ಅಮ್ಮನಿಗಾಗಿ ಹೊಸ ಮನೆ ತಗೊಂಡ್ರ ಮಂಜು ಪಾವಗಡ, ಆ ಮೆನೆ ಬೆಲೆ ಎಷ್ಟಿದೆ ಗೊತ್ತೆ..

0 4

ಕಿರುತೆರೆಯಲ್ಲಿ ಮಜಾ ಭಾರತ ಕಾರ್ಯಕ್ರಮದ ಮೂಲಕ ಹೆಚ್ಚಿನ ಜನಪ್ರಿಯತೆ ಪಡೆದುಕೊಂಡು ಇದೀಗ ಬಿಗ್ ಬಾಸ್ ಮನೆಯಲ್ಲಿ ಹಾಸ್ಯ ಚಟಾಕಿ ಆರಿಸುವುದರಲ್ಲಿ ಯಶಸ್ವಿಯಾಗಿರುವ ಮಂಜು ಪಾವಗಡ ರವರು ಬಿಗ್ ಬಾಸ್ ಮನೆಯಲ್ಲಿ ನಿಜಕ್ಕೂ ಎಲ್ಲರ ಮನೆ ಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ. ಕೇವಲ ಬಿಗ್ ಬಾಸ್ ಮನೆಯಲ್ಲಿನ ಸ್ಪರ್ಧಿಗಳಷ್ಟೇ ಅಲ್ಲದೆ ಟಿವಿ ನೋಡುತ್ತಿರುವ ಪ್ರೇಕ್ಷಕರು ಕೂಡ ಮಂಜು ಪಾವಗಡ ರವರನ್ನು ಇಷ್ಟಪಡಲು ಆರಂಭಿಸಿದ್ದಾರೆ.

ಈ ಮಂಜು ಪಾವಗಡ ಬಿಗ್ ಬಾಸ್ ವಿಜೇತ ಆದ ನಂತರ ಅದರಿಂದ ಬಂದ ಹಣವನ್ನು ತನ್ನ ಅಮ್ಮನಿಗಾಗಿ ಹೊಸ ಮನೆಯನ್ನು ಖರೀದಿಸಲು ಬಳಕೆ ಮಾಡಿಕೊಂಡಿದ್ದು ಆ ಮನೆಯ ಬೆಲೆ ಎಷ್ಟು? ಆ ಮನೇ ಹೇಗಿದೆ? ಮಂಜು ಉಳಿದ ಹಣವನ್ನು ಏನು ಮಾಡಿದ ಅನ್ನೋದರ ಸಂಪೂರ್ಣ ವಿವರ ಈ ಲೇಖನದಲ್ಲಿ ನಾವು ತಿಳಿಯೋಣ.
 
ಕನ್ನಡ ಕಿರುತೆರೆ ಲೋಕದ ಜನಪ್ರಿಯ ಕಾರ್ಯಕ್ರಮ ಬಿಗ್ ಬಾಸ್ ಸೀಸನ್ ಎಂಟರಲ್ಲಿ ಸ್ಪರ್ಧಿಯಾಗಿ ಪಾದಾರ್ಪಣೆ ಮಾಡಿದ ಗ್ರಾಮೀಣ ಪ್ರತಿಭೆ ಮಂಜು ಪಾವಗಡ ಅವರು ಎಲ್ಲರ ಮನಸ್ಸನ್ನು ಹಾಗೂ ಪ್ರೀತಿಯನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ ಅಂತಾನೇ ಹೇಳಬಹುದು. ಅದರಲ್ಲಿಯೂ ಬಿಗ್ ಬಾಸ್ ಕಾರ್ಯಕ್ರಮದ ನಿರೂಪಕರಾದ ಖ್ಯಾತ ನಟ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕುಟುಂಬಕ್ಕೂ ಕೂಡ ಬಿಗ್ ಬಾಸ್ ನಲ್ಲಿ ಮಂಜು ಪಾವಗಡ ಆಡಿರುವ ಆಟ ಬಹಳ ಇಷ್ಟವಾಗಿದೆ ಎಂಬುದು ವಿಶೇಷ.

ಇವರು ಮೊದಲು ಬಿಗ್ ಬಾಸ್ ಮನೆಗೆ ಹೋದಾಗ ಸ್ಕ್ರಿಪ್ಟ್ ಇಲ್ಲದೆ ಯಾವುದೇ ಹಾಸ್ಯವನ್ನು ಮಂಜು ಪಾವಗಡ ರವರು ಮಾಡಲು ಸಾಧ್ಯವಿಲ್ಲ ಎಂಬ ಅಭಿಪ್ರಾಯಗಳು ಕೇಳಿ ಬಂದಿದ್ದವು. ಆದರೆ ತಮ್ಮ ಕುರಿತು ಕೇಳಿಬಂದ ಎಲ್ಲ ಅಭಿಪ್ರಾಯಗಳನ್ನು ಉಲ್ಟಾ ಮಾಡಿ ತಮ್ಮ ಹಾಸ್ಯ ಪ್ರಜ್ಞೆಯ ಮೂಲಕ ಮಂಜು ಪಾವಗಡ ರವರು ಇದೀಗ ಪ್ರೇಕ್ಷಕರನ್ನು ನಕ್ಕು ನಲಿಸುವುದರಲ್ಲಿ ಯಶಸ್ವಿಯಾಗಿದ್ದಾರೆ, ಈ ಮೂಲಕ ಸ್ಕ್ರಿಪ್ಟ್ ಇಲ್ಲದೆ ತಮಾಷೆ ಮಾಡಬಲ್ಲೆನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

ಸದ್ಯ ಒಂದು ಕಾಲದಲ್ಲಿ ತಿನ್ನುವುದಕ್ಕೂ ಕೂಡ ಕೂಳಿಲ್ಲದಂತೆ ಬದುಕುತ್ತಿದ್ದ ಮಂಜು ಪಾವಗಡ ಇದೀಗ ಲಕ್ಷಾಧೀಶ್ವರನಾಗಿದ್ದು, ಬಣ್ಣದ ಲೋಕದಿಂದ ಕೂಡ ಸಾಕಷ್ಟು ಆಫರ್ ಗಳು ಬರುತ್ತಿವೆ. ಕಲರ್ಸ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಜಾಭಾರತ ಎಂಬ ಕಾಮಿಡಿ ಕಾರ್ಯಕ್ರಮದಲ್ಲಿ ಕನ್ನಡಿಗರ ಮನೆಗೆ ನಗುವನ್ನು ಚೆಲ್ಲುತ್ತಿದ್ದ ಮಂಜು ಪಾವಗಡ ಲ್ಯಾಗ್ ಮಂಜು ಎಂದೇ ಖ್ಯಾತಿ ಪಡೆದಿದ್ದರು.

ಸದ್ಯ ಇನ್ನು ಮುಂದೆ ಅವರನ್ನು ಬಿಗ್ ಬಾಸ್ ಮಂಜು ಎಂದೇ ಗುರುತಿಸಲಾಗುತ್ತದೆ. ಇನ್ನೂ ಮಂಜು ಪಾವಗಡ ಅವರ ಜನಪ್ರಿಯತೆ ಹೇಗಿದೆ ಎಂದರೆ ಈ ಬಾರಿಯ ಬಿಗ್ ಬಾಸ್ ಫಿನಾಲೆಯಲ್ಲಿ ಮಂಜು ಪಾವಗಡ ಅವರಿಗೆ ಬರೋಬ್ಬರಿ ನಲವತ್ತೈದು ಲಕ್ಷ ವೋಟಿಂಗ್ ಬಂದಿದೆ. ಇದು ತಮಾಷೆಯ ವಿಚಾರವೇ ಅಲ್ಲ ಇಡೀ ಬಿಗ್ ಬಾಸ್ ಇತಿಹಾಸದಲ್ಲೇ ಇಷ್ಟೊಂದು ಮತ ಬಿದ್ದಿರುವುದು ಇದೇ ಮೊದಲ ಬಾರಿಯಾಗಿದ್ದು, ಮಂಜು ಪಾವಗಡ ಯಶಸ್ಸಿನ ಉತ್ತುಂಗದಲ್ಲಿದ್ದಾರೆ ಅಂತಾನೇ ಹೇಳಿದರೆ ತಪ್ಪಾಗಲಾರದು.

ಕಿರುತೆರೆಯ ಮೂಲಗಳಿಂದ ಮಂಜು ಪಾವಗಡ ರವರು ಒಂದು ವಾರಕ್ಕೆ 45 ಸಾವಿರ ರೂಪಾಯಿಗಳನ್ನು ಸಂಭಾವನೆಯನ್ನು ಪಡೆಯುತ್ತಿದ್ದ ಎಂಬುದು ತಿಳಿದು ಬಂದಿದೆ. ಬಿಗ್ ಬಾಸ್ ಗೆಲುವಿನಿಂದ ಬಂದಂತಹ 53 ಲಕ್ಷ ಹಣದಲ್ಲಿ ಮಂಜು ಪಾವಗಡ ಒಂದು ಸುಂದರವಾದ ಮನೆಯನ್ನು ಖರೀದಿ ಮಾಡಿದ್ದಾರೆ ಎಂಬ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.ಕಡುಬಡತನದಲ್ಲಿ ಮುಳುಗಿದ್ದಂತಹ ಮಂಜು ಪಾವಗಡ ಅವರ ಕುಟುಂಬ ಇದೀಗ ಐಶಾರಾಮಿ ಜೀವನ ನಡೆಸಲು ಶುರು ಮಾಡಿದ್ದಾರೆ.

22 ಲಕ್ಷರೂ ಮನೆ ಇದಾಗಿದೆ ಎನ್ನಲಾಗಿದೆ. ಅಮ್ಮನ ಅಸೆ ಈಡೇರಿಸಲು ಮಂಜು ಮನೆ ಖರೀದಿ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆಮುಂದಿನ ದಿನಗಳಲ್ಲಿ ಮಂಜುಗೆ ಸಿನಿಮಾಗಳ ಆಫರ್ ದೊರಕುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ. ಇನ್ನು ಮಂಜು ಹೇಳಿದಂತೆ ತಂದೆ ತಾಯಿಯನ್ನ ಚೆನ್ನಾಗಿ ನೋಡಿಕೊಳ್ಳಬೇಕು ನಾನೆ ಅವರನ್ನ ಸಾಕಬೇಕು ಅಂದಿದ್ದರು. ಅದರ ಪ್ರಕಾರ ತಂದೆ ತಾಯಿಗೆ ಒಂದೊಳ್ಳೆ ಮನೆಯನ್ನ ಕೊಡಿಸಿದ್ದು ಇನ್ನುಳಿದ ಸ್ವಲ್ಪ ಹಣವನ್ನ ತಮ್ಮ ಮುಂದಿನ ಕೆಲಸಗಳಿಗೆ ಉಪಯೋಗಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

Leave A Reply

Your email address will not be published.