Ultimate magazine theme for WordPress.

ಆಯಾಸ ಸುಸ್ತು, ಕೈಕಾಲು ನೋವು ಬೆನ್ನು ನೋವು ನಿವಾರಣೆಗೆ ಬೆಸ್ಟ್ ಮನೆಮದ್ದು ಮಾಡಿ

0 33

ಇವತ್ತು ನಾವು ತಿಳಿಸಿಕೊಡುತ್ತಾ ಇರುವ ಔಷಧಿ ಒಂದು ರೀತಿಯ ಟಾನಿಕ್. ಇದನ್ನ ನೀವು ಸುಲಭವಾಗಿ ಮನೆಯಲ್ಲಿಯೇ ತಯಾರಿಸಿಕೊಳ್ಳಬಹುದು. ಇದನ್ನ ಕೇವಲ 4 ದಿನ ಕುಡಿದರೆ, ಕೈ ಕಾಲು ನೋವು, ಬೆನ್ನು ನೋವು, ಆಯಾಸ ದೌರ್ಭಲ್ಯ, ರಕ್ತ ಹೀನತೆ ಈ ಎಲ್ಲ ಸಮಸ್ಯೆಗಳಿಂದ ದೂರ ಇರಬಹುದು ಹಾಗೇ ದೇಹದಲ್ಲಿ ಕ್ಯಾಲ್ಶಿಯಂ ಕೊರತೆ ಉಂಟಾಗುವುದಿಲ್ಲ. ಹಾಗಾದ್ರೆ ಈ ಟಾನಿಕ್ ಅನ್ನು ಮಾಡೋದು ಹೇಗೆ ಅನ್ನೋದರ ಬಗ್ಗೆ ಈ ಲೇಖನದಲ್ಲಿ ವಿವರಿಸಲಾಗಿದೆ.

ಯಾವುದೇ ಕೆಲಸ ಮಾಡಲು ಆಸಕ್ತಿ ಇರದೇ ಆಯಾಸ, ಬರೀ ಸುಸ್ತು, ಮೈ ಕೈ ನೋವು, ಸೊಂಟ ನೋವು, ಮಂಡಿ ನೋವು, ರಾತ್ರಿ ಸರಿಯಾಗಿ ನಿದ್ರೆ ಬಾರದೇ ಇರುವುದು, ಚರ್ಮ ಸುಕ್ಕು ಗಟ್ಟುವುದು, ಕೂದಲು ಉದುರುವುದಕ್ಕೆ ಈ ಎಲ್ಲಾ ಸಮಸ್ಯೆಗಳಿಗೂ ಈ ಔಷಧಿ ರಾಮಬಾಣ.

ನಮ್ಮ ದೇಹದ ಮೂಳೆಗಳು 90% ಅಷ್ಟು ಕ್ಯಾಲ್ಶಿಯಂ ಅನ್ನು ಹೊಂದಿರುತ್ತದೆ. ಒಂದು ವೇಳೆ ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆದರೆ, ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ವಯಸ್ಸಿನಲ್ಲಿಯೇ ಕೈ ನೋವು, ಕಾಲು ನೋವು, ಸೊಂಟ ನೋವು, ನಡಿಯೋಕೆ ಕಷ್ಟ ಆಗತ್ತೆ. ಕೂದಲು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಉದುರಲು ಶುರು ಆಗತ್ತೆ. ಮುಖದಲ್ಲಿ ಗುಳ್ಳೆಗಳು ಮುಖ ಸುಕ್ಕುಗಟ್ಟಿ ಚಿಕ್ಕ ವಯಸ್ಸಿಗೆ ದೊಡ್ಡ ವಯಸ್ಸು ಆದವರ ಹಾಗೇ ಕಾಣುವುದು ಈ ಎಲ್ಲಾ ಸಮಸ್ಯೆಗಳಿಗೆ ಕಾರಣ ಏನಪ್ಪಾ ಅಂದರೆ, ನಮ್ಮ ದೇಹದಲ್ಲಿ ಕಡಿಮೆ ಆಗಿರುವ ಅಥವಾ ಕಡಿಮೆ ಆಗುತ್ತಿರುವ ಕ್ಯಾಲ್ಶಿಯಂ ಕಾರಣ ಆಗಿರತ್ತೆ. ಇಲ್ಲಿ ತಿಳಿಸುವ ಈ ಟಾನಿಕ್ ಅನ್ನು ನಿಯಮಿತವಾಗಿ ಪ್ರತೀ ದಿನ ತೆಗೆದುಕೊಳ್ಳುವುದರಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಹೊಂದಬಹುದು.

ಈ ಮನೆ ಮದ್ದನ್ನು ತಯಾರಿಸಲು ನಮಗೆ ಮುಖ್ಯವಾಗಿ ಬೇಕಾಗಿರುವುದು ಕಮಲದ ಬೀಜ. ಇದಕ್ಕೆ ಮಖಾನ ಮತ್ತು ನದಿ ಕಾಯಿ ಅಂತಲೂ ಕರೆಯುತ್ತಾರೆ. ಇದು ನಿಮಗೆ ಎಲ್ಲ ಬಿಗ್ ಬಜಾರ್ ಮತ್ತು ಎಲ್ಲ ಮೊರ್ ಗಳಲ್ಲಿ ಸಿಗತ್ತೆ. ಕಮಲದ ಬೀಜದಲ್ಲಿ ಅಧಿಕ ಕ್ಯಾಲ್ಶಿಯಂ ಇರುತ್ತದೇ. ಇದರ ಪರಿಚಯ ಜಾಸ್ತಿ ಜನರಿಗೆ ತಿಳಿದಿಲ್ಲ ಆದರೂ ಔಷಧೀಯ ಗುಣ ಮಾತ್ರ ಉತ್ತಮವಾಗಿದೆ. ಇದರಲ್ಲಿ ಇನ್ಫಲುಮೆಟರಿ ಪ್ರಾಪರ್ಟಿ ಇರುವುದರಿಂದ ಚರ್ಮದ ಆರೈಕೆಗೆ ಒಳ್ಳೆಯದು. ಇದು ವಯಸ್ಸಿಗೆ ಮುಂಚೆಯೇ ಚರ್ಮ ಸುಕ್ಕು ಗಟ್ಟುವುದನ್ನ ತಡೆದು ಚರ್ಮದ ಕಾಂತಿಯನ್ನು ಹೆಚ್ಚಿಸುತ್ತೆ. ಇದರಲ್ಲಿ ಸೋಡಿಯಂ ನ ಪ್ರಮಾಣ ಕಡಿಮೆ ಇದ್ದು ಪೊಟ್ಯಾಶಿಯಂ ಹೆಚ್ಚು ಇರತ್ತೆ. ಇದರಲ್ಲಿ ಅಧಿಕ ರಕ್ತದೊತ್ತಡ ಇಯುವವರಿಗೆ ತುಂಬಾ ಉತ್ತಮವಾದದ್ದು. ದೇಹದಲ್ಲಿ ನೀರಿನ ಪ್ರಮಾಣವನ್ನು ಕಾಪಾಡಿ ದೇಹ ಹೆಚ್ಚು ಚಟುವಟಿಕೆಯಿಂದ ಇರಲು ಸಹಾಯ ಮಾಡುತ್ತದೆ. ಇದರಲ್ಲಿ ಕ್ಯಾಲ್ಶಿಯಂ ಹೆಚ್ಚಾಗಿ ಇರುವುದರಿಂದ ಮೂಳೆಗಳನ್ನು ಹಾಗೂ ಹಲ್ಲುಗಳನ್ನು ಗಟ್ಟಿಗೊಳಿಸತ್ತೆ.

7 ರಿಂದ 8 ಕಮಲದ ಬೀಜ, ಅಷ್ಟೇ ಪ್ರಮಾಣದಲ್ಲಿ ಅಂದರೆ 7 / 8 ಬಾದಾಮಿ, 2 ಚಮಚ ಬಿಳಿ ಎಳ್ಳು, ಒಂದು ಚಮಚ ಸೊಂಪಿನ ಕಾಳು ಸೇರಿಸಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಲೋಟ ಬಿಸಿ ಹಾಲಿಗೆ 1 ಚಮಚ ಈ ಪುಡಿಯನ್ನು ಹಾಕಿ ಮಿಕ್ಸ್ ಮಾಡಿ ಒಂದು ಗಂಟೆಯ ಕಾಲ ಹಾಗೆಯೇ ಬಿಡಬೇಕು. ನಂತರ ರಾತ್ರಿ ಊಟ ಆದಮೇಲೆ ಈ ಹಾಲನ್ನು ಕುಡಿಯಬೇಕು. ಹೀಗೆ ರಾತ್ರಿ ಊಟ ಆದ ನಂತರ ಈ ಹಾಲನ್ನು ಕುಡಿಯುವುದರಿಂದ ನಿದ್ರೆ ಚೆನ್ನಾಗಿ ಬರತ್ತೆ. ಮೂಳೆಗಳ ನೋವು ಕೂಡಾ ಶಮನ ಆಗತ್ತೆ. ಹಾಗೇ ಯಾವುದೇ ರೀತಿಯ ಸ್ಟ್ರೆಸ್ ಇದ್ದರೂ ಕೂಡ ಕಡಿಮೆ ಆಗತ್ತೆ.

Leave A Reply

Your email address will not be published.