ಬೇಗನೆ ಸಂತಾನ ಫಲ ಪಡೆಯಲು ಸುಲಭ ಉಪಾಯ

0 152

ಹೊಸದಾಗಿ ಮದುವೆ ಆದವರಿಗೆ ಅಥವಾ ಮಕ್ಕಳನ್ನು ಪಡೆಯಲು ಬಯಸುತ್ತಿರುವವರಿಗೆ ಸಾಮಾನ್ಯವಾಗಿ ಈ ಒಂದು ಅನುಮಾನ ಅಥವಾ ಪ್ರಶ್ನೆ ಇದ್ದೆ ಇರುತ್ತೆ. ಪೀರಿಯಡ್ ಆದಮೇಲೆ ಯಾವ ಸಮಯದಲ್ಲಿ ಸೇರಿದಾಗ ಗರ್ಭಧಾರಣೆ ಆಗಬಹುದು? ಎನ್ನುವ ಪ್ರಶ್ನೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿಯಬೇಕಾದ ವಿಷಯ. ಮುಖ್ಯವಾಗಿ ಇದು ಪ್ರಕೃತಿ ಸಹಜವಾದ ಪ್ರಕ್ರಿಯೆ ಆಗಿರುವುದರಿಂದ ಯಾವುದೇ ವ್ಯಕ್ತಿ ಕೂಡಾ ಅಸಹ್ಯ ಪಡುವುದು ಅಥವಾ ಮುಜುಗರ ಪಡುವ ಅಗತ್ಯ ಇರುವುದಿಲ್ಲ. ಗರ್ಭಧಾರಣೆಗೆ ಸರಿಯಾದ ಸಮಯ ಯಾವುದು? ಎಂಬುದರ ಕುರಿತಾಗಿ ನಾವು ಈ ಲೇಖನದ ಮೂಲಕ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹೆಣ್ಣುಮಕ್ಕಳನ್ನು ಪೀರಿಯಡ್ ಗೆ ಸಂಬಂಧಿಸಿ ಮುಖ್ಯವಾಗಿ ಮೂರು ಗುಂಪುಗಳಲ್ಲಿ ವಿಭಾಗಿಸಬಹುದು. ಮೊದಲಿಗೆ ರೆಗ್ಯೂಲರ್ ಸೈಕಲ್ ಅಂದರೆ ಪ್ರತೀ ತಿಂಗಳು ಸರಿಯಾಗಿ ಮೂವತ್ತು ದಿನಗಳಲ್ಲಿ ನವೆಂಬರ್ ಐದರಂದು ಪೀರಿಯಡ್ ಆಗಿದ್ದು ನಂತರ ಮತ್ತೆ ಡಿಸೆಂಬರ್ ಐದರಂದು ಆದರೆ ಅಲ್ಲಿಗೆ ಒಂದು ತಿಂಗಳು ಮುಗಿಯತ್ತೆ ಇದರಲ್ಲಿ ಕೆಲವೊಮ್ಮೆ ಎರಡು ಮೂರು ದಿನಗಳು ಹೆಚ್ಚು ಕಡಿಮೆ ಆಗಲೂ ಬಹುದು ಇದನ್ನ ರೆಗ್ಯೂಲರ್ ಸೈಕಲ್ ಎನ್ನಲಾಗುತ್ತದೆ. ಡೀಲೆಯಿಡ್ ಸೈಕಲ್ ಅಂದರೆ ತಡವಾಗಿ ಆಗುವುದು. ಕೆಲವರಿಗೆ ಸರಿಯಾಗಿ ಪ್ರತೀ ತಿಂಗಳು ಪೀರಿಯಡ್ ಆಗದೇ ಒಂದೂವರೆ ತಿಂಗಳಿಗೆ ಒಮ್ಮೆ ಆಗುವವರು ಇರುತ್ತಾರೆ. ಇನ್ನು ಮೂರನೇ ವರ್ಗದಲ್ಲಿ ಬರುವುದು ಇರ್ರೆಗ್ಯೂಲರ್ ಸೈಕಲ್. ಇದರಲ್ಲಿ ಹೆಣ್ಣುಮಕ್ಕಳಿಗೆ ತಮಗೆ ಯಾವಾಗ ಪೀರಿಯಡ್ ಡೇಟ್ ಬರತ್ತೆ ಅನ್ನೋದು ಅವರಿಗೆ ಸರಿಯಾಗಿ ತಿಳಿದಿರುವುದಿಲ್ಲ. ಕೆಲವೊಮ್ಮೆ ಎರಡು , ಮೂರು ತಿಂಗಳಿಗೆ ಒಮ್ಮೆ ಇಲ್ಲವೇ ನಾಲ್ಕು ಐದು ತಿಂಗಳಿಗೆ ಒಮ್ಮೆ ಪೀರಿಯಡ್ ಆಗುವವರು ಇರುತ್ತಾರೆ. ಈ ರೀತಿಯಾಗಿ ಇರ್ರೆಗ್ಯೂಲರ್ ಪೀರಿಯಡ್ ಆಗುವವರೆಗೆ ಯಾವ ಸಮಯದಲ್ಲಿ ಮಕ್ಕಳು ಆಗಬಹುದು ಎಂದು ಹೇಳುವುದು ಸ್ವಲ್ಪ ಕಷ್ಟದ ವಿಷಯ.

ಇನ್ನು ಒಂದೂವರೆ ತಿಂಗಳಿಗೆ ಪೀರಿಯಡ್ ಆಗುವವರಿಗೆ ಆದರೆ ಸ್ವಲ್ಪ ಮಟ್ಟಿಗೆ ಆದರೂ ಅವರು ಯಾವ ಸಮಯದಲ್ಲಿ ಸೇರಿದರೆ ಮಕ್ಕಳು ಆಗಬಹುದು ಎಂದು ಹೇಳಬಹುದು. ಇನ್ನು ರೆಗ್ಯುಲರ್ ಆಗಿ ಪೀರಿಯಡ್ ಆಗುವವರೆಗೆ ಶೇಕಡಾ ಎಪ್ಪತ್ತರಿಂದ ಎಂಭತ್ತರಷ್ಟು ನಿಖರವಾಗಿ ಹೇಳಬಹುದು. ಇಲ್ಲಿ ನಾವು ಹೇಳುವುದು ರೆಗ್ಯುಲರ್ ಆಗಿ ಪೀರಿಯಡ್ ಆಗುವವರಿಗೆ ಈ ಮಾಹಿತಿ ಬಹಳ ಉಪಯುಕ್ತಕಾರಿ ಆಗುವುದು. ಇಲ್ಲಿ ಉದಾಹರಣೆ ನೀಡಲಾಗುವುದು ನಿಮ್ಮ ಡೇಟ್ ಗೆ ತಕ್ಕಂತೆ ನೋಡಿಕೊಳ್ಳಿ. ಮೂವತ್ತು ದಿನದ ಸೈಕಲ್ ಇದ್ದವರಿಗೆ ಅದರಲ್ಲಿ ಐದು ದಿನ ಮುಟ್ಟಿನ ಅವಧಿ ಆಗಿರುವುದು. ಹತ್ತು ದಿನಗಳು (Fertile period ) ಅಂದರೆ ಅಂಡಾಣುಗಳ ಫಲವತ್ತತೆಯ ಸಮಯ ಆಗಿರುವುದು ಇನ್ನು ಹದಿನೈದು ದಿನಗಳನ್ನು ಸೇಫ್ ಪೀರಿಯಡ್ ಎಂದು ಹೇಳುತ್ತಾರೆ.ಅಂದರೆ ಮುಖ್ಯವಾಗಿ ಹತ್ತು ದಿನಗಳು ಅಂದರೆ ಅಂಡಾಣುಗಳು ಬಿಡುಗಡೆ ಆಗುವ ಸಮಯದಲ್ಲಿ ಸೇರಿದರೆ ಗರ್ಭ ಧರಿಸುವ ಅವಕಾಶ ಹೆಚ್ಚಾಗಿ ಇರುವುದು.

ಪ್ರತೀ ತಿಂಗಳು ಮೂವತ್ತು ದಿನಗಳು ಇರುವುದು. ಇದರಲ್ಲಿ ಒಂದರಿಂದ ಐದನೇ ತಾರಿಕಿನವರೆಗೂ ಹೆಣ್ಣುಮಕ್ಕಳಿಗೆ ಮುಟ್ಟಿನ ಅವಧಿ ಎಂದು ಇದ್ದರೆ , ಮುಟ್ಟಿನ ಅವಧಿ ಮುಗಿದು ಐದು ದಿನ ಬಿಟ್ಟು ಅಂದರೆ ಇಲ್ಲಿ ಹೇಳಿರುವ ಹಾಗೆ ಐದನೇ ದಿನದಿಂದ ಇನ್ನು ಐದು ದಿನ ಬಿಟ್ಟು ಉಳಿದ ಹತ್ತು ದಿನಗಳು ಅಂದರೆ ಹನ್ನೊಂದರಿಂದ ಇಪ್ಪತ್ತನೇ ತಾರಿಕಿನವರೆಗೆ ಸೇರಿದಾಗ ಆಗ ಅಂಡಾಣುಗಳ ಬಿಡುಗಡೆಯ ಸಮಯ ಆಗಿರುವುದು ಆಗ ಮಕ್ಕಳು ಆಗುವ ಸಂಭವ ಇರುತ್ತದೆ. ಇನ್ನು ಉಳಿದಿರುವುದು ಪೀರಿಯಡ್ ಆಗಿ ಐದು ದಿನ ಮತ್ತು ಮುಂದಿನ ಪೀರಿಯಡ್ ಬರಲು ಹತ್ತು ದಿನ ಮೊದಲು ಇದನ್ನು ಸೇಫ್ ಪೀರಿಯಡ್ ಎಂದು ಹೇಳುತ್ತಾರೆ. ಈ ಸೇಫ್ ಪೀರಿಯಡ್ ನಲ್ಲಿ ಸೇರಿದಾಗ ಗರ್ಭಧಾರಣೆ ಆಗುವುದಿಲ್ಲ. ಇನ್ನು ಉಳಿದ ಹತ್ತು ದಿನಗಳಲ್ಲಿ ನಿಖರವಾಗಿ ಇದೆ ದಿನ ಅಂಡಾಣುಗಳು ಬಿಡುಗಡೆ ಆಗುತ್ತವೆ ಎಂದು ಹೇಳುವುದು ಕಷ್ಟ ಹಾಗಾಗಿ ಹತ್ತು ದಿನಗಳು ಸೇರುವುದರಿಂದ ಯಾವುದೋ ಒಂದು ದಿನ ಅಂಡಾಣುಗಳು ಬಿಡುಗಡೆ ಆದಾಗ ಸ್ಪರ್ಮ್ ಹೆಣ್ಣುಮಕ್ಕಳ ದೇಹದಲ್ಲಿ ಮೂರು ದಿನಗಳ ಕಾಲ ಇರುವಾಗ ಸ್ಪರ್ಮ್ ಅಂಡಾಣುಗಳ ಜೊತೆ ಸೇರಿ ವರ್ಗೀಕರಣ ಆಗಿ ಗರ್ಭಧಾರಣೆ ಪ್ರಕ್ರಿಯೆ ನಡೆಯುತ್ತದೆ. ಹಾಗಾಗಿ ಪೀರಿಯಡ್ ಆದ ನಂತರದ ಮಧ್ಯದ ಹತ್ತು ದಿನಗಳು ಗರ್ಭಧಾರಣೆಗೆ ಬಹಳ ಮುಖ್ಯವಾಗಿರುತ್ತದೆ.

Leave A Reply

Your email address will not be published.