ರೈತರಿಗೆ ತಮ್ಮ ಜಮೀನಿನಲ್ಲಿ ಕೃಷಿ ಬೆಳೆಗಳನ್ನು ಬೆಳೆಯಬೇಕು, ಪ್ರಾಣಿ ಸಾಕಾಣಿಕೆ ಮಾಡಬೇಕು ಹೀಗೆ ವಿವಿಧ ಯೋಜನೆಗಳು ಇರುತ್ತವೆ ಆದರೆ ಅವುಗಳನ್ನು ಪೂರೈಸಿಕೊಳ್ಳಲು ಹಣದ ಕೊರತೆ ಇರುತ್ತದೆ ಆದ್ದರಿಂದ ಬ್ಯಾಂಕ್ ನಿಂದ ಸಾಲ ಪಡೆದು ತಮ್ಮ ಕೃಷಿ ಯೋಜನೆಗಳನ್ನು ಪೂರೈಸಿಕೊಳ್ಳಬಹುದು. ಬ್ಯಾಂಕ್ ನಿಂದ ರೈತರಿಗೆ ಎಷ್ಟು ವಿಧದ ಲೋನ್ ಸಿಗುತ್ತದೆ, ಯಾವ ಯಾವ ಲೋನ್ ಸರಳವಾಗಿ ಸಿಗುತ್ತದೆ ಹಾಗೂ ಯಾವ ಯೋಜನೆಯಡಿ ಎಷ್ಟು ಮೊತ್ತದ ಹಣ ಸಾಲವಾಗಿ ಸಿಗುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ರೈತರಿಗೆ ಗೊತ್ತಿರುವುದು ಕ್ರಾಪ್ ಲೋನ್ ಅದನ್ನು ಹೊರತುಪಡಿಸಿ ಬ್ಯಾಂಕ್ ನಿಂದ ಅನೇಕ ಲೋನ್ ಗಳನ್ನು ಪಡೆಯಬಹುದು. ಜಮೀನಿಗೆ ಸಂಬಂಧಿಸಿ, ಕೃಷಿ ಉಪಕರಣಗಳನ್ನು ಖರೀದಿಸಲು ಅಥವಾ ಪ್ರಾಣಿ ಸಾಕಾಣಿಕೆ ಮಾಡಲು ಇಲ್ಲವೇ ಇತರೆ ಕೃಷಿ ಉದ್ದೇಶಗಳಿಗೆ ಲೋನ್ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಲೋನ್, ಇದು ರೈತರಿಗೆ ಬ್ಯಾಂಕ್ ನಿಂದ ಸಿಗುವ ಪ್ರಮುಖ ಲೋನ್ ಆಗಿದೆ. ಇದು ರೈತರಿಗೆ 3 ಲಕ್ಷ ರೂವರೆಗೆ ಸಾಲ ಸಿಗುತ್ತದೆ. ರೈತರಿಗೆ ಸಿಗುವ ಇನ್ನೊಂದು ಪ್ರಮುಖ ಲೋನ್ ಎಂದರೆ ಕ್ರಾಪ್ ಲೋನ್, ಇದು ರೈತರಿಗೆ 3 ಲಕ್ಷ ರೂವರೆಗೆ ಲೋನ್ ಸಿಗುತ್ತದೆ. ಅಗ್ರಿಕಲ್ಚರ್ ಗೋಲ್ಡ್ ಲೋನ್, ರೈತರು ತಮ್ಮ ಬಂಗಾರವನ್ನು ಅಡವಿಟ್ಟು ಈ ಲೋನ್ ತೆಗೆದುಕೊಳ್ಳಬಹುದು. ಕಿಸಾನ್ ಸುವಿಧಾ ಸ್ಕೀಮ್, ಈ ಯೋಜನೆಯಡಿ ಏಳು ಲಕ್ಷದವರೆಗೆ ರೈತರು ಬ್ಯಾಂಕ್ ನಿಂದ ಲೋನ್ ಪಡೆದುಕೊಳ್ಳಬಹುದು. ಕೃಷಿ ಮಿತ್ರ ಕಾರ್ಡ್ ಯೋಜನೆ, ಈ ಯೋಜನೆಯಡಿಯಲ್ಲಿ ಕೃಷಿ ಮಿತ್ರ ಕಾರ್ಡ್ ಮೂಲಕ 5 ಲಕ್ಷ ರೂವರೆಗೆ ರೈತರು ಲೋನ್ ಪಡೆಯಬಹುದಾಗಿದೆ. ಕಿಸಾನ್ ತತ್ಕಾಲ್ ಸ್ಕೀಮ್ ನ ಅಡಿಯಲ್ಲಿ ಒಬ್ಬ ರೈತನು 50,000 ರೂಪಾಯಿವರೆಗೆ ಬ್ಯಾಂಕ್ ನಿಂದ ಲೋನ್ ಪಡೆಯಬಹುದು. ಕಿಸಾನ್ ಆಲ್ ಪರ್ಪಸ್ ಟರ್ಮ್ ಲೋನ್, ರೈತರು ಈ ಸ್ಕೀಮ್ ನಡಿಯಲ್ಲಿ ತಮ್ಮ ಜಮೀನಿನಲ್ಲಿ ಮಾಡುವ ಎಲ್ಲಾ ಕೃಷಿ ಕಾರ್ಯಗಳಿಗೆ 20 ಲಕ್ಷ ರೂಪಾಯಿಗಳವರೆಗೆ ಬ್ಯಾಂಕ್ ನಿಂದ ಸಾಲ ಪಡೆಯಬಹುದು.
ಅಗ್ರಿಕಲ್ಚರ್ ಲೋನ್, ಕೃಷಿ ಸಾಲ ಈ ಸ್ಕೀಮ್ ನಡಿಯಲ್ಲಿ ರೈತರು ಬ್ಯಾಂಕ್ ನಿಂದ 10 ಲಕ್ಷ ರೂಪಾಯಿಗಳವರೆಗೆ ಸಾಲವನ್ನು ಪಡೆಯಬಹುದು. ತೋಟಗಾರಿಕೆ ಅಭಿವೃದ್ಧಿ ಸಾಲ, ಈ ಯೋಜನೆ ಅಡಿಯಲ್ಲಿ ರೈತರು ತಮ್ಮ ತೋಟದಲ್ಲಿ ಬೆಳೆಗಳನ್ನು ಬೆಳೆಯಲು, ಅಭಿವೃದ್ಧಿ ಮಾಡಿಕೊಳ್ಳಲು ಬ್ಯಾಂಕ್ ನಿಂದ ಸಾಲ ಪಡೆಯಬಹುದಾಗಿದೆ. ಹೊಲವನ್ನು ಸಮತಟ್ಟು ಮಾಡಲು ಲೋನ್, ಬ್ಯಾಂಕ್ ನಿಂದ ರೈತರು ತಮ್ಮ ಜಮೀನನ್ನು ಸಮತಟ್ಟು ಮಾಡಲು, ಕೃಷಿಯೋಗ್ಯ ಭೂಮಿಯನ್ನಾಗಿ ಮಾಡಿಕೊಳ್ಳಲು ಸಾಲ ಪಡೆಯಬಹುದಾಗಿದೆ. ಕೃಷಿ ಬೆಳೆಗಳನ್ನು ಬೆಳೆಯಲು ನೀರು ಬೇಕಾಗಿರುವುದರಿಂದ ಪಂಪ್ಸೆಟ್ ವ್ಯವಸ್ಥೆಗಾಗಿ ಪಂಪ್ಸೆಟ್ ಲೋನ್ ಮೂಲಕ ಬ್ಯಾಂಕ್ ನಿಂದ ಪಂಪ್ಸೆಟ್ ಖರೀದಿಸಲು 1 ಲಕ್ಷ ರೂವರೆಗೆ ಸಾಲವನ್ನು ಪಡೆಯಬಹುದು. ರೈತರು ತಮ್ಮ ಜಮೀನಿಗೆ ನೀರಾವರಿ ವ್ಯವಸ್ಥೆ ಮಾಡಿಕೊಳ್ಳಲು ಸೋಲಾರ್ ಪಂಪ್ಸೆಟ್ ವ್ಯವಸ್ಥೆಗಾಗಿ 10 ಲಕ್ಷ ರೂಪಾಯಿಗಳವರೆಗೆ ಬ್ಯಾಂಕ್ ನಿಂದ ಸಾಲವನ್ನು ಪಡೆಯಬಹುದು. ಡ್ರಿಪ್/ ಸ್ಪ್ರಿಂಕ್ಲರ್ ಇರಿಗೇಶನ್ ಲೋನ್ ಈ ಯೋಜನೆಯಡಿ ರೈತರು ತಮ್ಮ ಜಮೀನಿನಲ್ಲಿ ಡ್ರಿಪ್ ಮತ್ತು ಸ್ಪಿಂಕ್ಲರ್ ವ್ಯವಸ್ಥೆ ಮಾಡಿಕೊಳ್ಳಲು ಬ್ಯಾಂಕ್ ನಿಂದ ಸಾಲ ಪಡೆಯಬಹುದು. ರೈತರು ತಮ್ಮ ಜಮೀನನ್ನು ಅಭಿವೃದ್ಧಿಪಡಿಸಿಕೊಳ್ಳಲು ಕೃಷಿ ಯಂತ್ರೋಪಕರಣಗಳನ್ನು ಖರೀದಿಸುವ ಸಲುವಾಗಿ 20 ಲಕ್ಷ ರೂಪಾಯಿವರೆಗೆ ಸಾಲವನ್ನು ಕೃಷಿಕ್ಷೇತ್ರ ಯಂತ್ರೋಪಕರಣ ಸಾಲ ಈ ಯೋಜನೆಯಡಿ ಬ್ಯಾಂಕ್ ನಿಂದ ಪಡೆಯಬಹುದು. ರೈತರು ತಮ್ಮ ಜಮೀನಿನಲ್ಲಿ ಅರಣ್ಯ ಬೆಳೆಗಳನ್ನು ಬೆಳೆಯುವುದಾದರೆ ಅದಕ್ಕೂ ಸಹ ಬ್ಯಾಂಕ್ ನಿಂದ ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಪಶು ಸಾಕಾಣಿಕೆ ಮಾಡಿದವರು ಹಾಲಿನ ಡೇರಿ ಪ್ರಾರಂಭಿಸಲು 4 ಲಕ್ಷ ರೂವರೆಗೆ ಸಾಲ ಪಡೆಯಬಹುದು. ಕುರಿ-ಆಡು ಸಾಕಾಣಿಕೆ ಮಾಡುವುದಾದರೆ ರೈತರು ಬ್ಯಾಂಕ್ ನಿಂದ 50 ಸಾವಿರ ರೂದಿಂದ 30 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ. ರೈತರು ಕೋಳಿ ಮತ್ತು ಬಾತುಕೋಳಿ ಸಾಕಾಣಿಕೆ ಮಾಡಲು ಬ್ಯಾಂಕ್ ನಿಂದ 9 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಹಂದಿ ಸಾಕಾಣಿಕೆ ಮಾಡುವುದಾದರೆ ರೈತರು ಬ್ಯಾಂಕ್ ನಿಂದ 9 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದಾಗಿದೆ. ರೈತರು ಜೇನು ಸಾಕಾಣಿಕೆ ಮಾಡುವುದರಿಂದ ಹೆಚ್ಚು ಲಾಭವನ್ನು ಗಳಿಸಬಹುದು ಆದ್ದರಿಂದ ಜೇನು ಸಾಕಾಣಿಕೆ ಮಾಡಲು ಬ್ಯಾಂಕ್ ನಿಂದ 10 ಲಕ್ಷ ರೂಪಾಯಿವರೆಗೆ ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಮೀನು ಸಾಕಾಣಿಕೆ ಮತ್ತು ರೇಷ್ಮೆ ವ್ಯವಸಾಯ ಮಾಡಲು ಸಹಿತ ಬ್ಯಾಂಕ್ ನಿಂದ ಸಾಲ ಪಡೆಯಲು ರೈತರಿಗೆ ಅವಕಾಶ ನೀಡಲಾಗಿದೆ. ಕೃಷಿ ಮಾಡುವ ಮನಸ್ಸಿದೆ ಆದರೆ ಜಮೀನು ಇಲ್ಲದೆ ಇದ್ದವರು ಯೋಚನೆ ಮಾಡಬೇಕಾಗಿಲ್ಲ. ಕೃಷಿ ಉದ್ದೇಶಗಳಿಗೆ ಜಮೀನು ಖರೀದಿಸಲು ಬ್ಯಾಂಕ್ ನಿಂದ ಸಾಲ ಪಡೆಯಬಹುದಾಗಿದೆ. ಬ್ಯಾಂಕ್ ನಲ್ಲಿ ಯಾವುದೆ ಯೋಜನೆಯಡಿಯಲ್ಲಿ ಸಾಲ ತೆಗೆದುಕೊಳ್ಳುವುದಾದರೂ ಅವರು ಕೇಳಿದ ದಾಖಲಾತಿಗಳನ್ನು ಸರಿಯಾಗಿ ಸಲ್ಲಿಸಬೇಕಾಗುತ್ತದೆ. ಬೇರೆಬೇರೆ ಬ್ಯಾಂಕ್ ನಲ್ಲಿ ಸಾಲದ ಮೊತ್ತ ವ್ಯತ್ಯಾಸವಾಗಿರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲಾ ರೈತರಿಗೂ ತಿಳಿಸಿ, ಕೃಷಿ ಉದ್ದೇಶಗಳಿಗಾಗಿ ಸಾಲ ಪಡೆದು ಕೃಷಿಯನ್ನು ಅಭಿವೃದ್ಧಿಪಡಿಸಿಕೊಂಡು ಲಾಭವನ್ನು ಗಳಿಸಿರಿ.