Black jaggery Benefits: ಬೆಲ್ಲವು ಆಹಾರಗಳಿಗೆ ಸಿಹಿ ರುಚಿ ಒದಗಿಸುವುದಲ್ಲದೆ, ಇದು ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಬೆಲ್ಲ ನೈಸರ್ಗಿಕ ಸಿಹಿಯನ್ನು ಹೊಂದಿರುತ್ತದೆ. ಇದು ಸಂಸ್ಕರಿಸಿದ ಸಕ್ಕರೆಯಂತೆ ನಿಮ್ಮ ಆರೋಗ್ಯಕ್ಕೆ ಹಾನಿ ಮಾಡೋದಿಲ್ಲ. ಅಲ್ಲದೇ ಬೆಲ್ಲ ಅನೇಕ ಅಗತ್ಯ ಪೋಷಕಾಂಶಗಳನ್ನು ಸಹ ಹೊಂದಿರುತ್ತದೆ

Black jaggery Benefits for Health

ಇದು ನಿಮ್ಮನ್ನು ಆರೋಗ್ಯಕರವಾಗಿಡುತ್ತದೆ. ನಾವೆಲ್ಲರೂ ಸಾಮಾನ್ಯ ಬೆಲ್ಲವನ್ನು ಸೇವಿಸುತ್ತೇವೆ ಆದರೆ ನೀವು ಎಂದಾದರೂ ಕಪ್ಪು ಬೆಲ್ಲವನ್ನು ಸೇವಿಸಿದ್ದೀರಾ? ಬೆಲ್ಲದ ಅನೇಕ ವಿಧಗಳಿವೆ ಎಂದು ಹೆಚ್ಚಿನ ಜನರಿಗೆ ತಿಳಿದಿಲ್ಲ ಅವುಗಳಲ್ಲಿ ಒಂದು ಕಪ್ಪು ಬೆಲ್ಲವಾಗಿದೆ. ಕಪ್ಪು ಬೆಲ್ಲದ ಸೇವನೆಯು ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ.

ಸಾಮಾನ್ಯ ಬೆಲ್ಲದಂತೆ ಕಪ್ಪು ಬೆಲ್ಲವು ಸಹ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿದೆ ಹಾಗೆಯೇ ಕಬ್ಬಿಣ, (iron) ಮೆಗ್ನೀಸಿಯಮ್, ಪೊಟ್ಯಾಷಿಯಮ್, ರಂಜಕ, ರಂಜಕದ ಆರೋಗ್ಯಕರ ಕೊಬ್ಬುಗಳು, ಕ್ಯಾಲ್ಸಿಯಂ, ತಾಮ್ರ ಮತ್ತು ಸತು, ವಿಟಮಿನ್ ಬಿ (Vitamin B) ಮುಂತಾದ ಜೀವಸತ್ವಗಳು ಮತ್ತು ಮಿನರಲ್ಸ್ ಗಳನ್ನು ಹೊಂದಿದೆ. ಈ ಮೂಲಕ ಇದು ದೇಹಕ್ಕೆ ಅಗತ್ಯ ಪೋಷಣೆಯನ್ನು ಒದಗಿಸುತ್ತದೆ ಮತ್ತು ಅನೇಕ ಗಂಭೀರ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತೆ ಸಕ್ಕರೆಯ ಬದಲಿಗೆ ನೀವು ಕಪ್ಪು ಬೆಲ್ಲ ಸೇವಿಸಿದರೆ ಇದು ದೇಹದಲ್ಲಿ ಸಾಮಾನ್ಯ ಮಟ್ಟದ ರಕ್ತದೊತ್ತಡವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಏಕೆಂದರೆ ಇದು ಉತ್ತಮ ಪ್ರಮಾಣದ ಪೊಟ್ಯಾಷಿಯಮ್ ಅನ್ನು ಹೊಂದಿರುತ್ತದೆ. ಇದು ಹೃದಯಾಘಾತ ಮತ್ತು ಪಾರ್ಶ್ವವಾಯುವಿನಂತಹ ಹೃದಯರಕ್ತನಾಳದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಕಪ್ಪು ಬೆಲ್ಲದ ಸೇವನೆ ದೇಹವನ್ನು ಆಂತರಿಕವಾಗಿ ನಿರ್ವಿಷಗೊಳಿಸಲು ಸಹಾಯ ಮಾಡುತ್ತೆ. ಇದು ದೇಹದಲ್ಲಿ ಸಂಗ್ರಹವಾದ ವಿಷ ಮತ್ತು ತ್ಯಾಜ್ಯ ವಸ್ತುಗಳನ್ನು ಹೊರಹಾಕಲು ಸಹಾಯ ಮಾಡುತ್ತದೆ.

ದೇಹದಲ್ಲಿ ಆಂತರಿಕ ವಿಷವಿದ್ದರೆ ಅದರಿಂದ ಹಲವು ಗಂಭೀರ ಸಮಸ್ಯೆ ಕಾಣಿಸಿಕೊಳ್ಳುತ್ತೆ. ಕಪ್ಪು ಬೆಲ್ಲದಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಇದು ಸಕ್ಕರೆಯ ಕೊರತೆ ನೀಗಿಸಲು ಸಹಾಯ ಮಾಡುವುದು ಮಾತ್ರವಲ್ಲದೆ ಜೀರ್ಣಕ್ರಿಯೆ ಸುಧಾರಿಸಲು ಮತ್ತು ಚಯಾಪಚಯ ಕ್ರಿಯೆ ವೇಗಗೊಳಿಸಲು ಸಹಾಯ ಮಾಡುತ್ತದೆ. ಇದರಿಂದ ನೀವು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡುತ್ತೀರಿ ಮತ್ತು ಹೆಚ್ಚಿನ ಕ್ಯಾಲೊರಿ ಬರ್ನ್ ಆಗುತ್ತೆ. ದೇಹದಲ್ಲಿ ಎಲೆಕ್ಟ್ರೋಲೈಟ್ ಬ್ಯಾಲೆನ್ಸ್ ಕಾಪಾಡಿಕೊಳ್ಳಲು ಸಹ ಇದು ಪ್ರಯೋಜನಕಾರಿ.

ಕಪ್ಪು ಬೆಲ್ಲವನ್ನು ನಿಯಮಿತವಾಗಿ ಸೇವಿಸಿದ್ರೆ ಅದು ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಹೆಚ್ಚಿಸುತ್ತೆ. ಇದು ಕಬ್ಬಿಣದಿಂದ ಸಮೃದ್ಧವಾಗಿದೆ ಇದರಿಂದ ರಕ್ತ ಹೀನತೆ ಸಮಸ್ಯೆ ನಿವಾರಣೆಯಾಗುತ್ತೆ. ಕಪ್ಪು ಬೆಲ್ಲ ದೇಹವನ್ನು ನೈಸರ್ಗಿಕವಾಗಿ ನಿರ್ವಿಷಗೊಳಿಸಬಲ್ಲದು. ಇದು ಮುಖದ ಮತ್ತು ಉಗುರಿನ ಕಲೆಗಳನ್ನು ಕಡಿಮೆ ಮಾಡುವಲ್ಲಿ ಪ್ರಯೋಜನಕಾರಿ ಮಾತ್ರವಲ್ಲ ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡುತ್ತೆ ಕಬ್ಬಿಣಾಂಶದಿಂದ ಸಮೃದ್ಧವಾಗಿರುವ ಕಪ್ಪು ಬೆಲ್ಲ ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ.

ಇದು ಕೂದಲಿನ ಕಿರುಚೀಲಗಳು ಮತ್ತು ನೆತ್ತಿಗೆ ರಕ್ತ ಮತ್ತು ಪೋಷಕಾಂಶಗಳ ಪರಿಚಲನೆಯನ್ನು ಉತ್ತೇಜಿಸುತ್ತದೆ. ಇದು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ ಮತ್ತು ಕೂದಲು ಉದುರುವಿಕೆಯನ್ನು ಕಡಿಮೆ ಮಾಡುತ್ತದೆ. ಊಟದ ನಂತರ ನೀವು ಕಪ್ಪು ಬೆಲ್ಲ ಸೇವಿಸಿದರೆ ಜೀರ್ಣಕ್ರಿಯೆಯನ್ನು ಸುಧಾರಿಸುವುದಲ್ಲದೆ ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುತ್ತದೆ. ಇದು ಮಲಬದ್ಧತೆ ಹೊಟ್ಟೆಯ ಗ್ಯಾಸ್ ಅಜೀರ್ಣ ಹೊಟ್ಟೆ ಉಬ್ಬರ ಮುಂತಾದ ಸಮಸ್ಯೆಗಳನ್ನು ತೊಡೆದುಹಾಕುತ್ತದೆ.

ಇದನ್ನೂ ಓದಿ..ಈ ತುಂಬೆ ಗಿಡ ಎಲ್ಲಿ ಕಾಣಿಸಿದ್ರು ಬಿಡಬೇಡಿ, ಇದರಲ್ಲಿ ಅಡಗಿದೆ ಈ ಸಮಸ್ಯೆಗಳಿಗೆ ಚಮತ್ಕಾರಿ ಮನೆಮದ್ದು

ಕಪ್ಪು ಬೆಲ್ಲ ಕ್ಯಾಲ್ಸಿಯಂ ಸಮೃದ್ಧವಾಗಿರುವುದರಿಂದ ಇದು ನಿಮ್ಮ ಮೂಳೆಗಳನ್ನು ಬಲಪಡಿಸುತ್ತದೆ. ಇದಲ್ಲದೇ ಕೀಲು ನೋವಿನ ಸಮಸ್ಯೆಯಿಂದ ಪರಿಹಾರವನ್ನು ಒದಗಿಸುವಲ್ಲಿ ಇದು ಪ್ರಯೋಜನಕಾರಿ. ಹಾಲಿನಲ್ಲಿ ಕಪ್ಪು ಬೆಲ್ಲವನ್ನು ಬೆರೆಸುವುದರಿಂದ ಅದ್ಭುತ ಪ್ರಯೋಜನ ಪಡೆಯಬಹುದು

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!