ತುಂಬಾ ಮಂಡಿ ನೋವು, ಸೊಂಟ ನೋವು, ಕೈ ಕಾಲು, ಕುತ್ತಿಗೆ ನೋವಿದ್ರೆ ಈ ಮನೆ ಮದ್ದನ್ನು ಟ್ರೈ ಮಾಡಿ ನೋಡಿ ನಿಮಗೆ ತಿಳಿಯುತ್ತದೆ ಎಷ್ಟು ಬೇಗ ಕಡಿಮೆ ಆಗುತ್ತದೆಂದು. ಹಿಂದೆ ಎಲ್ಲಾ ವಯಸ್ಸಾದ ಮೇಲೆ ಮಂಡಿ ನೋವು, ಸೊಂಟ ನೋವು, ಕೈ ಕಾಲು ನೋವು, ಬರ್ತಾ ಇತ್ತು ಆದರೆ ಈಗ ಹಾಗಲ್ಲ ಚಿಕ್ಕ ವಯಸ್ಸಿನಲ್ಲೇ ನಡೆಯಲು ಆಗದಷ್ಟು ,ಕುಳಿತರೆ ಏಳಲಾಗದಷ್ಟು, ಎದ್ದರೆ ಕುಳಿತುಕೊಳ್ಳಲಾಗದಷ್ಟು ನೋವು ಕಾಣಿಸಿಕೊಳ್ಳುತ್ತದೆ. ಈ ರೀತಿಯ ನೋವುಗಳು ಉಂಟಾಗಲು ಹಲವು ರೀತಿಯ ಕಾರಣಗಳಿರುತ್ತವೆ.
ಅಂದರೆ ನಾವು ತಿನ್ನುವ ಆಹಾರ, ನಮ್ಮ ಜೀವನ ಕ್ರಮ, ಮತ್ತು ತುಂಬಾ ವಿಶ್ರಾಂತಿಯಲ್ಲಿ ಇರೋದು ಅಂದ್ರೆ,ಕೆಲಸ ಮಾಡದೆ ನಮ್ಮ ದೇಹಕ್ಕೆ ಸರಿಯಾಗಿ ವ್ಯಾಯಾಮವನ್ನು ಕೊಡದೆ ಇರುವಂತದ್ದು. ತಿನ್ನುವಂತಹ ಆಹಾರದಲ್ಲಿ ಪೌಷ್ಟಿಕ ಆಹಾರ ಇಲ್ಲದೆ ಇರುವುದು, ಅಂದರೆ ಜಂಕ್ ಫುಡ್, ಚಾಟ್ಸ್ ಇಂತಹಗಳನ್ನು ತಿನ್ನುವುದರಿಂದ ನಮ್ಮ ದೇಹಕ್ಕೆ ಬೇಕಾದ ಕ್ಯಾಲ್ಸಿಯಮ್ ಕೊರತೆ ಉಂಟಾಗುತ್ತದೆ.
ತುಂಬಾ ಜನರಿಗೆ ತೂಕ ಹೆಚ್ಚಾಗಿದ್ದರಿಂದ ಮಂಡಿ ನೋವು ಬರುತ್ತದೆ ಜೊತೆಗೆ ಅಡುಗೆ ಮನೆಯಲ್ಲಿ ತುಂಬಾ ಹೊತ್ತು ನಿಂತುಕೊಂಡು ಕೆಲಸ ಮಾಡುವುದರಿಂದಲೂ ಸಹಿತ ಮಂಡಿ ನೋವು ಬರುತ್ತದೆ. ವಯಸ್ಸಾದ ಹಾಗೆ ಬೋನ್ಸ್ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ . ಅದರಲ್ಲೂ ಕೆಲವರಿಗೆ ವಯಸ್ಸಾದ ಮೇಲೆ ಮೂಳೆಗಳಲ್ಲಿ ಸವಕಳಿ ಬರುತ್ತಿರುತ್ತದೆ, ಅದರಿಂದಲೂ ಸಹ ಕೈ ಕಾಲು ನೋವು, ಸೊಂಟ ನೋವು, ಮಂಡಿ ನೋವು, ಬರುವಂತ ಸಾಧ್ಯತೆ ಇರುತ್ತದೆ.
ಈಗ ತಿಳಿಸಿ ಕೊಡುವ ಹೋಂ ರೆಮೆಡಿ ಆಯಿಲ್ ಅನ್ನು ನೀವು ಒಂದು ನಿಮಿಷ ಅಪ್ಲೈ ಮಾಡಿ ಮಸಾಜ್ ಮಾಡಿ ನೋಡಿ ನಿಮಗೆ ಎಷ್ಟು ನೋವಿದ್ದರೂ ಕಡಿಮೆ ಆಗುತ್ತದೆ. ಅದರಲ್ಲೂ 100%ಕ್ಕೆ 50%ರಷ್ಟು ಜನರಿಗೆ ಚಳಿಗಾಲದಲ್ಲಿ ಕೈ ಕಾಲು, ಸೊಂಟ ನೋವು, ಮಂಡಿ ನೋವು ಹೆಚ್ಚಾಗಿ ಕಾಣುತ್ತದೆ. ಸೀಸನ್ ಅಲ್ಲಿ ಆಗುವ ಕೆಲವೊಂದು ನೋವುಗಳಿಗೆ ನಾವು ಮಾತ್ರೆಗಳನ್ನು ತೆಗೆದುಕೊಳ್ಳಬಾರದು, ಪದೇ ಪದೇ ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೇ. ಮುಂದೆ ಪಶ್ಚಾತಾಪ ಪಡುವ ಬದಲು ಈಗಿನಿಂದಲೇ ಮನೆ ಮದ್ದು ಮಾಡಿಕೊಳ್ಳುವುದರಿಂದ ನೋವುಗಳನ್ನೆಲ್ಲಾ ಕಡಿಮೆ ಮಾಡಿಕೊಳ್ಳಬಹುದು.
ಈ ಮನೆ ಮದ್ದನ್ನು ತಯಾರಿಸಿಕೊಳ್ಳುವ ವಿಧಾನ ಈ ಕೆಳಗಿನಂತಿದೆ. ದೊಡ್ಡದಾದ ಎರಡು ಬೆಳ್ಳುಳ್ಳಿ ಗಡ್ಡೆಗಳನ್ನು ಸಿಪ್ಪೆ ತೆಗೆದು ಬಿಡಿಸಿಟ್ಟುಕೊಂಡು ಇದಕ್ಕೆ ಸಾಸಿವೆ ಎಣ್ಣೆ ಮತ್ತು ಅಜ್ವಾನವನ್ನು ತೆಗೆದುಕೊಳ್ಳಬೇಕು. 50 ಗ್ರಾಂ ನಷ್ಟು ಸಾಸಿವೆ ಎಣ್ಣೆಯನ್ನು ತೆಗೆದುಕೊಂಡು ಒಂದು ಅಥವಾ ಎರಡು ಚಮಚ ಅಜ್ವಾನ ಮತ್ತು ಬಿಡಿಸಿಟ್ಟುಕೊಂಡು ಬೆಳ್ಳುಳ್ಳಿಯನ್ನು ಹಾಕಿಕೊಳ್ಳಬೇಕು. ಈ ಮೂರು ಪದಾರ್ಥಗಳನ್ನು ಹಾಕಿದ ನಂತರ ಕುದಿಯಲು ಕಡಿಮೆ ಉರಿಯಲ್ಲಿಟ್ಟು ಕುದಿಸಿಕೊಳ್ಳಬೇಕು.
ಕುದಿಯುವಾಗ ಸ್ವಲ್ಪ ಬಣ್ಣ ಬದಲಾದರೆ ಸಾಕು ಅದನ್ನು ತೆಗೆದುಬಿಡಿ. ಇದು ತಣ್ಣಗಾದ ಮೇಲೆ ಒಂದು ಗಾಜಿನ ಬಾಟಲ್ ಅಥವಾ ಪ್ಲಾಸ್ಟಿಕ್ ಬಾಟಲ್ ನಲ್ಲಿ ಹಾಕಿ ಇಟ್ಟುಕೊಳ್ಳಬಹುದು. ಇದನ್ನು ಒಂದು ವಾರಕ್ಕೆ ಆಗುವಷ್ಟು ಮಾತ್ರ ಮಾಡಿ ಇಟ್ಟುಕೊಳ್ಳಬೇಕು. ತಯಾರಾದಂತಹ ಈ ಆಯಿಲ್ ಅನ್ನು ನೋವು ಇರುವಂತಹ ಜಾಗಕ್ಕೆ ಎರಡು ನಿಮಿಷ ಲೈಟ್ ಆಗಿ ಮಸಾಜ್ ಮಾಡಿಕೊಳ್ಳುವುದರಿಂದ ನಿಧಾನವಾಗಿ ಸಂಪೂರ್ಣ ನೋವು ಕಡಿಮೆ ಆಗುತ್ತದೆ.