ನಮ್ಮ ಕರ್ನಾಟಕ ಸರ್ಕಾರದ ಕರ್ನಾಟಕ ಅಲ್ಪ ಸಂಖ್ಯಾತರ ಅಭಿವೃದ್ಧಿ ನಿಗಮದಿಂದ ವಿವಿಧ ಯೋಜನೆಗಳಿಂದ ಸಹಾಯಕ್ಕಾಗಿ ಆಸಕ್ತಿ ಇರುವ ಎಲ್ಲಾ ಅಲ್ಪ ಸಂಖ್ಯಾತರ ವರ್ಗದಲ್ಲಿ ಇರುವವರು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿದೆ. ನಾವು ಇಲ್ಲಿ ಹಲವಾರು ಯೋಜನೆಗಳು ಮತ್ತು ಅವುಗಳ ಸೌಲಭ್ಯಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದು ಗಂಗಾ ಕಲ್ಯಾಣಿ ಯೋಜನೆ. ಈ ಯೋಜನೆಯ ಅಡಿಯಲ್ಲಿ ಉಚಿತವಾಗಿ ತಮ್ಮ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಬಹುದು. ಇದಕ್ಕಾಗಿ ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ನಂತರದಲ್ಲಿ ಟ್ಯಾಕ್ಸಿಗಳನ್ನು ಖರೀದಿಸಲು ನಿಗಮದ ವತಿಯಿಂದ ಸಹಾಯಧನ ನೀಡಲಾಗುತ್ತದೆ. ಹಾಗೆಯೇ ಸ್ವಂತ ಬಿಸನೆಸ್ ಮಾಡಲು ಸಹಾಯಧನ ಪಡೆದುಕೊಳ್ಳಬಹುದು. ಪಶು ಸಂಗೋಪನೆ ಯೋಜನೆಯ ಮೂಲಕ ಕೋಳಿ, ಎಮ್ಮೆ, ಹಂದಿ ಹೀಗೆ ಮುಂತಾದವುಗಳನ್ನು ಖರೀದಿಸಲು ಸರ್ಕಾರದ ಕಡೆಯಿಂದ ಸಹಾಯಧನ ನೀಡಲಾಗುತ್ತದೆ.
ರೈತರಾಗಿದ್ದರೆ ಕೃಷಿ ಉಪಕರಣಗಳನ್ನು ಖರೀದಿಸಲು ಸರ್ಕಾರದಿಂದ ಸಹಾಯಧನ ನೀಡಲಾಗುತ್ತದೆ. ಇವುಗಳ ಸೌಲಭ್ಯ ಪಡೆಯಲು ಬಯಸುವ ಅಲ್ಪ ಸಂಖ್ಯಾತರು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಸಿದ ನಂತರ ಅರ್ಜಿ ಆಯ್ಕೆಯಾದರೆ ಸರ್ಕಾರದಿಂದ ಬ್ಯಾಂಕ್ ಖಾತೆಗೆ ಹಣ ಜಮಾ ಆಗುತ್ತದೆ. ಅಲ್ಪ ಸಂಖ್ಯಾತರು ಅಂದರೆ ಮುಸಲ್ಮಾನರು, ಕ್ರಿಶ್ಚಿಯನ್ನರು, ಸಿಖ್ಖರು, ಪಾರ್ಸಿಕರು, ಜೈನರು, ಬೌದ್ಧರು ಈ ಎಲ್ಲಾ ವರ್ಗದವರು ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಈ ಎಲ್ಲಾ ವರ್ಗದವರು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಹಲವಾರು ದಾಖಲೆಗಳನ್ನು ನೀಡಬೇಕಾಗುತ್ತದೆ. ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್,ಬ್ಯಾಂಕ್ ವಿವರಗಳು ಮತ್ತು ಆದಾಯ ಪ್ರಮಾಣ ಪತ್ರ ಇವುಗಳು ಬೇಕಾಗುತ್ತದೆ. ಒಂದು ವೇಳೆ ಟ್ಯಾಕ್ಸಿಗಳಿಗಾಗಿ ಅರ್ಜಿ ಸಲ್ಲಿಸುವುದಾದರೆ ಡಿಎಲ್ ಬೇಕಾಗುತ್ತದೆ. ಗಂಗಾ ಕಲ್ಯಾಣಿ ಯೋಜನೆಗೆ ಅರ್ಜಿ ಸಲ್ಲಿಸುವದಾದರೆ ಜಮೀನಿನ ಪಹಣಿ ಬೇಕಾಗುತ್ತದೆ. WWW.kmdc.karnataka.gov.in ಈ ವೆಬ್ಸೈಟ್ ಓಪನ್ ಮಾಡಿದರೆ ಇಲಾಖೆಯ ವತಿಯಿಂದ ಎಲ್ಲಾ ಮಾಹಿತಿಗಳು ದೊರೆಯುತ್ತವೆ. ಡಿಸೆಂಬರ್10ನೇ ತಾರೀಖು 2020 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಿದೆ.