಕಿರುತೆರೆಯಲ್ಲಿ ನಟಿಸುತ್ತಿದ್ದರು. ಇವರು ಈಗಲೂ ಬೇಡಿಕೆಯ ನಟಿಯಾಗಿದ್ದಾರೆ. ಇವರು ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ಬ್ಯುಸಿಯಾಗಿದ್ದಾರೆ. ಇವರು ಮೂಲತಃ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದವರು ಇವರ ಹೆಸರು ಸ್ವಾತಿ. ನೀ ಬರೆದ ಪಾತ್ರ ನಾನಲ್ಲ ಎಂಬ ಧಾರಾವಾಹಿ ಇವರ ಮೊದಲ ಧಾರಾವಾಹಿಯಾಗಿದೆ. ಇವರು ಕಿರುತೆರೆಗೆ ಬಂದ ಮೊದ ಮೊದಲು 10-20 ಎಪಿಸೋಡ್ ಗಳಲ್ಲಿ ಮಾತ್ರ ನಟಿಸುತ್ತಿದ್ದರು. ನಂತರ ನಾಯಕಿಯಾಗಿ 450 ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದಾರೆ.
ಹೀಗಿರುವಾಗಲೇ ಮದುವೆ ಸಂಸಾರವೆಂದು 10 ವರ್ಷ ಬ್ರೇಕ್ ಪಡೆಯುತ್ತಾರೆ ಮತ್ತೆ 2014 ರಲ್ಲಿ ಜೀ ಕನ್ನಡಕ್ಕೆ ಬರುತ್ತಾರೆ. ಸಾಗರ ಸಂಗಮ ಧಾರಾವಾಹಿ ಮೂಲಕ ನಟನೆ ಆರಂಭಿಸುತ್ತಾರೆ. ಅದಾದ ನಂತರ ಒಂದರ ನಂತರ ಒಂದರಂತೆ ಧಾರಾವಾಹಿಗಳಲ್ಲಿ ನಟಿಸುತ್ತಾರೆ. ಸದ್ಯ ಬ್ರಹ್ಮಗಂಟು ಧಾರಾವಾಹಿಯಲ್ಲಿ ನಾಯಕನ ಅಮ್ಮನಾಗಿ ನಟಿಸುತ್ತಿದ್ದಾರೆ ಅಲ್ಲದೇ ನಮ್ಮನೆ ಯುವರಾಣಿ, ಮನಸಾರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದಾರೆ. ಇವರನ್ನು ಸದಾ ನಗುವ ನಗುಮುಖದ ಚೆಲುವೆ ಎಂದು ಹೇಳಬಹುದು. ಇವರಿಗೆ ಯಾವಾಗಲೂ ಸಾಫ್ಟ್ ಪಾತ್ರವೇ ಸಿಗುತ್ತದೆ. ಇವರು ತಮ್ಮ ಮಾತಿನಿಂದ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಇವರು ಚಿತ್ರಗಳಲ್ಲೂ ನಟಿಸಿದ್ದಾರೆ ಚಕ್ರವ್ಯೂಹ, ರಾಜ್ ವಿಷ್ಣು, ಹರಿಶ್ಚಂದ್ರ, ಪಡ್ಡೆಹುಲಿ, ಯುವರತ್ನ, ಗೀತ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಯಂಗ್ ಆಗಿ ಕಾಣುತ್ತಾರೆ. ಈ ಮಾಹಿತಿಯನ್ನು ಎಲ್ಲರಿಗೂ ತಿಳಿಸಿ.