ಇವತ್ತಿನ ದಿನಗಳಲ್ಲಿ ಜನರು ಹೆಚ್ಚಾಗಿ ಇಷ್ಟಪಡುವಂತಹದ್ದು ನಾನ್ ವೆಜ್ ಅಡುಗೆಯನ್ನು. ತುಂಬಾ ಜನರಿಗೆ ತರಕಾರಿ ಊಟಕ್ಕಿಂತ ನಾನ್ ವೆಜ್ ಊಟ ಎಂದರೆ ತುಂಬಾ ಇಷ್ಟ ಪಡುತ್ತಾರೆ ನಾವು ಕೂಡ ನಿಮಗೆ ಇಷ್ಟವಾಗುವಂತಹ ಸುಲಭವಾಗಿ ಮಾಡುವಂತಹ ನಾನ್ ವೆಜ್ ರೆಸಿಪಿಯನ್ನು ತಿಳಿಸಿಕೊಡುತ್ತೇವೆ. ಇವತ್ತು ನಾವು ನಿಮಗೆ ತಿಳಿಸಿ ಕೊಡುತ್ತಿರುವ ನಾನ್ ವೆಜ್ ರೆಸಿಪಿ ಸುಲಭವಾಗಿ ಮನೆಯಲ್ಲಿಯೇ ಮಾಡಬಹುದಾದ ಬೋಟಿ ಗೊಜ್ಜು. ಹಾಗಾದರೆ ಬನ್ನಿ ಸ್ನೇಹಿತರೆ ರುಚಿಕರವಾದ ಬೋಟಿ ಗೊಜ್ಜು ತಯಾರಿಸುವುದು ಹೇಗೆ ಅದಕ್ಕೆ ಯಾವೆಲ್ಲ ಅಡುಗೆ ಪದಾರ್ಥಗಳು ಬೇಕು ಎಂಬುದನ್ನು ನೋಡೋಣ.
ಬೋಟಿ ಗೊಜ್ಜನ್ನು ತಯಾರಿಸಲು ಮೊದಲು ಬೋಟಿಯನ್ನು ಕಟ್ ಮಾಡಿ ಅದನ್ನು ಚೆನ್ನಾಗಿ ತೊಳೆದು ಕ್ಲೀನ್ ಮಾಡಿಟ್ಟುಕೊಳ್ಳಬೇಕು ನಂತರ ಸ್ಟೋ ಒನ್ ಮಾಡಿ ಅದಕ್ಕೆ ಒಂದು ಚಮಚದಷ್ಟು ಕಲ್ಲು ಉಪ್ಪನ್ನು ಸೇರಿಸಬೇಕು ಸ್ವಲ್ಪ ಅರಿಶಿಣ ಪುಡಿಯನ್ನು ಸೇರಿಸಿ ತಿರುಗಿಸಿಕೊಳ್ಳಬೇಕು ಇದು ಸ್ವಲ್ಪ ಬಿಸಿ ಆದರೂ ಸಾಕು. ಯಾಕೆಂದರೆ ಸ್ವಲ್ಪ ಬಿಸಿ ಆದ ತಕ್ಷಣ ಬೋಟಿ ನೀರು ಬಿಡುತ್ತದೆ. ಒಂದೆರಡು ನಿಮಿಷ ಬೇಯಿಸಿದ ನಂತರ ಅದು ನೀರು ಬಿಟ್ಟುಕೊಳ್ಳುತ್ತದೆ ಆ ನೀರನ್ನು ಸೋಸಿಕೊಳ್ಳಬೇಕು. ಬೋಟಿಯನ್ನು ಸೋಸಿಕೊಂಡ ನಂತರ ಬಾಣಲೆಯನ್ನು ಒಲೆಯ ಮೇಲಿಟ್ಟು ಮಸಾಲೆ ತಯಾರಿ ಮಾಡಿಕೊಳ್ಳಬೇಕು. ಮಸಾಲೆಯ ತಯಾರಿಸುವುದಕ್ಕೆ ಮೊದಲಿಗೆ ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ ಕೊಳ್ಳಬೇಕು ಅದಕ್ಕೆ ಎರಡು ಈರುಳ್ಳಿಯನ್ನು ಕತ್ತರಿಸಿ ಹಾಕಬೇಕು
ನಂತರ ಅದಕ್ಕೆ ಮೂರು ಬೆಳ್ಳುಳ್ಳಿಗಡ್ಡೆಯನ್ನು ಬಿಡಿಸಿ ಹಾಕಬೇಕು. ಇದಿಷ್ಟನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಈರುಳ್ಳಿ ಮತ್ತು ಬೆಳ್ಳುಳ್ಳಿ ಚೆನ್ನಾಗಿ ಫ್ರೈ ಆದ ನಂತರ ಅದಕ್ಕೆ ಮೂರು ಟೊಮೆಟೊವನ್ನು ಕತ್ತರಿಸಿ ಹಾಕಬೇಕು ಇದನ್ನು ಕೂಡ ಚೆನ್ನಾಗಿ ಫ್ರೈ ಮಾಡಬೇಕು ಅದು ಮೆತ್ತಗಾದ ಮೇಲೆ ಅದಕ್ಕೆ ಒಂದುವರೆ ಚಮಚದಷ್ಟು ಧನಿಯಾ ಪುಡಿಯನ್ನು ಹಾಕಬೇಕು ಜೊತೆಗೆ ಎರಡು ಚಮಚದಷ್ಟು ಅಚ್ಚಕಾರದ ಪುಡಿಯನ್ನು ಬೆರೆಸಬೇಕು. ಇದಿಷ್ಟನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು ಇದಿಷ್ಟು ಫ್ರೈ ಆದ ನಂತರ ಸ್ಟೋವ್ ಆಫ್ ಮಾಡಿ ಅದಕ್ಕೆ ಸ್ವಲ್ಪ ಶುಂಠಿಯನ್ನು ಹಾಕಿಕೊಳ್ಳಬೇಕು ನಂತರ ಇದನ್ನು ತಣ್ಣಗಾಗಲು ಬಿಡಬೇಕು ಇದನ್ನು ತಣ್ಣಗಾದ ಮೇಲೆ ಇದನ್ನು ರುಬ್ಬಿ ಕೊಳ್ಳಬೇಕಾಗುತ್ತದೆ.
ಮಸಾಲೆ ತಣಿಯುವುದರಲ್ಲಿ ಬೋಟಿಗೆ ಒಗ್ಗರಣೆ ಹಾಕಿಕೊಳ್ಳಬಹುದು. ಬೋಟಿಗೆ ಯಾವ ರೀತಿಯಲ್ಲಿ ಒಗ್ಗರಣೆ ಹಾಕಿಕೊಳ್ಳಬಹುದು ಎಂಬುದನ್ನು ನೋಡುವುದಾದರೆ ಕುಕ್ಕರ್ ಬಿಸಿಗೆ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಕೊಳ್ಳಬೇಕು ಎಣ್ಣೆ ಬಿಸಿಯಾದ ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಒಂದು ಈರುಳ್ಳಿಯನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು ನಂತರ ಅದಕ್ಕೆ ಸೋಸಿಕೊಂಡಿರುವಂತಹ ಬೋಟಿಯನ್ನು ಹಾಕಬೇಕು ಇಲ್ಲಿ ಬೋಟಿ ಸೊಸಿ ಕೊಂಡಿರುವ ನೀರನ್ನು ಬಳಸಬಾರದು ಬರೀ ಬೋಟಿಯನ್ನ ಹಾಕಿ ಅದನ್ನು ಚೆನ್ನಾಗಿ ಫ್ರೈ ಮಾಡಿಕೊಳ್ಳಬೇಕು. ಈಗ ತಣ್ಣಗಾಗಿರುವ ಮಸಾಲೆಯನ್ನು ರುಬ್ಬಿಕೊಳ್ಳಬೇಕು ಈ ಮಸಾಲೆಯನ್ನು ರುಬ್ಬುವಾಗ ನೀರನ್ನು ಸೇರಿಸಬಾರದು. ಈಗ ನಾವು ಫ್ರೈ ಮಾಡುತ್ತಿರುವಂತಹ ಬೋಟಿಗೆ ಈ ಮಸಾಲೆಯನ್ನು ಸೇರಿಸಬೇಕು. ಮಸಾಲೆಯನ್ನು ಹಾಕಿ ಅದನ್ನು ಚೆನ್ನಾಗಿ ಮಿಕ್ಸ್ ಮಾಡಬೇಕು ಮಸಾಲೆ ಮತ್ತು ಬೋತಿಯನ್ನು ಚೆನ್ನಾಗಿ ಫ್ರೈ ಮಾಡಬೇಕು ಆ ಬೋಟಿ ಮತ್ತು ಮಸಾಲೆ ಚೆನ್ನಾಗಿ ಫ್ರೈ ಆಗುವವರೆಗೆ ಕಾಯಿ ಮಸಾಲೆಯನ್ನು ತಯಾರಿಸಿಕೊಳ್ಳಬಹುದು.
ಕಾಯಿ ಮಸಾಲೆಯನ್ನು ತಯಾರಿಸಿಕೊಳ್ಳುವ ವಿಧಾನ ಒಂದು ಮಿಕ್ಸಿ ಜಾರಿಗೆ ಸ್ವಲ್ಪ ಕಾಯಿಯನ್ನು ಹಾಕಿ ಅದಕ್ಕೆ ಅರ್ಧ ಚಮಚದಷ್ಟು ಕಾಳುಮೆಣಸು ಜೊತೆಗೆ ಸಣ್ಣದಾದ ಚಕ್ಕೆ ಚೂರನ್ನು ಹಾಕಬೇಕು ನಾಲ್ಕರಿಂದ ಐದು ಲವಂಗವನ್ನು ಹಾಕಬೇಕು ಸ್ವಲ್ಪ ಬಡೆಸೊಪ್ಪನ್ನು ಹಾಕಿ ಇದನ್ನು ನುಣ್ಣಗೆ ರುಬ್ಬಿಕೊಳ್ಳಬೇಕು. ರುಬ್ಬಿಕೊಂಡ ನಂತರ ಅದನ್ನು ಫ್ರೈ ಮಾಡಿರುವ ಬೋಟಿಗೆ ಹಾಕಿಕೊಳ್ಳಬೇಕು ನಂತರ ಅದನ್ನು ಚೆನ್ನಾಗಿ ಮಿಕ್ಸ್ ಮಾಡಿ ಸ್ವಲ್ಪ ಫ್ರೈ ಮಾಡಿ ನಂತರ ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಅಂದರೆ ಬೋಟಿ ಬೆಯುವುದಕ್ಕೆ ಎಷ್ಟು ಬೇಕೋ ಅಷ್ಟು ನೀರನ್ನು ಹಾಕಿಕೊಂಡು ನಂತರ ಅದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಹಾಕಬೇಕು ನಂತರ ಅದಕ್ಕೆ ಸ್ವಲ್ಪ ಪುದೀನಾ ಸೊಪ್ಪನ್ನು ಹಾಕಬೇಕು ಜೊತೆಗೆ ಸ್ವಲ್ಪ ಕೊತ್ತುಂಬರಿಸೊಪ್ಪನ್ನು ಕೂಡ ಹಾಕಿ ತಿರುಗಿಸಬೇಕು ನಂತರ ಕುಕ್ಕರ್ ನ ಮುಚ್ಚಳ ಹಾಕಿ ಮೂರರಿಂದ ನಾಲ್ಕು ವಿಸಿಲು ಹೊಡಿಸಬೇಕು ವಿಸಿಲ್ ತಣ್ಣಗಾದ ಮೇಲೆ ಕುಕ್ಕರ್ ನ ಮುಚ್ಚಳ ತೆಗೆದು ಅದನ್ನು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಬೇಕು.
ನೋಡಿದಿರಲ್ಲ ಸ್ನೇಹಿತರೆ ಹೇಗೆ ರುಚಿಕರವಾದ ಬೋಟಿ ಗೊಜ್ಜನ್ನು ಮಾಡುವುದು ಎಂದು ನೀವು ಕೂಡ ಮನೆಯಲ್ಲಿ ಇದನ್ನು ತುಂಬಾ ಸುಲಭವಾಗಿ ತಯಾರಿಸಿಕೊಳ್ಳಬಹುದು. ನಾವು ನಿಮಗೆ ತಿಳಿಸಿರುವ ವಿಧಾನದಿಂದ ನೀವು ನಿಮ್ಮ ಮನೆಯಲ್ಲಿಯೇ ಇರುವ ಅಡುಗೆ ಪದಾರ್ಥಗಳನ್ನು ಬಳಸಿ ಸುಲಭವಾಗಿ ಬೋಟಿ ಗೊಜ್ಜನ್ನು ತಯಾರಿಸಿಕೊಳ್ಳಬಹುದು.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430