ನೈಸರ್ಗಿಕವಾಗಿ ಸಿಗುವ ಸಿಹಿ ಅಂಶ ಹೊಂದಿರುವ ಅವರೆಕಾಳು ಅಗತ್ಯವಾದ ವಿಟಮಿನ್ ಮತ್ತು ವಿಟಮಿನ್ ಕೆ, ಸಿ ಮತ್ತು ಮ್ಯಾಂಗನೀಸ್, ಫೈಬರ್​ಗಳಿಂದ ಕೂಡಿದೆ. ಅತಿಯಾಗಿ ನಾರಿನಾಂಶ ಹೊಂದಿರುವ ಅವರೆಕಾಳು ಪೌಷ್ಟಿಕಾಂಶಗಳನ್ನು ದೇಹಕ್ಕೆ ನೀಡುತ್ತದೆ. ಅವರೆಕಾಳು ಪಲ್ಯದ ಜತೆಗೆ ಸಾಂಬಾರು ಪದಾರ್ಥಗಳಲ್ಲಿ ಬಳಸಬಹುದು.

ವಿಧದ ಪದಾರ್ಥಗಳನ್ನು ಮಾಡಿ ರುಚಿಕರವಾದ ಆಹಾರ ಸೇವಿಸುವುದರ ಜತೆಗೆ ದೇಹಕ್ಕೆ ಪೌಷ್ಟಿಕಾಂಶಗಳನ್ನು ಪಡೆದುಕೊಳ್ಳಬಹುದಾಗಿದೆ. ಅವರೆಕಾಳು ಸೇವನೆಯು ನಿಮ್ಮ ಜೀರ್ಣಕ್ರಿಯೆಗೆ ಉತ್ತಮ ಪ್ರಯೋಜನವನ್ನು ನೀಡುತ್ತದೆ. ಇದರಲ್ಲಿರುವ ಫೈಬರ್ ಅಂಶ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ.

ಇದರಿಂದ ಕರುಳು ಆರೋಗ್ಯವೂ ಸುಧಾರಿಸುತ್ತದೆ. ಸಲಾಡ್, ಕರಿಗಳ ತಯಾರಿಕೆಯಲ್ಲಿ ಇವುಗಳಲ್ಲಿ ಬಳಸಬಹುದು. ಇದರಿಂದ ಆರೋಗ್ಯ ಪ್ರಯೋಜನ ಸುಧಾರಿಸುತ್ತದೆ. ಸಾಕಷ್ಟು ಆರೋಗ್ಯಕರ ಲಾಭ ಇರುವಂತಹ ಅವರೇ ಕಾಳಿನ ಸಾರು ಅಥವಾ ಸಾಂಬಾರ್ ಮಾಡುವ ಸುಲಭವಾದ ಹಾಗೂ ರುಚಿಯಾದ ವಿಧಾನ ಹೇಗೆ? ಮತ್ತು ಅವರೇ ಕಾಳಿನ ಆರೋಗ್ಯಕರ ಪ್ರಯೋಜನಗಳ ಬಗ್ಗೆ ಈ ಲೇಖನದಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

ಮೊದಲು ಅವರೆ ಕಾಳಿನ ಆರೋಗ್ಯಕರ ಪ್ರಯೋಜನಗಳ ಕುರಿತು ಪುಟ್ಟದಾಗಿ ಹೇಳುವುದಾದರೆ, ಅವರೆಕಾಳು ಸೇವನೆ ಕಬ್ಬಿಣದ ಉತ್ತಮ ಮೂಲವಾಗಿದೆ. ಕಬ್ಬಿಣದ ಕೊರತೆಯು ರಕ್ತಹೀನತೆಗೆ ಪ್ರಮುಖ ಕಾರಣವಾಗಬಹುದು. ನೀವು ಸಾಕಷ್ಟು ಕಬ್ಬಿಣಾಂಶವನ್ನು ಹೊಂದಿಲ್ಲದಿದ್ದರೆ ನಿಮ್ಮ ದೇಹವು ಸಾಕಷ್ಟು ಆರೋಗ್ಯಕರ ಆಮ್ಲಜನಕ ಸಾಗಿಸುವ ಕೆಂಪು ರಕ್ತಕಣಗಳನ್ನು ಉತ್ಪಾದಿಸುವುದಿಲ್ಲ. ಇದರಿಂದಾಗಿ ಹಿಮೋಗ್ಲೋಬಿನ್ ಕೊರತೆ ಉಂಟಾಗುತ್ತದೆ.

ಜೊತೆಗೆ ನಮ್ಮ ದೇಹಕ್ಕೆ ಶಕ್ತಿಯನ್ನೂ ಸಹ ತುಂಬುತ್ತದೆ. ಇನ್ನು ಅವರೆಕಾಳು ಸೇವನೆ ನಮ್ಮ ಕಣ್ಣಿನ ಆರೋಗ್ಯವನ್ನು ಸುಧಾರಿಸುತ್ತದೆ. ಇದರಲ್ಲಿರುವ ಲುಟೀನ್ ವೃದ್ಧಾಪ್ಯದಲ್ಲಿ ಕಣ್ಣಿನ ಪೊರೆ ಮತ್ತು ದೃಷ್ಟಿ ಕಳೆದುಕೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಅವರೆಕಾಳು ಸೇವನೆಯಿಂದ ದೃಷ್ಟಿಯನ್ನು ಹೆಚ್ಚಿಸಿಕೊಳ್ಳಬಹುದಾಗಿದೆ. ಹಾಗೇ ಅವರೆಕಾಳಿನಲ್ಲಿರುವ ಕರಗದ ಫೈಬರ್ ಅಂಶವು ಹೃದ್ರೋಗ ಮತ್ತು ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅಷ್ಟೇ ಅಲ್ಲದೆ , ಬೀನ್ಸ್, ಜೋಳ ಈ ರೀತಿಯ ಹೆಚ್ಚು ಭಾರವಾದ ದ್ವಿದಳ ಧಾನ್ಯಗಳಿಗೆ ಹೋಲಿಸಿದರೆ ಬಟಾಣಿ ಕಡಿಮೆ ಕೊಬ್ಬನ್ನು ಹೊಂದಿದೆ. ಜತೆಗೆ ಕ್ಯಾಲೊರಿಗಳ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಹೆಚ್ಚಿನ ಫೈಬರ್ ಅಂಶವು ತೂಕ ಇಳಿಸುವಲ್ಲಿ ಸಹಾಯ ಮಾಡುತ್ತದೆ. ಮತ್ತು ಅವರೆಕಾಳಿನಲ್ಲಿರುವ ವಿಟಮಿನ್ ಸಿ ಅಂಶದ ಅತ್ಯುತ್ತಮ ಮೂಲವಾಗಿದೆ. ಇದು ಕಾಲಜನ್ ಉತ್ಪಾದನೆಯಲ್ಲಿ ಮಹತ್ವದ ಪಾತ್ರ ಹೊಂದಿದೆ. ಕಾಲಜನ್ ಚರ್ಮದ ಆರೋಗ್ಯವನ್ನು ಸುಧಾರಿಸುವುದರ ಜತೆಗೆ ಚರ್ಮ ಹೊಳೆಯುವಂತೆ ಮಾಡಲು ಸಹಾಯಕವಾಗಿದೆ.

ಇನ್ನೂ ಇಷ್ಟೆಲ್ಲಾ ಆರೋಗ್ಯಕರ ಲಾಭ ಇರುವ ಅವರೇಕಾಳನ್ನು ಹಸಿಯಾಗಿ ತಿನ್ನಲು ಅಷ್ಟೆಲ್ಲ ಇಷ್ಟ ಪಡುವುದಿಲ್ಲ. ಬದಲಿಗೆ ಇದರಿಂದ ನಾನಾ ರೀತಿಯ ಖಾದ್ಯಗಳನ್ನು ತಯಾರಿಸಿ ಸೇವಿಸಬಹುದು. ಅದರಲ್ಲಿ ಅವರೆಕಾಳಿನ ಸಾಂಬಾರ್ ಅಥವಾ ಸಾರು ಕೂಡಾ ಒಂದು. ಇದು ಒಣಗಿದ ಅವರೆಕಾಳು ಸಾಂಬಾರ್. ಇದನ್ನ ಮಾಡಲು ನಮಗೆ ಏನೆಲ್ಲಾ ಸಾಮಗ್ರಿಗಳು ಬೇಕು ಎಂದು ನೋಡುವುದಾದರೆ, ಅವರೆಕಾಳು ಒಂದು ಕಪ್, 2 ಈರುಳ್ಳಿ, 1 ಟೊಮೆಟೊ, ನಾಲ್ಕರಿಂದ ಐದು ಎಸಳು ಬೆಳ್ಳುಳ್ಳಿ, ಸ್ವಲ್ಪ ಹುಣಿಸೆ ಹಣ್ಣು, ತೆಂಗಿನ ಕಾಯಿ ಸ್ವಲ್ಪ, ಕೆಂಪು ಮೆಣಸಿನ ಪುಡಿ ಖಾರಕ್ಕೆ ತಕ್ಕಷ್ಟು , ಆಲೂಗಡ್ಡೆ 2, ಉಪ್ಪು, ಎಣ್ಣೆ , ಸಾಸಿವೆ , ಕರಿಬೇವು ಸ್ವಲ್ಪ ಹಾಕಿ ಫ್ರೈ ಮಾಡಿ ನಂತರ ನೆನೆಸಿ ಇಟ್ಟ ಅವರೆಕಾಳು ಹಾಕಿ

ಮಾಡುವ ವಿಧಾನ ಹೇಗೆ ಎಂದು ನೋಡುವುದಾದರೆ, ಮೊದಲು ಅವರೆಕಾಳನ್ನು ಸುಮಾರು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ಇಟ್ಟುಕೊಳ್ಳಬೇಕು. ನಂತರ ಈರುಳ್ಳಿ ಟೊಮೆಟೊ ಬೆಳ್ಳುಳ್ಳಿ ಹುಣಿಸೆ ಹಣ್ಣು, ತೆಂಗಿನ ಕಾಯಿ ಕೆಂಪು ಮೆಣಸಿನ ಪುಡಿ ಇವೆಲ್ಲವನ್ನೂ ಸೇರಿಸಿ ಮಿಕ್ಸಿ ಜಾರಿಗೆ ಹಾಕಿ ಚೆನ್ನಾಗಿ ರುಬ್ಬಿಕೊಳ್ಳಬೇಕು. ನಂತರ ಒಂದು ಕುಕ್ಕರ್ ನಲ್ಲಿ ಸ್ವಲ್ಪ ಎಣ್ಣೆ ಹಾಕಿ ಎಣ್ಣೆ ಬಿಸಿಯಾದಾಗ ಸಾಸಿವೆ, ಕರಿಬೇವು ಸ್ವಲ್ಪ ಹಾಕಿ ಫ್ರೈ ಮಾಡಿ ನಂತರ ನೆನೆಸಿ ಇಟ್ಟ ಅವರೆಕಾಳು ಹಾಕಿ ನಂತರ ಕಟ್ ಮಾಡಿದ ಆಲೂಗಡ್ಡೆ ಹಾಗೂ ರುಬ್ಬಿಕೊಂಡ ಮಿಶ್ರಣ ಮತ್ತು ನೀರನ್ನು ಹಾಕಿ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಕುಕ್ಕರ್ ಮುಚ್ಚಳ ಮುಚ್ಚಿ 3 ವಿಷಲ್ ಕೂಗಿಸಿದರೆ ರುಚಿಯಾದ ಅವರೆಕಾಳು ಸಾರು ಅನ್ನದ ಜೊತೆ ತಿನ್ನಲು ಸಿದ್ಧ.

ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!