ಹಿಂದುಳಿದ ವರ್ಗದವರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಸಿಹಿ ಸುದ್ದಿ ಇದೆ. ಹಿಂದುಳಿದ ವರ್ಗಗಳ ಯುವಕರ ಬಳಿ ಲೈಸೆನ್ಸ್ ಕಾರ್ಡ್ ಇದ್ದರೆ ಬೈಕ್ ಖರೀದಿಸಬೇಕು ಎಂಬ ಆಸೆ ಇರುವವರು ಬೈಕ್ ಖರೀದಿಗೆ ಸಹಾಯಧನ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಬೇಕಾಗುವ ದಾಖಲಾತಿ ಯಾವುವು, ಅರ್ಜಿಯನ್ನು ಹೇಗೆ ಸಲ್ಲಿಸಬೇಕು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ವತಿಯಿಂದ 2020- 2021 ನೇ ಸಾಲಿನಲ್ಲಿ ಹಿಂದುಳಿದ ವರ್ಗಕ್ಕೆ ಸೇರಿದ ಯುವಕರು ಬೈಕ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮುಗಿದುಹೋಗಿತ್ತು ಆದರೆ ಈಗ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಬೈಕ್ ಖರೀದಿಗೆ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಲು 19 ಡಿಸೆಂಬರ್ 2020 ಕೊನೆಯ ದಿನಾಂಕವಾಗಿತ್ತು ಆದರೆ ಬದಲಾವಣೆಯಾಗಿ ಈದೀಗ 23 ಜನವರಿ 2021ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ.
ಈ ಯೋಜನೆ ಅಡಿಯಲ್ಲಿ ಅರ್ಜಿ ಸಲ್ಲಿಸುವ ಹಿಂದುಳಿದ ವರ್ಗಗಳು ಎಂದರೆ ಪ್ರವರ್ಗ1, 2ಎ, 3ಎ ಮತ್ತು 3ಬಿ ಈ ವರ್ಗಗಳಿಗೆ ಸೇರಿದ ಯುವಕರು ಬೈಕ್ ಖರೀದಿಸಲು ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಇವರಿಗೆ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಬೈಕ್ ಖರೀದಿಸಲು 25,000 ರೂಪಾಯಿಯನ್ನು ಸಹಾಯಧನವಾಗಿ ನೀಡಲಾಗುತ್ತದೆ. ಸರ್ಕಾರ ಕೊಡುವ ಈ 25,000 ರೂಪಾಯಿ ಉಚಿತವಾಗಿರುತ್ತದೆ ಇದನ್ನು ಮತ್ತೆ ಪೇ ಮಾಡುವ ಅವಶ್ಯಕತೆ ಇರುವುದಿಲ್ಲ.
ಈ ಯೋಜನೆಯಡಿಯಲ್ಲಿ ಅರ್ಜಿ ಸಲ್ಲಿಸಲು ದಾಖಲಾತಿಗಳನ್ನು ಸಲ್ಲಿಸಬೇಕಾಗುತ್ತದೆ ಅವುಗಳೆಂದರೆ ಲೈಸೆನ್ಸ್ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಇತ್ತೀಚಿನ ಭಾವಚಿತ್ರ, ಬ್ಯಾಂಕ್ ಅಕೌಂಟ್ ಡೀಟೇಲ್ಸ್ ಹಾಗೂ ಕೆಲಸ ಮಾಡುತ್ತಿರುವುದಕ್ಕೆ ಸಂಬಂಧಿಸಿದ ಐಡಿ ಕಾರ್ಡ್ ಬೇಕಾಗುತ್ತದೆ ಈ ಎಲ್ಲಾ ದಾಖಲಾತಿಗಳನ್ನು ತಪ್ಪದೆ ಸಲ್ಲಿಸಬೇಕಾಗುತ್ತದೆ, ದಾಖಲಾತಿ ಸರಿ ಇಲ್ಲದೆ ಇದ್ದಲ್ಲಿ ಪರಿಗಣನೆ ಮಾಡುವುದಿಲ್ಲ. ಅರ್ಜಿಯನ್ನು ಜಿಲ್ಲಾ ಅಥವಾ ತಾಲ್ಲೂಕಿನಲ್ಲಿ ಇರುವ ಡಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ ಉಚಿತವಾಗಿ ಅರ್ಜಿ ಫಾರ್ಮ್ ನ್ನು ತೆಗೆದುಕೊಂಡು ಭರ್ತಿ ಮಾಡಿದ ಅರ್ಜಿಯನ್ನು ಅಗತ್ಯ ದಾಖಲಾತಿಗಳೊಂದಿಗೆ ಅಟ್ಯಾಚ್ ಮಾಡಿ ಇದೇ ತಿಂಗಳ 23ರ ಒಳಗಾಗಿ ಸಲ್ಲಿಸಬೇಕು. ಅರ್ಜಿಯನ್ನು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಸಲ್ಲಿಸಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ ಅರ್ಹತೆ ಇರುವವರು ಈ ಯೋಜನೆಯ ಲಾಭ ಪಡೆಯಲಿ.
ಕುಂಬಳಕಾಯಿ ಸೈಜ್ ನ ಸೀಬೆಹಣ್ಣು ಬೆಳೆದ ಕೋಲಾರದ ರೈತ ಈ ಸ್ಟೋರಿ ನೋಡಿ
ಈಗಿನ ಕಾಲದಲ್ಲಿ ಕೃಷಿ ಎಂದರೆ ಮಾರು ದೂರ ಹೋಗುವ ಜನರೆ ಹೆಚ್ಚು. ಕೃಷಿಯಲ್ಲಿ ಹೊಸ ಪ್ರಯೋಗ ಮಾಡುವವರು ಬಹಳ ಕಡಿಮೆ ಆದರೆ ಇದಕ್ಕೆ ವಿರುದ್ಧವಾಗಿ ಕೋಲಾರದಲ್ಲಿ ಹೊಸ ಪ್ರಯೋಗ ಮಾಡಿ ಯಶಸ್ಸು ಪಡೆದ ರೈತನ ಬಗ್ಗೆ, ಅವರು ಬೆಳೆದ ಬೆಳೆಯ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.
ಕೋಲಾರದ ತೊಟ್ಲಿ ಗ್ರಾಮದ ಅಂಬರೀಷ್ ಎಂಬ ರೈತ ಬಡವರ ಸೇಬು ಎಂದೇ ಪ್ರಖ್ಯಾತವಾದ ದೊಡ್ಡ-ದೊಡ್ಡ ಸೀಬೆ ಹಣ್ಣುಗಳನ್ನು ಮತ್ತು ಸಣ್ಣದಾದ ಕುಂಬಳಕಾಯಿಯನ್ನು ಬೆಳೆದು ಆಶ್ಚರ್ಯ ಪಡಿಸಿದ್ದಾನೆ. ಕೋಲಾರ ಜಿಲ್ಲೆಯು ಬರಪೀಡಿತ ಜಿಲ್ಲೆ ಎಂದು ಹೇಳಲಾಗುತ್ತದೆ ಆದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳೆಗಳನ್ನು ಬೆಳೆಯುತ್ತ ಲಕ್ಷ ಲಕ್ಷ ಆದಾಯ ಗಳಿಸುವಲ್ಲಿ ಇಲ್ಲಿನ ರೈತರ ಸಾಧನೆ ದೊಡ್ಡದು. ಅಂಬರೀಶ್ ಅವರು ತಮ್ಮ ಜಮೀನಿನಲ್ಲಿ ಹೊಸದೊಂದು ಕೃಷಿ ಪ್ರಯೋಗವನ್ನು ಮಾಡುವ ಮೂಲಕ ಯಶಸ್ಸನ್ನು ಗಳಿಸಿಕೊಂಡಿದ್ದಾರೆ.
ಇವರು ಮೊದಲು ತಮ್ಮ ಜಮೀನಿನಲ್ಲಿ ರೇಷ್ಮೆ ಬೆಳೆಯುತ್ತಿದ್ದರು ಆದರೆ ಇತ್ತೀಚೆಗೆ ರೇಷ್ಮೆ ಬೆಲೆಯಲ್ಲಿ ತೀವ್ರ ಕುಸಿತವಾಗಿ ನಷ್ಟ ಅನುಭವಿಸಬೇಕಾಯಿತು ಆದ್ದರಿಂದ ಸ್ನೇಹಿತರೊಬ್ಬರ ಸಲಹೆಯಂತೆ ತಮ್ಮ ಒಂದುವರೆ ಎಕರೆ ಜಮೀನಿನಲ್ಲಿ ತೈವಾನ್ ಪಿಂಕ್ ಮತ್ತು ತೈವಾನ್ ವೈಟ್ ತಳಿಯ ಸೀಬೆ ಹಣ್ಣುಗಳನ್ನು ಬೆಳೆಸಿದ್ದಾರೆ. ಈ ಸೀಬೆ ಬೆಳೆಯಿಂದ ನಿರೀಕ್ಷೆಗೂ ಮೀರಿ ಆದಾಯ ಬಂದಿದೆ. ವಿಶೇಷವೆಂದರೆ ಒಂದು ಸೀಬೆಕಾಯಿ 800 ಗ್ರಾಂದಿಂದ ಒಂದು ಕೆ.ಜಿ ತೂಕವನ್ನು ಹೊಂದಿದೆ. ಸೀಬೆ ಬೆಲೆ ಹೆಚ್ಚಾಗಿದ್ದು ಕೆ.ಜಿಗೆ 80- 150 ರೂಪಾಯಿ ಇದೆ. ಸೀಬೆ ಬೆಳೆ ಬೆಳೆಯಲು ಬಂಡವಾಳ ಹೆಚ್ಚು ಅವಶ್ಯಕತೆ ಇಲ್ಲ, ಕಾರ್ಮಿಕರ ಅವಶ್ಯಕತೆಯೂ ಇಲ್ಲ. ಅಂಬರೀಶ್ ಅವರು ತಮ್ಮ ಒಂದುವರೆ ಎಕರೆಯಲ್ಲಿ ಒಂದುವರೆ ಸಾವಿರ ಗಿಡಗಳನ್ನು ನೆಟ್ಟಿದ್ದಾರೆ. ಈ ಗಿಡಗಳನ್ನು ನಾಟಿ ಮಾಡುವಾಗ ಕೊಟ್ಟಿಗೆ ಗೊಬ್ಬರವನ್ನು ಹಾಕಿದ್ದಾರೆ ಅವರು ಈ ಬೆಳೆಗೆ ಎರಡು ಲಕ್ಷ ರೂಪಾಯಿ ಖರ್ಚು ಮಾಡಿದ್ದಾರೆ.
ಸೀಬೆ ಗಿಡಗಳಿಗೆ ನೀರು ಹಾಯಿಸಬೇಕಾಗುತ್ತದೆ, ಈ ಗಿಡಗಳು ವರ್ಷಕ್ಕೆ ಎರಡು ಬಾರಿ ಫಸಲು ಕೊಡುತ್ತದೆ ಅಲ್ಲದೆ ಎಂಟರಿಂದ ಹತ್ತು ವರ್ಷಗಳ ಕಾಲ ಈ ಗಿಡಗಳು ಫಸಲು ಕೊಡುತ್ತಿರುತ್ತದೆ. ಈ ಸೀಬೆ ಹಣ್ಣುಗಳು ಆರೋಗ್ಯಕ್ಕೂ ಕೂಡ ಉತ್ತಮವಾಗಿದೆ ಹೀಗಾಗಿ ಮಾರುಕಟ್ಟೆಯಲ್ಲಿ ತೈವಾನ್ ಪಿಂಕ್ ಸೀಬೆಹಣ್ಣು ಗಳಿಗೆ ಹೆಚ್ಚು ಬೇಡಿಕೆ ಇರುವುದರಿಂದ ಬೆಲೆ ಹೆಚ್ಚಿದೆ. ರೈತರು ಬೇಡಿಕೆಯಿಲ್ಲದ ಬೆಳೆಗಳನ್ನು ಬೆಳೆಯುವ ಬದಲು ಈ ಬೆಳೆಯನ್ನು ಬೆಳೆಯುವುದರಿಂದ ಸಾಕಷ್ಟು ಆದಾಯ ಗಳಿಸಬಹುದು. ಇಂತಹ ಬೆಳೆ ಬೆಳೆಯಲು ತೋಟಗಾರಿಕೆ ಇಲಾಖೆ ರೈತರಿಗೆ ಸಹಾಯ ಮಾಡಬೇಕು ಎನ್ನುವುದು ರೈತರ ಅಭಿಪ್ರಾಯವಾಗಿದೆ.
ಕೋಲಾರ ಜಿಲ್ಲೆಯಲ್ಲಿ ರೈತರು ಎಲ್ಲ ರೀತಿಯ ಹಣ್ಣುಗಳ ಬೆಳೆಯನ್ನು ಬೆಳೆಯುತ್ತಿದ್ದರೂ ಸೀಬೆ ಬೆಳೆಯಷ್ಟು ಆದಾಯಗಳಿಸುವಲ್ಲಿ ವಿಫಲರಾಗಿದ್ದಾರೆ. ಹಲವಾರು ಔಷಧೀಯ ಗುಣಗಳೊಂದಿಗೆ ವಿಟಮಿನ್ಸ್ ಹೊಂದಿರುವ ಸೀಬೆಹಣ್ಣಿಗೆ ಬೇಡಿಕೆ ಯಾವಾಗಲೂ ಇರುತ್ತದೆ. ಆರೋಗ್ಯ ದೃಷ್ಟಿಯಿಂದ ಉತ್ತಮವಾಗಿರುವ ಸೀಬೆ ಹಣ್ಣುಗಳನ್ನು ರೈತರು ಬೆಳೆಯುವುದರಿಂದ ಉತ್ತಮ ಆದಾಯ ಗಳಿಸುತ್ತಾರೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಈ ಮಾಹಿತಿಯನ್ನು ತಪ್ಪದೆ ಎಲ್ಲ ರೈತರಿಗೂ ತಿಳಿಸಿ ಕೃಷಿಯಲ್ಲಿ ಅಭಿವೃದ್ಧಿ ಸಾಧಿಸಲಿ.