ಒಬ್ಬ ವ್ಯಕ್ತಿಯ ಜೀವನ, ಅವನ ಸ್ವಭಾವ ತಿಳಿಯಬೇಕಾದರೆ ಅವನು ಹುಟ್ಟಿದ ದಿನಾಂಕದ ಜೊತೆಗೆ ಆತನ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಎನ್ನುವುದು ಮುಖ್ಯ. ಬ ಅಥವಾ B ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ವ್ಯಕ್ತಿಗಳ ಸ್ವಭಾವ ಹಾಗೂ ಜೀವನ ಹೇಗಿರುತ್ತದೆ ಎಂಬುದನ್ನು ಈ ಲೇಖನದ ಮೂಲಕ ತಿಳಿಯೋಣ.
B ಹೆಸರಿನಿಂದ ಪ್ರಾರಂಭವಾಗುವ ಹೆಸರಿನವರು ಮೃದು ಸ್ವಭಾವದವರಾಗಿರುತ್ತಾರೆ. ಸದಾಕಾಲ ಆಕ್ಟಿವ್ ಆಗಿರುವ ಇವರು ಹೆಚ್ಚು ಸ್ನೇಹಿತರನ್ನು ಹೊಂದಿರುತ್ತಾರೆ. ಕುಟುಂಬದಲ್ಲಿ ಇವರೆಂದರೆ ಎಲ್ಲರಿಗೂ ಪ್ರೀತಿ ತಂದೆ ತಾಯಿಯಿಂದ ಹಿಡಿದು ಅಕ್ಕ, ತಮ್ಮ, ತಂಗಿಯರಿಗೆ ಇವರು ಅಚ್ಚು ಮೆಚ್ಚು. ಎಲ್ಲರೊಂದಿಗೂ ಉತ್ತಮ ಬಾಂಧವ್ಯ ಬೆಳೆಸಿಕೊಂಡುರುತ್ತಾರೆ. ಓದಿನಲ್ಲಿ ಇವರು ಮುಂದೆ ಇರುತ್ತಾರೆ ಇವರಿಗೆ ಸುಲಭವಾಗಿ ಸರಸ್ವತಿ ದೇವಿಯು ಒಲಿಯುತ್ತಾಳೆ. ಉದ್ಯೋಗ ವಿಚಾರದಲ್ಲೂ ಇವರು ಅಂದುಕೊಂಡಿದ್ದನ್ನು ಸಾಧಿಸುತ್ತಾರೆ. ತಾವು ಅಂದುಕೊಂಡಿದ್ದನ್ನು ಸಾಧಿಸುವ ತನಕ ಇವರಿಗೆ ನೆಮ್ಮದಿ ಇರುವುದಿಲ್ಲ. ಇವರಿಗೆ ಒಳ್ಳೆಯ ಹಠವಿದೆ ಅತೀ ಹಠವಲ್ಲ ಇವರ ಹಠದಿಂದ ಯಾರಿಗೂ ಕೆಟ್ಟದಾಗಬಾರದು ಎಂಬ ಭಾವನೆ ಇವರಿಗಿರುತ್ತದೆ.
ಇವರು ಪ್ರೀತಿಸಿ ಮದುವೆಯಾಗುವ ವಿಚಾರದಲ್ಲಿ ನಂಬಿಕೆ ಇಟ್ಟಿರುತ್ತಾರೆ ಹಾಗಂತ ಬೇರೆಯವರಿಗೆ ನೋವು ಮಾಡಿ ತಮ್ಮ ಪ್ರೀತಿಯನ್ನು ಗೆಲ್ಲಿಸಬೇಕೆಂಬ ಹಠ ಇರುವುದಿಲ್ಲ. ಎಲ್ಲರ ಒಪ್ಪಿಗೆ ಪಡೆದು ಪ್ರೀತಿಯನ್ನು ಪಡೆದು ಒಳ್ಳೆಯ ಜೀವನ ನಡೆಸುತ್ತಾರೆ. ಇವರ ಆರ್ಥಿಕ ಪರಿಸ್ಥಿತಿಯು ಉತ್ತಮವಾಗಿರುತ್ತದೆ ಹಣದ ವಿಷಯದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ. ಒಟ್ಟಿನಲ್ಲಿ ಒಬ್ಬ ವ್ಯಕ್ತಿಯ ಜೀವನ ನಿರ್ಧಾರದಲ್ಲಿ ಹೆಸರು ಕೂಡ ಬಹಳ ಮುಖ್ಯವಾಗಿದೆ. ಈ ಮಾಹಿತಿಯನ್ನು B ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರಿಗೆ ತಪ್ಪದೆ ತಿಳಿಸಿ.