Bank lone ಸ್ನೇಹಿತರೆ ಇತ್ತೀಚಿನ ದಿನಗಳಲ್ಲಿ ಇಂಟರ್ನೆಟ್ ನಲ್ಲಿ ಸ್ಕ್ಯಾಮ್ ಗಳು ಹಾಗೂ ಫ್ರಾಡ್ಗಳು ಹೆಚ್ಚಾಗುತ್ತಾ ಬಂದಿವೆ. ನಿಜಕ್ಕೂ ಕೂಡ ಯಾರದೋ ಮಾಹಿತಿಯನ್ನು ಕದ್ದು ಇನ್ಯಾವುದೋ ರೀತಿಯಲ್ಲಿ ಬಳಸಿಕೊಳ್ಳುವಂತಹ ವಿಧಾನ ಕೂಡ ಹೆಚ್ಚಾಗಿದೆ. ಕೆಲವೊಂದು ಕಡೆಗಳಲ್ಲಿ ಹೆಚ್ಚಾಗಿ ಹಣಕಾಸಿನ ಮೋಸ ನಡೆಯುವುದು ಕೂಡ ದಿನೇ ದಿನೇ ಜಾಸ್ತಿ ಆಗುತ್ತಿದೆ. ಇಂದು ನಾವು ರಾಮನಗರದಲ್ಲಿ ನಡೆದಿರುವಂತಹ ಒಂದು ಘಟನೆಯ ಕುರಿತಂತೆ ನಿಮಗೆ ಸಂಪೂರ್ಣ ವಿವರವಾಗಿ ಹೇಳಲು ಹೊರಟಿದ್ದೇವೆ.
ಒಬ್ಬ ವ್ಯಕ್ತಿಯ Bank Account ಬ್ಯಾಂಕ್ ಖಾತೆಯಲ್ಲಿ ಇದ್ದಿದ್ದೇ ಕೇವಲ ರೂ.200 ಮಾತ್ರ. ಆದರೆ ಅವರಿಗೆ ಮೊಬೈಲ್ ನಲ್ಲಿ 15 ರೂಪಾಯಿ ಕಡಿತಗೊಂಡಂತಹ ಮೆಸೇಜ್ ಬರುತ್ತದೆ. ಅವರು ಕಳೆದ ಬಾರಿಯ ವಿದ್ಯುತ್ ಬಿಲ್ ಅನ್ನು ನಿಗದಿತ ದಿನಾಂಕದ ನಂತರ ಕಟ್ಟಿದ್ದಕ್ಕಾಗಿ ಅದಕ್ಕೆ ಈ 15 ರೂಪಾಯಿಯನ್ನು ಕಡಿತಗೊಳಿಸಿರಬಹುದು ಎಂಬುದಾಗಿ ಭಾವಿಸಿ ಮೊಬೈಲ್ ಅನ್ನು ಮನೆಯಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ಮತ್ತೆ ಬಂದು ಮೊಬೈಲ್ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಅದೇನೆಂದರೆ ಅವರ ಮೊಬೈಲ್ ನಲ್ಲಿ ಹಣ ಡೆಬಿಟ್ ಆಗಿರುವಂತಹ ಮೆಸೇಜುಗಳು ಮೇಲಿಂದ ಮೇಲೆ ಬಂದಿದ್ದವು.
ಅವರು ಸರಿಯಾಗಿ ಚೆಕ್ ಮಾಡಿ ನೋಡಿದಾಗ ಅವರ ಖಾತೆಗೆ ಯಾವುದೇ ಹಣ ಬರದಿದ್ದರೂ ಕೂಡ ಆ ಡೀಟೇಲ್ಸ್ ನಲ್ಲಿ ಅವರಿಗೆ 17 ಲಕ್ಷಕ್ಕೂ ಅಧಿಕ ಹಣ ಕ್ರೆಡಿಟ್ ಆಗಿದೆ ಹಾಗೂ ಅದು ನಿರಂತರವಾಗಿ ಡೆಬಿಟ್ ಆಗುತ್ತಿದೆ ಎಂಬುದಾಗಿ ತೋರಿಸುತ್ತಿತ್ತು. ಅವರು ತಮ್ಮ ಪತ್ನಿಯ ಮೊಬೈಲ್ ಅನ್ನು ತೆಗೆದುಕೊಂಡು ಟ್ರಾನ್ಸ್ಯಾಕ್ಷನ್ ಮೆಸೇಜ್ ಬರುವುದನ್ನು ಬ್ಲಾಕ್ ಮಾಡುತ್ತಾರೆ. ನಂತರ ಆ ವಿಚಾರಗಳನ್ನು ಸರಿಯಾಗಿ ಚೆಕ್ ಮಾಡಿ ನೋಡಿದಾಗ ಬೇಸಿಕ್ ಡೀಟೇಲ್ಸ್ ಅವರದ್ದೇ ಆ ಖಾತೆಯ ಟ್ರಾನ್ಸ್ಯಾಕ್ಷನ್ ಗೆ ಹಾಕಿರುತ್ತಾರೆ. ಇನ್ನೂ ಇದು ಲೋನಿಂಗ್ ಆಪ್ ಮುಖಾಂತರ ಮಾಡಿರಲಾಗುತ್ತದೆ ಎಂಬುದಾಗಿ ತಿಳಿದು ಬರುತ್ತದೆ.
ಇದರ ಕುರಿತಂತೆ ಬಿಡದಿಯ ಬ್ಯಾಂಕಿಗೆ ಹಾಗೂ ಕ್ರೈಂ ಬ್ರಾಂಚ್ ಗೆ ದೂರು ನೀಡಿದಾಗ ಬ್ಯಾಂಕಿನಲ್ಲಿ ಅದಾಗಲೇ ನಿಮ್ಮ ಡೀಟೇಲ್ಸ್ ಆ ಲೋನಿಂಗ್ ಆಪ್ ನಲ್ಲಿ ಇದ್ದು ಅದು ಪ್ರೀ ಅಪ್ರೂವ್ ಆಗಿದೆ ಎಂಬುದಾಗಿ ಹೇಳುತ್ತಾರೆ. ಒಟ್ಟಾರೆಯಾಗಿ ಇಲ್ಲಿ ತಿಳಿದುಬರುವುದು ಏನೆಂದರೆ ಖಾತೆಯ ಹೋಲ್ಡರ್ ಗೆ ತಿಳಿಯದಂತೆ Bank app ಆ ಬ್ಯಾಂಕಿನ ಆಪ್ ಮೂಲಕ ಅವರಿಗೆ ಕೇವಲ ಬೇಸಿಕ್ ಡೀಟೇಲ್ ಅನ್ನು ತೆಗೆದುಕೊಂಡು ಲೋನ್ ಹೋಗಿದ್ದು ಟ್ರಾನ್ಸಾಕ್ಷನ್ ಕೂಡ ಅವರಿಗೆ ತಿಳಿಯದಂತೆ ಹ್ಯಾಕ್ ಮಾಡುವ ಮೂಲಕ ಮಾಡಲಾಗಿದೆ ಎಂಬುದಾಗಿ ತಿಳಿದು ಬರುತ್ತಿದ್ದು ಮುಂದಿನ ದಿನಗಳಲ್ಲಿ ವಿಚಾರಣೆ ನಡೆದು ಸಂಪೂರ್ಣ ಮಾಹಿತಿ ಹೊರಬರಬೇಕಾಗಿದೆ.