ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಮನುಷ್ಯ ಸರ್ವನಾಶ ಆಗುವುದಕ್ಕೆ ಮೂರು ಕಾರಣಗಳು ಯಾವುದು ಇಂದು ತಿಳಿಸಿದ್ದಾನೆ ಆ ಮೂರು ಕಾರಣಗಳನ್ನು ನಾವಿಂದು ನಿಮಗೆ ತಿಳಿಸಿಕೊಡುತ್ತೇವೆ. ಆದರೆ ನಾವಿಲ್ಲಿ ಒಂದು ಅಂಶ ಗಮನಿಸಬೇಕಾಗುತ್ತದೆ ಜೀವನದಲ್ಲಿ ಸರ್ವನಾಶ ಹೊಂದಿದವರನ್ನು ಗಮನಿಸಿ ಅವರ ಈ ಪರಿಸ್ಥಿತಿಗೆ ಶ್ರೀಕೃಷ್ಣ ಹೇಳಿದ ಆ ಮೂರು ವಿಷಯಗಳು ಕಾರಣವಾಗಿರುತ್ತವೆ ಹಾಗಾದರೆ ಶ್ರೀಕೃಷ್ಣ ಹೇಳಿದ ಆ ಮೂರು ವಿಷಯಗಳು ಯಾವುದು ಎಂದು ತಿಳಿದುಕೊಳ್ಳುವುದಕ್ಕೆ ನೀವು ನಾವು ಹೇಳುವ ಕಥೆಯನ್ನು ಓದಬೇಕಾಗುತ್ತದೆ.
ಪ್ರಾಚೀನ ಕಾಲದಲ್ಲಿ ಒಂದು ರಾಜಮನೆತನದಲ್ಲಿ ಒಂದು ಗಂಡು ಮಗುವಿನ ಜನನವಾಗುತ್ತದೆ ಆದರೆ ಆ ಮಗುವನ್ನು ರಾಜ್ಯ ವೈಭೋಗದಲ್ಲಿ ಬೆಳೆಸಬೇಕಾದ ಅವರ ತಂದೆತಾಯಿಗಳು ಆ ಮಗುವನ್ನು ಚಿಕ್ಕವಯಸ್ಸಿನಲ್ಲಿಯೇ ಗುರುಕುಲಕ್ಕೆ ವಿದ್ಯಾಭ್ಯಾಸಕ್ಕೆಂದು ಕಳಿಸುತ್ತಾರೆ ರಾಜ ವೈಭೋಗದಲ್ಲಿ ಬೆಳೆಯಬೇಕಾದ ಮಗುವು ಗುರುಕುಲದಲ್ಲಿ ಶ್ರದ್ಧಾ ನಿಷ್ಠ ಭಕ್ತಿಯಿಂದ ವಿದ್ಯಾಭ್ಯಾಸವನ್ನು ತುಂಬಾ ಚೆನ್ನಾಗಿ ಕಲಿಯುತ್ತಿರುತ್ತದೆ.
ಹೀಗಿರುವಾಗ ಪ್ರಕೃತಿ ವಿಕೋಪದಿಂದಾಗಿ ಆ ಮಗುವಿನ ಸಂಪೂರ್ಣ ಪರಿವಾರ ನಾಶವನ್ನು ಹೊಂದುತ್ತದೆ. ಹೀಗಾಗಿ ಆ ಮಗುವು ಒಂಟಿಯಾಗುತ್ತದೆ ನಂತರ ಆ ಮಗು ತನ್ನ ಸಂಪೂರ್ಣ ವಿದ್ಯಾಭ್ಯಾಸವನ್ನು ಮುಗಿಸಿ ಒಂದು ಸಂಕಲ್ಪವನ್ನು ಮಾಡುತ್ತದೆ. ಆ ಸಂಕಲ್ಪ ಏನು ಎಂದರೆ ತನ್ನ ಇಡೀ ಜೀವನವನ್ನು ಜನರ ಸೇವೆಗಾಗಿ ಮುಡಿಪು ಇಡಬೇಕು ಎಂದು. ಹಾಗಾಗಿ ತಾನು ಸನ್ಯಾಸತ್ವವನ್ನು ಸ್ವೀಕಾರ ಮಾಡಬೇಕು ಎಂದು ನಿರ್ಧಾರ ಮಾಡುತ್ತಾನೆ.
ಹೀಗಾಗಿ ಅವನು ಹಿಮಾಲಯ ಪರ್ವತಕ್ಕೆ ಹೋಗಿ ದೀರ್ಘಕಾಲದ ಧ್ಯಾನವನ್ನು ಮಾಡಿ ದೇವರನ್ನು ಒಲಿಸಿಕೊಂಡ ನಂತರ ಜನರ ಸೇವೆಗಾಗಿ ವಾಪಸಾಗುತ್ತಾನೆ ಆ ಸನ್ಯಾಸಿ ತುಂಬಾ ಸಂತೋಷದಿಂದಿರುತ್ತಾನೆ ಇದರ ಜೊತೆಗೆ ಜನರೆಲ್ಲಾ ಆ ಸನ್ಯಾಸಿಯ ಬಳಿ ಪಾಠ ಕೇಳುವುದಕ್ಕೆ ಬರುತ್ತಿರುತ್ತಾರೆ. ಅಷ್ಟೇ ಅಲ್ಲದೆ ಆ ಸನ್ಯಾಸಿ ಜನರ ಸಮಸ್ಯೆಗಳಿಗೆ ಪರಿಹಾರವನ್ನು ನೀಡುತ್ತಿರುತ್ತಾನೆ ಈ ಒಂದು ಸೇವೆ ಜನರಿಂದ ಜನರಿಗೆ ಹರಡಿ ಆತ ತುಂಬಾ ಪ್ರಸಿದ್ಧಿ ಆಗುತ್ತಾನೆ ಹೀಗಿರುವಾಗ ಸನ್ಯಾಸಿ ನೆಲೆಸಿರುವ ರಾಜ್ಯದ ರಾಜ ತುಂಬಾ ಕ್ರೂರಿ ಆಗಿರುತ್ತಾನೆ.
ಅವನು ಈ ಪ್ರಸಿದ್ಧಿಯಾಗಿರುವ ಸನ್ಯಾಸಿಯನ್ನು ಭೇಟಿಯಾಗಬೇಕೆಂದು ನಿರ್ಧಾರ ಮಾಡುತ್ತಾನೆ. ಆ ರಾಜ ಮೊದಲನೇ ಸಾರಿ ಸಂನ್ಯಾಸಿಯನ್ನು ಭೇಟಿಯಾದಾಗಲೇ ಸಂಪೂರ್ಣವಾಗಿ ಒಳ್ಳೆಯವನಾಗಿ ಬದಲಾಗುತ್ತಾನೆ. ಆಗ ರಾಜ ಹೀಗೆ ತಿಳಿದುಕೊಳ್ಳುತ್ತಾನೆ ನಾನು ಮೊದಲನೇ ಭೇಟಿಯಲ್ಲಿ ಇಷ್ಟು ಒಳ್ಳೆಯವನಾಗಿ ಬದಲಾಗಿದ್ದೇನೆ ಎಂದಮೇಲೆ ಯಾಕೆ ನಾನು ಈ ಸನ್ಯಾಸಿಯನ್ನು ನನ್ನ ಅರಮನೆಯಲ್ಲಿಯೇ ಇಟ್ಟುಕೊಳ್ಳಬಾರದು ಈ ಸನ್ಯಾಸಿ ತನ್ನ ಆಸ್ಥಾನದಲ್ಲಿಯೇ ಇದ್ದರೆ ನಾನು ಅವನ ಸೇವೆಯನ್ನು ಮಾಡಬಹುದು ಅವನ ಸೇವೆಯನ್ನು ಮಾಡಿ ನಾನು ಒಂದಿಷ್ಟು ಪುಣ್ಯವನ್ನು ಗಳಿಸಬಹುದು ಎಂದು ಯೋಚಿಸುತ್ತಾನೆ.
ಹೀಗಿರುವಾಗ ರಾಜ ಸನ್ಯಾಸಿಯನ್ನು ತನ್ನ ಅರಮನೆಗೆ ಆಹ್ವಾನಿಸುತ್ತಾನೆ ಅದಕ್ಕೆ ಸನ್ಯಾಸಿಯು ಕೂಡ ಒಪ್ಪಿಕೊಳ್ಳುತ್ತಾನೆ ರಾಜಾ ಸನ್ಯಾಸಿಯನ್ನು ರಾಜವೈಭೋಗದ ಮೂಲಕ ಅರಮನೆಗೆ ಬರಮಾಡಿಕೊಳ್ಳುತ್ತಾರೆ. ಅರಮನೆಯಲ್ಲಿ ರಾಜ ಸನ್ಯಾಸಿಗೆ ಮೃಷ್ಟಾನ್ನ ಭೋಜನಗಳನ್ನು ನೀಡುತ್ತಾನೆ. ಭೋಜನಗಳನ್ನು ಸ್ವೀಕರಿಸಿದ ನಂತರ ಸನ್ಯಾಸಿ ನಾನು ಹೊರಡುತ್ತೇನೆ ಎಂದು ಹೇಳುತ್ತಾನೆ ಆಗ ರಾಜ ಸನ್ಯಾಸಿಯಲ್ಲಿ ಒಂದು ಮನವಿಯನ್ನು ಮಾಡಿಕೊಳ್ಳುತ್ತಾನೆ ಅದೇನೆಂದರೆ ನಾನು ನಿಮಗೆ ಅರಮನೆಯ ಮೈದಾನದಲ್ಲಿ ಒಂದು ಕುಟೀರವನ್ನು ನಿರ್ಮಾಣ ಮಾಡಿಕೊಡುತ್ತೇನೆ ನೀವು ಆ ಕುಟೀರದಲ್ಲಿಯೇ ವಾಸಿಸಬೇಕು ನಿಮ್ಮ ಊಟ-ಉಪಚಾರ ವಸ್ತ್ರ ಎಲ್ಲವನ್ನು ಒದಗಿಸುವುದು ನನ್ನ ಜವಾಬ್ದಾರಿ. ನನ್ನ ಮನವಿಯನ್ನು ನೀವು ಸ್ವೀಕರಿಸಬೇಕೆಂದು ವಿನಂತಿ ಮಾಡಿಕೊಳ್ಳುತ್ತಾನೆ. ರಾಜನ ವಿನಂತಿಯನ್ನು ಸನ್ಯಾಸಿ ಸ್ವೀಕರಿಸುತ್ತಾನೆ ಆ ಸನ್ಯಾಸಿ ಅರಮನೆ ಮೈದಾನದ ಕುಟೀರದಲ್ಲಿ ತುಂಬಾ ವರ್ಷಗಳವರೆಗೆ ವಾಸ ಮಾಡುತ್ತಾನೆ.
ತುಂಬಾ ವರ್ಷದ ನಂತರ ರಾಜ ಮತ್ತು ರಾಣಿ ಪಕ್ಕದ ರಾಜ್ಯಕ್ಕೆ ಹೋಗಬೇಕಾದ ಅಂತಹ ಅನಿವಾರ್ಯ ಪರಿಸ್ಥಿತಿ ಬರುತ್ತದೆ ಆಗ ಈ ಸನ್ಯಾಸಿಯನ್ನು ಉಪಚಾರ ಮಾಡುವ ಜವಾಬ್ದಾರಿಯನ್ನು ಸೇವಕನಿಗೆ ವಹಿಸುತ್ತಾರೆ ಆದರೆ ಕೆಲವು ದಿನಗಳ ನಂತರ ಅನಾರೋಗ್ಯದ ಕಾರಣದಿಂದ ಆ ಸೇವಕ ತನ್ನ ಜವಾಬ್ದಾರಿಯನ್ನು ನಿರ್ವಹಿಸುವುದಿಲ್ಲ ಸರಿಯಾದ ಸಮಯಕ್ಕೆ ಸನ್ಯಾಸಿಗೆ ಊಟ ಉಪಚಾರವನ್ನು ಯಾರು ನೀಡುವುದಿಲ್ಲ ಇದರಿಂದ ಸನ್ಯಾಸಿಗೆ ಕೋಪ ಬರುತ್ತದೆ.
ರಾಜ ಪಕ್ಕದ ರಾಜ್ಯದಿಂದ ಹಿಂದಿರುಗಿದಾಗ ಸನ್ಯಾಸಿ ರಾಜನಿಗೆ ನೀನು ನನ್ನ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದ ಮೇಲೆ ನನ್ನ ಜವಾಬ್ದಾರಿಯನ್ನು ಏಕೆ ತೆಗೆದುಕೊಂಡೆ ಎಂದು ಪ್ರಶ್ನೆಯನ್ನು ಮಾಡುತ್ತಾನೆ ಆಗ ರಾಜ ಕ್ಷಮೆಯನ್ನು ಕೇಳುತ್ತಾನೆ. ಸ್ವಲ್ಪ ದಿನಗಳ ನಂತರ ಮತ್ತೆ ರಾಜ ಬೇರೆ ಊರಿಗೆ ಹೋಗುವ ಪರಿಸ್ಥಿತಿ ಬರುತ್ತದೆ ಆಗ ರಾಜ ಸನ್ಯಾಸಿಯ ಸಂಪೂರ್ಣ ಜವಾಬ್ದಾರಿಯನ್ನು ನಿರ್ವಹಿಸುವುದಕ್ಕೆ ರಾಣಿಗೆ ಹೇಳುತ್ತಾನೆ. ರಾಜ ಬೇರೆ ಊರಿಗೆ ಹೋದಮೇಲೆ ಸನ್ಯಾಸಿಯ ಸಂಪೂರ್ಣ ಜವಾಬ್ದಾರಿ ರಾಣಿಯದಾಗಿರುತ್ತದೆ. ಆಕೆ ಸನ್ಯಾಸಿಗೆ ಪ್ರತಿದಿನ ಸಮಯಕ್ಕೆ ಸರಿಯಾಗಿ ಊಟವನ್ನು ಕಳಿಸುತ್ತಿರುತ್ತಾಳೆ.
ಆದರೆ ಒಂದು ದಿನ ರಾಣಿ ಸ್ನಾನಕ್ಕೆ ಹೋದಾಗ ಸನ್ಯಾಸಿಗೆ ಊಟ ಕೊಡುವುದನ್ನು ಮರೆಯುತ್ತಾಳೆ. ಆದರೆ ಸನ್ಯಾಸಿ ಕುಟೀರದಲ್ಲಿ ಊಟಕ್ಕಾಗಿ ಕಾಯುತ್ತಿರುತ್ತಾರೆ ಎಷ್ಟು ಕಾದರೂ ಊಟ ಬರದಿದ್ದಾಗ ಸನ್ಯಾಸಿ ನೇರವಾಗಿ ಅರಮನೆಗೆ ಹೋಗಬೇಕೆಂದು ನಿರ್ಧಾರ ಮಾಡುತ್ತಾನೆ ಅರಮನೆಗೆ ಬಂದಂತಹ ಸನ್ಯಾಸಿ ರಾಣಿಯ ಸೌಂದರ್ಯವನ್ನು ನೋಡಿ ಮರುಳಾಗುತ್ತಾನೆ.
ಆಕೆ ರೂಪ ಅವನಲ್ಲಿ ಮನೆ ಮಾಡುತ್ತದೆ ಆಕೆಯ ಮೋಹದಲ್ಲಿ ಬಿದ್ದಂತಹ ಸನ್ಯಾಸಿ ಸಂಪೂರ್ಣವಾಗಿ ಅವಳಿಗೆ ಸೋತು ಹೋಗುತ್ತಾನೆ. ನಂತರ ಕುಟೀರಕ್ಕೆ ಹಿಂದಿರುಗಿದ ಸನ್ಯಾಸಿ ಊಟವನ್ನು ಮಾಡುವುದಿಲ್ಲ ಆಕೆಯ ಚಿಂತೆಯಲ್ಲಿಯೇ ದಿನಗಳನ್ನು ಕಳೆಯುತ್ತಾನೆ ಹೀಗೆ ದಿನಗಳು ಕಳೆದಂತೆ ಆತ ನಿಶಕ್ತನಾಗುತ್ತಾನೆ ತುಂಬಾ ಸೊರಗಿ ಹೋಗಿರುತ್ತಾನೆ.
ನಂತರ ಕೆಲವು ದಿನಗಳ ನಂತರ ರಾಜ ಆಸ್ಥಾನಕ್ಕೆ ಹಿಂತಿರುಗಿ ಸನ್ಯಾಸಿಯನ್ನು ಭೇಟಿ ಮಾಡಿ ಅವರನ್ನು ನೋಡಿ ಪ್ರಶ್ನೆ ಮಾಡುತ್ತಾನೆ ನೀವು ತುಂಬಾ ಸೊರಗಿ ಹೋಗಿದ್ದೀರಿ ನಿಶಕ್ತರಾಗಿದ್ದಿರಿ ಯಾಕೆ ನಮ್ಮಿಂದ ಏನಾದರೂ ತಪ್ಪಾಯಿತೆ ಎಂದು ಮನವಿ ಮಾಡಿಕೊಳ್ಳುತ್ತಾನೆ. ಆಗ ಸನ್ಯಾಸಿ ಹೇಳುತ್ತಾನೆ ನಾನು ರಾಣಿಯ ಮೋಹದಲ್ಲಿ ಬಿದ್ದು ಒದ್ದಾಡುತ್ತಿದ್ದೇನೆ ನನಗೆ ರಾಣಿ ಇಲ್ಲದೆ ಬದುಕುವುದಕ್ಕೆ ಆಗುವುದಿಲ್ಲ ಎಂದು ಹೇಳುತ್ತಾನೆ. ಆಗ ಆ ರಾಜ ಸನ್ಯಾಸಿಯನ್ನು ಕರೆದುಕೊಂಡು ಅರಮನೆಗೆ ಬರುತ್ತಾನೆ ಅಲ್ಲಿ ರಾಣಿ ಇರುತ್ತಾಳೆ.
ರಾಣಿಯನ್ನು ಕರೆದು ರಾಜ ಹೇಳುತ್ತಾನೆ ಸನ್ಯಾಸಿಗೆ ನೀನು ಒಂದು ಸಹಾಯವನ್ನು ಮಾಡಬೇಕು. ಸನ್ಯಾಸಿ ನಿನ್ನ ಸೌಂದರ್ಯಕ್ಕೆ ಮರುಳಾಗಿದ್ದಾರೆ ನೀನಿಲ್ಲದೆ ಬದುಕುವುದಕ್ಕೆ ಆಗುವುದಿಲ್ಲ ಎಂದು ನಿರ್ಧಾರ ಮಾಡಿದ್ದಾರೆ ಎಂದು ಹೇಳುತ್ತಾನೆ ಒಂದು ವೇಳೆ ಸನ್ಯಾಸಿ ಏನಾದರೂ ಸತ್ತು ಹೋದರೆ ಆ ಪಾಪ ನಮ್ಮನ್ನು ಕಾಡುತ್ತದೆ ಅವರ ಸಾವಿಗೆ ನಾವು ಕಾರಣವಾಗುತ್ತೇವೆ ಇದು ನಮಗಾಗಲಿ ನಮ್ಮ ರಾಜ್ಯಕ್ಕಾಗಲಿ ಶ್ರೇಯಸ್ಕರ ಅಲ್ಲ ಎಂದು ರಾನಿಯಲ್ಲಿ ವಿನಂತಿಯನ್ನು ಮಾಡಿಕೊಳ್ಳುತ್ತಾನೆ ಆಗ ರಾಣಿ ಅದಕ್ಕೆ ಒಪ್ಪಿಕೊಂಡು ಆ ಸನ್ಯಾಸಿಯ ಜೊತೆ ಕುಟೀರಕ್ಕೆ ಹೋಗುತ್ತಾಳೆ.
ಕುಟೀರದ ಸಮೀಪ ಹೋಗುತ್ತಿದ್ದಂತೆ ರಾಣಿ ಸಂನ್ಯಾಸಿಗೆ ಕೇಳುತ್ತಾಳೆ ನನಗೆ ಈ ಕುಟೀರದಲ್ಲಿ ಇರಲು ಸಾಧ್ಯವಿಲ್ಲ ನನಗೆ ಅರಮನೆ ಬೇಕು ತಕ್ಷಣವೇ ನೀವು ಅರಮನೆಯನ್ನು ತಯಾರಿಸಿ ಎಂದು ಹೇಳುತ್ತಾಳೆ. ಸನ್ಯಾಸಿ ನೇರವಾಗಿ ರಾಜನ ಬಳಿಗೆ ಹೋಗಿ ತನಗೆ ಒಂದು ಅರಮನೆ ಬೇಕು ಎಂದು ಹೇಳುತ್ತಾನೆ ರಾಜ ಅದಕ್ಕೆ ಸಂಬಂಧಿಸಿ ಒಂದು ಅರಮನೆಯನ್ನು ನಿರ್ಮಿಸಿ ಕೊಡುತ್ತಾನೆ.
ನಂತರ ಅವರು ಅರಮನೆಗೆ ಹೋಗುತ್ತಾರೆ ಅರಮನೆಗೆ ಹೋದಾಗ ಅಲ್ಲಿ ತುಂಬಾ ಕೆಟ್ಟ ವಾಸನೆ ಬರುತ್ತಿರುತ್ತದೆ ಮತ್ತು ಆ ಅರಮನೆ ಶೃಂಗಾರವಾಗಿ ಇರುವುದಿಲ್ಲ. ಆಗ ರಾಣಿ ಸನ್ಯಾಸಿಯ ಬಳಿ ಕೇಳಿಕೊಳ್ಳುತ್ತಾಳೆ ಕೆಟ್ಟವಾಸನೆ ಹೋಗಬೇಕು ಮತ್ತು ಅರಮನೆ ಅರಮನೆ ಹಾಗೆ ಶೃಂಗಾರವಾಗಿ ಇರಬೇಕು ಎಂದು ಮತ್ತೆ ಪುನಹ ಸಂನ್ಯಾಸಿ ರಾಜನ ಬಳಿ ಹೋಗಿ ವಿನಂತಿಸಿಕೊಳ್ಳುತ್ತಾನೆ ತನ್ನ ಅರಮನೆ ಅರಮನೆಯ ರೀತಿ ಇರಬೇಕು ಎಂದು. ಅದಕ್ಕೆ ಬೇಕಾದ ಎಲ್ಲ ಸೌಲಭ್ಯಗಳನ್ನು ರಾಜ ಸನ್ಯಾಸಿಗೆ ಒದಗಿಸುತ್ತಾನೆ. ಅದೇ ತರವಾಗಿ ಸನ್ಯಾಸಿ ರಾಣಿಗೆ ಒಪ್ಪಿಸುತ್ತಾನೆ. ರಾಣಿ ಸ್ನಾನವನ್ನು ಮಾಡಿಕೊಂಡ ಬಂದು ಕುಳಿತುಕೊಂಡು ಸನ್ಯಾಸಿಗೆ ತಿಳಿಹೇಳುತ್ತಾರೆ ನೋಡು ನಿನ್ನ ಜೀವನದ ಗುರಿ ಏನಾಗಿತ್ತು ನೀನು ಜನರ ಸೇವೆಯನ್ನು ಮಾಡಬೇಕು ಎಂಬ ಆಸೆ ಗುರಿಯನ್ನು ಹೊಂದಿದ್ದೆ ಆ ಕಾರಣಕ್ಕೆ ನೀನು ಹಿಮಾಲಯ ಪರ್ವತಕ್ಕೆ ಹೋಗಿ ಜ್ಞಾನಾರ್ಜನೆ ಮಾಡಿಕೊಂಡು ಬಂದೆ ಆದರೆ ನೀನು ಈಗ ಮಾಡುತ್ತಿರುವುದು ಏನು ಯೋಚನೆ ಮಾಡು.
ಹಾಗೆ ನಿನ್ನ ಹತ್ತಿರ ಎಲ್ಲರೂ ಪಾಠ ಕಲಿಯುವುದಕ್ಕೆ, ಅವರ ಜೀವನದ ಸಲಹೆಗಳಿಗೆ ನಿನ್ನ ಹತ್ತಿರ ಬರುತ್ತಿದ್ದರು ನೀನು ಎಲ್ಲರಿಗೂ ಹೇಳುತ್ತಿದ್ದೆ ಎಲ್ಲರೂ ನಿನ್ನ ಮಾತನ್ನು ಕೇಳುತ್ತಿದ್ದರು. ಆದರೆ ಈಗ ನೀನು ನನ್ನ ಮತ್ತು ನನ್ನ ಸೌಂದರ್ಯದ ಗುಲಾಮನಾಗಿದ್ದೀಯ ಮೊದಲು ಜನರು ನಿನ್ನ ಮಾತನ್ನು ಕೇಳುತ್ತಿದ್ದರು ಆದರೆ ಈಗ ನೀನು ನನ್ನ ಮಾತನ್ನು ಹೇಳುತ್ತಿದ್ದೀಯ ಸ್ವಲ್ಪ ಯೋಚನೆ ಮಾಡು ನೀನು ಮಾಡುತ್ತಿರುವುದು ಸರಿ ಇದೆ ಎಂದು, ಆಗ ಆ ಸನ್ಯಾಸಿಗೆ ಜ್ಞಾನೋದಯವಾಗುತ್ತದೆ ಹೌದು ನನ್ನ ಗುರಿ ಜನರ ಸೇವೆ ಮಾಡುವುದು ನಾನು ತಪ್ಪು ಮಾಡುತ್ತಿದ್ದೇನೆ ಎಂದು ಅರಿವಾಗುತ್ತದೆ ಜೊತೆಗೆ ಇನ್ನೊಂದು ವಿಷಯವನ್ನು ಆತ ಮನವರಿಕೆ ಮಾಡಿಕೊಳ್ಳುತ್ತಾನೆ ಆತ ಮೊದಲು ಕಾಡಿನಲ್ಲಿ ವಾಸಿಸುತ್ತಿದ್ದಾಗ ಆತನಿಗೆ ಒಂದು ಹೊತ್ತಿನ ಊಟ ಕಷ್ಟವಾಗುತ್ತಿತ್ತು ಆದರೆ ಅರಮನೆಯಲ್ಲಿ ಪ್ರತಿನಿತ್ಯ ಸಮಯಕ್ಕೆ ಸರಿಯಾಗಿ ಊಟ ಸಿಗುತ್ತಿತ್ತು ಆದರೆ ಒಂದು ದಿನ ಊಟ ಸಿಗಲಿಲ್ಲ ಎಂದು ರಾಜ ಮತ್ತು ರಾಣಿಯ ಮೇಲೆಕೋಪ ಮಾಡಿಕೊಳ್ಳುತ್ತಾನೆ.
ಅರ್ಥಾತ್ ಮನುಷ್ಯ ತನಗೆ ಏನು ಸಿಗಬೇಕು ಅದು ಸಿಗದಿದ್ದಾಗ ಆತ ಕ್ರೋಧಕ್ಕೆ ಒಳಗಾಗುತ್ತಾನೆ ಒಂದು ವೇಳೆ ಅವನು ಬಯಸಿದ್ದು ಸಿಕ್ಕರೆ ಇನ್ನೂ ಬೇಕು ಎಂಬ ದುರಾಸೆಗೆ ಒಳಗಾಗುತ್ತಾನೆ ಆ ದುರಾಸೆಗೆ ನಾನು ಒಳಗಾದೆ ಅದು ನಾನು ಮಾಡಿದ ತಪ್ಪು ಎಂದು ತನ್ನ ತಪ್ಪಿನ ಅರಿವನ್ನು ಮಾಡಿಕೊಳ್ಳುತ್ತಾನೆ.
ಹಾಗಾಗಿ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ನರಕಕ್ಕೆ ಮೂರು ದಾರಿಗಳು ಎಂದು ಹೇಳಿದ್ದಾನೆ ಅದು ಕಾಮ ಕ್ರೋಧ ಮತ್ತು ಲೋಭ ಈ ಮೂರು ಗುಣಗಳು ಯಾರಲ್ಲಿ ಇರುತ್ತದೆಯೋ ಖಂಡಿತವಾಗಿ ಅವರ ಜೀವನ ಸರ್ವನಾಶವಾಗುತ್ತದೆ. ಎಚ್ಚರಿಕೆಯಿರಲಿ ಈ ಮೂರು ವಿಷಯಗಳು ನಮ್ಮನ್ನ ನರಕಕ್ಕೆ ಕೊಂಡೊಯ್ಯುತ್ತವೆ ನಮ್ಮನ್ನು ಸರ್ವನಾಶ ಮಾಡುತ್ತವೆ ಹಾಗಾಗಿ ನಾವು ಈ ಗುಣಗಳು ನಮ್ಮಲ್ಲಿ ಬರದಂತೆ ಜಾಗೃತಿಯನ್ನು ವಹಿಸಬೇಕು ಒಬ್ಬ ಸನ್ಯಾಸಿಗೆ ಈ ಗುಣಗಳು ಬಿಟ್ಟಿಲ್ಲ ಎಂದಾದಮೇಲೆ ಸಾಮಾನ್ಯ ಮನುಷ್ಯರಾದ ನಮಗೂ ಇದು ಬಿಡುವುದಿಲ್ಲ. ಆದರೆ ಎಚ್ಚರಿಕೆಯಿಂದ ಇದ್ದಲ್ಲಿ ಖಂಡಿತವಾಗಿಯೂ ನಾವು ಇದರಿಂದ ದೂರವಿರಬಹುದು ನಮ್ಮ ಜೀವನವನ್ನು ಸಫಲತೆಯ ಕಡೆಗೆ ಕೊಂಡೊಯ್ಯಬಹುದು ನೀವು ಕೂಡ ಜೀವನದಲ್ಲಿ ಕಾಮ ಕ್ರೋಧ ಲೋಭಗಳನ್ನು ಬಿಟ್ಟು ಉತ್ತಮವಾದ ಜೀವನವನ್ನು ನಡೆಸಿ.
ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430