ಈಗಿನ ಕಾಲದಲ್ಲಿ ಇಬ್ಬ ವ್ಯಕ್ತಿ ಒಂದು ರೂಪಾಯಿ ಖರ್ಚು ಮಾಡುವುದಕ್ಕೂ ಹಿಂದೆ ಮುಂದೆ ನೋಡುತ್ತಾರೆ. ಸಹಾಯ ಮಾಡುವ ಮನೋಭಾವ ಮೂಡಿಬರುವುದೇ ಕಡಿಮೆ. ಇಂಥ ಕಾಲದಲ್ಲಿ ತಮಿಳುನಾಡಿನ ಮಧುರೈನ ಮಹಿಳೆಯೊಬ್ಬರು ಕೋಟಿಗಟ್ಟಲೇ ಬೆಲೆ ಬಾಳುವ ತಮ್ಮ ಆಸ್ತಿಯನ್ನು ಸರಕಾರಿ ಶಾಲೆಯನ್ನು ವಿಸ್ತೀರ್ಣ ಮಾಡುವುದಕ್ಕೆ ದಾನವಾಗಿ ನೀಡಿದ್ದಾರೆ.
ಈಕೆಯ ಹೆಸರು ಆಯಿ ಅಮ್ಮಾಳ್ ಇವರು ಮಧುರೈ ಜಿಲ್ಲೆ, ಕೊಡಿಕ್ಕುಲಂ ಮೂಲದವರು. ಇವರು ಒಂದು ರಾಷ್ಟೀಕೃತ ಬ್ಯಾಂಕ್ ನಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡುತ್ತಿದ್ದರು. ಇವರ ಊರಿನ, ಸರ್ಕಾರಿ ಶಾಲೆಯನ್ನು ವಿಸ್ತೀರ್ಣ ಮಾಡಿ, ಹೈಯೆರ್ ಸೆಕೆಂಡರಿ ಶಾಲೆಯಾಗಿ ಮಾಡುವುದಕ್ಕೆ ಭೂಮಿಯ ಅವಶ್ಯಕತೆ ಎಂದು ತಿಳಿದ ಬಳಿಕ, ತಮ್ಮ ಬಳಿ ಇದ್ದ 7 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸರ್ಕಾರಿ ಶಾಲೆಯ ವಿಸ್ತೀರ್ಣಕ್ಕೆ ಕೊಡಬೇಕು ಎಂದು ನಿರ್ಧಾರ ಮಾಡಿದ್ದಾರೆ..
ಬಳಿಕ ತಾವೇ ಜಮೀನು ರಿಜಿಸ್ಟರ್ ಮಾಡುವ ಕಚೇರಿಗೆ ಹೋಗಿ, ಶಾಲೆಯ ಹೆಸರಿಗೆ ರಿಜಿಸ್ಟರ್ ಮಾಡಿಸಿ, ಎಲ್ಲಾ ದಾಖಲೆಗಳನ್ನು ಶಾಲೆಯ ಶಿಕ್ಷಣಾಧಿಕಾರಿಗಳಿಗೆ ನೀಡಿದ್ದಾರೆ. ಅಷ್ಟು ದೊಡ್ಡ ಮೊತ್ತದ ಆಸ್ತಿಯನ್ನು ಶಾಲೆಯ ವಿಸ್ತರಣೆಗೆ ನೀಡಿದ ಈ ಮಹಿಳೆ ಸುತ್ತ ಮುತ್ತಲಿನ ಜನರಿಗೆ ದೇವರ ಸ್ವರೂಪವೇ ಆಗಿದ್ದಾರೆ. ಈಕೆ ಈ ಔದಾರ್ಯ ಗುಣದ ಬಗ್ಗೆ ಗೊತ್ತಾಗುತ್ತಿದ್ದ ಹಾಗೆಯೇ, ಅಲ್ಲಿನ ಶಾಸಕರಾದ ವೆಂಕಟೇಶನ್ ಅವರು ಆಯಿ ಅಮ್ಮಾಳ್ ಅವರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
ಅಷ್ಟೇ ಅಲ್ಲದೆ ತಮಿಳುನಾಡಿನ ಸಿಎಂ ಎಮ್.ಕೆ ಸ್ಟಾಲಿನ್ ಅವರು ಕೂಡ, ಆಯಿ ಅಮ್ಮಾಳ್ ಅವರ ಕೆಲಸಕ್ಕೆ ಮೆಚ್ಚುಗೆ ಸೂಚಿಸಿ, ಅವರ ಬಗ್ಗೆ ಟ್ವೀಟ್ ಮಾಡಿ, ಗಣರಾಜ್ಯೋತ್ಸವದ ದಿವಸ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇಂಥ ಸಹಾಯ ಮಾಡುವ ಮನೋಭಾವದ ಗುಣ ಎಲ್ಲರಲ್ಲೂ ಇದ್ದರೆ, ನಿಜಕ್ಕೂ ನಮ್ಮ ಸಮಾಜ ಚೆನ್ನಾಗಿರುತ್ತದೆ.