ಸಾಮಾನ್ಯವಾಗಿ ಎಲ್ಲರಿಗೂ ಅದರಲ್ಲೂ ಹುಡುಗರಿಗೆ ಬೈಕ್ ಕ್ರೇಜ್ ಇರುತ್ತದೆ. ಜೇಬಿನಲ್ಲಿ ಹಣ ಇದ್ದರೆ ಮಾತ್ರ ಸಾಲದು ಬೈಕ್ ಖರೀದಿಸುವಾಗ ಯಾವ ಬೈಕ್ ಮೈಲೇಜ್ ಕೊಡುತ್ತದೆ ಎಂಬುದರ ಬಗ್ಗೆ ತಿಳಿದಿರಬೇಕು. ಮಾರ್ಕೆಟ್ ನಲ್ಲಿ ನಾನಾವಿಧದ ಬೈಕ್ ಗಳು ಕಾಣಿಸುತ್ತವೆ ಆದರೆ ಬೈಕ್ ಖರೀದಿಸುವುದರಿಂದ ನಮಗೆ ಲಾಭ ಇರಬೇಕು ಅಂತಹ ಬೈಕ್ ಅನ್ನು ಖರೀದಿಸಬೇಕು. ಅಂತಹ ಬೈಕ್ ಗಳಲ್ಲಿ ಒಂದಾದ ಬಜಾಜ್ ಸಿಟಿ 110 ಎಕ್ಸ್ ಬೈಕ್ ನ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಬಜಾಜ್ ಸಿಟಿ 110 ಎಕ್ಸ್ ಈ ಬೈಕ್ ಹೊಸದಾಗಿ ಮಾರುಕಟ್ಟೆಗೆ ಬಂದಿದೆ. ಎತ್ತರ ಇರುವವರಿಗೆ ಈ ಬೈಕ್ ನಲ್ಲಿ ಸೀಟ್ ಹೈಟ್ ಇದೆ ಮತ್ತು ಉದ್ದವಾಗಿದೆ, 170 mm ಗ್ರೌಂಡ್ ಕ್ಲಿಯರೆನ್ಸ್ ಇದೆ. ಟೂರ್ ಹೋಗಲು ಈ ಬೈಕ್ ಒಳ್ಳೆಯ ಬೈಕ್ ಆಗಿದೆ. ಬೈಕ್ ನ ಹಿಂದಗಡೆ ಲಗೇಜ್ ಕಟ್ಟಿಕೊಳ್ಳಲು ವ್ಯವಸ್ಥೆ ಇದೆ. ಎಲ್ಇಡಿ ಡಿಆರ್ ಎಲ್ ಹೆಡ್ ಲೈಟ್ ಇದೆ. 115 ಸಿಸಿ, 8.6 ಬಿಎಚ್ ಪಿ, 9.81 nm ಹೊಂದಿದೆ. ಈ ಬೈಕ್ ನ ಮಿರರ್ ವಿಸಿಬಿಲಿಟಿ ಕೂಡ ಚೆನ್ನಾಗಿದೆ. 4 ಗೇರ್ ಹೊಂದಿದೆ. ಈ ಬೈಕ್ ಓಡಿಸುವಾಗ ವೈಬ್ರೇಟ್ ಆಗುತ್ತದೆ.

ಬಜಾಜ್ ಸಿಟಿ 110 ಎಕ್ಸ್ ಬೈಕ್ ಅನ್ನು 150ರಿಂದ 200 ಕಿಲೋಮೀಟರ್ ಓಡಿಸಬಹುದು. ಈ ಬೈಕ್ ಹೆಚ್ಚು ಮೈಲೇಜ್ ಕೊಡುತ್ತದೆ. ಈ ಬೈಕ್ ನಲ್ಲಿ ಒಂದು ಲೀಟರ್ ಪೆಟ್ರೋಲ್ ಹಾಕಿಸಿದರೆ 78- 80 ಕಿಲೋಮೀಟರ್ ಮೈಲೇಜ್ ಸಿಗುತ್ತದೆ. ಬಜಾಜ್ ಸಿಟಿ ಒನ್ ಟೆನ್ ಬೈಕ್ ಎಕ್ಸ್ ಶೋರೂಮ್ ಬೆಲೆ ಅರವತ್ತೆರಡು ಸಾವಿರ ರೂಪಾಯಿ, ಆನ್ ರೋಡ್ ಪ್ರೈಸ್ 80,000 ರೂಪಾಯಿ. ಈ ಬೈಕ್ ಟ್ಯಾಂಕ್ ಸಾಮರ್ಥ್ಯ 9-10 ಲೀಟರ್, ಕಾರ್ಬೋರೇಟ್ ಇಂಜಿನ್ ಹೊಂದಿದೆ.

ಈ ಬೈಕ್ ನ ಬ್ರೇಕಿಂಗ್ ಸಿಸ್ಟಮ್ ಬಹಳ ಉತ್ತಮವಾಗಿದೆ. ಈ ಬೈಕ್ ನಲ್ಲಿ ಸ್ಪೀಡಾಗಿ ಕೂಡ ಹೋಗಬಹುದು ಹಾಗೆಯೇ ಈ ಬೈಕ್ ನಲ್ಲಿ ಅತಿಯಾದ ಸ್ಪೀಡ್ ಹೋಗಬಾರದು. ಈ ಬೈಕ್ ನಲ್ಲಿ ಟರ್ನಿಂಗ್ ಮಾಡಲು ಸುಲಭವಾಗಿದೆ. ಈ ಬೈಕ್ ಗೆ ಬಜಾಜ್ ಆಯಿಲ್ ಹಾಕಬೇಕು ಒಂದು ಲೀಟರ್ ಗೆ 75,000 ಕಿಮೀ ವಾರೆಂಟಿ ಇರುತ್ತದೆ, ಐದು ಸಾವಿರ ಕಿಲೋಮೀಟರ್ ಗೆ ಒಂದು ಸಾರಿ ಸರ್ವಿಸ್ ಗೆ ಕೊಡಬಹುದು. ಬೈಕ್ ನಲ್ಲಿ ಫ್ಯೂಯೆಲ್ ಗೇಜ್, ಸ್ಪೀಡ್ ಮೀಟರ್, ಓಡೊ, ಇಂಡಿಕೇಟರ್ ಇತರೆ ಆಯ್ಕೆಗಳಿವೆ. ಕೆಲವರಿಗೆ ಮೊದಲಿರುವ ಬೈಕ್ ಡಿಸೈನ್ ಇಷ್ಟ ಆಗಿದೆ, ಹೊಸದಾಗಿ ಬಂದಿರುವ ಡಿಸೈನ್ ಇಷ್ಟ ಆಗಲಿಲ್ಲ. ಇನ್ನು ಕೆಲವರಿಗೆ ಈ ಬೈಕ್ ನ ಡಿಸೈನ್ ಬಹಳ ಇಷ್ಟವಾಗಿದೆ.

ಇತ್ತೀಚಿನ ದಿನಗಳಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿರುವುದರಿಂದ ಈ ಬೈಕ್ ಮೈಲೇಜ್ ಕೊಡುವುದರಿಂದ ಖರೀದಿಸುವುದು ಉತ್ತಮ. 4 ಬಣ್ಣದಲ್ಲಿ ಈ ಬೈಕ್ ಸಿಗುತ್ತದೆ, ಕೆಂಪು, ಕಪ್ಪು, ನೀಲಿ ಹಳದಿ ಮಿಶ್ರಿತ ಬಣ್ಣಗಳಲ್ಲಿ ಸಿಗುತ್ತದೆ. ಬಜಾಜ್ ಶೋರೂಮ್ ನಲ್ಲಿ ಈ ಬೈಕ್ ಗೆ ಉತ್ತಮ ಸರ್ವಿಸ್ ಸಿಗುತ್ತದೆ.

ಬೈಕ್ ಖರೀದಿಸುವ ಮನಸ್ಸಿದ್ದರೆ ಬಜಾಜ್ ಸಿಟಿ 110 ಎಕ್ಸ್ ಬೈಕ್ ಅನ್ನು ಖರೀದಿಸಿ. ಹೆಚ್ಚಿನ ಬೆಲೆಗೆ ಸರಿಯಾದ ವ್ಯವಸ್ಥೆ ಇಲ್ಲದ ಬೈಕ್ ಖರೀದಿಸುವುದಕ್ಕಿಂತ ಬಜಾಜ್ ಸಿಟಿ 110 ಎಕ್ಸ್ ಬೈಕ್ ಲಗೇಜ್ ಹಾಕಲು ಕೂಡ ಅನುಕೂಲವಾಗುತ್ತದೆ ಅಲ್ಲದೆ ಉತ್ತಮ ಮೈಲೇಜ್ ಕೊಡುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ಉತ್ತಮ ಬೈಕ್ ಅನ್ನು ಖರೀದಿಸಿ.

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!