ಜೀವನದ ಅವಶ್ಯಕ ಅಂಶಗಳಲ್ಲಿ ಅತಿ ಅವಶ್ಯಕವಾದುದು ಆರೋಗ್ಯವಾಗಿದೆ. ಆರೋಗ್ಯವೇ ಭಾಗ್ಯ ಎಂಬ ನಾಣ್ಣುಡಿಯು ನೂರಕ್ಕೆ ನೂರರಷ್ಟು ನಿಜವಾಗಿದೆ. ಈಗಿನ ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯ ಬಹುಮುಖ್ಯವಾಗಿದೆ. ನಾವಿಂದು ಆರೋಗ್ಯ ವರ್ಧಕ ಪದಾರ್ಥಗಳಲ್ಲಿ ಒಂದಾದ ಬಾಳೆಹಣ್ಣಿನ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಋತುಗಳ ಸಂಬಂಧವಿಲ್ಲದೆ ಸಿಗುವ ಸಂಪದ್ಭರಿತ ಹಣ್ಣುಗಳಲ್ಲಿ ಬಾಳೆಹಣ್ಣು ಕೂಡ ಒಂದಾಗಿದೆ. ಬಾಳೆಹಣ್ಣನ್ನು ಇಷ್ಟ ಪಡದವರು ಬಹಳ ವಿರಳ ಅಂತಲೇ ಹೇಳಬಹುದು. ಬಾಳೆಹಣ್ಣು ಮನುಷ್ಯನ ಆರೋಗ್ಯದ ಸುಧಾರಣೆಗಾಗಿ ಸಹಕರಿಸುತ್ತದೆ. ಇದು ದೇಹದ ಭಾಗವಾದ ಹೃದಯ,ಕಣ್ಣು, ಮೂಳೆ, ಜಠರ, ಉದರ, ಕಿಡ್ನಿ ಹೀಗೆ ದೇಹದ ಪ್ರತಿಯೊಂದು ಭಾಗಕ್ಕೆ ತುಂಬ ಸಮರ್ಥವಾಗಿ ಪುಷ್ಠಿಯನ್ನು ನೀಡಿ ಉಪಕರಿಸುತ್ತದೆ.

ಹಿಂದೊಮ್ಮೆ ಆಪಲ್ ಅ ಡೇ ಕೀಪ್ಸ್ ಡಾಕ್ಟರ್ ಅವೇ ಎಂಬ ಮಾತಿತ್ತು. ಆದರೆ ಈಗ ಬನಾನಾ ಅ ಡೇ ಕೀಪ್ಸ್ ಡಾಕ್ಟರ್ ಅವೇ ಎಂಬ ಮಾತಾಗಿದೆ. ಹೀಗೆ ಬಾಳೆಹಣ್ಣು  ಜೀರ್ಣಕ್ರಿಯಾ ಸಂಬಂಧಿತ ವ್ಯಾಧಿಗಳಲ್ಲಿ ಸಾಕಷ್ಟು ಉತ್ತಮವಾದ ಕ್ರಿಯೆಗಳನ್ನು ಮಾಡಿ ವ್ಯಾಧಿಯನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ ಇದು ಮೂಳೆಗಳ ಬೆಳವಣಿಗೆ ಮಾಡುವಲ್ಲಿಯೂ ಸಹ ಉಪಕಾರಿಯಾಗಿದೆ.

ನಾವು ದಿನನಿತ್ಯ ಸೇವಿಸುವ ಪೌಷ್ಟಿಕಾಂಶ ಆಹಾರಗಳಾದ ಹಾಲು, ಬೀಜಗಳು, ಮೀನ, ತರಕಾರಿಗಳಿಗಿಂತಲೂ ಬಾಳೆಹಣ್ಣು ವಿಭಿನ್ನ ಹಾಗೂ ಫಲಕಾರಿ ಪದಾರ್ಥವಾಗಿದೆ. ಇದು ರಕ್ತದೊತ್ತಡ, ಸಕ್ಕರೆಖಾಯಿಲೆ, ಮಲದ್ಧತೆಯಿಂದ ಮುಕ್ತಿಹೊಂದಲು ಸಹಕಾರಿಯಾಗಿದೆ. ಅತ್ಯಂತ ಪೌಷ್ಟಿಕಾಂಶ ಹೊಂದಿರುವ ಈ ಬಾಳೆಹಣ್ಣು ದೇಹದ ಆರೋಗ್ಯ ವರ್ಧಿಸಲು ನೆರವಾಗುತ್ತದೆ. ಬಾಳೆಹಣ್ಣುಗಳಲ್ಲಿ ನಾವು ಯಾವ ವಿಧದ ಬಾಳೆಹಣ್ಣನ್ನಾದರು ಸೇವಿಸಬಹುದು. ಇನ್ನು ಪಕ್ವವಾದ ಬಾಳೆಹಣ್ಣು ಕರುಳಿನ ಬೀನೆಗೆ ಉತ್ತಮವಾಗಿದೆ. ಹಾಗೆಯೇ ಇದು ಮಲಬದ್ಧತೆಯನ್ನೂ ದೂರಮಾಡಲು ಸಹಕರಿಸುತ್ತದೆ.

ಭೇದಿ, ಸಂಧಿವಾತ, ರಕ್ತ ಹೀನತೆ ಹಾಗೂ ಕಿಡ್ನಿಯ ತೊಂದರೆಗಳಿಗೆ ಉಪಶಮನಕಾರಿಯಾಗಿ ಕೆಲಸ ಮಾಡುತ್ತದೆ. ಕೆನೆತೆಗೆದ ಹಾಲಿನಲ್ಲಿ ಬಾಳೆಹಣ್ಣನ್ನು ಸೇವಿಸುವುದರಿಂದ ದೇಹದ ಭಾರವನ್ನು ಕಡಿಮೆ ಮಾಡಿಕೊಳ್ಳಬಹುದಾಗಿದೆ. ಇದರಲ್ಲಿ ಕಬ್ಬಿಣಾಂಶ ಹೆಚ್ಚು ಇರುವುದರಿಂದ ದೇಹದಲ್ಲಿ ಹಿಮೋಗ್ಲೋಬಿನ್ ಹೆಚ್ಚಾಗಿ ಉತ್ಪತ್ತಿಯಾಗುತ್ತದೆ. ಹಾಗೆಯೇ ರಕ್ತದೊತ್ತಡ ಇರುವವರು ಬಾಳೆಹಣ್ಣು ಸೇವನೆ ಮಾಡುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಹೀಗೆ ಬಾಳೆಹಣ್ಣು ಸೇವನೆ ದೇಹದ ಆರೋಗ್ಯವನ್ನು ನಿಯಂತ್ರಿಸಿಕೊಳ್ಳಲು ಹಾಗೂ ವೃದ್ಧಿಸಿಕೊಳ್ಳಲು ಬಹಳ ಉಪಯುಕ್ತವಾಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!