ದೇವಾಲಯದ ಜೀರ್ಣೋದ್ಧಾರಕ್ಕೆ 500 ಕೋಟಿ ರೂಪಾಯಿ ದೇಣಿಗೆ ನೀಡಿದ ಬೆಂಗಳೂರು ಉದ್ಯಮಿ

0 2

ಇತ್ತೀಚಿನ ದಿನಗಳಲ್ಲಿ ಜನಗಳಿಗೆ ದೇವರ ಮೇಲೆ ನಂಬಿಕೆ ಇಲ್ಲದೆ ಇರುವ ಕಾಲವಿದು. ಯಾರಿಗಾದರೂ ದಾನ ಧರ್ಮ ಮಾಡಲೂ ಹಿಂದೆ ಮುಂದೆ ಯೋಚಿಸುವಾಗ ಬೆಂಗಳೂರು ಮೂಲದ ಉದ್ಯಮಿಯೊಬ್ಬರು ಕೇರಳದ ದೇವಾಲಯ ವೊಂದರ ಜೀರ್ಣೋದ್ಧಾರಕ್ಕೆ ಎಂದು 500 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ. ಇದರ ಕುರಿತಾಗಿ ಹೆಚ್ಚಿನ ಮಾಹಿತಿಯನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಗಣ ಶ್ರವಣ್ (ಸ್ವಾಮಿಜಿ) ಕಂಪನಿಗಳ ಗಣ ಶ್ರವಣ್ ಹೆಸರಿನ ಉದ್ಯಮಿ ದೇವಸ್ಥಾನಕ್ಕೆ 500 ಕೋಟಿ ರೂಪಾಯಿ ದೇಣಿಗೆ ನೀಡುತ್ತಿದ್ದು, ಈ ಉದ್ಯಮಿ ದೇಣಿಗೆ ನೀಡಿದ ದೇವಸ್ಥಾನ ಕೊಚ್ಚಿ ನಗರದಿಂದ ಸುಮಾರು 10 ಕಿಮೀ ದೂರದಲ್ಲಿರುವ ಎರ್ನಾಕುಲಂ ಜಿಲ್ಲೆಯ ಚೊಟ್ಟಾನಿಕ್ಕರ ಭಗವತಿ ಎಂಬಲ್ಲಿ ಇದೆ. ದೇಣಿಗೆ ನೀಡಿದ ಬಗ್ಗೆ ದೇವಾಲಯದ ನಿರ್ವಹಣೆ ಮಾಡುತ್ತಿರುವ ಕೊಚ್ಚಿಯ ದೇವಸ್ವಂ ಮಂಡಳಿ ದೇಣಿಗೆಯನ್ನು ಪಡೆಯಲು ಕೇರಳ ಹೈಕೋರ್ಟ್ ಅನುಮೋದನೆಯನ್ನು ಪಡೆಯಲು ನಿರ್ಧರಿಸಿದೆ. ಈ ದೇವಸ್ಥಾನಕ್ಕೆ ಭೇಟಿ ನೀಡಿದ ಬಳಿಕ ತಮ್ಮ ಜೀವನ ಹಾಗೂ ವ್ಯವಹಾರದಲ್ಲಿ ಒಳ್ಳೆಯದಾಗಿದ್ದರಿಂದ ಕಾಣಿಕೆ ನೀಡುತ್ತಿದ್ದೇನೆ ಎಂದು ಗಣ ಶ್ರವಣ್ ತಿಳಿಸಿದ್ದಾರೆ. ದೇವಸ್ವಂ ಮಂಡಳಿಯ ಕಾರ್ಯದರ್ಶಿ ವಿಎ ಶೀಜಾ ಎಂಬವರು ಮಾತನಾಡಿ, ಈ ಕುರಿತು ಮಂಡಳಿ ಇನ್ನೂ ಅಂತಿಮ ತೀರ್ಮಾನ ಮಾಡಬೇಕಿದೆ ಮತ್ತು ಕಾನೂನಿನ ಅಭಿಪ್ರಾಯವನ್ನು ಪಡೆಯುತ್ತಿದ್ದೇವೆ ನಿಯಮಗಳ ಅನ್ವಯ ದೇವಸ್ಥಾನ ಅಭಿವೃದ್ಧಿಗಾಗಿ 20 ಲಕ್ಷ ರೂಪಾಯಿ ಗೂ ಹೆಚ್ಚು ದೇಣಿಗೆ ಪಡೆಯುವ ಸಂದರ್ಭದಲ್ಲಿ ಕಾನೂನಿನ ಅನುಮತಿ ಪಡೆಯಬೇಕಿದೆ. ಭವಿಷ್ಯದಲ್ಲಿ ಯಾವುದೇ ಕಾನೂನು ಸಮಸ್ಯೆ ಎದುರಾಗದಂತೆ ಮಂಡಳಿ ನ್ಯಾಯಾಲಯದ ಅನುಮತಿಯನ್ನು ಪಡೆಯಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ದೇಣಿಗೆ ನೀಡಿದ 46 ವರ್ಷದ ಶ್ರವಣ್ ಅವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯವರು. ಇವರು ಸುಮಾರು 20 ವರ್ಷಗಳಿಂದ ಸಂಗೀತ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸಿದ್ದರು ಆದರೆ ಆ ವೇಳೆ ಅವರಿಗೆ ವ್ಯವಹಾರದಲ್ಲಿ ಹೆಚ್ಚು ಲಾಭವಿರಲಿಲ್ಲ. ಕಳೆದ ನಾಲ್ಕು ವರ್ಷಗಳ ಹಿಂದೆ ಗುರುಗಳ ಸಲಹೆಯಂತೆ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನಕ್ಕೆ ನೀಡಿದ್ದರು. ಆ ಬಳಿಕ ಅವರ ವ್ಯವಹಾರದಲ್ಲಿ ಹೆಚ್ಚಿನ ಲಾಭವನ್ನು ಪಡೆದುಕೊಂಡಿದ್ದಾರೆ. ಸದ್ಯ ಶ್ರವಣ್ ಅವರು ಮುಂಬೈ ಮೂಲದ ಸಂಸ್ಥೆಯೊಂದಿಗೆ ಚಿನ್ನ, ವಜ್ರ ಮತ್ತು ಅಪರೂಪದ ಲೋಹಗಳ ವ್ಯಾಪಾರ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಆಭರಣದ ಮಳಿಗೆಯನ್ನು ಹೊಂದಿದ್ದಾರೆ. ಅಲ್ಲದೇ ಕಟ್ಟಡ ನಿರ್ಮಾಣ ಹಾಗು ಒಳಾಂಗಣ ವಿನ್ಯಾಸ ಕ್ಷೇತ್ರದಲ್ಲೂ ವ್ಯವಹಾರ ಮಾಡುತ್ತಿದ್ದಾರೆ. ದಶಕಗಳಷ್ಟು ಹಳೆಯದಾದ ಚೊಟ್ಟಾನಿಕ್ಕರ ಭಗವತಿ ದೇವಸ್ಥಾನ ಕೇರಳದ ಪ್ರಮುಖ ಧಾರ್ಮಿಕ ಕ್ಷೇತ್ರವಾಗಿದ್ದು ಇದು ಪುರಾಣಗಳ ಹಿನ್ನೆಲೆಯನ್ನು ಹೊಂದಿದೆ. ಸದ್ಯ ದೇವಸ್ಥಾನವನ್ನು ಎರಡು ಹಂತಗಳಲ್ಲಿ ಜೀರ್ಣೋದ್ಧಾರ ಮಾಡಲು ನಿರ್ಧರಿಸಲಾಗಿದ್ದು ಗೋಪುರ, ಮಂಟಪಗಳ ನವೀಕರಣ, ಒಳಚರಂಡಿ ಸಂಸ್ಕರಣಾ ಘಟಕ ಸೇರಿದಂತೆ ಅತಿಥಿ ಗೃಹಗಳ ನಿರ್ಮಾಣ ಕಾರ್ಯ ಇವಿಷ್ಟು ಮೊದಲ ಹಂತದಲ್ಲಿ ನಡೆಯಲಿದೆ. ಇದರ ಕುರಿತಾಗಿ ವಿವರವನ್ನು ಮಾಸ್ಟರ್ ಪ್ಲ್ಯಾನ್ ಮತ್ತು ವಿನ್ಯಾಸಗಳನ್ನು ಸಿದ್ಧಪಡಿಸಲಾಗಿದ್ದು, 2ನೇ ಹಂತದಲ್ಲಿ ದೇವಸ್ಥಾನದ ಹತ್ತಿರದ ಪ್ರದೇಶಗಳ ರಸ್ತೆ ಅಭಿವೃದ್ಧಿಯನ್ನು ಹೊಂದಿದೆ. ಇದಕ್ಕೆ ಸ್ಥಳೀಯ ಸಂಸ್ಥೆಗಳ ಅಗತ್ಯವಿದೆ ಎಂದು ವಾಸ್ತುಶಿಲ್ಪಿ ಅಜಿತ್ ತಿಳಿಸಿದ್ದಾರೆ.

ಇನ್ನು ದೇವಸ್ಥಾನದ ಕಾಣಿಕೆ ಡಬ್ಬಿಗೆ ಹತ್ತು ರೂಪಾಯಿ ಹಾಕಲೂ ಹಿಂದೆ ಮುಂದೆ ನೋಡುವ ಜನರಿರುವಾಗ ದೇವಸ್ಥಾನದ ಹಾಗೂ ಅಲ್ಲಿನ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಎಂದು ಐದುನೂರು ಕೋಟಿ ರೂಪಾಯಿ ಹಣವನ್ನು ದೇಣಿಗೆಯ ರೂಪದಲ್ಲಿ ನೀಡಿದ ಉದ್ಯಮಿ ಗಣ ಶ್ರವಣ್ ಅವರ ನಿಸ್ವಾರ್ಥ ಮನೋಭಾವನೆಗೆ ಮೆಚ್ಚಲೇಬೇಕು.

Leave A Reply

Your email address will not be published.