ಬೈಕ್ ನಲ್ಲಿ ವಿವಿಧ ವಿನ್ಯಾಸ, ಕಲರ್ ನ ಬೈಕ್ ಗಳಿವೆ. ಬೈಕ್ ತಯಾರಿಸುವ ಕಂಪನಿಗಳು ಸಾಕಷ್ಟಿವೆ ಒಂದು ಕಂಪನಿಯು ಬೇರೆ ಬೇರೆ ರೀತಿಯ ಬೈಕ್ ಗಳನ್ನು ತಯಾರಿಸುತ್ತದೆ. ಒಂದು ಪ್ರಮುಖ ಬೈಕ್ ಆದ ಬಜಾಜ್ ಸಿಟಿ 110 ಎಕ್ಸ್ ಬೈಕ್ ನ ಲಕ್ಷಣಗಳು, ಅದರ ಸಾಮರ್ಥ್ಯ ಮುಂತಾದ ಹಲವು ವಿಷಯಗಳ ಬಗ್ಗೆ ಈ ಲೇಖನದಲ್ಲಿ ನೋಡೋಣ.
ಬಜಾಜ್ ಸಿಟಿ 110 ಎಕ್ಸ್ ಈ ಬೈಕ್ ಉಳಿದ ಬೈಕ್ ಗಿಂತ ಸ್ವಲ್ಪ ವಿಭಿನ್ನವಾಗಿದೆ. ಈ ಬೈಕ್ ನ ಹೆಡ್ ಲೈಟ್ ಮತ್ತು ಟ್ಯಾಂಕ್ ಸಾಮರ್ಥ್ಯದಲ್ಲಿ ಬದಲಾವಣೆಗಳಿವೆ ಅಲ್ಲದೆ ಟೂರಿಂಗ್ ಬೈಕ್ ರೀತಿಯಲ್ಲಿ ತಯಾರಿಸಲಾಗಿದೆ. ಲಗೇಜ್ ಅನ್ನು ಬೈಕ್ ನ ಹಿಂದಗಡೆ ಕಟ್ಟಿದರೆ ಟೈಯರ್ ಗೆ ತಾಗುವುದಿಲ್ಲ ಆ ರೀತಿ ತಯಾರಿಸಲಾಗಿದೆ. ಹಿಂದ್ಗಡೆ ಟಾಪ್ ಬಾಕ್ಸ್ ಇದೆ. ಟೂರಿಂಗ್, ಅಡ್ವೆಂಚರ್ ಬೈಕ್ ಗಳಲ್ಲಿ ಇರುವಂತೆ ಹ್ಯಾಂಡಲ್ ಬಾರ್ ಈ ಬೈಕ್ ನಲ್ಲಿ ಇದೆ. ಟೂರಿಂಗ್ ಬೈಕ್ ನ ಲಕ್ಷಣ ಇದ್ದರೂ ಟೂರ್ ಮಾಡಲು ಈ ಬೈಕ್ ನಲ್ಲಿ ಹೋಗುವುದು ಸೇಫ್ ಅಲ್ಲ ಆದರೂ ಕೆಲವರು ಈ ಬೈಕ್ ನಲ್ಲಿ ರಿಸ್ಕ್ ತೆಗೆದುಕೊಂಡು ಟೂರ್ ಮಾಡಿದ್ದಾರೆ ಆದರೆ ನಂತರ ಬೈಕ್ ನ ಕಂಡೀಷನ್ ಸರಿಯಾಗಿ ಇರುವುದಿಲ್ಲ.
ಈ ಬೈಕ್ ಸಿಟಿಯಲ್ಲಿ ಓಡಿಸಲು ಉತ್ತಮವಾಗಿದೆ. ಈ ಬೈಕ್ ಹಾಲು ಮಾರುವವರಿಗೆ, ಡೆಲಿವರಿ ಜಾಬ್ ಜೋಮೇಟೋ, ಸ್ವಿಗ್ಗಿ ಜಾಬ್ ಮಾಡುವವರಿಗೆ ಉತ್ತಮ ಏಕೆಂದರೆ ಈ ಬೈಕ್ ಉತ್ತಮ ಮೈಲೇಜ್ ಕೊಡುತ್ತದೆ ಮತ್ತು ಬೈಕ್ ನ ಹಿಂದಗಡೆ ಲಗೇಜ್ ಕಟ್ಟಲು ವ್ಯವಸ್ಥೆ ಇರುತ್ತದೆ ಅಲ್ಲದೆ ಚೆನ್ನಾಗಿ ವರ್ಕೌಟ್ ಕೊಡುತ್ತದೆ. ಈಗ ಪೆಟ್ರೋಲ್ ಬೆಲೆ 100 ರೂಪಾಯಿ ಆಗಿರುವುದರಿಂದ ಈ ಬೈಕ್ ಮೈಲೇಜ್ ಕೊಡುತ್ತದೆ ಹಾಗಾಗಿ ಡೆಲಿವರಿ ಜಾಬ್ ಮಾಡುವವರಿಗೆ ಈ ಬೈಕ್ ಉತ್ತಮ. ಈ ಬೈಕ್ ನಾಲ್ಕು ಕಲರ್ ನಲ್ಲಿ ಸಿಗುತ್ತದೆ ಬ್ಲಾಕ್, ರೆಡ್, ಬ್ಲ್ಯೂ ಮತ್ತು ಗ್ರೀನ್ ಕಲರ್ ನಲ್ಲಿ ಸಿಗುತ್ತದೆ. ಈ ಬೈಕ್ 115 ಸಿಸಿಯ ಸಿಂಗಲ್ ಸಿಲಿಂಡರ್ ಏರ್ ಕೂಲ್ ಇಂಜಿನ್ ಆಗಿರುತ್ತದೆ. 8.6 ಪಿಎಚ್ಪಿ 7,000 ಆರ್ ಕೆಎಮ್ ಹಾಗೂ ನಾಲ್ಕು ಗೇರ್ ಗಳನ್ನು ಈ ಬೈಕ್ ನಲ್ಲಿ ನೋಡಬಹುದು. ಈ ಬೈಕ್ ನ ಟೈಯರ್ ಉತ್ತಮವಾಗಿರುತ್ತದೆ. ಈ ಬೈಕ್ ನ ಮಡ್ ಗಾರ್ಡ್ ಕ್ವಾಲಿಟಿಯದ್ದಾಗಿದೆ.
ಈ ಬೈಕ್ ನ ಬ್ರೇಕಿಂಗ್ ಸಿಸ್ಟಮ್ ಉತ್ತಮವಾಗಿದೆ ರೇರ್ ಬ್ರೇಕ್ ಅಪ್ಲೈ ಮಾಡಿದರೆ ಫ್ರಂಟ್ ಬ್ರೇಕ್ ಕೂಡ ತನ್ನಿಂದ ತಾನೆ ಅಪ್ಲೈ ಆಗುತ್ತದೆ. ಈ ಬೈಕ್ ನ ಸೀಟ್ ಸಿಂಗಲ್ ಸೀಟ್ ಡಿಸೈನ್ ಆಗಿರುತ್ತದೆ, ಸೀಟ್ ಉತ್ತಮವಾಗಿರುತ್ತದೆ ಅಲ್ಲದೆ ಉದ್ದವಾಗಿರುತ್ತದೆ. ಈ ಸೀಟ್ ಮೇಲೆ ಕುಳಿತುಕೊಳ್ಳಲು ಕಂಪರ್ಟ್ ಆಗುತ್ತದೆ. ಈ ಬೈಕ್ ನ ಗ್ರೌಂಡ್ ಫ್ಲೋರೆನ್ಸ್ 170 ಎಂಎಂ ಇರುತ್ತದೆ. ಇದಕ್ಕೆ ಬಂಪರ್ ಕೂಡ ಸ್ಟ್ರಾಂಗ್, ಅಗಲ ಹಾಗೂ ಉತ್ತಮವಾಗಿರುತ್ತದೆ. ಈ ಬೈಕ್ 11 ಲೀಟರ್ ಫುಲ್ ಟ್ಯಾಂಕ್ ಸಾಮರ್ಥ್ಯವನ್ನು ಹೊಂದಿದೆ ಪ್ರತಿ ಲೀಟರ್ ಗೆ 70-75 ಕಿಲೋಮೀಟರ್ ಮೈಲೇಜ್ ಕೊಡುತ್ತದೆ. ಈ ಬೈಕ್ 127 ಕೆಜಿ ತೂಕವನ್ನು ಹೊಂದಿದೆ, ಅಲ್ಲದೆ ಸ್ಪೀಡ್ ಚೆನ್ನಾಗಿದೆ. ಈ ಬೈಕ್ ಎಲ್ಇಡಿ ಡಿಆರ್ ಎಲ್ ಲೈಟ್ ಸಿಸ್ಟಮ್ ಹೊಂದಿದೆ. ಇಷ್ಟೊಂದು ವೈವಿಧ್ಯಮಯ ಲಕ್ಷಣಗಳನ್ನು ಹೊಂದಿರುವ ಈ ಬೈಕ್ ನ ಎಕ್ಸ್ ಶೋರೂಮ್ ಬೆಲೆ 55,000 ರೂಪಾಯಿ ಆಗಿರುತ್ತದೆ ಮತ್ತು ಆನ್ ರೋಡ್ ಪ್ರೈಸ್ 60 ಸಾವಿರದಿಂದ 70 ಸಾವಿರ ರೂಪಾಯಿವರೆಗೆ ಆಗಿರುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಂತ್ರಿಕ್ ರಾಘವೇಂದ್ರ ಭಟ್
ನಿಮ್ಮ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ ಮತ್ತು ನಿಮ್ಮ ಗುಪ್ತ ಸಮಸ್ಯೆಗಳಿಗೆ ಹಾಗೂ ಮನ ಇಚ್ಛಾಕಾರ್ಯ ನೆರವೇರಿಸಲು ಮತ್ತು ಸುಲಭ ಪರಿಹಾರಕ್ಕಾಗಿ ಇಂದೆ ಕರೆ ಮಾಡಿ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ತೊಂದರೆ, ವಿವಾಹದಲ್ಲಿ ತೊಂದರೆ ಸ್ತ್ರೀ-ಪುರುಷ ಪ್ರೇಮ ವಿಚಾರ, ಇಷ್ಟಪಟ್ಟವರು ನಿಮ್ಮಂತೆ ಆಗಲು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ ಉದ್ಯೋಗ, ವ್ಯವಹಾರದಲ್ಲಿ ತೊಂದರೆ, ಅತ್ತೆಸೊಸೆ ತೊಂದರೆ ಡೈವರ್ಸ್ ಪ್ರಾಬ್ಲಮ್ ಮಕ್ಕಳು ನಿಮ್ಮ ಮಾತು ಕೇಳಲು ಶತ್ರು ಬಾಧೆ, ಮಾಟಮಂತ್ರ ತಡೆ ಇನ್ನು ನಿಮ್ಮ ಜೀವನದ ಕಠಿಣ ಸಮಸ್ಯೆಗಳಿಗೆ ಕೇವಲ 2 ದಿನದಲ್ಲಿ ಪರಿಹಾರ ಶ್ರೀ ಅಂಬಾ ಭವಾನಿ ಜ್ಯೋತಿಷ್ಯಾಲಯ ಪಂಡಿತ್ ರಾಘವೇಂದ್ರ ಭಟ್ ಮೊಬೈಲ್ ನಂಬರ್ 9448001466