ನಮ್ಮ ಮೆದುಳು ಶರೀರದ ಇತರೆ ಅಂಗಗಳಂತೆ ಒಂದು ಪ್ರಮುಖ ಭಾಗವಾಗಿದೆ. ಮೆದುಳಿನ ಕಾರ್ಯಕ್ಷಮತೆ ಉತ್ತಮವಾಗಿದ್ದಾಗ ಮಾತ್ರ ನಾವು ಹೆಚ್ಚಿನ ಆಕ್ಟೀವ್ ಆಗಿ ಕೆಲಸ ಮಾಡಲು ಸಾಧ್ಯ. ನಮ್ಮ ದೈನಂದಿನ ಕೆಲವು ಕೆಟ್ಟ ಹವ್ಯಾಸಗಳಿಂದ ಮೆದುಳಿನ ಕಾರ್ಯಕ್ಷಮತೆಗೆ ಅಡ್ಡಿಯಾಗುತ್ತದೆ ಅಂತಹ ಕೆಟ್ಟ ಹವ್ಯಾಸಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.

ಕೆಲವು ಕೆಟ್ಟ ಹವ್ಯಾಸಗಳಿಂದ ನಮ್ಮ ಮೆದುಳು ಡ್ಯಾಮೇಜ್ ಆಗುತ್ತದೆ ಮತ್ತು ನಮ್ಮ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ, ಸೋಮಾರಿತನ ಹೆಚ್ಚಾಗುತ್ತದೆ, ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ನಮ್ಮ ದೇಹಕ್ಕೆ ನೀರು ಅವಶ್ಯಕವಾಗಿದೆ. ಮೆದುಳಿನ ಕಾರ್ಯಕ್ಷಮತೆಗೆ ನೀರು ಬೇಕು, ನೀರಿನ ಪ್ರಮಾಣ ಕಡಿಮೆಯಾದಾಗ ಡಿಹೈಡ್ರೇಷನ್ ಸಮಸ್ಯೆ ಉಂಟಾಗುತ್ತದೆ. ಇದರಿಂದ ತಲೆನೋವು, ಕಿಡ್ನಿ ಸ್ಟೋನ್ ಮುಂತಾದ ಸಮಸ್ಯೆಗಳು ಕಾಣಿಸುತ್ತವೆ.

ಹಾರ್ವರ್ಡ್ ಮೆಡಿಕಲ್ ಸ್ಕೂಲ್ ನ ಸಂಶೋಧನೆಯ ಪ್ರಕಾರ ನಮ್ಮ ಶರೀರ ಹೆಚ್ಚು ಡಿಹೈಡ್ರೇಷನ್ ನಲ್ಲಿದ್ದರೆ ಬೇಗನೆ ಮಸಲ್ಸ್ ಶ್ರಿಂಕ್ ಆಗುತ್ತದೆ ಮತ್ತು ಮೆದುಳಿನಲ್ಲಿರುವ ಸೆಲ್ಸ್ ಡ್ರೈ ಆಗುತ್ತಾ ಹೋಗುತ್ತದೆ, ಆದ್ದರಿಂದ ಪ್ರತಿದಿನ ಹೆಚ್ಚು ನೀರು ಕುಡಿಯುವುದು ಅವಶ್ಯಕ. ಈಗಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಗಳಿಂದ ನಮಗೆ ಮಾಹಿತಿಗಳು ದೊರಕುತ್ತವೆ ಆದರೆ ಅನಾವಶ್ಯಕ ಮಾಹಿತಿಗಳಲ್ಲಿ ನಾವು ಹೆಚ್ಚು ಮುಳುಗಿರುತ್ತೇವೆ ಮತ್ತು ಹೆಚ್ಚು ಟೀವಿ ನೋಡುತ್ತೇವೆ ಇದರಿಂದ ಬ್ರೇನ್ ಗೆ ಓವರ್ ಲೋಡ್ ಆಗುತ್ತದೆ. ಇದರಿಂದ ಮೆದುಳಿನ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ. ನಮ್ಮ ಮೆದುಳಿನ ಕಾರ್ಯಕ್ಷಮತೆಗೆ ಸೂರ್ಯನ ಬೆಳಕು ಅವಶ್ಯಕವಾಗಿದೆ. ಸೂರ್ಯನ ಬೆಳಕಿನಿಂದ ನಮಗೆ ವಿಟಮಿನ್-ಡಿ ಸಿಗುತ್ತದೆ, ಇದು ಮೆದುಳಿನ ಜನರಲ್ ಕಾಗ್ನೇಟಿವ್ ಕಾರ್ಯವನ್ನು ಉತ್ತಮಗೊಳಿಸುತ್ತದೆ.

ಸೂರ್ಯನ ಬೆಳಕು ನಮ್ಮ ಮೆದುಳಿನಲ್ಲಿ ಸೆರಟೋನಿನ್ ಎಂಬ ಅಂಶವನ್ನು ಉತ್ಪತ್ತಿ ಮಾಡಲು ಸಹಕಾರಿಯಾಗಿದೆ ಇದು ಮನಸ್ಸಿಗೆ ನೆಮ್ಮದಿ ಕೊಡುವಂತಹ ಹಾರ್ಮೋನ್ ಆಗಿದೆ. ನಾವು ಹೆಚ್ಚು ಸಮಯ ರೂಮಿನಲ್ಲಿ, ಡಾರ್ಕ್ ಪ್ಲೇಸ್ ಗಳಲ್ಲಿ ಕಳೆಯಬಾರದು ಸೂರ್ಯನ ಬೆಳಕು ನಮ್ಮ ಶರೀರದ ಮೇಲೆ ಬೀಳಬೇಕು. ಹೆಚ್ಚು ಸಮಯ ಡಾರ್ಕ್ ಪ್ಲೇಸ್ ಗಳಲ್ಲಿ ಇದ್ದರೆ ಆಲಸ್ಯ ಹೆಚ್ಚಾಗುತ್ತದೆ. ಮೆದುಳಿನಲ್ಲಿ ಸೆರೆಬ್ರಲ್ ಕಾರ್ಟೆಕ್ಸ್ ಎಂಬ ಭಾಗವಿದೆ ಇದು ಮೆಮೊರಿ, ಲ್ಯಾಂಗ್ವೇಜ್, ಪರ್ಸೆಪ್ಷನ್ ಇವುಗಳನ್ನು ನೋಡಿಕೊಳ್ಳುತ್ತದೆ. ನಾವು ಹೆಚ್ಚು ಸ್ಮೋಕ್ ಮಾಡುವುದರಿಂದ ಸೆರೆಬ್ರಲ್ ಕಾರ್ಟೆಕ್ಸ್ ಬೇಗನೆ ವೀಕ್ ಆಗುತ್ತದೆ ಇದರಿಂದ ಅಲ್ಝೈಮರ್ ನಂತಹ ಖಾಯಿಲೆಗಳು ಕಾಣಿಸಿಕೊಳ್ಳುತ್ತವೆ ಆದ್ದರಿಂದ ಸ್ಮೋಕ್ ಮಾಡುವುದನ್ನು ಬಿಡಬೇಕು.

ಒತ್ತಡವು ನಮ್ಮ ಮೆದುಳಿಗೆ ಅಪಾಯಕಾರಿಯಾಗಿದೆ. ಕೆಲವರು ಕಹಿ ಘಟನೆಗಳ ಬಗ್ಗೆ ಹೆಚ್ಚು ಸಮಯ ಯೋಚಿಸುತ್ತಲೇ ಇರುತ್ತಾರೆ, ಇನ್ನು ಕೆಲವರು ಕೆಲಸದ ಒತ್ತಡಕ್ಕೆ ಒಳಗಾಗಿರುತ್ತಾರೆ ಇದರಿಂದ ನಮ್ಮ ಶರೀರದಲ್ಲಿ ಕಾರ್ಟಿಸೋಲ್ ಎಂಬ ಸ್ಟ್ರೆಸ್ ಹಾರ್ಮೋನ್ ಬಿಡುಗಡೆಯಾಗುತ್ತದೆ ಇದರಿಂದ ವೇಟ್ ಗೇನ್, ಡೈಜೇಷನ್ ಸಿಸ್ಟಮ್ ಪ್ರಾಬ್ಲಮ್, ಹಾರ್ಮೋನ್ ಇಂಬ್ಯಾಲೆನ್ಸ್, ಹಾರ್ಟ್ ಡಿಸೀಸ್ ನಂತಹ ಸಮಸ್ಯೆಗಳು ಉಂಟಾಗುತ್ತದೆ, ಅಲ್ಲದೆ ಬ್ರೈನ್ ಫಾಗ್, ಎಂಕ್ಸೈಟಿ, ಮೆಮೊರಿ ಲಾಸ್, ಓವರ್ ಥಿಂಕಿಂಗ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತದೆ, ಆದ್ದರಿಂದ ಅನಾವಶ್ಯಕ ವಿಷಯಗಳ ಬಗ್ಗೆ ಹೆಚ್ಚು ಯೋಚಿಸಬಾರದು. ಜೀವನಶೈಲಿಯು ಮೆದುಳಿನ ಕಾರ್ಯಕ್ಷಮತೆಯಲ್ಲಿ ಪ್ರಮುಖ ಪಾತ್ರವಹಿಸುತ್ತದೆ.

ಸೋಮಾರಿತನ ಜೀವನಶೈಲಿಯಿಂದ ಮೆದುಳು ಅಪಾಯಕ್ಕೆ ಒಳಗಾಗುತ್ತದೆ. ಇಡೀ ದಿನ ಒಂದು ಕಡೆ ಕುಳಿತುಕೊಂಡು ಮೊಬೈಲ್ ನಲ್ಲಿ ಕೆಲಸ ಮಾಡುವುದು ಇಂಥಹ ಜೀವನಶೈಲಿಯಿಂದ ಒಬೆಸಿಟಿ, ಹಾರ್ಟ್ ಡಿಸೀಸ್, ಡಯಾಬಿಟೀಸ್, ಹೈ ಬ್ಲಡ್ ಪ್ರೆಷರ್ ನಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಮತ್ತು ಈ ರೀತಿಯ ಜೀವನಶೈಲಿಯಿಂದ ನಮ್ಮ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗದೆ ಮೆದುಳಿಗೆ ಸರಿಯಾದ ಪ್ರಮಾಣದಲ್ಲಿ ಆಕ್ಸಿಜನ್ ಸಿಗುವುದಿಲ್ಲ ಇದರಿಂದ ಆಲಸ್ಯ, ಸೋಮಾರಿತನ ಕಾಣಿಸುತ್ತದೆ, ಆದ್ದರಿಂದ ಪ್ರತಿದಿನ ಯೋಗ, ವ್ಯಾಯಾಮ, ಧ್ಯಾನ ಮಾಡುವುದು ಒಳ್ಳೆಯದು ಇದರಿಂದ ಬ್ರೇನ್ ಆಕ್ಟೀವ್ ಆಗಿ ಕೆಲಸ ಮಾಡುತ್ತದೆ. ಹೆಡ್ ಫೋನ್, ಇಯರ್ ಫೋನ್ ಗಳಿಂದ ದೊಡ್ಡ ಸೌಂಡ್ ನಲ್ಲಿ ಮ್ಯೂಸಿಕ್ ಕೇಳುವುದರಿಂದ ಮೆದುಳಿಗೆ ಅಪಾಯವಿದೆ ಆದ್ದರಿಂದ ಕಡಿಮೆ ಸೌಂಡಿನಲ್ಲಿ ಮ್ಯೂಸಿಕ್ ಕೇಳುವುದು ಮೆದುಳಿನ ಆರೋಗ್ಯಕ್ಕೆ ಉತ್ತಮ. ಅತಿ ಹೆಚ್ಚು ಸ್ನಾಕ್ಸ್, ಜಂಕ್ ಫುಡ್ ಗಳನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾಗುತ್ತದೆ ಇದರಿಂದ ಮೆದುಳಿಗೆ ಅಗತ್ಯ ಪ್ರಮಾಣದಲ್ಲಿ ರಕ್ತ ಸಂಚಾರ ಆಗುವುದಿಲ್ಲ, ಆದ್ದರಿಂದ ಅತಿ ಹೆಚ್ಚು ಜಂಕ್ ಫುಡ್ ಗಳನ್ನು ತಿನ್ನುವ ಬದಲು ಆರೋಗ್ಯಕರ ಡಯಟ್ ಅನುಸರಿಸಿ. ನಾವು ಹೆಚ್ಚು ಕ್ರಿಯೇಟಿವ್ ಯೋಚನೆ ಮಾಡಿದಾಗ ಮೆದುಳು ಆರೋಗ್ಯವಾಗಿರುತ್ತದೆ. ಕ್ರಿಯೇಟಿವ್ ಯೋಚನೆ ಮಾಡುವುದನ್ನು ನಿಲ್ಲಿಸಿದರೆ ನಿಶ್ಯಕ್ತಿಯಾಗಿ ಮೆದುಳಿನ ಸಾಮರ್ಥ್ಯ ಕುಗ್ಗುತ್ತಾ ಹೋಗುತ್ತದೆ. ಕ್ರಿಯೇಟಿವ್ ಥಿಂಕಿಂಗ್ ಮತ್ತು ಕೆಲಸಕಾರ್ಯಗಳಲ್ಲಿ ತೊಡಗುವುದರಿಂದ ನಮಗೆ 70 ವರ್ಷವಾದರೂ ಆಕ್ಟೀವ್ ಆಗಿರಬಹುದು ಮತ್ತು ಮೆದುಳು ಚುರುಕಾಗಿ ಕೆಲಸ ಮಾಡುತ್ತದೆ.

ಉತ್ತಮ ನಿದ್ರೆಯು ಮೆದುಳಿನ ಆರೋಗ್ಯವನ್ನು ಹೆಚ್ಚಿಸುತ್ತದೆ, ಆದರೆ ಇತ್ತೀಚಿನ ದಿನಗಳಲ್ಲಿ ನಿದ್ರೆ ಮಾಡುವ ಸಮಯ ಕಡಿಮೆಯಾಗಿದೆ. ರಾತ್ರಿ ಹೆಚ್ಚು ಸಮಯ ಮೊಬೈಲ್ ಗಳಲ್ಲಿ ಕಳೆದು ತಡವಾಗಿ ಮಲಗಿ ಬೆಳಗ್ಗೆ ತಡವಾಗಿ ಏಳುತ್ತಾರೆ. ಮೊಬೈಲ್ ಇಂದ ಬರುವ ಬ್ಲ್ಯೂ ಲೈಟ್ಸ್ ನಿಂದ ನಮ್ಮ ಮೆದುಳಿನಲ್ಲಿ ಮೆಲಟೋನಿನ್ ಹಾರ್ಮೋನ್ ಉತ್ಪಾದನೆ ಕಡಿಮೆಯಾಗುತ್ತದೆ ಇದರಿಂದ ನಿದ್ರಾಹೀನತೆ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ನಿದ್ರಾಹೀನತೆ ಸಮಸ್ಯೆಯಿಂದ ಮೆದುಳು ತನ್ನ ಕಾರ್ಯವನ್ನು ಸರಿಯಾಗಿ ಮಾಡುವುದಿಲ್ಲ ಆದ್ದರಿಂದ ಪ್ರತಿದಿನ ಎಂಟು ತಾಸು ನಿದ್ರೆ ಮಾಡಬೇಕು ಇದರಿಂದ ಮೆದುಳಿಗೆ ವಿಶ್ರಾಂತಿ ಸಿಗುತ್ತದೆ. ಈ ಮೇಲಿನ ಕೆಟ್ಟ ಹವ್ಯಾಸಗಳನ್ನು ಯಾವುದೇ ಕಾರಣಕ್ಕೂ ಅನುಸರಿಸಬಾರದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!