ನಮ್ಮ ರಾಜ್ಯದಲ್ಲಿ ಹಲವಾರು ಜನರ ಬಳಿ ಇರುವುದಕ್ಕೆ ಸ್ವಂತ ಮನೆ ಇಲ್ಲ, ಅಥವಾ ಅವರ ಬಳಿ ಸೈಟ್ ಕೂಡ ಇಲ್ಲ. ಆದರೆ ಎಲ್ಲರೂ ತಮ್ಮದೇ ಆದ ಸ್ವಂತ ಮನೆ ಹೊಂದಿರಬೇಕು ಎನ್ನುವ ಆಜ್ ಇರುತ್ತದೆ. ಅಂಥವರಿಗೆ ಸರ್ಕಾರವು ಆಶ್ರಯ ಯೋಜನೆಯ ವತಿಯಿಂದ ಸೈಟ್ ವಿತರಣೆ ಮಾಡಲು ನಿರ್ಧಾರ ಮಾಡಿದೆ. ಬೆಂಗಳೂರು ಗ್ರಾಮಾಂತರ ವಿಭಾಗದಲ್ಲಿ ಖಾಲಿ ಇರುವ ಜಾಗಗಳನ್ನು ಸೈಟ್ ಆಗಿ ಪರಿವರ್ತಿಸಿ ನಿರಾಶ್ರಿತರಿಗೆ ನೀಡಬೇಕು ಎನ್ನುವುದು ಸರ್ಕಾರದ ಪ್ಲಾನ್ ಆಗಿದೆ.

ಅಷ್ಟೇ ಅಲ್ಲದೆ, ರಾಜೀವ್ ಗಾಂಧಿ ಯೋಜನೆಯ ಅಡಿಯಲ್ಲಿ ಸ್ವಂತ ಮನೆ ಪಡೆಯಲು ಯೋಜನೆಗೆ ಜನರು ಅಪ್ಲಿಕೇಶನ್ ಹಾಕಿದ್ದು, ಈ ಯೋಜನೆಯ ಮೂಲಕ ಮನೆ ಯಾವಾಗ ಸಿಗುತ್ತದೆ ಎಂದು ಕಾಯುತ್ತಿದ್ದಾರೆ. ಇದೀಗ ಸರ್ಕಾರವು ಸೈಟ್ ಮತ್ತು ಮನೆ ಎರಡನ್ನು ಕೊಡುವ ನಿರ್ಧಾರ ಮಾಡಿದೆ ಎಂದು ಹೇಳಲಾಗುತ್ತಿದ್ದು, ಇದು ಹೇಗೆ ಸಾಧ್ಯ ಎಂದು ಜನರಲ್ಲಿ ಕುತೂಹಲ ಶುರುವಾಗಿದೆ. ಎರಡನ್ನು ಜನರಿಗೆ ವಿತರಣೆ ಮಾಡಬೇಕು ಎಂದರೆ ಸರ್ಕಾರವು ಸಾವಿರಾರು ಕೋಟಿ ಮೊತ್ತವನ್ನು ಮೀಸಲಾಗಿ ಇಡಬೇಕಾಗುತ್ತದೆ.

ಜಮೀನು ಹೊಂದಿರುವ ರೈತರು ಅಲ್ಲೇ ಮನೆ ಕಟ್ಟಿಕೊಳ್ಳಲು ಸರ್ಕಾರ ಸಹಾಯ ಮಾಡುತ್ತದೆ, ಇನ್ನು ಕೆಲವರು ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು ಅವರಿಗಾಗಿ ಸ್ವಂತ ಮನೆ ಇಲ್ಲ. ಅಂಥವರಿಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಎಂದು ಕನಸು ಇರುತ್ತದೆ. ಅವರೆಲ್ಲರಿಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ನಿವೇಶನ ಹಂಚಿಕೆ ಮಾಡಲು ನಿರ್ಧಾರ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಹೊಸಕೋಟಿ ವಲಯದಲ್ಲಿ ಸುಮಾರು 324 ಎಕರೆಗಳಷ್ಟು ಭೂಮಿ, ನೆಲಮಂಗಲ ಕಡೆ ಸುಮರು 46 ಎಕರೆ ಭೂಮಿಯನ್ನು ಇದಕ್ಕಾಗಿ ಮೀಸಲಿಡಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಎಲ್ಲೆಲ್ಲಿ ಸೈಟ್ ಗೆ ಜಾಗ ಗುರುತಿಸಲಾಗಿದೆ ಎಂದು ನೋಡುವುದಾದರೆ, ದೇವನಹಳ್ಳಿವಲ್ಲಿ 64 ಎಕರೆ, ದೊಡ್ಡಬಳ್ಳಾಪುರದಲ್ಲಿ 93.3 ಎಕರೆ, ಹೊಸಕೋಟೆ 324 ಎಕರೆ, ನೆಲಮಂಗಲ 46 ಎಕರೆ ಗುರುತಿಸಲಾಗಿದೆ. ಸರ್ಕಾರವೇನೋ ಈಗ ಸೈಟ್ ಮನೆ ನಿವೇಶನ ಮಾಡುವುದಾಗಿ ತಿಳಿಸಿದೆ.

ಆದರೆ ಈ ಕೆಲಸ ಹೇಳಿದಷ್ಟು ಸುಲಭ ಅಂತೂ ಅಲ್ಲ. ಈ ರೀತಿ ಹೇಳಿ, ನಿವೇಶನ ಮಾಡಿಕೊಡದೇ ಹೋದರೆ, ಸರ್ಕಾರದ ಮೇಲೆ ಆರೋಪ ಬರುತ್ತದೆ. ಚುನಾವಣೆ ಬಗ್ಗೆ ಮಾತ್ರ ಗಮನದಲ್ಲಿ ಇಟ್ಟುಕೊಂಡು, ಜನರಿಗೆ ಬಾಯಿಮಾತಿನ ಸಲುವಾಗಿ ನಿವೇಶನ ಹಂಚಿಕೆ ಮಾಡುವುದಾಗಿ ಹೇಳಿ, ಮಾಡದೇ ಹೋದರೆ, ಚುನಾವಣೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ.

ಗ್ರಾಮ ಪಂಚಾಯಿತಿ ಮಟ್ಟದಲ್ಲಿ ನಿವೇಶನ ಹಂಚಿಕೆ ಮಾಡುವುದಾಗಿ ತಿಳಿಸಿ, ಆ ಕೆಲಸ ಮಾಡಲಿಲ್ಲ ಎಂದರೆ, ನಿವೇಶನ ಹಂಚಿಕೆ ಆಗಲಿಲ್ಲ ಎಂದರೆ ಜನರ ಕೆಂಗಣ್ಣಿಗೆ ಗುರಿಯಾಗುವುದು ಮಾತ್ರವಲ್ಲ ಚುನಾವಣೆಯಲ್ಲಿ ವೋಟ್ ಸಿಗದೇ ಹೋಗಬಹುದು. ಹಾಗಾಗಿ ಸರ್ಕಾರವು ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳುವುದು ಖಂಡಿತ ಎಂದು ಹೇಳಲಾಗುತ್ತಿದೆ.

By

Leave a Reply

Your email address will not be published. Required fields are marked *