ಇಂಜಿನಿಯರ್ ಕೆಲಸ ಬಿಟ್ಟು ಹಳ್ಳಿಗೆ ಬಂದು ಅಡಿಕೆ ಪ್ಲೇಟ್ ಬಿಸಿನೆಸ್ ನಿಂದ, ಒಳ್ಳೆ ಆಧಾಯಗಳಿಸುತ್ತಿರುವ ದಂಪತಿ

Uncategorized
ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

ಪ್ರತಿಯೊಬ್ಬರಿಗೂ ತಮ್ಮ ಜೀವನದಲ್ಲಿ ತಾವೇನಾದರೂ ಸ್ವಂತವಾಗಿ ಉದ್ಯೋಗವನ್ನು ಮಾಡಿ ಜೀವನದಲ್ಲಿ ಮುಂದೆ ಬರಬೇಕೆಂಬ ಕನಸು ಇರುತ್ತದೆ ಆದರೆ ಯಾವ ರೀತಿಯ ಉದ್ಯೋಗವನ್ನು ಮಾಡಬೇಕು ಹೇಗೆ ಮುಂದೆ ಬರಬೇಕು ಎಂಬುದು ಗೊಂದಲ ಇರುತ್ತದೆ. ಆದರೆ ಸ್ವಂತ ಉದ್ಯೋಗವನ್ನು ಮಾಡಿ ತಮ್ಮ ಕಾಲ ಮೇಲೆ ತಾವು ನಿಂತು ಯಶಸ್ಸನ್ನು ಕಂಡಂತ ವ್ಯಕ್ತಿಗಳು ತುಂಬಾ ಜನರಿದ್ದಾರೆ ಅವರಲ್ಲಿ ರಾಮನಗರ ಜಿಲ್ಲೆಯ ರೂಪ ಮತ್ತು ಸುದರ್ಶನ್ ಎಂಬ ದಂಪತಿಗಳು ಒಬ್ಬರು.ನಾವು ನಿಮಗೆ ಅವರು ಮಾಡುತ್ತಿರುವ ಉದ್ಯೋಗದ ಬಗ್ಗೆ ತಿಳಿಸಿಕೊಡುತ್ತೇವೆ.

ರಾಮನಗರ ಜಿಲ್ಲೆಯ ಪಂಚಶೆಟ್ಟಿಹಳ್ಳಿಯಲ್ಲಿ ಓ ಎನ್ ಎಸ್ ಗ್ರೀನ್ ಪ್ರೋಡಕ್ಟ್ ಎನ್ನುವ ಅಡಿಕೆಎಲೆ (ಹಾಳೆ) ಪ್ಲೇಟ್ ಗಳನ್ನು ತಯಾರಿಸುವ ಉದ್ಯಮವನ್ನು ರೂಪ ಮತ್ತು ಸುದರ್ಶನ್ ಎಂಬ ದಂಪತಿಗಳು ನಡೆಸುತ್ತಿದ್ದಾರೆ. ಇವರು ಈ ಉದ್ಯಮವನ್ನು ಪ್ರಾರಂಭಿಸಿ ಒಂದು ವರ್ಷದ ನಾಲ್ಕು ತಿಂಗಳುಗಳಾಗಿವೆ ಮೊದಲಿಗೆ ಬೆಂಗಳೂರಿನಲ್ಲಿ ವಾಸವಿದ್ದಂತಹ ಈ ದಂಪತಿಗಳು ತಮ್ಮದೇ ಆದ ಸ್ವಂತ ಉದ್ಯಮವನ್ನು ಸ್ಥಾಪಿಸುವ ಉದ್ದೇಶದಿಂದ ರಾಮನಗರಕ್ಕೆ ಬಂದು ತಮ್ಮ ಸ್ವಂತ ಜಾಗದಲ್ಲಿ ಉದ್ಯಮವನ್ನು ಪ್ರಾರಂಭಿಸುತ್ತಾರೆ.

ಇವರು ಮೊದಲು ಈ ಉದ್ಯಮವನ್ನು ಸ್ಥಾಪನೆ ಮಾಡುವುದಕ್ಕೆ ಅದಕ್ಕೆ ಬೇಕಾದ ಯಂತ್ರಗಳನ್ನು ಎಲ್ಲಾ ಕಡೆ ಹುಡುಕುತ್ತಿದ್ದರು ತುಮಕೂರಿನಲ್ಲಿ ಇವರ ಸ್ನೇಹಿತರ ಬಳಿ ಯಂತ್ರಗಳನ್ನು ಖರೀದಿ ಮಾಡುತ್ತಾರೆ. ಇವರು ಒಟ್ಟು ಎಂಟು ಯಂತ್ರಗಳನ್ನು ಗಳನ್ನು ತೆಗೆದುಕೊಂಡಿದ್ದಾರೆ ಅದರಲ್ಲಿ ಎರಡು ಹನ್ನೆರಡುಡೈ ಮಷೀನ್ ಗಳನ್ನು ಎರಡು ಹತ್ತುಡೈ ಮಷೀನ್ ಗಳನ್ನು ಎರಡು ಎಂಟುಡೈ ಮಷೀನ್ ಗಳನ್ನು ಮತ್ತು ಎರಡು ಬೊಲ್ ಮಷೀನ್ ಗಳನ್ನು ತೆಗೆದುಕೊಂಡಿದ್ದಾರೆ. ಅವರು ಸ್ಥಳೀಯವಾಗಿ ರಾಮನಗರದಲ್ಲಿ ಬೇಡಿಕೆ ಇರುವಂತಹ ಪ್ಲೇಟ್ ಯಂತ್ರಗಳನ್ನು ಹಾಕಿಸಿಕೊಂಡಿದ್ದಾರೆ. ಇವರು ಕೇವಲ ಯಂತ್ರಗಳಿಗಾಗಿಯೇ ಹದಿನೈದು ಲಕ್ಷ ರೂಪಾಯಿ ಹಣವನ್ನು ಖರ್ಚು ಮಾಡಿದ್ದಾರೆ.

ಇವರು ಅಡಿಕೆ ಮರೆಯದ ಎಲೆಗಳನ್ನು ಎರಡು ರೂಪಾಯಿ ಹತ್ತು ಪೈಸೆಗೆ ತೆಗೆದುಕೊಳ್ಳುತ್ತಾರೆ ಅಕ್ಕಪಕ್ಕದವರ ತೋಟದಲ್ಲಿ ಸಿಗುವ ಅಡಿಕೆ ಎಲೆಗಳಿಗೆ ಒಂದು ರೂಪಾಯಿ ಕೊಟ್ಟು ತೆಗೆದುಕೊಳ್ಳುತ್ತಾರೆ. ಹತ್ತಿರದಲ್ಲೇ ಸಿಗುವಂತಿದ್ದರೆ ಇವರೇ ಹೋಗಿ ದುಡ್ಡು ಕೊಟ್ಟು ಅವುಗಳನ್ನು ನೋಡಿ ಖರೀದಿ ಮಾಡುತ್ತಾರೆ ಬೇರೆ ಜಿಲ್ಲೆಯವರು ಇವರ ಫ್ಯಾಕ್ಟರಿ ಇರುವ ಸ್ಥಳಕ್ಕೆ ತಂದು ಕೊಡುತ್ತಾರೆ. ಕೆಲವೊಂದು ಸಾರಿ ಬರುವ ಅಡಿಕೆ ಎಲೆಗಳ ಕಟ್ಟಿನಲ್ಲಿ ಹಾಳದ ಎಲೆಗಳು ಬಂದಿರುತ್ತವೆ

ಚಿಕ್ಕ ಚಿಕ್ಕ ಎಲೆಗಳನ್ನು ಮದ್ಯದಲ್ಲಿ ಹಾಕಿ ಕಟ್ಟಿರುತ್ತಾರೆ ಹಾಗೆ ಮಾಡುವುದರಿಂದ ಇವರಿಗೆ ಸ್ವಲ್ಪ ಲಾಸ್ ಆಗುತ್ತದೆ. ಸ್ಥಳೀಯವಾಗಿ ಸಿಗುವ ಅಡಿಕೆ ಎಲೆಗಳನ್ನು ಇವರು ಅಲ್ಲಿ ಹೋಗಿ ಅವುಗಳನ್ನು ಪರಿಶೀಲಿಸಿ ಚೆನ್ನಾಗಿ ಇರುವ ಹಾಳೆಗಳನ್ನು ತೆಗೆದುಕೊಂಡು ಬರುತ್ತಾರೆ ಆದರೆ ಹೊರಜಿಲ್ಲೆಗಳಿಂದ ಬರುವಂತಹ ಎಲೆಗಳ ಕಟ್ಟಿನಲ್ಲಿ ಕೆಲವೊಂದು ಸಾರಿ ಹಾಳಾದ ಎಲೆಗಳು ಕೂಡ ಮಿಕ್ಸ್ ಆಗಿರುತ್ತವೆ.

ಇವರು ಹೇಳುವ ಪ್ರಕಾರ ಎಲೆಗಳನ್ನು ಮಾರಾಟ ಮಾಡುವವರು ಎಲೆಗಳು ಮಳೆಯಲ್ಲಿ ನೆನೆಯದಂತೆ ಅದನ್ನು ನೋಡಿಕೊಳ್ಳಬೇಕು ಅವುಗಳ ಮೇಲೆ ಯಾವುದೇ ರೀತಿಯ ಫಂಗಸ್ ಆಗದಂತೆ, ಆಗದ ರೀತಿಯಲ್ಲಿ ಶೇಖರಣೆಯನ್ನು ಮಾಡಿರಬೇಕು ಯಾಕೆಂದರೆ ಫಂಗಲ್ ಬಂದಿರುವಂತಹ ಎಲೆಗಳನ್ನು ಇವರು ತೆಗೆದುಕೊಳ್ಳುವುದಿಲ್ಲ. ಇವರು ಎಲೆಗಳನ್ನು ಖರೀದಿ ಮಾಡಿದ ನಂತರ ಅದರಲ್ಲಿ ಹಸಿ ಎಲೆಗಳು ಇದ್ದರೆ ಅದನ್ನು ಎರಡು ದಿನ ಬಿಸಿಲಿನಲ್ಲಿ ಹಾಕಿ ಚೆನ್ನಾಗಿ ಒಣಗಿಸುತ್ತಾರೆ ನಂತರ ಅದನ್ನು ಮೋಯಿಶ್ಚರ್ ಫ್ರೀ ಕಂಡಿಶನ್ ನಲ್ಲಿ ಶೇಖರಣೆ ಮಾಡುತ್ತಾರೆ.

ನಂತರ ಅವುಗಳನ್ನು ಬಳಕೆ ಮಾಡುವುದಕ್ಕಿಂತ ಮೊದಲು ತುಂಬಾ ಒಣಗಿರುವ ಹಾಳೆಗಳನ್ನು ಐದರಿಂದ ಹತ್ತು ನಿಮಿಷ ತೊಟ್ಟಿಯ ನೀರಿನಲ್ಲಿ ನೆನೆಸುತ್ತಾರೆ ಅದರ ಮೇಲೆ ಇರುವ ಧೂಳಿನ ಕಣಗಳನ್ನು ತೊಳೆಯುವುದಕ್ಕಾಗಿ ಹೈ ಪ್ರೆಸ್ಸರ್ ಪಂಪನಿಂದ ಅದನ್ನು ಶುಚಿಗೊಳಿಸುತ್ತಾರೆ ಹೀಗೆ ಮಾಡುವುದರಿಂದ ಆ ಹಾಳೆಗಳ ಮೇಲೆ ಯಾವುದೇ ರೀತಿಯ ಧೂಳಿನ ಕಣಗಳು ಉಳಿದುಕೊಳ್ಳುವುದಿಲ್ಲ.

ಇನ್ನು ಇವರು ಯಾವ ಯಾವ ಅಳತೆಯ ಪ್ಲೇಟುಗಳನ್ನು ತಯಾರಿ ಮಾಡುತ್ತಾರೆ ಎಂದರೆ ಐದೂವರೆ ಇಂಚಿನ ಬೌಲ್ ಆರು ಇಂಚಿನ ಬೌಲ್ ಎಂಟು ಇಂಚಿನ ಪ್ಲೇಟನ್ನು ಹತ್ತು ಇಂಚಿನ ಪ್ಲೇಟನ್ನು ಮತ್ತು ಹನ್ನೆರಡು ಇಂಚಿನ ಪ್ಲೇಟುಗಳನ್ನು ಈ ರೀತಿಯಾಗಿ ಐದು ರೀತಿಯಲ್ಲಿ ಪ್ಲೇಟ್ ಗಳನ್ನು ಉತ್ಪಾದನೆ ಮಾಡುತ್ತಾರೆ. ಇದರಲ್ಲಿ ಹನ್ನೆರಡು ನಂಬರಿನ ಪ್ಲೇಟ್ಗಳು ಊಟಕ್ಕೆ ಬಳಸಬಹುದು ಅದಕ್ಕಿಂತ ಸ್ವಲ್ಪ ಚಿಕ್ಕದಾದ ಹತ್ತು ನಂಬರಿನ ಪ್ಲೇಟನ್ನು ತಿಂಡಿಗೆ ಬಳಸಬಹುದು ಎಂಟು ನಂಬರಿನ ಪ್ಲೇಟನ್ನು ಒಂದು ಆಹಾರ ಪದಾರ್ಥವನ್ನು ಅಥವಾ ಸ್ವೀಟ್ ಗಳನ್ನು ಹಾಕಿ ಕೊಡುವುದಕ್ಕೆ ಬಳಸುತ್ತಾರೆ ಆರು ನಂಬರಿನ ಪ್ಲೇಟ್ಗಳು ಪಾನಿಪುರಿಗೆ ಹೋಗುತ್ತವೆ ಜೊತೆಗೆ ಮಾಂಸದ ಊಟಕ್ಕೆ ಬೌಲ್ ರೀತಿಯಲ್ಲಿ ಹೋಗುತ್ತವೆ ಐದೂವರೆ ಇಂಚಿನ ಬೌಲ್ ಗಳು ಕೂಡ ಪಾನಿಪುರಿಗೆ ಹೋಗುತ್ತದೆ. ಇವರು ಪ್ಲೇಟುಗಳನ್ನು ತಯಾರಿಸುವಾಗ ಅನೇಕ ಪ್ಲೇಟುಗಳು ಹಾಳಾಗುತ್ತವೆ ಅವುಗಳನ್ನು ಪ್ಯಾಕಿಂಗ್ ಮಾಡುವ ಸಮಯದಲ್ಲಿ ತೆಗೆದು ಒಳ್ಳೆಯದಾಗಿ ಇರುವಂತಹ ಪ್ಲೇಟ್ ಗಳನ್ನು ಮಾತ್ರ ಪ್ಯಾಕಿಂಗ್ ಮಾಡುತ್ತಾರೆ.

ಇವರು ಮುಂದಿನ ದಿನಗಳಲ್ಲಿ ಹೆಚ್ಚು ಹೆಚ್ಚು ಪ್ಲೇಟುಗಳನ್ನು ಉತ್ಪಾದನೆ ಮಾಡಿ ಅದನ್ನು ಮಾರಾಟ ಮಾಡುವ ಉದ್ದೇಶವನ್ನು ಹೊಂದಿದ್ದಾರೆ ಈಗ ಇವರು ಪ್ರಸ್ತುತ ಒಂದು ದಿನಕ್ಕೆ ಮೂರು ಸಾವಿರದಿಂದ ನಾಲ್ಕು ಸಾವಿರ ಎಲೆಗಳನ್ನು ಉಪಯೋಗಿಸುತ್ತಾರೆ.ಪ್ಲೇಟುಗಳನ್ನು ಯಂತ್ರದಿಂದ ಹೊರತೆಗೆದ ನಂತರ ಅದನ್ನು ಚೆನ್ನಾಗಿ ಬಟ್ಟೆಯಿಂದ ಒರೆಸಿ ಮಾಯಿಶ್ಚರ್ ಆಗದಹಾಗೆ ಧೂಳು ಆಗದಹಾಗೆ ಬಾಕ್ಸ್ ಗಳಲ್ಲಿ ಹಾಕಿ ಪ್ಯಾಕಿಂಗ್ ಮಾಡುತ್ತಾರೆ. ಇವರು ತಯಾರಿಸುವ ಪ್ಲೇಟ್ ಗಳಲ್ಲಿ ಆರು ಇಂಚಿನ ಹತ್ತು ಇಂಚಿನ ಮತ್ತು ಹನ್ನೆರಡು ಇಂಚಿನ ಪ್ಲೇಟ್ ಗಳಿಗೆ ತುಂಬಾ ಬೇಡಿಕೆ ಇರುತ್ತದೆ.

ಪ್ಲಾಸ್ಟಿಕ್ ಎಲೆಗಳನ್ನು ಬಳಸುವುದರಿಂದ ಪರಿಸರಕ್ಕೆ ಹಾನಿ ಉಂಟಾಗುವ ಸಂಭವ ಹೆಚ್ಚಿರುತ್ತದೆ ಆದರೆ ಈ ಅಡಿಕೆಯ ಎಲೆಗಳಿಂದ ತಯಾರಿಸಿದ ಪ್ಲೇಟ್ ಗಳು ಪರಿಸರಸ್ನೇಹಿ ಇವುಗಳಿಂದ ಯಾರಿಗೂ ಯಾವುದೇ ರೀತಿಯ ಹಾನಿ ಉಂಟಾಗುವುದಿಲ್ಲ. ಅಡಿಕೆ ಎಲೆಯಿಂದ ಪ್ಲೇಟ್ ಗಳನ್ನು ತಯಾರಿಸಲು ಇವರು ರೈತರಿಗೆ ದುಡ್ಡು ಕೊಟ್ಟು ಅವುಗಳನ್ನು ಖರೀದಿಸುವುದರಿಂದ ರೈತರಿಗೂ ಕೂಡ ಲಾಭ ಉಂಟಾಗುತ್ತದೆ. ಇವರು ಈ ಉದ್ಯಮವನ್ನು ಪ್ರಾರಂಭಿಸಿದಾಗ ಒಂದು ದಿನಕ್ಕೆ ಕೇವಲ ಮುನ್ನುರರಿಂದ ನಾಲ್ಕುನೂರು ಪ್ಲೇಟ್ ಗಳನ್ನು ಮಾತ್ರ ಉತ್ಪಾದನೆ ಮಾಡುತ್ತಿದ್ದರು ನಂತರದ ದಿನಗಳಲ್ಲಿ ಬೇಡಿಕೆ ಹೆಚ್ಚುತ್ತ ಹೋಗುತ್ತದೆ ಉತ್ಪಾದನೆಯೂ ಕೂಡ ಹೆಚ್ಚಾಗುತ್ತ ಹೋಗುತ್ತದೆ.

ದಿನದಿಂದ ದಿನಕ್ಕೆ ಉತ್ಪಾದನೆ ಹೆಚ್ಚುತ್ತಾ ಹೋದಂತೆ ಸುದರ್ಶನ್ ಅವರು ಹೊರಗಡೆ ಹೋಗಿ ವ್ಯಾಪಾರವನ್ನು ಹೆಚ್ಚಿಸುವುದಕ್ಕೆ ಪ್ರಾರಂಭ ಮಾಡುತ್ತಾರೆ ಎಲ್ಲಿ ಅಡಿಕೆ ಎಲೆಗಳ ಪ್ಲೇಟ್ ಗಳನ್ನು ಮಾರಾಟ ಮಾಡುತ್ತಾರೆ ಆ ಅಂಗಡಿಗಳಿಗೆ ಹೋಗಿ ವಿಚಾರಿಸಿ ಅವರಿಗೆ ಯಾವ ಅಳತೆಯ ಪ್ಲೇಟ್ ಗಳು ಬೇಕು ಅದನ್ನು ನಮ್ಮ ಫ್ಯಾಕ್ಟರಿಯಲ್ಲಿ ಇಂತಿಷ್ಟು ಬೆಲೆಗೆ ಕೊಡುತ್ತೇವೆ ತೆಗೆದುಕೊಳ್ಳುತ್ತೀರಾ ಎಂದು ಎಲ್ಲಾ ಕಡೆ ಹೋಗಿ ವಿಚಾರಿಸುತ್ತಿದ್ದರು ಇದರಿಂದಾಗಿ ಇವರ ಬಳಿ ಪ್ಲೇಟ್ಗೆ ಬೇಡಿಕೆಗಳು ಹೆಚ್ಚಾಗುತ್ತಾ ಹೋಗುತ್ತದೆ ಆಗ ಇವರಿಗೆ ಉದ್ಯಮದಲ್ಲಿ ತಾವು ಮುಂದುವರೆದು ದೊಡ್ಡ ಮಟ್ಟಕ್ಕೆ ಹೋಗುತ್ತೇವೆ ಎಂಬ ನಂಬಿಕೆ ಬರುತ್ತದೆ.

ಇವರ ಸುತ್ತಮುತ್ತ ಇನ್ನೂ ಐದಾರು ಜನರು ಈ ಉದ್ಯೋಗವನ್ನು ಮಾಡುವುದರಿಂದ ಇವರು ಅವರೊಂದಿಗೆ ಸ್ಪರ್ಧೆ ಮಾಡಬೇಕಾಗುತ್ತದೆ. ಕೆಲವೊಬ್ಬರು ಹಸಿಎಲೆಗಳಿಂದ ಪ್ಲೇಟ್ ಗಳನ್ನು ತಯಾರಿಸುತ್ತಾರೆ ಆದರೆ ಇದು ತುಂಬಾ ದಿನ ಬಾಳಿಕೆ ಬರುವುದಿಲ್ಲ ಅದರಲ್ಲಿ ಫಂಗಸ್ ಗಳು ಉಂಟಾಗುತ್ತವೆ ಈ ಫಂಗಸ್ ಗಳು ಬಂದಿರುವ ಪ್ಲೇಟುಗಳನ್ನು ನಾವು ಬಳಸುವುದರಿಂದ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇವರು ಉತ್ತಮ ಗುಣಮಟ್ಟದ ಪ್ಲೇಟುಗಳನ್ನು ಉತ್ಪಾದನೆ ಮಾಡುತ್ತಾರೆ ಅವುಗಳನ್ನು ಎಲ್ಲರಿಗೂ ದೊರಕುವ ಬೆಲೆಗಳಲ್ಲಿ ಮಾರಾಟ ಮಾಡುತ್ತಾರೆ ಇವರು ತಮ್ಮ ಉದ್ಯಮವನ್ನು ಹೆಚ್ಚಿನ ಮಟ್ಟಕ್ಕೆ ಬೆ ಬೆಳೆಸಬೇಕು ಎನ್ನುವ ಕಾರಣಕ್ಕಾಗಿ ಪ್ರತಿದಿನ ಯೂಟ್ಯೂಬ್ ಗೂಗಲ್ ಗಳಲ್ಲಿ ಹುಡುಕಾಟ ನಡೆಸುತ್ತಾರೆ. ಇವರ ಮುಂದಿನ ಗುರಿ ಅಡಿಕೆ ಎಲೆಗಳನ್ನು ಬಳಸಿ ಇನ್ನೂ ಬೇರೆ ಬೇರೆ ರೀತಿಯ ಉತ್ಪನ್ನಗಳನ್ನು ಉತ್ಪಾದನೆ ಮಾಡಬೇಕು ಎಂಬುದು. ಇವರಂತೆ ಸ್ವಂತ ಉದ್ಯೋಗವನ್ನು ಮಾಡುವ ಮೂಲಕ ನೀವು ನಿಮ್ಮ ಕನಸುಗಳನ್ನು ನನಸು ಮಾಡಿಕೊಳ್ಳಿ.


ನಿಮ್ಮ ಆತ್ಮೀಯರಿಗೂ ಶೇರ್ ಮಾಡಿ

Leave a Reply

Your email address will not be published. Required fields are marked *