ಕೆಲವೊಂದು ಬಾರಿ ಕೆಲಸ ಮಾಡುತ್ತಿರುವಾಗ ಕುತ್ತಿಗೆಯ ಹಿಂಭಾಗ, ಭುಜ ನೋವು ಬರುತ್ತದೆ. ಇದು ಹೆಚ್ಚಾಗಿ ಕಂಪ್ಯೂಟರ್ ಮುಂದೆ ಕೆಲಸ ಮಾಡುವವರಿಗೆ, ಗುಮಾಸ್ತ ಕೆಲಸ ಮಾಡುವವರಿಗೆ, ಚಿನ್ನ- ಬೆಳ್ಳಿಯ ಕೆಲಸ ಮಾಡುವವರಲ್ಲಿ ಕಂಡು ಬರುತ್ತದೆ. ಈ ಕತ್ತು ನೋವು ಬಂದಾಗ ಆಸ್ಪತ್ರೆಗಳ ಚಿಕಿತ್ಸೆ, ಮಾತ್ರೆಗಳ ಉಪಯೋಗ ಇಲ್ಲದೆಯೆ ಪರಿಹಾರ ಮಾಡಿಕೊಳ್ಳುವುದು ಹೇಗೆ ಎಂದು ನಾವು ತಿಳಿಯೋಣ.
ಆಯುರ್ವೇದ ಹಾಗೂ ಮರ್ಮ ಚಿಕಿತ್ಸಾ ವೈದ್ಯರು ಆದ ಡಾಕ್ಟರ್. ಪಿ.ಕೆ. ಪ್ರವೀಣ್ ಕುಮಾರ್ ಈ ತರಹದ ಕತ್ತಿನ ನೋವಿಗೆ ಒಂದು ವ್ಯಾಯಾಮ ವಿಧಾನ ಹೇಳಿಕೊಟ್ಟಿದ್ದಾರೆ. ಈ ತರಹದ ಕತ್ತು ನೋವಿಗೆ ಸರ್ವೈಕಲ್ಸ್ ಸ್ಪಾಂಡಿಲೈಟ್ಸ್ ಎನ್ನುತ್ತಾರೆ. ಸರ್ವೈಕಲ್ ಸ್ಪಾಂಡಿಲೈಟ್ಸ್ ಆಗಲು ಕಾರಣ ಎಂದರೆ ಕತ್ತು ಬಗ್ಗಿಸಿ ಅಥವಾ ಸರಿಯಾದ ವಿಧಾನದಲ್ಲಿ ಕುಳಿತುಕೊಳ್ಳದೆ ಕೆಲಸ ಮಾಡುವುದರಿಂದ ಉಂಟಾಗುವ ನೋವುಗಳು. ಕತ್ತನ್ನು ಬಗ್ಗಿಸಿಯೆ ಹಲವು ಗಂಟೆಗಳ ಕಾಲ ಕೆಲಸ ಮಾಡಿದಾಗ ಸರ್ವೈಕಲ್ ಗಳು ಬೆನ್ನು ಹುರಿಗಳಲ್ಲಿ ಕಂಪ್ರೆಸ್ ಆಗುತ್ತಾ ಬರುತ್ತದೆ. ಹೆಚ್ಚು ಬೈಕ್ ರೈಡ್ ಮಾಡುವವರಿಗೂ ಇದು ಉಂಟಾಗುತ್ತದೆ. ಇದನ್ನು ಮಾತ್ರೆಗಳು ಇಲ್ಲದೆಯೆ ಮರ್ಮ ಚಿಕಿತ್ಸೆಯ ಮೂಲಕ ಇದನ್ನು ಸರಿ ಮಾಡಿಕೊಳ್ಳಬಹುದು. ಆಸ್ಪತ್ರೆಗಳ ಓಡಾಟವೇ ಬೇಡ ಎನ್ನುವವರಿಗೆ ವ್ಯಾಯಾಮ ಉತ್ತಮ ದಾರಿಯಾಗಿದೆ. ಹಾಗಾದರೆ ಕುತ್ತಿಗೆ ನೋವಿಗೆ ವ್ಯಾಯಾಮ ಮಾಡುವುದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಹೀಗಿದೆ. ಮೊದಲು ನೇರವಾಗಿ ಕುಳಿತುಕೊಂಡು ಒಂದು ಐದು ಬಾರಿ ಜೋರಾಗಿ ಉಸಿರು ತೆಗೆದುಕೊಂಡು ಬಿಡಬೇಕು. ನಂತರದಲ್ಲಿ ಎರಡು ಕೈ ಬೆರಳುಗಳನ್ನು ಜೋಡಿಸಿ, ಕುತ್ತಿಗೆಯ ಹಿಂಬದಿಯಲ್ಲಿ ಹಿಡಿದುಕೊಂಡು, ತಲೆಯನ್ನು ಹಿಂದೆ ಕೈ ಬೆರಳುಗಳಿಂದ ಒತ್ತುತ್ತಾ, ಒಂದು ಐದು ಸೆಕೆಂಡ್ ವರೆಗೆ ಮಾಡಿ ನಂತರ ಎರಡು ಸೆಕೆಂಡ್ ಬಿಡಿ. ಹೀಗೆ ಐದು ಆವೃತ್ತ ಮಾಡಬೇಕು. ಹಿಂದಿನಿಂದ ಬೆರಳು ತಲೆಯನ್ನು ಒತ್ತುವಾಗ ತಲೆಯನ್ನು ಕೈಬೆರಳುಗಳಿಗೆ ಒತ್ತಬೇಕು. ಎರಡನೆಯದಾಗಿ ಅಂಗೈ ಇಂದ ಹಣೆಯನ್ನು ಒತ್ತಬೇಕು. ಇದನ್ನು ಐದು ಸೆಕೆಂಡ್ ಗಳ ಐದು ಆವೃತ್ತ ಮಾಡಬೇಕು.
ಮೂರನೆಯದಾಗಿ ಕೈ ಬೆರಳುಗಳನ್ನು ಜೋಡಿಸಿಕೊಂಡು ಕುತ್ತಿಗೆಯ ಎಡಭಾಗದಲ್ಲಿ ಕೈ ಹೆಚ್ಚು ಒತ್ತಬೇಕು ಇದು ಐದು ಆವೃತ್ತ ಹಾಗೂ ನಂತರ ಬಲಭಾಗದಲ್ಲಿ ಹೆಚ್ಚು ಒತ್ತಬೇಕು ಇದು ಐದು ಆವೃತ್ತ. ಹೀಗೆ ಬಲಗಡೆಯಿಂದ ಹಾಗೂ ಎಡಗಡೆಯಿಂದ ಐದು ಬಾರಿ ಮಾಡಬೇಕು. ನಂತರದಲ್ಲಿ ತೋರು ಬೆರಳಿಂದ ಗದ್ದವನ್ನು ಹಿಂದೆ ಒತ್ತಿ ಹಿಡಿಯಬೇಕು. ಹೀಗೆ ಐದು ಸೆಕೆಂಡುಗಳ ಒಂದು ಆವೃತ್ತಿಯೊಂದಿಗೆ ಐದು ಬಾರಿ ಮಾಡಬೇಕು. ನಂತರದಲ್ಲಿ ಭುಜವನ್ನು ಹಿಂದಕ್ಕೆ ಮುಂದಕ್ಕೆ ತಿರುಗಿಸಬೇಕು. ಹೀಗೆ ಎರಡು ಭುಜಗಳನ್ನು ತಿರುಗಿಸಬೇಕು. ಇದೆಲ್ಲದರ ನಂತರದಲ್ಲಿ ಎರಡು ಕೈ ಬೆರಳುಗಳನ್ನು ಸೇರಿಸಿ ಮೆಲ್ಲಗೆ ಕೈ ಮೇಲಕ್ಕೆ ಎತ್ತಬೇಕು. ಮೈ ಮುರಿಯುವುದು ಅನ್ನುತ್ತಾರಲ್ಲ ಹಾಗೆ. ಬೆಕ್ಕು ಹಾಗೂ ಸಿಂಹಗಳು ಸ್ಟ್ರೆಚ್ ಮಾಡುತ್ತವಲ್ಲ ಹಾಗೆಯೆ. ಹೀಗೆ ಸ್ಟ್ರೆಚ್ ಮಾಡಿದ ನಂತರ ಅದೆ ಸ್ಥಿತಿಯಲ್ಲಿ ಎಡಗಡೆ ಹಾಗೂ ಬಲಗಡೆಗೆ ದೇಹ ಭಾಗಿಸಬೇಕು. ಹೀಗೆ ಮಾಡುವುದರಿಂದ ಬೆನ್ನು ಮೂಳೆಗಳ ಮಧ್ಯದಲ್ಲಿ ಇರುವ ಇಂಟ್ರಾ ವರ್ಟಿಬ್ರಲ್ ಸ್ಪೇಸ್ ಗಳು ಇರುವ ಜಾಗ ಸರಿಯಾಗುತ್ತದೆ. ನರಗಳು ಕಂಪ್ರೆಸ್ ಆಗುವುದು ನಿಲ್ಲುತ್ತದೆ. ಈ ವ್ಯಾಯಾಮವನ್ನು ಬೆಳಿಗ್ಗೆ ಮತ್ತು ಸಂಜೆ ಒಂದು ಬಾರಿ ಮಾಡಬೇಕು. ಒಂದುವೇಳೆ ಈ ವ್ಯಾಯಾಮ ಮಾಡುವಾಗ ನೋವು ಹೆಚ್ಚಾದರೆ ಡಾಕ್ಟರ್ ಭೇಟಿ ಮಾಡುವುದು ಉತ್ತಮ. ಯಾಕೆಂದರೆ ಈ ವ್ಯಾಯಾಮ ಆಗಿನಬರುವುದಿಲ್ಲ ಎಂಬ ಸೂಚನೆ ಅದು ನೀಡುತ್ತದೆ. ಕೆಲವು ದಿನ ಅಥವಾ ಒಂದು ತಿಂಗಳು ಮಾಡಿ ಫಲ ನೀಡಲಿಲ್ಲ ಅನ್ನುವುದಲ್ಲ. ಈ ವ್ಯಾಯಾಮವನ್ನು ಸತತವಾಗಿ ಮೂರರಿಂದ ನಾಲ್ಕು ತಿಂಗಳುಗಳ ವರೆಗೂ ಮಾಡಬೇಕಾಗುತ್ತದೆ.
ಈ ವ್ಯಾಯಾಮವನ್ನು ಪ್ರಯೋಗ ಮಾಡಿ. ನೋವು ಹೆಚ್ಚಾದರೆ ವೈದ್ಯರನ್ನು ಸಂಪರ್ಕಿಸಿ ನಿಮ್ಮ ದೇಹಕ್ಕೆ ಸರಿಯಾಗುವ ವ್ಯಾಯಾಮವನ್ನು ಅವರಿಂದ ಪಡೆಯಿರಿ. ಯಾರಿಂದಲೊ ಕೇಳಿ ಮಾಡುತ್ತೇನೆ, ಮೊದಲಿಗೆ ನೋವಾಗುತ್ತದೆ ಇಂತಹ ನಿರ್ಲಕ್ಷ್ಯಗಳು ಬೇಡ. ಆರೋಗ್ಯ ತುಂಬಾ ಮುಖ್ಯವಾಗಿರುತ್ತದೆ.