ಕೂದಲಿಗೆ ಕಪ್ಪುಬಣ್ಣ ಬರಲು ಮೆಲನಿನ್ ಎಂಬ ವರ್ಣದ್ರವ್ಯ ಕಾರಣ ಈ ಮೆಲನಿನ್ ಹೈಡ್ರೋಜನ್ ಪೆರಾಕ್ಸೈಡ್ ನೊಂದಿಗೆ ಸಂಯೋಜನೆಗೊಂಡಾಗ ಬಿಳಿಯಾಗಿ ಪರಿವರ್ತಿತವಾಗಿರುವುದು ಮನುಷ್ಯ ತನ್ನ ಯವ್ವನದಿಂದ ಮುಪ್ಪಿನ ಕಡೆಗೆ ಸಾಗುತ್ತಿದ್ದಂತೆ ದೇಹದಲ್ಲಿ ಶಕ್ತಿಯು ಕುಂದುತ್ತಾ ಹೋಗುವುದು ಅದಕ್ಕೆ ಸಾಕ್ಷಿ ಎನ್ನುವಂತೆ ತಲೆಯ ಕೂದಲುಗಳು ಸಹ ನಿಧಾನವಾಗಿ ತಮ್ಮ ಬಣ್ಣವನ್ನು ಕಳೆದುಕೊಳ್ಳುತ್ತವೆ ಆರಂಭದಲ್ಲಿ ಒಂದೊಂದೇ ಕೂದಲು ಬಿಳಿ ಬಣ್ಣಕ್ಕೆ ತಿರುಗುತ್ತವೆ
ದಿನ ಕಳೆದಂತೆ ಉಳಿದ ಕೂದಲುಗಳು ಸಹ ಬಿಳಿ ಬಣ್ಣಕ್ಕೆ ಬದಲಾಗುತ್ತವೆ ಆದರೆ ಇಂದಿನ ದಿನಮಾನದಲ್ಲಿ ಬಿಳಿ ಕೂದಲು ಉಂಟಾಗಲು ವಯಸ್ಸಾಗಲೇ ಬೇಕಿಲ್ಲ ಚಿಕ್ಕ ಮಕ್ಕಳ ಕೂದಲು ಸಹ ಬಿಳಿ ಬಣ್ಣಕ್ಕೆ ತಿರುಗುತ್ತದೆ ನಾವು ಉಸಿರಾಡುವ ಗಾಳಿ ಸೇವಿಸುವ ಆಹಾರ ಕುಡಿಯುವ ನೀರು ಎಲ್ಲವೂ ಇಂದು ಕಲುಷಿತವಾಗಿವೆ
ಯಾವುದೇ ಒಂದು ಸಂಗತಿಯಲ್ಲಿಯೂ ಶುದ್ಧತೆ ಅಥವಾ ಆರೋಗ್ಯದ ಸಂಗತಿಯನ್ನು ಕಾಣುವುದು ಕಷ್ಟ ಕೆಲಸದ ಒತ್ತಡ ರಾಸಾಯನಿಕ ವಸ್ತುಗಳ ಅಡ್ಡಪರಿಣಾಮ ಗಳಿಂದ ಇಂದು ಚಿಕ್ಕ ವಯಸ್ಸಿನವರಲ್ಲೂ ಬಿಳಿ ಕೂದಲನ್ನು ಕಾಣಬಹುದಾಗಿದೆ ಕೇಶ ವಿನ್ಯಾಸ ಹಾಗೂ ಫ್ಯಾಷನ್ ಯುಗಕ್ಕೆ ತೆರೆದುಕೊಳ್ಳಲು ಯುವಕರು ಕೇಶರಾಶಿಯ ಬಣ್ಣಗಳನ್ನು ಬಳಸುತ್ತಾರೆ ಇದರ ಅಡ್ಡ ಪರಿಣಾಮದಿಂದ ಶಾಶ್ವತವಾಗಿ ಬಿಳಿ ಕೂದಲನ್ನು ಹೊಂದುವ ಪರಿಸ್ಥಿತಿ ಬರುವುದು ನಾನು ಈ ಲೇಖನದ ಮೂಲಕ ಬಿಳಿ ಕೂದಲಿನ ಸಮಸ್ಯೆಗೆ ಮನೆಮದ್ದಿನ ಪರಿಹಾರದ ಬಗ್ಗೆ ತಿಳಿದುಕೊಳ್ಳೋಣ.
ಶೀಘ್ರವಾಗಿ ಬಿಳಿ ಕೂದಲನ್ನು ನಿವಾರಿಸಲು ನೆಲ್ಲಿಕಾಯಿಗಿಂತ ಇನ್ನೊಂದು ಮದ್ದಿಲ್ಲ ಕೆಲವು ನೆಲ್ಲಿಕಾಯಿಗಳನ್ನು ಕೊಬ್ಬರಿ ಎಣ್ಣೆಯಲ್ಲಿ ನಿಧಾನವಾದ ಉರಿಯಲ್ಲಿ ಕಪ್ಪಗಾಗುವವರೆಗೆ ಕುದಿಸಬೇಕು ಈ ಎಣ್ಣೆಯನ್ನು ತಣ್ಣಗಾಗಲು ಬಿಟ್ಟು ಬಿಳಿಯಾಗಿರುವ ಕೂದಲಿಗೆ ಹಾಗೂ ಮುಖ್ಯವಾಗಿ ಪ್ರತಿ ಕೂದಲ ಬುಡಕ್ಕೆ ನಯವಾಗಿ ಮಾಲಿಷ್ ಮಾಡಬೇಕು ಇದು ಇತ್ತೀಚೆಗೆ ನೆರೆದಿರುವ ಕೂದಲಿಗೆ ಮತ್ತೆ ನೈಸರ್ಗಿಕ ಕಪ್ಪುಬಣ್ಣವನ್ನು ನೀಡುತ್ತದೆ ಕೊಬ್ಬರಿ ಎಣ್ಣೆಯಲ್ಲಿ ಕುದಿಸುವ ಬದಲಿಗೆ ನೆಲ್ಲಿಕಾಯಿಯನ್ನು ಅರೆದು ಅಥವಾ ಎಣ್ಣೆ ತೆಗೆದು ಸಹಾ ಬಳಸಬಹುದು
ಶೀಘ್ರ ಪರಿಣಾಮ ಬೀರಲು ನೆಲ್ಲಿಕಾಯಿಯ ಕಷಾಯವನ್ನು ಉಪಯೋಗಿಸಬಹುದು ಕಷಾಯ ತಯಾರಿಸಲು ಕೆಲವು ನೆಲ್ಲಿಕಾಯಿಗಳನ್ನು ನೀರಿನಲ್ಲಿ ಕೆಲವು ಗಂಟೆಗಳ ಕಾಲ ನೆನೆಸಿದ ಬಳಿಕ ಒಂದು ಚಮಚ ನೀಲಗಿರಿ ಎಣ್ಣೆಯನ್ನು ಹಾಕಿ ಗಾಳಿಯಾಡದ ಗಾಜಿನ ಜಾಡಿಯಲ್ಲಿ ಒಂದು ರಾತ್ರಿ ನೆನೆಸಿಡಬೇಕು ಬೆಳಿಗ್ಗೆ ಈ ದ್ರಾವಣವನ್ನು ಒಂದು ಮೊಟ್ಟೆ ಒಂದು ಲಿಂಬೆಯ ರಸ ಹಾಗೂ ಸ್ವಲ್ಪ ಮೊಸರಿನೊಂದಿಗೆ ಮಿಶ್ರ ಮಾಡಿಕೊಂಡು ಕೂದಲಿಗೆ ಹಚ್ಚಿಕೊಂಡು ಒಂದೆರಡು ತಾಸು ಬಿಟ್ಟು ಸ್ನಾನ ಮಾಡಬೇಕು.
ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು ಇದು ಪ್ರತಿದಿನ ಉಪಯೋಗಿಸುವ ಶ್ಯಾಂಪೂವಿನಂತೆ ಉಪಯೋಗಿಸಬೇಕು ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು ಕಂಡೀಶನರ್ ನಂತೆ ಬಳಸಬಹುದು ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.
ಬಿಳಿ ಕೂದಲನ್ನು ಮನೆಯಲ್ಲೇ ಇರುವ ಸಾಮಗ್ರಿ ಯಿಂದ ಕಪ್ಪು ಕೂದಲನ್ನೂ ಮಾಡಿಕೊಳ್ಳಬಹುದು ಹೇಗೆ ಅಂದರೆ ಒಂದು ಲೋಟ ನೀರಿಗೆ ಒಂದು ಚಮಚ ಟೀ ಪೌಡರ್ ಹಾಕಿ ಕುದಿಸಿಕೊಳ್ಳಬೇಕು ಹಾಗೂ ಮೆಹೆಂದಿ ಪೌಡರ್ ಗೆ ಟೀ ಪೌಡರ್ ಹಾಕುದರಿಂದ ಕೂದಲಿಗೆ ಕಲರ್ ಬರುತ್ತದೆ ಕುದಿಸಿದ ಟೀ ಪೌಡರ್ ಅನ್ನು ಸೋಸಿಕೊಳ್ಳಬೇಕು ಹಾಗೂ ಮೆಹೆಂದಿ ಪೌಡರ್ ಗೆ ಹಾಕುವಾಗ ತಣ್ಣಗೆ ಇರಬೇಕು ಕೂದಲಿಗೆ ಅನುಸಾರವಾಗಿ ಮಹೆಂದಿ. ಪೌಡರ್ ಅನ್ನು ಹಾಕಬೇಕು ಕೂದಲಿಗೆ ಮಹೇಂದಿ ಪೌಡರ್ ಹಚ್ಚುವ ಹಿಂದಿನ ದಿನವೇ ರೆಡಿ ಮಾಡಿಕೊಳ್ಳಬೇಕು ಮೆಹಂದಿ ಹಚ್ಚುವಾಗ ಕೂದಲಿಗೆ ಎಣ್ಣೆ ಇರಬಾರದು ಕೂದಲು ತುಂಬಾ ಪ್ರೆಶ್ ಆಗಿ ಇರಬೇಕು
ಮೆಹೆಂದಿಯನ್ನ ಹಚ್ಚಿದ ನಂತರ ತಲೆಗೆ ತುರುಬು ಹಾಕಿ ಕೊಳ್ಳಬೇಕು ಒಂದರಿಂದ ಎರಡು ತಾಸಿನವರಗೆ ಮಾತ್ರ ಇಟ್ಟುಕೊಂಡು ಸ್ನಾನ ಮಾಡಬೇಕು ಹಾಗೂ ಸ್ನಾನ ಮಾಡುವಾಗ ಸೋಪ್ ಮತ್ತು ಶಾಂಪೂ ಯಾವುದನ್ನು ಬಳಸಬಾರದು ಮತ್ತು ತಣ್ಣೀರಿನಿಂದ ವಾಶ್ ಮಾಡಬೇಕು ಮಾರನೇ ದಿನ ಕೂದಲು ಕಪ್ಪು ಆಗಿರಲು ಇಂಡಿಗೋ ಪ್ಯಾಕ್ಅನ್ನು ಹಾಕಬೇಕು ಮೊದಲು ಎಷ್ಟು ಬೇಕೋ ಅಷ್ಟು ಇಂಡಿಗೋ ಪುಡಿಯನ್ನು ಹಾಕಿ ಸ್ವಲ್ಪ ನೀರಿನಲ್ಲಿ ಕಾಪಾಡಿಕೊಳ್ಳಬೇಕು ತಕ್ಷಣವೇ ಹಚ್ಚಿಕೊಳ್ಳಬೇಕು ಮತ್ತು ಕೂದಲಲ್ಲಿ ಸ್ವಲ್ಪವೂ ಎಣ್ಣೆ ಇರಬಾರದು.
ತೆಂಗಿನೆಣ್ಣೆ ಮತ್ತು ಲಿಂಬೆಯು ಕೂದಲಿಗೆ ತುಂಬಾ ಒಳ್ಳೆಯದು ಇದು ಕೂದಲಿನ ಕಿರುಚೀಲದ ಕೋಶಗಳು ವರ್ಣಕಳೆದುಕೊಳ್ಳದಂತೆ ತಡೆಯುವುದು ಮತ್ತು ದಿನಕಳೆದಂತೆ ಕೂದಲು ಕಪ್ಪಾಗುವಂತೆ ಮಾಡುವುದು ಉತ್ತಮ ಫಲಿತಾಂಶಕ್ಕಾಗಿ ವಾರದಲ್ಲಿ ಎರಡು ದಿನ ಬಳಸಬೇಕು ಚಿಕ್ಕ ಉರಿಯಲ್ಲಿ ಕೊಬ್ಬರಿ ಎಣ್ಣೆಯನ್ನು ಬಿಸಿಮಾಡಿ ಕೆಲವು ಕರಿಬೇವಿನ ಎಲೆಗಳನ್ನು ಬೇಯಿಸಬೇಕು ತಣ್ಣಗಾದ ಬಳಿಕ ಈ ಎಣ್ಣೆಯನ್ನು ಕೂದಲ ಬುಡಕ್ಕೆ ನಯವಾಗಿ ಮಸಾಜ್ ಮಾಡುವುದರಿಂದ ಬಿಳಿ ಕೂದಲು ಕಪ್ಪಗಾಗತೊಡಗುತ್ತದೆ
ಮೂರರಿಂದ ನಾಲ್ಕು ಸೀಗೆಕಾಯಿಯ ಕೋಡು ಹಾಗೂ ಹತ್ತರಿಂದ ಹನ್ನೆರಡು ಅಂಟುವಾಳದ ಬೀಜಗಳನ್ನು ಒಂದು ಜಗ್ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಬೇಕು ಬೆಳಿಗ್ಗೆ ಇದನ್ನು ಕುದಿಸಿ ತಣಿದ ಬಳಿಕ ಒಂದು ಬಾಟಲಿಯಲ್ಲಿ ಶೇಖರಿಸಿಡಬೇಕು ಇದು ಪ್ರತಿದಿನ ಉಪಯೋಗಿಸುವ ಶಾಂಪೂವಿನಂತೆ ಉಪಯೋಗಿಸಬೇಕು ಕೆಲವು ನೆಲ್ಲಿಕಾಯಿಗಳನ್ನು ರಾತ್ರಿಯಿಡೀ ನೆನೆಸಿಟ್ಟು ಬೆಳಿಗ್ಗೆ ಕುದಿಸಿ ತಣಿಸಿದ ಬಳಿಕ ನೆಲ್ಲಿಕಾಯಿಯನ್ನು ಕಿವುಚಿ ತೆಗೆದ ನೀರು ಕಂಡೀಶನರ್ ನಂತೆ ಬಳಸಬಹುದು ಈ ಜೋಡಿ ಕೂದಲು ಬೆಳ್ಳಗಾಗುವುದನ್ನು ತಡೆಯುವುದು ಮಾತ್ರವಲ್ಲದೇ ಕೂದಲು ಉದುರುವಿಕೆಯಿಂದ ಕೂದಲಿನ ಹೊಳಪನ್ನು ಕಾಪಾಡುತ್ತದೆ ಹಾಗೂ ಕೂದಲು ಸೊಂಪಾಗಿ ಬೆಳೆಯಲು ನೆರವಾಗುತ್ತದೆ.