ಪ್ರತಿಯೊಬ್ಬ ಮನುಷ್ಯ ದಿನಬೆಳಗಾದರೆ ಎದುರು ನೋಡುವುದು ತನ್ನ ಮನಃಶಾಂತಿಗೋಸ್ಕರ. ಯಾವುದಾದರೂ ಮನುಷ್ಯನಿಗೆ ಆದರೂ ಅವನ ಜೀವನದಲ್ಲಿ ಮನಃಶಾಂತಿ ಅನ್ನೋದು ಒಂದು ಇದ್ದರೆ ಸುಖವಾಗಿ ಜೀವನ ನಡೆಸಲು ಸಾಧ್ಯ. ಮನಃಶಾಂತಿ ಪಡೆಯುವುದುಕೋಸ್ಕರ ನಾವು ಹಲವಾರು ದಾರಿಗಳನ್ನು ಹುಡುಕಿಕೊಳ್ಳುತ್ತೇವೆ. ಇದೇ ರೀತಿ ಕೆಲವೊಂದು ಶುದ್ಧ ಸುವಾಸನೆಯನ್ನು ಉಸಿರಾಡಿದಾಗ ಮನಸ್ಸಿಗೆ ಶಾಂತಿ ಹಾಗೂ ನೆಮ್ಮದಿ ದೊರೆಯುತ್ತದೆ. ಸುವಾಸನೆಯಿಂದ ಪಡೆದ ನೆಮ್ಮದಿಗೆ ಅಥವಾ ಉಲ್ಲಾಸಕ್ಕೆ ಅರೋಮ ತೆರಪಿ ಎಂದು ಕರೆಯುತ್ತಾರೆ. ಕೆಲವೊಂದು ಎಲೆಗಳನ್ನು ಸುಟ್ಟಾಗ ಕೂಡ ಅಂತಹ ಸುವಾಸನೆ ನಮಗೆ ದೊರೆಯುತ್ತದೆ. ಅಂತಹ ಎಲೆಗಳಲ್ಲಿ ಪಲಾವ್ ಎಲೆ ಅಥವಾ ಬಿರಿಯಾನಿ ಎಲೆ ಕೂಡ ಒಂದಾಗಿದೆ. ಈ ಎಲೆಯನ್ನು ನಾವು ಬಿರಿಯಾನಿ ಅಥವಾ ಪಾಲಾವುಗಳಲ್ಲಿ ಬಳಕೆ ಮಾಡುವುದರಿಂದಲೇ ಒಳ್ಳೆಯ ಘಮವನ್ನು ನೀಡುತ್
ಒಂದೆರಡು ಬಿರಿಯಾನಿ ಎಲೆಗಳನ್ನು ತೆಗೆದುಕೊಂಡು ಅದನ್ನು ಮನೆಯ ಒಂದು ಮೂಲೆಯಲ್ಲಿ ಸುಡಬೇಕು. ಅದು ಸುಟ್ಟು ಬೂದಿ ಆದ ನಂತರ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಹತ್ತು ನಿಮಿಷಗಳ ಕಾಲ ಮುಚ್ಚಬೇಕು. ಸಾಧ್ಯವಾದರೆ ಹತ್ತು ನಿಮಿಷಗಳ ಕಾಲ ಎಲ್ಲರೂ ಮನೆಯಿಂದ ಆಚೆ ಹೋಗಿ ನಂತರ ಬೆಟ್ಟ ಮರೆಯಬೇಡ ಬಂದರೆ ಒಳ್ಳೆಯ ಸುಗಂಧದ ಪರಿಮಳ ಮನೆಯ ತುಂಬಾ ಹರಡಿರುತ್ತದೆ. ಹೀಗೆ ಬಿರಿಯಾನಿ ಎಲೆಯನ್ನು ಸುಟ್ಟು ಅದರಿಂದ ಬಂದ ಪರಿಮಳದ ವಾಸನೆಯನ್ನು ನಾವು ಸೇವಿಸುವುದರಿಂದ ಮನಸ್ಸಿಗೆ ತುಂಬಾ ಪ್ರಶಾಂತತೆ ಎನಿಸುವುದು ಹಾಗೂ ನೆಮ್ಮದಿ ಕೂಡ ದೊರಕುವುದು.
ಅಷ್ಟೇ ಅಲ್ಲದೆ ಬಿರಿಯಾನಿ ಎಲೆಯನ್ನು ಮನೆಯಲ್ಲಿ ಸುಡುವುದರಿಂದ ಮನೆಯಲ್ಲಿ ಇರುವಂತಹ ನೊಣ ಸೊಳ್ಳೆ ಹಾಗೂ ಇನ್ನಿತರ ಕ್ರಿಮಿಕೀಟಗಳು ಕೂಡ ಹೊರಹೋಗುತ್ತವೆ. ಹಾಗೂ ಮನೆಯಲ್ಲಿ ಅವಿತಿರುವ ಜಿರಲೆಗಳನ್ನು ಹೊರಗೆ ಓಡಿಸಲು ಇದು ತುಂಬಾ ಸಹಾಯಕಾರಿ. ಬಿರಿಯಾನಿ ಎಲೆಗಳನ್ನು ಒಣಗಿಸಿ ಪುಡಿಮಾಡಿ ಜಿರಳೆಗಳು ಹೆಚ್ಚಾಗಿ ಇರುವ ಜಾಗದಲ್ಲಿ ಇದನ್ನು ಚೆಲ್ಲಿದರೆ ಮತ್ತು ಜಿರಳೆಗಳು ಎಂದಿಗೂ ಬರುವುದಿಲ್ಲ. ಸಕ್ಕರೆ ಕಾಯಿಲೆ ಇರುವವರು ಬಿರಿಯಾನಿ ಎಲೆಯನ್ನು ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಕುದಿಸಿ ಆ ನೀರನ್ನು ಕುಡಿಯುವುದರಿಂದ ಸಕ್ಕರೆ ಕಾಯಿಲೆ ಹತೋಟಿಗೆ ಬರುತ್ತದೆ. ಹೀಗೆ ನಮ್ಮ ಮನೆಯಲ್ಲಿ ಇರುವಂತಹ ಬಿರಿಯಾನಿ ಎಲೆಗಳಿಂದ ಬರಿ ಅಡುಗೆಗೆ ಮಾತ್ರವಲ್ಲದೆ ಬೇರೆ ಇನ್ನಿತರ ರೀತಿಯಲ್ಲಿಯೂ ಕೂಡ ನಾವು ಉಪಯೋಗವನ್ನು ಪಡೆದುಕೊಳ್ಳಬಹುದು ಅದನ್ನು ಸರಿಯಾದ ರೀತಿಯಲ್ಲಿ ನಾವು ಬಳಸಿಕೊಳ್ಳಬೇಕು.