ನಮ್ಮ ಭಾರತೀಯ ಸೇನೆ ಅಂದ್ರೆ ಎಲ್ಲರು ಹೆಮ್ಮೆ ಪಡುವ ವಿಚಾರವೇ ಆಗಿದೆ, ನಾವುಗಳು ಯಾವಾಗಲೂ ಸುಖವಾಗಿ ನೆಮ್ಮದಿಯಿಂದ ನಿದ್ರೆ ಮಾಡುತ್ತಿರೋದು ಕೂಡ ನಮ್ಮ ಹೆಮ್ಮೆಯ ಸೈನಿಕರಿಂದ. ನಮ್ಮ ದೇಶದಲ್ಲಿ ಅಷ್ಟೇ ಅಲ್ದೆ ನಮ್ಮ ರಾಜ್ಯದಿಂದಲೂ ಕೂಡ ಬಳಹಷ್ಟು ಯುವಕರು ಸೇನೆ ಸೇರಿದ್ದಾರೆ ಭಾರತಾಂಬೆಯ ರಕ್ಷಣೆಗೆ ರಾತ್ರಿ ಹಗಲು ಶ್ರಮಿಸುತ್ತಿದ್ದಾರೆ. ಇವತ್ತಿನ ದಿನದಲ್ಲಿ ಯುವಕರು ಸೇನೆಗೆ ಸೇರಲು ಹೆಚ್ಚು ಆಸಕ್ತಿ ತೋರಿದರೆ ಇನ್ನು ಕೆಲವರಂತೂ ಸೇನೆಗೆ ಹೋಗೋಕೆ ತುದಿಗಾಲಲ್ಲಿ ಇರುತ್ತಾರೆ, ನಾವು ಕೂಡ ದೇಶಕ್ಕಾಗಿ ಏನಾದ್ರು ಮಾಡಬೇಕು ಅನ್ನೋ ಹಂಬಲ ಹೊಂದಿರುತ್ತಾರೆ.
ಇಲ್ಲೊಬ್ಬ ಯುವಕ ತಾನು ಹುಟ್ಟಿ ಬೆಳೆದಿದ್ದು ಬಡತನದಲ್ಲೇ ಆದ್ರೂ ತಾನು ಉತ್ತಮ ವಿದ್ಯಾಭ್ಯಾಸ ಮುಗಿಸಿ, ಅಮೆರಿಕಾದಂತ ಕಂಪನಿಯಲ್ಲಿ ಕೆಲಸ ಗಿಟ್ಟಿಸಿದ್ದ ಪ್ಯಾಕೆಜ್ ಲೆಕ್ಕದಲ್ಲಿ ಸಂಬಳ ಪಡೆಯುತ್ತಿದ್ದ. ಅಂತಹ ಕಾರ್ಪೊರೇಟ್ ಉದ್ಯೋಗವನ್ನು ಬಿಟ್ಟು ನಾನು ದೇಶಕ್ಕಾಗಿ ಏನಾದ್ರು ಮಾಡಬೇಕು ಅನ್ನೋ ಹಂಬಲದಿಂದ ಕೆಲಸ ಬಿಟ್ಟು ದೃಢ ನಿರ್ಧಾರದೊಂದಿಗೆ ಇಂಡಿಯನ್ ಆರ್ಮಿ ಸೇರಲು ಬಯಸಿ ಇಂಡಿಯನ್ ಆರ್ಮಿಯಲ್ಲಿ ಸ್ಥಾನಗಳಿಸುತ್ತಾರೆ.
ಹೆಸರು ಬರಣ್ಣ ಯಾದಗಿರಿ ಎಂಬುದಾಗಿ ಇಂಜಿನಿಯರಿಂಗ್ ಮುಗಿಸಿದ ಕೂಡಲೆ ಹೈದರಾಬಾದ್ ಐಐಟಿಯಲ್ಲಿ ಇಂಜಿನಿಯರಿಂಗ್ ಓದಿದ ಯಾದಗಿರಿ ಡಿಸೆಂಬರ್ 9ರಂದು ನಡೆದ ಇಂಡಿಯನ್ ಆರ್ಮಿ ಪಾಸಿಂಗ್ ಪೆರೇಡ್ನಲ್ಲಿ ತರಬೇತಿಯ ಭಾಗವಾಗಿ ಎಲ್ಲಾ ವಿಭಾಗಗಳಲ್ಲಿ ಮೆರಿಟ್ ಪಡೆದ ಯಾದಗಿರಿಗೆ ಸಿಲ್ವರ್ ಮೆಡಲ್ ದಕ್ಕಿತು ಆ ಸಂದರ್ಭದಲ್ಲಿ ಕೆಲವು ಮಧ್ಯಗಳು ಇವರನ್ನು ಸಂದರ್ಶನ ಮಾಡಿದಾಗ ಅವ್ರು ಈ ಸತ್ಯವನ್ನು ಹೇಳುತ್ತಾರೆ. ನನಗೆ ತಿಂಗಳಿಗೆ ಲಕ್ಷ ದುಡಿಯುವ ಉದ್ಯೋಗ ಸಿಕ್ಕಿದರು ಅದರ ಮುಂದೆ ನನ್ನ ಸೇನೆಯೇ ನನಗೆ ಮುಖ್ಯ ಅನಿಸಿತು ಆದ್ದರಿಂದ ಆ ಕೆಲಸ ಬಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸಬೇಕು ಅನ್ನೋ ಹಂಬಲದಿಂದ ನಾನು ಸೇನೆಗೆ ಸೇರಿದೆ ಎಂಬುದಾಗಿ ಹೇಳುತ್ತಾರೆ.
ಅದೇನೇ ಇರಲಿ ಇವತ್ತಿನ ದಿನಮಾನಗಳಲ್ಲಿ ಸೇನೆಗೆ ಸೇರಲು ಹಿಂದೆ ಮುಂದೆ ನೋಡುವ ಜನಗಳ ಮದ್ಯೆ ದೇಶ ಪ್ರೇಮವನ್ನು ಹಿಟ್ಟುಕೊಂಡು ದೇಶಕ್ಕಾಗಿ ತನ್ನ ಸೇವೆಯನ್ನು ಮುಡುಪಾಗಿಟ್ಟ ಈ ಯೋಧನಿಗೆ ನಮ್ಮ ಕಡೆಯಿಂದ ಬಿಗ್ ಸಲ್ಯೂಟ್.