ಬ್ಯಾಂಕ್ನ ಸಿಇಒ ಆಗಿ ಕೆಲಸ ಮಾಡುತ್ತಿರುವ ಉದ್ಯಮಿಯೊಬ್ಬರು ಬಸ್ಸಿನ ಖರ್ಚಿಗೆ 500ರೂ ಸಾಲ ಕೊಟ್ಟಿದ್ದ ಶಿಕ್ಷಕನಿಗೆ 30 ಲಕ್ಷದ ಗಿಫ್ಟ್ ಕೊಟ್ಟ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಐಡಿಎಫಸಿ ಫಸ್ಟ್ ಎಂಡಿ ಮತ್ತು ಸಿಇಒ ಆಗಿರುವ ವಿ. ವೈದ್ಯನಾಥನ್ 30 ಲಕ್ಷ ಬೆಲೆಬಾಳುವ ಈಕ್ವಿಟಿ ಶೇರ್ಸನ್ನು ತಮ್ಮ ಗಣಿತ ಅಧ್ಯಾಪಕರಿಗೆ ಗಿಫ್ಟ್ ಮಾಡಿದ್ದಾರೆ. ತನ್ನ ಬದುಕಿನ ಆರಂಭದ ಹಂತದಲ್ಲಿ ತನಗೆ ನೆರವಾದ ಶಿಕ್ಷಕರಿಗೆ ಥ್ಯಾಂಕ್ಸ್ ಹೇಳಿದ ವೈದ್ಯನಾಥ್ ಇಂತಹದೊಂದು ಗಿಫ್ಟ್ ಕೊಟ್ಟಿದ್ದಾರೆ. ಬಿಇಟಿಎಸ್ನಲ್ಲಿ ವೈದ್ಯನಾಥನ್ಗೆ ಎಡ್ಮಿಷನ್ ಸಿಕ್ಕಿತ್ತು. ಕೌನ್ಸೆಲಿಂಗ್ ಫಾರ್ಮಾಲಿಟೀಸ್ ಹಾಗೂ ಇಂಟರ್ವ್ಯೂಗೆ ಹೋಗಲು ಆತನಲ್ಲಿ ಹಣವಿರಲಿಲ್ಲ. ವೈದ್ಯನಾಥನ್ನ ಆಗಿನ ಗಣಿತ ಶಿಕ್ಷಕ ಗರ್ಡಿಯಲ್ ಸೈನಿ ವಿದ್ಯಾರ್ಥಿಗೆ 500 ರೂಪಾಯಿ ಸಾಲ ಕೊಟ್ಟಿದ್ದರು. ವೈದ್ಯನಾಥನ್ ಚೆನ್ನಾಗಿ ಕಲಿತು ಔದ್ಯೋಗಿಕ ಜೀವನದಲ್ಲಿ ಮೇಲೆ ಬಂದರು.
ವೈದ್ಯನಾಥನ್ ತನ್ನ ಶಿಕ್ಷಕರನ್ನು ಹುಡುಕಿದ್ದರು ಆದರೆ ಕೆಲಸದ ನಿಮಿತ್ತ ವರ್ಗವಾಗಿ ಹೋಗಿದ್ದರಿಂದ ಶಿಕ್ಷಕರನ್ನು ಪತ್ತೆ ಮಾಡಲಾಗಲಿಲ್ಲ. ತುಂಬ ವರ್ಷಗಳ ನಂತರ ವೈದ್ಯನಾಥನ್ಗೆ ತನ್ನ ಸಹದ್ಯೋಗಿ ಮೂಲಕ ಶಿಕ್ಷಕನ ಬಗ್ಗೆ ಗೊತ್ತಾಯಿತು. ಈ ತಿಂಗಳ ಆರಂಭದಲ್ಲಿ ಬ್ಯಾಂಕ್ ಸಾಮಾನ್ಯ ಸ್ಟಾಕ್ ಎಕ್ಸ್ಚೇಂಜ್ ಫಿಲ್ಲಿಂಗ್ ಮಾಡಿತ್ತು. ವೈದ್ಯನಾಥನ್ ಅವರು ಐಡಿಎಫ್ಸಿ ಫಸ್ಟ್ ಬ್ಯಾಂಕ್ನಲ್ಲಿದ್ದ ಅವರ ವೈಯಕ್ತಿಕ ಶೇರ್ 1 ಲಕ್ಷದ ಈಕ್ವಿಟಿಯನ್ನು ಅವರ ಹಳೆಯ ಶಾಲೆಯ ಶಿಕ್ಷಕ ಗರ್ಡಿಯಲ್ ಸರೂಪ್ ಸೈನಿ ಅವರಿಗೆ ಉಡುಗೊರೆಯಾಗಿ ವರ್ಗಾಯಿಸಿದ್ದಾರೆ. ಈ ಸುದ್ದಿ ಸಿಗುತ್ತಲೇ ವೈದ್ಯನಾಥನ್ಗೆ ಪ್ರಶಂಸೆಯ ಮಹಾಪೂರವೇ ಹರಿದುಬಂದಿದೆ. ಇದು ಸುಂದರ ಕಥೆ ಎಂದು ಒಬ್ಬರು ಕಮೆಂಟ್ ಮಾಡಿದ್ದರೆ, ನಿಜವಾದ ಗುರು ಶಿಷ್ಯ ಸಂಬಂಧ ಇಂದಿನ ಕಾಲದಲ್ಲಿ ಕಾಣಲು ಸಾಧ್ಯವಿಲ್ಲ ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.