ಬೆನ್ನು ನೋವು ಎನ್ನುವುದು ಈಗಿನ ದಿನಗಳಲ್ಲಿ ಚಿಕ್ಕ ವಯಸ್ಸಿನಿಂದ ದೊಡ್ಡ ವಯಸ್ಸಿನವರವರೆಗೆ ಸರ್ವೇ ಸಾಮಾನ್ಯವಾದ ತೊಂದರೆಯಾಗಿದೆ. ಯಾರು ನೋಡಿದರು ಬೆನ್ನು ನೋವು ದೊಡ್ಡ ತೊಂದರೆಯೆಂದು ಭಾವಿಸಿ ಅನವಶ್ಯಕ ಔಷಧಿ ಮಾಡಿ ಇನ್ನು ಕೆಲವೊಂದು ಸಮಸ್ಯೆಗಳಿಗೆ ತುತ್ತಾಗುತ್ತಾರೆ. ಮೊದಲು ಬೆನ್ನು ನೋವು ಬಂದಿರುವ ಸರಿಯಾದ ಕಾರಣವನ್ನು ತಿಳಿದುಕೊಂಡು ತದನಂತರ ಸರಿಯಾದ ಮಾರ್ಗದರ್ಶನದಲ್ಲಿ ಔಷಧವನ್ನು ಮಾಡಬೇಕು. ಆದ್ದರಿಂದ ನಾವು ಇಲ್ಲಿ ಬೆನ್ನು ನೋವು ಬರುವ ಕಾರಣವನ್ನು ತಿಳಿದುಕೊಳ್ಳೋಣ.

ಈಗಿನ ಕಾಲದಲ್ಲಿ ಸರ್ವೇ ಸಾಮಾನ್ಯವಾಗಿ ಬೆನ್ನು ನೋವು ಬರಲು ಕಾರಣ ಮಾನಸಿಕ ಹತೋಟಿ ಇಲ್ಲದೆ ಇರುವುದು ಮುಖ್ಯ ಕಾರಣವಾಗಿದೆ. ಕೆಲಸದಲ್ಲಿ ಹೆಚ್ಚಿನ ಮಾನಸಿಕ ಒತ್ತಡದಿಂದ ಬೆನ್ನಿನ ಭಾಗದ ಮಾಂಸಖಂಡಗಳು ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಇದೆ ಕ್ರಮೇಣ ಬೆನ್ನು ನೋವು ಬರಲು ಕಾರಣವಾಗುತ್ತದೆ. ಸ್ನಾಯುಗಳು ಹಿಡಿದುಕೊಂಡುಕೊಂಡು ರಕ್ತ ಸಂಚಾರ ಸರಿಯಾಗಿ ಆಗಲು ಆಗದೆ ಆ ಭಾಗದಲ್ಲಿ ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಬೆನ್ನಿನ ಮೂಳೆಗಳ ಸವೆತದಿಂದಲೂ ಬೆನ್ನು ನೋವು ಕಾಣಿಸಿಕೊಳ್ಳುತ್ತದೆ. ಇನ್ನು ಕೆಲವರಿಗೆ ಅವರ ದೈನಂದಿನ ಚಟುವಟಿಕೆಗಳಲ್ಲಿನ ಅತಿಯಾದ ಬೆನ್ನಿನ ಭಾಗದ ಬಳಕೆಯಿಂದ ಬೆನ್ನಿನ ನೋವು ಕಾಣಿಸಿಕೊಳ್ಳುತ್ತದೆ.

ಮೊದಲನೆಯದಾಗಿ ಬೆನ್ನು ನೋವು ಯಾವ ಕಾರಣದಿಂದ ಬಂದಿದೆ ಎಂಬುದನ್ನು  ಸರಿಯಾಗಿ ತಿಳಿದುಕೊಳ್ಳಬೇಕು. ಅದೇ ಒಂದು ಮುಖ್ಯ ಔಷದವಾಗಿದೆ. ಏಕೆಂದರೆ ಅದರ ಸರಿಯಾದ ಕಾರಣ ತಿಳಿದಾಗ ಉತ್ತಮವಾದ ಔಷಧವನ್ನು ಮಾಡಲು ಸಹಕಾರಿಯಾಗುತ್ತದೆ. ಹೆಚ್ಚಿನದಾಗಿ ಬೆನ್ನು ನೋವನ್ನು ನಿವಾರಿಸಲು ಮಾನಸಿಕ ಹತೋಟಿಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಮುಖ್ಯ. ಮಾನಸಿಕ ಒತ್ತಡದಿಂದ ಶಾಂತವಾಗಿ ಸರಿಯಾದ ವ್ಯಾಯಾಮವನ್ನು ದಿನನಿತ್ಯದ ಜೀವನದಲ್ಲಿ ತೊಡಗಿಸಿಕೊಳ್ಳುವುದರಿಂದ ಬೆನ್ನು ನೋವಿನ ಸಮಸ್ಯೆಯನ್ನು ದೂರವಿಡಬಹುದು. ಸರಿಯಾಗಿ ಬರಿಗಾಲಿನಲ್ಲಿ ಪ್ರತಿನಿತ್ಯ ಓಡಾಡುವುದರಿಂದ ಭೂಮಿಗೆ ದೇಹದ ಸ್ಪರ್ಶದಿಂದ ಒಳ್ಳೆಯ ಅಂಶಗಳು ದೇಹಕ್ಕೆ ಹೋಗಿ ಮನಸ್ಸು ಶಾಂತವಾಗಿ ನೆಮ್ಮದಿಯಿಂದ ಇರಲು ಸಹಕರಿಯಾಗುತ್ತದೆ.

ಇನ್ನು ಬೆನ್ನು ನೋವಿನ ವಿಚಾರದಲ್ಲಿ ವೈದ್ಯರ ಸರಿಯಾದ ಮಾರ್ಗದರ್ಶನ ಪಡೆದು ಸರಿಯಾದ ತಪಾಸಣೆ ಮಾಡಿಸಬೇಕು. ಶಸ್ತ್ರಚಿಕಿತ್ಸೆ ಮಾಡಿಸುವ ಮೊದಲು ಹೆಚ್ಚು ವಿಚಾರ ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗುವುದು ಒಳ್ಳೆಯದು. ಏಕೆಂದರೆ ಬೆನ್ನು ಅತೀ ಸೂಕ್ಷ್ಮವಾದ ಮತ್ತು ದೇಹದ ಸ್ಥಿತಿಯನ್ನು ಸಮಇಡುವ ಮುಖ್ಯ ಭಾಗವಾಗಿದೆ. ಬೆನ್ನು ನೋವಿನ ಕಾರಣಕ್ಕೆ ನೋವಿನ ಮಾತ್ರೆಯನ್ನು ಸೇವಿಸುವುದರಿಂದಲೂ ಅತಿಯಾದ ಅಡ್ಡ ಪರಿಣಾಮಗಳು ಉಂಟಾಗುತ್ತದೆ. ಆದಕಾರಣ ಇದಕ್ಕೆ ಹೆಚ್ಚಾಗಿ ವ್ಯಾಯಾಮ ಮಾಡುವುದು ಮಾನಸಿಕವಾಗಿ ಸದೃಡವಾಗಿರುವುದೇ ಉತ್ತಮ ಔಷಧವಾಗಿದೆ. ಮಾನಸಿಕವಾಗಿ ಸದೃಢವಾಗಿರುವುದರಿಂದ ಅನೇಕ ಸಮಸ್ಯೆಗಳನ್ನು ಕೂಡ ನಿವಾರಿಸಲು ಸಾಧ್ಯವಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!