ಮುಖದ ಸೌಂದರ್ಯ ಹೆಚ್ಚಿಸುವ ಬೆಸ್ಟ್ ಮನೆಮದ್ದು

0 4

ಸುಂದರವಾಗಿ ಕಾಣುವುದು ನಮ್ಮ ಹಕ್ಕು. ಮುಖ ನಮ್ಮ ಸೌಂದರ್ಯದ ಪ್ರತಿರೂಪ ಎಂದು ಎಲ್ಲರೂ ಹೇಳುತ್ತಾರೆ. ಹಾಗಾಗಿ ನಮ್ಮ ನೈಜ ಸೌಂದರ್ಯವನ್ನು ಬಿಂಬಿಸುವ ಮುಖದ ಕಾಂತಿ ಮತ್ತು ಹೊಳಪನ್ನು ರಕ್ಷಣೆ ಮಾಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ. ನಿತ್ಯದ ಆಹಾರ ಪದ್ಧತಿಯಲ್ಲಿ ಆದಷ್ಟು ಹೆಚ್ಚಿನ ತರಕಾರಿಗಳನ್ನು ಜೊತೆಗೆ ಹಣ್ಣುಗಳನ್ನು ಬಳಕೆ ಮಾಡಬೇಕು

ಹಸಿರು ಎಲೆ ತರಕಾರಿಗಳ ನಮ್ಮ ಆರೋಗ್ಯ ಕಾಪಾಡುತ್ತದೆ ಹಲವಾರು ದ್ವಿದಳ ಧಾನ್ಯಗಳು ಕಾಳುಗಳು ಬೀಜಗಳು ಆಹಾರದಲ್ಲಿ ಇರಬೇಕು ಇದರಿಂದ ನಮ್ಮ ದೇಹಕ್ಕೆ ವಿಟಮಿನ್ ಸಿ ಮತ್ತು ವಿಟಮಿನ್ ಈ ಸಿಗುತ್ತದೆ ನಮ್ಮ ಮುಖದ ಕಾಂತಿ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ ನಾವು ಈ ಲೇಖನದ ಮೂಲಕ ಹೇಗೆ ಮುಖವನ್ನು ಕಾಂತಿಯುತವಾಗಿ ಇಟ್ಟುಕೊಳ್ಳುವುದು ಎಂಬುದನ್ನು ತಿಳಿದುಕೊಳ್ಳೋಣ.

ಪ್ರತಿಯೊಬ್ಬರಿಗೂ ಮುಖ ಕಾಂತಿಯುತವಾಗಿ ಕಾಣಬೇಕು ಎನ್ನುವ ಆಸೆ ಇರುತ್ತದೆ ಮುಖದ ಸೌಂದರ್ಯ ಇಡಿ ಶರೀರದ ಮೇಲೆ ಪರಿಣಾಮ ಬೀರುತ್ತದೆ ಮುಖದ ಗ್ಲೋ ಬಹಳ ಮುಖ್ಯ ಮುಖದಲ್ಲಿ ಕಾಂತಿ ಬರಲು ಲೋಳೆಸರ ಜೆಲ್ ಅನ್ನು ಮುಖಕ್ಕೆ ಹಚ್ಚಬೇಕು ನಂತರ ಸುಮಾರು ಲೋಳೆಸರದ ಜೆಲ್ ಒಣಗುವ ವರೆಗೆ ಇಟ್ಟುಕೊಳ್ಳಬೇಕು ಹಾಗೆಯೇ ಸುಮಾರು ಹದಿನೈದು ನಿಮಿಷದ ವರೆಗೆ ಹಾಗೆ ಇಟ್ಟುಕೊಳ್ಳಬೇಕು ಹಾಗೆಯೇ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆಯಬೇಕು ಮತ್ತು ಮುಖಕ್ಕೆ ಕಾಂತಿ ಬರಲು ಇನ್ನೊಂದು ಮಾರ್ಗವೆಂದರೆ ಹುತ್ತ ದ ಮಣ್ಣನ್ನು ಮುಖಕ್ಕೆ ಹಚ್ಚಬೇಕು

ಹೇಗೆ ಅಂದರೆ ಹುತ್ತದ ಮಣ್ಣನ್ನು ನೆನೆಸಿ ನಾಲ್ಕೈದು ನಿಮಿಷದ ಕಾಲ ಹಾಗೆ ಇಟ್ಟುಕೊಳ್ಳಬೇಕು ಮುಖದ ಕೊಳೆಯನ್ನು ತೆಗೆಯಲು ಟೊಮೆಟೊ ಅನ್ನು ಪೇಸ್ಟ್ ಮಾಡಿಕೊಂಡು ಅದಕ್ಕೆ ಅವಶ್ಯಕತೆಗೆ ತಕ್ಕಂತೆ ಲಿಂಬೆ ರಸವನ್ನು ಹಾಕಬೇಕು ಇದರಿಂದ ರಕ್ತಪರಿಚಲನೆಯುಂಟಾಗಿ ಮುಖಕ್ಕೆ ಕಾಂತಿ ಹೆಚ್ಚಾಗುತ್ತದೆ .

ಕಾಂತಿ ಅನ್ನುವುದು ದೇಹದ ಒಳಗಿನಿಂದ ಬರುತ್ತದೆ ಅಂದರೆ ನಾವು ಸೇವಿಸುವ ಆಹಾರದ ಮೂಲಕವಾಗಿ ಬರುತ್ತದೆ ಮುಖದ ಕಾಂತಿ ಹೆಚ್ಚಿಸಲು ವಿಟಮಿನ್ ಗಳ ಅವಶ್ಯಕತೆ ಇರುತ್ತದೆ ವಿಟಮಿನ್ ಸಿ ವಿಟಮಿನ್ ಈ ಯಿಂದ ಸಿಗುತ್ತದೆ ಬಾದಾಮಿ ಗೋಡಂಬಿ ಪಿಸ್ತಾ ಹಾಗೂ ವಾಲ್ ನಟ್ ಶೆಂಗದಲ್ಲಿ ವಿಟಮಿನ್ ಸಿ ಮತ್ತು ಈ ಕಂಡುಬರುತ್ತದೆ

ಹಾಗೆಯೇ ಇವುಗಳನ್ನು ಹೆಚ್ಚಾಗಿ ಸೇವಿಸಬೇಕು ಮತ್ತು ಹಸಿರು ತರಕಾರಿ ಮತ್ತು ಹಣ್ಣು ಗಳನ್ನು ಸೇವಿಸಬೇಕು .ಕೊಬ್ಬರಿ ಎಣ್ಣೆ ಕೊಬ್ಬರಿ ಮತ್ತು ತುಪ್ಪ ಬೆಣ್ಣೆ ಹಾಲು ಮೊಸರುಗಳನ್ನು ಹೆಚ್ಚಾಗಿ ಸೇವಿಸಬೇಕು ಇದರಿಂದ ನಮಗೆ ಮುಖದ ಕಾಂತಿ ಹೆಚ್ಚಿಸುತ್ತದೆ.ನಮ್ಮ ಆರೋಗ್ಯ ಮತ್ತು ಮುಖದ ಕಾಂತಿ ನಾವು ಸೇವಿಸುವ ಆಹಾರವನ್ನು ಅವಲಂಬಿಸಿದೆ ನಾವು ಇಂದು ಪಾಸ್ಟ್ ಪೂಡ್ ಗಳಿಗೆ ಮಾರು ಹೋಗುತ್ತಿದ್ದೇವೆ ನಮ್ಮ ಆರೋಗ್ಯದ ದೃಷ್ಟಿಯಿಂದ ಹಣ್ಣು ತರಕಾರಿ ದ್ವಿದಳ ಧಾನ್ಯವನ್ನು ತಿನ್ನಬೇಕು.

Leave A Reply

Your email address will not be published.