ಪ್ರತೀ ಒಬ್ಬ ಮನುಷ್ಯನಿಗೂ, ಪ್ರಾಣಿ ಪಕ್ಷಿಗಳಿಗೂ, ಅಷ್ಟೇ ಯಾಕೇ ಈ ಭೂಮಿಯ ಮೇಲೆ ವಾಸಿಸುವ ಪ್ರತಿಯೊಂದು ಜೀವಿಗಳಿಗೂ ಕೂಡಾ ನೀರು ಬೇಕೆ ಬೇಕು. ಹೇಗೆ ನಾವು ಉಸಿರಾಡಲು ಗಾಳಿ ಇಲ್ಲದೆ ಬದುಕಲು ಸಾಧ್ಯ ಇಲ್ಲವೋ ಅದೇ ರೀತಿ ನೀರು ಇಲ್ಲದೆಯೂ ನಾವು ಬದುಕುವುದು ಅಸಾಧ್ಯ. ಮೊದಲೆಲ್ಲ ನೀರಿನ ಮೂಲಗಳು ಎಂದರೆ ಕೆರೆ ಝರಿ, ಹೊಳೆ, ಬಾವಿ ಇವುಗಳನ್ನು ತೋರಿಸಬಹುದಿತ್ತು. ಆದರೆ ಈಗಿನ ಕಾಲದಲ್ಲಿ ನೀರಿನ ಮೂಲ ಎಂದರೆ ಅದು ಕೊಳವೆ ಬಾವಿ ಆಗಿದೆ.
ಈಗ ಒಂದು ಕೊಳವೆ ಬಾವಿ ತೆಗೆಯಬೇಕು ಅಂದರೆ, ಜನ ಸಾಮಾನ್ಯ ಇರಬಹುದು ಅಥವಾ ಒಬ್ಬ ರೈತ ಆಗಿರಬಹುದು ಕೊಳವೆ ಬಾವಿ ತೆಗೆದು ಅದರಲ್ಲಿ ನೀರು ಬರುವವರೆಗೂ ಆತ ಪಡುವ ಕಷ್ಟ ಕಡಿಮೆ ಏನೂ ಅಲ್ಲ. ಕೆಲವು ರೈತರಿಗೆ ಕೊಳವೆ ಬಾವಿ ತೆಗೆಸುವಾಗ ಎಷ್ಟೇ ಆಳ ತೋಡಿದರೂ ಕೆಲವೊಮ್ಮೆ ನೀರು ಬರುವುದೇ ಇಲ್ಲ. ಆಗ ಚಿಂತೆ ಕಾಡುವುದು ಸಹಜ. ಆದರೆ ಆ ಸಮಯದಲ್ಲಿ ಎನು ಮಾಡಬೇಕು ಅನ್ನೋದನ್ನ ಇಲ್ಲಿ ನೋಡೋಣ.
ಕೆಲವರು ಬೋರ್ವೆಲ್ ಹಾಕಿಸುವಾಗ ರಾಹುಕಾಲ, ಸಮಯ ನೋಡಿಕೊಂಡು ಮಂಗಳವಾರ ಹಾಗೂ ಅಮಾವಾಸ್ಯೆಯ ದಿನಗಳನ್ನು ಬಿಟ್ಟು ಬೋರ್ವೆಲ್ ಹಾಕಿಸುವ ಪದ್ಧತಿಯನ್ನು ಅನುಸರಿಸುತ್ತಾರೆ. ಆದರೆ ಕೆಲವೊಮ್ಮೆ ಬೋರ್ವೆಲ್ ಕೊರೆಯಲು ಆರಂಭಿಸಿ ಸಾವಿರ ಅಡಿ ದಾಟಿದ ಮೇಲೆ ಇನ್ನೂ ನೀರು ಬಂದಿಲ್ಲ ಯಾವಾಗ ನೀರು ಬರುವುದೋ? ಅಥವಾ ನೀರು ಬರುತ್ತದೋ ಇಲ್ಲವೋ ಎಂದು ಹಲವಾರು ಆತಂಕ ಆರಂಭ ಆಗತ್ತೆ. ಬಯಲು ಸೀಮೆಯ ಪ್ರದೇಶಗಳಲ್ಲಿ ಸಾವಿರ ಅಡಿ ಆಳಕ್ಕೆ ನೀರು ಬರುವುದು ಸ್ವಲ್ಪ ಅಸಾಧ್ಯ. ಬೋರ್ವೆಲ್ ಕೊರೆಯುವ ಆರಂಭದಲ್ಲಿ ನೋಡಲು ಬಂದಿರುವ ಸಾಕಷ್ಟು ಜನರು ಇರುತ್ತಾರೆ ಆದರೆ ಯಾವಾಗ ಸಾವಿರ ಅಡಿ ಆದರೂ ನೀರು ಬರುವುದಿಲ್ಲವೋ ಆಗ ಮಾಲೀಕ ಹಾಗೂ ಬೋರ್ವೆಲ್ ಕೊರೆಯವರನ್ನು ಬಿಟ್ಟು ಬೇರೆ ಯಾರೂ ಅಲ್ಲಿ ಇರುವುದೇ ಇಲ್ಲ.
ಅಷ್ಟೊಂದು ಖರ್ಚು ಮಾಡಿ ನೀರು ಬಾರದೆ ಇದ್ದಾಗ ಮಾಲೀಕನಿಗೆ ಭಯ ಆಗುವುದು ಸಹಜ. ಒಮ್ಮೊಮ್ಮೆ ಎಷ್ಟೇ ಆಳ ತೊಡಿದರೂ ಸಹ ನೀರಿನ ಬದಲು ಬರೀ ಧೂಳು ಮಾತ್ರ ಸಿಗುವುದು. ಅಂತಹ ಸಂದರ್ಭದಲ್ಲಿ ಮಾಲೀಕ ಧೃತಿ ಗೆಡದೆ ಧೈರ್ಯ ಹೊಂದಿರಬೇಕು. ಕೆಲವೊಮ್ಮೆ ಒಮ್ಮೆ ತೇವಾಂಶ ಕಂಡು ಬರುತ್ತದೆ ಆದರೆ ಮತ್ತೆ ಅದು ಹೋಗಿ ಬರೀ ಧೂಳು ಕಾಣಿಸಿಕೊಳ್ಳುತ್ತದೆ ಮತ್ತೆ ಸ್ವಲ್ಪ ನೀರು ಕಾಣಿಸಿಕೊಳ್ಳುವುದು ಹೀಗೆ ಆಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಾಲೀಕ ಮನಸ್ಸನ್ನು ಗಟ್ಟಿ ಮಾಡಿಟ್ಟುಕೊಳ್ಳಬೇಕು. ನೀರು ಬರುವುದೇ ಇಲ್ಲ ಎಂದು ಕುಗ್ಗುವುದಲ್ಲಾ.
ಇಲ್ಲಿ ಒಂದು ಅಂಶ ನಾವು ಮುಖ್ಯವಾಗಿ ಗಮನಿಸಬೇಕಿದೆ ಸಾವಿರ ಅಡಿಗಳಷ್ಟು ಬೋರ್ವೆಲ್ ಕೋರಿದಾಗ ಅಲ್ಲಿ ಸ್ವಲ್ಪ ತೇವಾಂಶ ಕಂಡು ಬಂದರೂ ಸಹ ಅಲ್ಲಿ ಒಂದು ಇಂಚಿನಷ್ಟು ನೀರು ಇದೆ ಎಂದರ್ಥ. ಆದರೆ ಕೆಲವೊಮ್ಮೆ ಬೋರ್ವೆಲ್ ಕೊರೆಯುವಾಗ ಸಿಕ್ಕಿಬಿದ್ದ ಧೂಳು ಗಟ್ಟಿಯಾಗಿ ಕುಳಿತಿರುವುದರಿಂದ ಒಂದು ಇಂಚಿನಷ್ಟು ನೀರು ಇದ್ದರೆ ಅದೂ ಹೊರಬರಲು ಸಾಧ್ಯವಿಲ್ಲ. ಒಂದು ಇಂಚಿಗಿಂತಲೂ ಹೆಚ್ಚು ನೀರು ಇರಲೇಬೇಕು. ಆದರೆ ಬೋರ್ವೆಲ್ ಕೊರೆಸಿದ ನಂತರ ನೀರು ಬರಲಿಲ್ಲವೆಂದು ಅದನ್ನು ಮಣ್ಣು ಹಾಕಿ ಮುಚ್ಚಿಡಬೇಕು ಅಂತೇನೂ ಇಲ್ಲ. ಸ್ವಲ್ಪ ದಿನದ ನಂತರ ನೀರು ಬರಲೂ ಬಹುದು. ಒಂದು ವಾರ ಬಿಟ್ಟು ಮತ್ತೆ ಮರುಪೂರಣ ಮಾಡಿದ್ದರೆ ಒಂದು ಅಥವಾ ಒಂದು ವರೆ ಇಂಚ್ ಅಷ್ಟು ನೀರು ಬರುವ ಸಾಧ್ಯತೆ ಕೂಡ ಇರುತ್ತದೆ.