Baloon Decoration Business In Kannada ಕಡಿಮೆ ಖರ್ಚಿನಲ್ಲಿ ಚಿಕ್ಕದೊಂದು ಉದ್ಯಮ ಮಾಡಲು ಯೋಚಿಸುತ್ತಿರುವ ಜನರಿಗೆ ಇದೀಗ ಒಂದು ಹೊಸ (New Idea) ಐಡಿಯಾ ಸಿಕ್ಕಿದ್ದು ಆ ಉದ್ಯಮ ಯಾವುದು ಎಂದು ಇಲ್ಲಿ ತಿಳಿಯೋಣ. (Baloon Decoration Business) ಮದುವೆ ರಿಸೆಪ್ಶನ್ (Birth day) ಬರ್ತಡೇ ಅಥವಾ ಯಾವುದಾದರೂ ಪಾರ್ಟಿ ಇತ್ಯಾದಿ ಕಾರ್ಯಕ್ರಮಗಳಲ್ಲಿ ಬಲೂನ್ ಡೆಕೋರೇಷನ್ ನನ್ನ ಗಮನಿಸಿರುತ್ತೀರಿ
ವಿಧವಿಧವಾದ ಬಣ್ಣಗಳಲ್ಲಿ ಹೊಸ ಹೊಸ ರೀತಿಯಲ್ಲಿ ಬಲೂನುಗಳನ್ನು ಹೆಣೆದು ಅಲಂಕರಿಸಿರುತ್ತಾರೆ ಇಂತಹ ಬಲೂನ್ ಡೆಕೋರೇಷನ್ (Baloon Decoration) ಮಾಡಲು ಬಹಳ ಖರ್ಚಾಗುತ್ತದೆ ಎಂದು ನಿಮ್ಮ ಊಹೆಯಲ್ಲಿ ಇರಬಹುದು ಆದರೆ ಇದಕ್ಕೆ ಅಷ್ಟೇನೂ ಖರ್ಚು ಉಂಟಾಗುವುದಿಲ್ಲ ಕಡಿಮೆ ಹೂಡಿಕೆಯಿಂದ ಒಳ್ಳೆಯ ಲಾಭವನ್ನು ಗಳಿಸಬಹುದು.
ಈ ಒಂದು ಬಿಸಿನೆಸ್ (Business) ನಲ್ಲಿ ಕೇವಲ ಎರಡು ಸಾವಿರದಷ್ಟು ಹೂಡಿಕೆ ಮಾಡಿ ಪ್ರತಿ ತಿಂಗಳು 15 ರಿಂದ 20 ಸಾವಿರ ರೂಗಳಷ್ಟು ಹಣ ಗಳಿಸಬಹುದು ಹಾಗಾದರೆ ಈ ಬಲೂನ್ ಬಿಸಿನೆಸ್ ಅನ್ನ ಹೇಗೆ ಮಾಡುವುದು ಇಲ್ಲಿ ನಾವು ತಿಳಿದುಕೊಳ್ಳೋಣ ಬಲೂನ್ ಬಿಸಿನೆಸ್ ಮಾಡಲು ಪ್ರಮುಖವಾಗಿ ನಿಮಗೆ ಎಲೆಕ್ಟ್ರಿಕ್ ಬಲೂನ್ ಅವಶ್ಯಕತೆ ಇರುತ್ತದೆ ಈ ಪಂಪು ಬಹಳ ದುಬಾರಿ ಏನಲ್ಲ ರೂ.1000 ದಿಂದ ಹೆಚ್ಚು ಕಡಿಮೆ ಈ ಗಾಳಿ ಊದುವ ಯಂತ್ರ ಗ್ರಾಹಕರಿಗೆ ದೊರೆಯುತ್ತದೆ
ಅಮೆಜಾನ್ (Amazon) ಫ್ಲಿಪ್ಕಾರ್ಟ್ (flipkart) ಇತ್ಯಾದಿ ಆನ್ಲೈನ್ ಮಾರ್ಕೆಟ್ ಗಳಲ್ಲಿ ಸಹ ಈ ಮಷೀನ್ ಲಭ್ಯವಾಗಿದೆ. ಇದರ ಜೊತೆಗೆ ಮುಖ್ಯವಾಗಿ ಬೇಕಾದ ಬಲೂನುಗಳನ್ನ ನೀವು ಹೋಲ್ ಸೇಲ್ ಆಗಿ ಖರೀದಿ ಮಾಡಬೇಕಾಗುತ್ತದೆ ಏಕೆಂದರೆ ಪ್ರತ್ಯೇಕವಾಗಿ ಖರೀದಿಸಿದರೆ ಬೆಲೆ ಹೆಚ್ಚಾಗುತ್ತದೆ ಇದು ಕೂಡ ಆನ್ಲೈನ್ ಮಾರ್ಕೆಟ್ ಗಳಲ್ಲಿ ಲಭ್ಯವಿದೆ ಈ ಮೂಲಕ ನೇರವಾಗಿ ಉತ್ಪಾದಕರಿಂದ ಯಾವುದೇ ಮಧ್ಯವರ್ತಿಯ ಪ್ರವೇಶವಿಲ್ಲದೆ ಬಲೂನ್ಗಳನ್ನು ಪಡೆಯಬಹುದು.
ಇನ್ನೂ ಬಲೂನುಗಳನ್ನ ಸಾಮಾನ್ಯ ದಾರದಲ್ಲಿ ಹೆಣೆಯಬಹುದು ಅವುಗಳನ್ನ ನಿಮಗೆ ಬೇಕಾದ ರೀತಿಯಲ್ಲಿ ಹೆಣೆದುಕೊಂಡು ಒಂದು ಫ್ಲೆಕ್ಸಿಬಲ್ ಸ್ಟಿಕ್ (Flexible stick) ನ ಮೂಲಕ ಬೇಕಾದ ರೀತಿಯಲ್ಲಿ ಅಲಂಕರಿಸಬಹುದು ಹೀಗೆ ಬಲೂನ್ ಬಿಸಿನೆಸ್ ಮಾಡುವುದರಿಂದ ಸುಲಭವಾಗಿ ಹಣ ಗಳಿಸಬಹುದು ಕಡಿಮೆ ಖರ್ಚಿನಲ್ಲಿ ಉತ್ತಮವಾದ ರೀತಿಯಲ್ಲಿ ಡೆಕೋರೇಷನ್ ಮಾಡಬಹುದು. ಇದನ್ನೂ ಓದಿ: Chiken And Egg: ಭೂಮಿಗೆ ಮೊದಲು ಮೊಟ್ಟೆ ಬಂತಾ? ಅಥವಾ ಕೋಳಿ ಬಂದಿದ್ದಾ ಕೊನೆಗೂ ಸಿಕ್ತು ನೋಡಿ ಉತ್ತರ