ಕೆ ಜಿ ಎಫ್ ರಾಬರ್ಟ್ ಮುಂತಾದ ಹಲವಾರು ಚಿತ್ರಗಳು ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಇರೋದು ಎಲ್ಲರಿಗೂ ತಿಳಿದ ವಿಷಯ ಆದರೆ ಒಂದು ಚಿತ್ರೀಕರಣ ಸಂಪೂರ್ಣ ಅದ ನಂತರ ಅದರ ಹಣವೇ ಆಗಲಿ ಆ ಚಿತ್ರದ ದೃಶ್ಯವನ್ನು ಒಂದೇ ದಿನದಲ್ಲಿ ದೇಶದ ಎಲ್ಲ ಚಿತ್ರಮಂದಿರಗಳಲ್ಲಿ ಹೇಗೆ ಬಿಡುಗಡೆ ಆಗುವುದು ಇದಕ್ಕೆ ಯಾವ ವಿದ್ಯಮಾನ ಬಳಸುತ್ತಾರೆ ಎನ್ನುವ ವಿಷಯ ಬಗ್ಗೆ ಇಂದಿನ ಲೇಖನ ಅಲ್ಲಿ ನೋಡೋಣ ಬನ್ನಿ
ಸಿನಿಮಾ ಎಂದ ಕೂಡಲೇ ನಮಗೆ ನೆನಪು ಆಗುವುದು ಚಿತ್ರ ಮಂದಿರದಲ್ಲಿ ಕುಳಿತು ನೋಡುವ ಮೂರು ಗಂಟೆಗಳ ಕಾಲ ಮನರಂಜನೆಯ ಕಾಲ ಇದು ಒಂದು ನಮ್ಮ ಜೀವನ ಅವಿಭಾಜ್ಯ ಅಂಗವಾಗಿದೆ ಹಾಗೂ ಕಾಲಹರಣ ಮಾಡಲು ಕೂಡ ಒಂದು ಅಂಗವಾಗಿದೆ ಇನ್ನೂ ನಮ್ಮ ಬಾಲ್ಯದಲ್ಲಿ ಒಂದು ಸಿನಿಮಾ ಬಿಡುಗಡೆ ಆಗಿದೆ ಅದನ್ನು ನೋಡಲು ಸಾಲಿನಲ್ಲಿ ನಿಂತು ಟಿಕೆಟ್ ಅನ್ನು ಪಡೆದು ನೋಡಿದ ರೀತಿಯ ಬಾಲ್ಯದ ಸವಿ ನೆನೆಪು ಮರೆಯಲು ಸಾಧ್ಯವಿಲ್ಲ ಆದರೆ ಇಂದಿನ ಯುವಜನತೆಗೆ ಮನೆಯಲ್ಲಿ ಕುಳಿತು ಆನ್ಲೈನ್ ಮೂಲಕ ಹೊಸ ಸಿನಿಮಾವನ್ನು ನೋಡುವ ಅವಕಾಶ ಇದೆ ಇದಕ್ಕೆ ಹೇಳೋದು ಕಾಲಯ ತಸ್ಮೈ ನಮಃ ಎಂಬ ಮಾತು ಇಂದಿನ ಜೀವನಕ್ಕೆ ಸರಿದೂಗುವುದು
ಯಾವುದೇ ಒಂದು ಸಿನಿಮಾವನ್ನು ನಿರ್ಮಾಪಕರು ನಿರ್ಮಿಸುವ ಯೋಜನೆ ಹಾಕಿದಾಗ ಮೊದಲು ಚಿತ್ರದ ಹಂಚಿಕೆಗಾಗಿ ಅವನು ಫಿಲ್ಮ್ ಡಿಸ್ಟ್ರಿಬ್ಯೂಟರ್ ಹತ್ತಿರ ಒಮ್ಮೆ ಸಂಪರ್ಕ ಮಾಡಬೇಕು ಫಿಲ್ಮ್ ಡಿಸ್ಟ್ರಿಬ್ಯೂಟರ್ ಎಂದರೆ 20th ಸೆಂಚುರಿ ಬಾಕ್ಸ್ ಹೊಂಬಾಳೆ ಫಿಲ್ಮ್ಸ್ ಯಶ್ ಫಿಲ್ಮ್ ಹಾಗೂ ಸೋನಿ ಫಿಲ್ಮ್ಸ್ ಮುಂತಾದವು ದೊಡ್ಡ ಹಂಚಿಕೆದಾರು ಪಾನ್ ಇಂಡಿಯಾ ಹಾಗೂ ದೊಡ್ಡ ಬ್ಯಾನರ್ ದೊಡ್ಡ ಮೊತ್ತದ ಸಿನಿಮಾಕ್ಕೆ ಇವರನ್ನು ಸಂಪರ್ಕಿಸಬೇಕು ಇವರಿಗೆ ತನ್ನ ಸುತ್ತ ಇರುವ ಸಣ್ಣ ಸಿನಿಮಾ ಚಿತ್ರ ಮಂದಿರ ಇಂದ ಹಿಡಿದು ದೊಡ್ಡ ಮಲ್ಟಿ ಫ್ಲೆಕ್ಸ್ ಮಾಲ್ ಪರಿಚಯ ಇರುವುದು ನಿರ್ಮಾಪಕ ತನ್ನ ಚಿತ್ರದ ಕೊನೆಯ ಹಂತ ಬಂದಾಗ ಅದನ್ನು ಡಿಸಿಪಿ ಮಾದರಿಯಲ್ಲಿ ತನ್ನ ಹಂಚಿಕೆದಾರರು ಹಾಗೂ ಚಿತ್ರ ಮಂದಿರಕ್ಕೆ ಒಂದು ಫಾರ್ಮಾಟ್ ಅನ್ನು ನೀಡಲಾಗುವುದು ಇದರಲ್ಲಿ ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ಇರುವುದು ಇದನ್ನು ಒಂದು ಸಣ್ಣ ಸೂಟ್ ಕೇಸ್ ಮಾದರಿಯಲ್ಲಿ ಗೌಪ್ಯವಾಗಿ ದೇಶದ ಎಲ್ಲಾ ಚಿತ್ರಮಂದಿರಗಳಿಗೆ ರವಾನೆ ಮಾಡಲಾಗುವುದು
ಡಿಸಿಪಿ ಅಲ್ಲಿ ಇರುವ ಕಾಪಿಯನ್ನು ನೇರ ಗಣಕಯಂತ್ರ ಅಳವಡಿಸಿ ನೋಡಲು ಸಾಧ್ಯವಿಲ್ಲ ಅದಕ್ಕೂ ಮುನ್ನ ಸರ್ವರ್ ಒಂದಕ್ಕೆ ಜೋಡಣೆ ಮಾಡಿ ಕೆಡಿ ಎಂ ಕಾಪಿಯನ್ನು ಹೊರತೆಗೆಯಲು ಆಗುವುದು ಕೆಡಿಎಂ ಅಂದ್ರೆ ಕೀ ಡಿಜಿಟಲ್ ಮೆಸೇಜ್ ಎನ್ನುವುದು ಆಗಿದ್ದು ಮೊದಲು ಎನ್ಕ್ರಿಪ್ಟ್ ಆಗಿದ್ದು ನಂತರ ಲಾಕ್ ಓಪನ್ ಆಗಿ ಕೊನೆಗೆ ಟಿ ಎಮ್ ಎಸ್ ಅಂದರೆ ಥಿಯೇಟರ್ ಮ್ಯಾನೇಜ್ಮೆಂಟ್ ಸಿಸ್ಟಮ್ ಮೂಲಕ ಓಪನ್ ಆಗುವುದು ಅದರ ಒಂದು ಕೀ ಕಂಟ್ರೋಲ್ ಮೂಲಕ ಕಟ್ ದ್ವನಿ ಬದಲಾವಣೆ ಚಿತ್ರದ ಕಟ್ ಅನ್ನು ಆ ಕೀ ಮೂಲಕ ನಿಯಂತ್ರಣ ಮಾಡಬಹುದು ಇದರ ಮೂಲಕ ಪ್ರೊಜೆಕ್ಟರ್ ಮೂಲಕ ನಾವು ಚಿತ್ರರಂಗದಲ್ಲಿ ಕುಳಿತು ವೀಕ್ಷಣೆ ಮಾಡಲು ಸಾದ್ಯ
ಚಿತ್ರಮಂದಿರದಲ್ಲಿ ಹೇಗೆ ಹಣವನ್ನು ಗಳಿಸುತ್ತಾರೆ ಎನ್ನುವುದರ ಬಗ್ಗೆ ತಿಳಿಯೋಣ ನಾವು ತೆಗೆದುಕೊಳ್ಳುವ ಟಿಕೆಟ್ ಹಣವು ಆ ಚಿತ್ರದ ನಿರ್ಮಾಪಕ ಹಂಚಿಕೆದಾರರು ಹಾಗೂ ಆ ಚಿತ್ರಮಂದಿರದ ಮಾಲೀಕರು ಕೂಡ ಹಂಚಿಕೆ ಆಗುವುದು ಇದೆ ಅವರ ಜೀವನದ ಮೂಲ ಆದಾಯದ ದಾರಿ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿ ಸ್ಕ್ರೀನ್ ಎಂದು ಎರಡು ಬಿನ್ನತೆ ಇರುತ್ತದೆ ನಾವು ಟಿಕೇಟ್ ಕೊಡುವ ಹಣದ 20%-30% ಹಣವು ಮಂದಿರದ ಮಾಲೀಕರಿಗೆ ನೇರವಾಗಿ ಹೋಗುವುದು ಮಿಕ್ಕಂತ ಇನ್ನೂ70%-80% ಹಣವು ಚಿತ್ರ ಹಂಚಿಕೆದಾರರಿಗೆ ಸೇರುವುದು
ಅವರಿಂದ ಚಿತ್ರದ ನಿರ್ಮಾಪಕರಿಗೆ ಹಣ ಸೇರುವುದು ಇದು ಸಿಂಗಲ್ ಸ್ಕ್ರೀನ್ ಕಥೆ ಇನ್ನು ಮಲ್ಟಿ ಸ್ಕ್ರೀನ್ ಅಲ್ಲಿ 30%-40% ಹಣ ಮಾಲೀಕರಿಗೆ ಹಾಗೂ 60%-70% ಹಣ ಹಂಚಿಕೆದಾರರಿಗೆ ಹಾಗೂ ನೇರವಾಗಿ ನಿರ್ಮಾಪಕರಿಗೆ ಹಂಚಿಕೆ ಆಗುವುದು ಇಲ್ಲಿ ಆ ಚಿತ್ರದ ಪ್ರಚಾರ ಹಾಗೂ ಜನರ ವೀಕ್ಷಣೆ ಮೇಲೆ ಅವಲಂಬಿತ ಆಗಿರುವುದು ತೆರಿಗೆ ಎಲ್ಲವನ್ನೂ ಪಾವತಿ ಮಾಡಿ ಕೊನೆಗೆ ಉಳಿದ ಹಣವು ಅದರ ಮಾಲೀಕರಿಗೆ ಹಂಚಿಕೆ ಆಗುವುದು ಕೊನೆಗೆ ಒಂದುವೇಳೆ ಏನಾದರೂ ಚಿತ್ರವನ್ನು ಜನರು ವೀಕ್ಷಣೆ ಮಾಡದಿದ್ದಲ್ಲಿ ಆ ಸಿನಿಮಾ ನಷ್ಟ ಅನುಭವಿಸಿ ಕೊನೆಗೆ ಫ್ಲಾಪ್ ಪಟ್ಟಿಗೆ ಸೇರುವುದು
ಸಹೋ ಚಿತ್ರವನ್ನು ನಿರ್ಮಾಪಕರು 50 ಕೋಟಿಗೆ ನಿರ್ಮಾಣ ಮಾಡಿದ್ದು ಅದನ್ನ 100 ಕೋಟಿಗೆ ಹಂಚಿಕೆದಾರರು ಮಾರಿದಾಗ ನಿರ್ಮಾಪಕ ಸೇಫ್ ಆಗುವನು ಆದರೆ ಚಿತ್ರ ಮಾರಿದ ನಂತರ ನಿರ್ಮಾಪಕನಿಗೆ ಯಾವುದೇ ಯೋಚಿಸುವ ಅಗತ್ಯ ಇಲ್ಲ ಆದರೆ ನಿಜವಾಗಿ ಯೋಚನೆ ಆಗುವುದು ಯಾಕೆಂದರೆ ತೆಗೆದುಕೊಂಡ ಸಿನಿಮಾ ನಷ್ಟ ಆಗುವುದೋ ಇಲ್ಲ ಲಾಭ ಆಗುವುದೋ ಎಂಬ ಚಿಂತೆ ಕಾಡುತ್ತಿರುವುದು ಹಂಚಿಕೆದಾರರು ಅದನ್ನು ಉಪಹಂಚಿಕೆ ಹಂಚಿದ್ದು ಅದನ್ನು ಚಿತ್ರಮಂದಿರಕ್ಕೆ ಹಂಚುತ್ತಾರೆ ಒಂದು ಸಿನಿಮಾ 200 ಕೋಟಿ ಮೊತ್ತ ಗಳಿಸಿತು ಅದರಲ್ಲಿ 28% ಜಿ ಎಸ್ ಟಿ ಸಮೇತ ಸರ್ಕಾರಕ್ಕೆ ಕಟ್ಟಿದಾಗ ಕೊನೆಗೆ ಉಳಿಯುವುದು 152 ಕೋಟಿ ಹಣ ಅಷ್ಟೆ
ಈ ಮೊತ್ತದಲ್ಲಿ ನಿರ್ಮಾಪಕ ಅವರಿಗೆ ಅದರಲ್ಲೇ ನೂರು ಕೋಟಿ ಕಳೆದರೆ ಉಳಿಯೋದು 52 ಕೋಟಿ ಅಷ್ಟೆ ಅದರಲ್ಲಿ ಮಲ್ಟಿ ಫ್ಲೆಕ್ಸ್ ಅಲ್ಲಿ ನೋಡಿದರೆ 30%-40% ಚಿತ್ರಮಂದಿರ ಮಾಲೀಕರಿಗೆ ಹಾಗೂ 60%-70% ಚಿತ್ರದ ಹಂಚಿಕೆದಾರರು ವಿಭಜನೆ ಆದಾಗ ಈ 52 ಕೋಟಿಯಲ್ಲಿ ಕೊನೆಗೆ 36.5 ಕೋಟಿ ಹಂಚಿಕೆದಾರರಿಗೆ ಹಾಗೂ 15.5 ಕೋಟಿ ಚಿತ್ರದ ಮಂದಿರದ ಮಾಲೀಕರಿಗೆ ಜೇಬು ಸೇರುವುದು ಈ ರೀತಿಯಾಗಿ ಚಿತ್ರ ಮಂದಿರ ಅವುಗಳ ಬೇಡಿಕೆ ಹಾಗೂ ಕ್ರೇಜ್ ಅನ್ನು ದಾಳವಾಗಿ ಮಾಡ್ಕೊಂಡು ತನ್ನ ಬೊಕ್ಕಸವನ್ನು ತುಂಬಿಸಿಕೊಳ್ಳುವ ಕಾಯಕ ಮಾಡುತ್ತಾರೆ ಇಡೀ ವಿಶ್ವದಲ್ಲಿ ಇದೆ ರೀತಿಯಲ್ಲಿ ಹಣವನ್ನು ಗಳಿಸುತ್ತವೆ .