ಇತ್ತೀಚೆಗೆ ಬಿಪಿ ಹಾಗೂ ಮಧುಮೇಹ ಸಮಸ್ಯೆಗಳು ಜಾಸ್ತಿ. ನಲವತ್ತು ವರ್ಷಗಳು ಕಳೆಯುವ ಮೊದಲೆ ಬಿಪಿ ಬರುವುದು ಸಹಜವಾಗಿ ಬಿಟ್ಟಿದೆ. ಬಿಪಿಯಲ್ಲಿಯೂ ಎರಡು ವಿಧ. ಕಡಿಮೆ ರಕ್ತದೊತ್ತಡ ಹಾಗೂ ಹೆಚ್ಚಿನ ರಕ್ತದೊತ್ತಡ. ಹಾಗಾದರೆ ಈ ಕಡಿಮೆ ರಕ್ತದೊತ್ತಡಕ್ಕೆ ಆಸ್ಪತ್ರೆಯ ಔಷಧದ ಹೊರತಾಗಿ ಮನೆ ಔಷಧಿಗಳು ಇವೆ. ಅವುಗಳಲ್ಲಿ ಒಂದು ಔಷಧಿಯ ಬಗೆಗೆ ಇಲ್ಲಿರುವ ಮಾಹಿತಿಯಿಂದ ತಿಳಿಯೋಣ.
ಕಡಿಮೆ ರಕ್ತದೊತ್ತಡವು ಬರುವುದು ಇನ್ಸುಲಿಕರಣಗಳಿಂದ. ಸಾಮಾನ್ಯವಾಗಿ ರಕ್ತದೊತ್ತಡ ನೂರಾ ಇಪ್ಪತ್ತರಿಂದ ಎಂಬತ್ತು ಇರುತ್ತದೆ. ರಕ್ತದೊತ್ತಡ ತೊಂಬತ್ತರಿಂದ ಕಡಿಮೆ ಆದಾಗ ಕಡಿಮೆ ರಕ್ತದೊತ್ತಡ ಎನ್ನುತ್ತಾರೆ. ಕಡಿಮೆ ರಕ್ತದೊತ್ತಡ ಅಂದರೆ ಲೊ ಬಿಪಿ ದೇಹದಲ್ಲಿ ನೀರಿನ ಪ್ರಮಾಣದ ಕೊರತೆ ಇದ್ದಾಗ ಲೋ ಬಿಪಿ ಉಂಟಾಗುತ್ತದೆ. ಗರ್ಭಿಣಿ ಮಹಿಳೆಯರಿಗೆ ಲೋ ಬಿಪಿ ಆಗುವುದು ಸಹಜ. ವಿಟಮಿನ್ ಬಿ12 ನ ಕೊರತೆ ದೇಹದಲ್ಲಿ ಉಂಟಾದಾಗ ಕಡಿಮೆ ರಕ್ತದೊತ್ತಡ ಕಾಣಿಸಿಕೊಳ್ಳುತ್ತದೆ. ಹಾಗೂ ಹೃದಯದ ಸಮಸ್ಯೆ ಇರುವವರಲ್ಲಿ ಹೆಚ್ಚಾಗಿ ಲೊ ಬಿಪಿ ಕಾಣಿಸಿಕೊಳ್ಳುತ್ತದೆ.
ಲೊ ಬಿಪಿ ಬರದಂತೆ ತಡೆಯಲು ದಿನಕ್ಕೆ ಎಂಟು ಗ್ಲಾಸ್ ನಷ್ಟು ನೀರು ಕುಡಿಯುವುದು ಉತ್ತಮ. ಗರ್ಭಿಣಿಯರು ಲೊ ಬಿಪಿಯಿಂದ ಪಾರಾಗಲು ಜ್ಯೂಸ್ ಸೇವಿಸುತ್ತಿದ್ದರೆ ಉತ್ತಮ. ಇನ್ನು ಬಿಪಿಗೆ ಉತ್ತಮ ಮನೆ ಮದ್ದು ಎಂದರೆ ತುಳಸಿ. ತುಳಸಿಯಲ್ಲಿರುವ ಮ್ಯಾಗ್ನಿಸಿಯಂ, ಪೊಟ್ಯಾಸಿಯಮ್ ಗಳು ರಕ್ತದೊತ್ತಡವನ್ನು ನಿಯಂತ್ರಣಕ್ಕೆ ತರುತ್ತವೆ. ಇಂತಹ ತುಳಸಿಯ ಹತ್ತರಿಂದ ಹದಿನೈದು ದಳಗಳನ್ನು ಜೇನು ತುಪ್ಪದೊಂದಿಗೆ ಬೆರೆಸಿ ಖಾಲಿ ಹೊಟ್ಟೆಯಲ್ಲಿ ತಿನ್ನಬೇಕು. ಇದರಿಂದ ರಕ್ತದೊತ್ತಡ ಕಡಿಮೆ ಆಗಿ ದೇಹದ ಹಲವು ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ. ಇದರೊಟ್ಟಿಗೆ ಉಪ್ಪಿನ ನೀರು, ನಿಂಬೆ ಪಾನಕ ಬಳಸುವುದು ಉತ್ತಮ. ಬಾದಾಮಿ ಪೇಸ್ಟ್ ಅನ್ನು ನೀರಿನಲ್ಲಿ ಕಲೆಸಿ ಕುಡಿಯುವುದು ಲೊ ಬಿಪಿಗೆ ಒಳ್ಳೆಯದೆ ಆಗಿದೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ವ್ಯಾಯಾಮ ಕೂಡ ಉತ್ತಮ ಪರಿಹಾರ.
ನಮ್ಮ ದೇಹಕ್ಕೆ ಆವರಿಸುವ ಕೆಲವು ಸಮಸ್ಯೆಗಳಿಗೆ ಆಸ್ಪತ್ರೆಗಳ ಔಷಧಗಳು ಒಂದೆ ಪರಿಹಾರವಲ್ಲ. ನಮ್ಮ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಿಗುವ ಕೆಲವು ವಸ್ತುಗಳು ಈ ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ. ಹೆಚ್ಚಿನ ಸಂಖ್ಯೆಯಲ್ಲಿ ಆಸ್ಪತ್ರೆಗಳ ಮೊರೆ ಹೋಗದೆ ಮನೆ ಔಷಧಗಳ ಬಳಕೆ ಉತ್ತಮ.