ಇತ್ತೀಚಿನ ಜೀವನಶೈಲಿಯ ಪರಿಣಾಮದಿಂದಾಗಿ ಮನುಷ್ಯರನ್ನು ಹಲವಾರು ರೋಗ ರುಜಿನಗಳು ಕಾಡುತ್ತಿವೆ. ಅವುಗಳಲ್ಲಿ ಪ್ರಮುಖವೆಂದರೆ ರಕ್ತದೊತ್ತಡ ಹಾಗೂ ಸಕ್ಕರೆಖಾಯಿಲೆ ಡಯಾಬಿಟೀಸ್ ಈ ಕಾಯಿಲೆಗಳು ವಯಸ್ಕರಿಂದ ಹಿಡಿದು ವೃದ್ಧರವರೆಗೂ ಕಾಡುತ್ತಿವೆ. ಇವೆಲ್ಲವನ್ನೂ ನಿಯಂತ್ರಿಸಲು ಹಲವಾರು ಮಾರ್ಗಗಳಿವೆ. ಅವುಗಳಲ್ಲಿ ತರಕಾರಿ ಹಾಗೂ ಹಣ್ಣುಗಳನ್ನು ತಮ್ಮ ಆಹಾರ ಪದ್ಧತಿಯಲ್ಲಿ ಅಳವಡಿಸಿಕೊಳ್ಳುವುದು. ಹಾಗೂ ಇವುಗಳಲ್ಲಿ ಒಂದು ಬೇಲದ ಹಣ್ಣು. ನಮ್ಮಬಯಲು ಸೀಮೆಯಲ್ಲಿ ಜಾಸ್ತಿ ಬೆಳೆಯುವ ಮರ. ರೋಮನ್ನರು ಇದುನ್ನ ಅರಣ್ಯ ದೇವತೆ ಎಂದು ಕರೆದಿದ್ದಾರೆ.

ಲೈಮೋನಿಯ ಅಸಿಡಿಸ್ಸಿಮಾ ಎಂಬುದುಈ ಹಣ್ಣಿನ ವೈಜ್ಞಾನಿಕ ಹೆಸರು ಹಾಗೂ ಇದು ರೋಟೇಸಿಯೆಎಂಬ ಕುಟುಂಬಕ್ಕೆ ಸೇರಿದೆ. ಇದನ್ನು ಕನ್ನಡದಲ್ಲಿ ಬೇಲದ ಹಣ್ಣು ಅಥವಾ ಬೆಲ್ಲದ ಹಣ್ಣು ಎಂತಲೂ ಹಿಂದಿಯಲ್ಲಿ ಬೇಲ್ ಎಂದು , ತಮಿಳಿನಲ್ಲಿವೇಲುಝಾಂ, ತೆಲುಗಿನಲ್ಲಿ ವೆಲ್ಲಗ ಪಂಡು ಎಂದು ಕರೆಯುತ್ತಾರೆ. ಹಳ್ಳಿಗಳಲ್ಲಿ ಈ ಗಿಡವನ್ನುಹೊಲದ ಬದುಗಳ ಮೇಲೆ ಕೆರೆಗಳ ಹತ್ತಿರ ಹಾಗೂ ರಸ್ತೆಗಳ ಪಕ್ಕದಲ್ಲಿ ಕಾಣಸಿಗುತ್ತವೆ ಹಾಗೂ ಈ ಗಿಡದ ಎಲೆಗಳನ್ನು ಉಜ್ಜಿದರೆ ನಿಂಬೆ ಹಣ್ಣಿನಂತಹ ಘಮ ಬರುತ್ತದೆ. ಈ ಹಣ್ಣು ಗಟ್ಟಿಯಾದ ಹೊರಕವಚ ಹೊಂದಿದ್ದು, ಅದರ ಒಳಗೆ ಕಂದು ಬಣ್ಣದ ತಿರುಳನ್ನು ಹೊಂದಿದ್ದೆ ಹಾಗೂ ಅದರಲ್ಲಿ ಬಿಳಿ ಬಣ್ಣದ ಬೀಜ ಹೊಂದಿರುತ್ತದೆ.ಹಾಗೂ ತಿರುಳು ಹುಳಿಮಿಶ್ರಿತಸಿಹಿಯ ರುಚಿ ಹೊಂದಿದೆ.

ಈ ಹಣ್ಣು ಮಕ್ಕಳಲ್ಲಿ ಅವರ ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪಾತ್ರವಹಿಸುತ್ತದೆ. ಹಾಗೂ ಬೇಸಿಗೆಯಲ್ಲಿ ಈ ಹಣ್ಣಿನ ಪಾನಕ ಅಥವಾ ಹಣ್ಣಿನಜೊತೆ ಬೆಲ್ಲ ಸೇರಿಸಿ ತಿನ್ನುವುದರಿಂದ ದೇಹವನ್ನು ತಂಪಾಗಿರಿಸುತ್ತದೆ. ಈ ಹಣ್ಣನ್ನು ಬೆಲ್ಲದ ಜೊತೆ ಸೇರಿಸಿ ತಿನ್ನುವುದರಿಂದ ಜೀರ್ಣ ಕ್ರಿಯೆ ಉತ್ತಮಗೊಳಿಸುತ್ತದೆ.ಹಾಗೂ ಮಲಬದ್ಧತೆಗಳಂತ ಸಮಸ್ಯೆಗಳನ್ನು ನಿವಾರಿಸುತ್ತದೆ. ಹೊಟ್ಟೆಯಲ್ಲಾಗುವ ಅಲ್ಸರ್ಗಳಿಗೆ ಇದು ರಾಮ ಬಾಣವಾಗಿ ಕೆಲಸ ಮಾಡುತ್ತದೆ. ಇದರಲ್ಲಿನ ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನುಹೆಚ್ಚಿಸುತ್ತದೆ. ಇನ್ನು ಈ ಹಣ್ಣನು ಗರ್ಭಿಣಿ ಹೆಂಗಸರು ತಿನ್ನಬಾರದು ಸಿಪ್ಪೆ ಒರಟು ಆಗಿದ್ದರು ಒಳಗಡೆ ತಿರುಳು ಸವಿಯಲು ತುಂಬಾ ರುಚಿ. ಸುಮಾರು 9 ಮೀಟರ್ ದೊಡ್ಡ ಮರವಾಗಿದ್ದು ಹಣ್ಣು ಆದ ಮೇಲೆ ತಾನಾಗಿಯೇ ಉದುರಿ ಬೀಳುತ್ತವೆ.

ಇನ್ನೂ ಬೇಲದ ಕೃಷಿಯ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..
ಮೊದಲೇ ಹೇಳಿದಂತೆ ಈ ಹಣ್ಣು ಅಪಾರ ಔಷಧೀಯ ಗುಣವುಳ್ಳ ಆದ ಈ ಹಣ್ಣನ್ನು ಉತ್ತಮ ಮೌಲ್ಯವರ್ಧನೆ ಕ್ರಮ ಅನುಸರಿಸಿದರೆ ಬೇಲದ ಕೃಷಿಯಲ್ಲಿ ಒಳ್ಳೆ ಆದಾಯ ಪಡೆಯಬಹುದು.. ನಿಜ ಸ್ನೇಹಿತರೆ ಕಡಿಮೆ ಖರ್ಚಿನಲ್ಲಿ ಅಧಿಕ ಇಳುವರಿ ಪಡೆಯಬಹುದು . ಸಸಿ ಮಾಡಿದಕ್ಕೆ ಹಣ ಕರ್ಚು ಮಾಡುವುದರ ಹೊರತಾಗಿ ಇನ್ನೂ ಯಾವುದಕ್ಕೂ ಹಣ ವ್ಯಯಿಸುವ ಅಗತ್ಯ ಇಲ್ಲ. ಇವು ದೀರ್ಘ ಕಾಲ ಬೆಳೆಯುವ ಮರವಾಗಿದ್ದು ವರ್ಷಕ್ಕೆ ಕಿಂಟ್ವಲ್ ಗಟ್ಟಲೆ ಆದಾಯ ಇಳುವರಿ ಕೊಡುತ್ತದೆ.

ಬೇಲದ ಹಣ್ಣಿನ ಕೃಷಿ ಕೋರ್ಸ್ ಅಲ್ಲಿನ ಏನೆಲ್ಲಾ ತಿಳಿದು ಕೊಳ್ಳಬಹುದು ಅನ್ನೋದನ್ನು ನೋಡೋಣ.
ಬಂಡವಾಳ, ಹೂಡಿಕೆ ಬೇಲದ ಹಣ್ಣಿನ ತಳಿಗಳು ಹಣ್ಣಿನಲ್ಲಿ ಎಷ್ಟು ರೀತಿಯ ತಳಿಗಳು ಇವೆ ಹಾಗೂ ಅದಕ್ಕೆ ಯಾವ ರೀತಿಯ ಹವಾಮಾನ ಅಗತ್ಯವಿದೆ ಮತ್ತು ಯಾವ ರೀತಿಯ ಮಣ್ಣಿನಲ್ಲಿ ಮರ ಬೆಳೆಸಬಹುದು ಅದಕ್ಕೆ ಬೇಕಾದ ಅಗತ್ಯವಿರುವ ಗೊಬ್ಬರ, ಭೂಮಿ ನೀರಾವರಿ ಸೌಕರ್ಯ ಹವಾಮಾನ ನಾಟಿ ಪ್ರಕ್ರಿಯೆ ಯಾವ ರೋಗ ಕ್ಕೆ ಯಾವ ಕೀಟನಾಶಕ ಉಪಯೋಗಿಸಿ ನಿಯಂತ್ರಣ ಮಾಡ್ಬೇಕು ಮತ್ತು ಬೆಳೆ ಹೇಗೆ ಕಟಾವು ಮಾಡ್ಬೇಕು ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳಲು ನಮ್ಮ financial freedom application ಅನ್ನು dowlaod ಮಾಡಿರಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!