ಲಾಕ್ ಡೌನ್ ಸಮಯದಲ್ಲಿ ಕೆಲಸವಿಲ್ಲದೆ ಬಹಳಷ್ಟು ದಿನಗೂಲಿ ನೌಕರರು ಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೋವಿಡ್ ನೈಂಟೀನ್ ಹೆಚ್ಚಾಗುತ್ತಿರುವ ಕಾರಣ ಸರ್ಕಾರಕ್ಕೆ ಲಾಕ್ ಡೌನ್ ಮಾಡುವ ಅನಿವಾರ್ಯತೆ ಎದುರಾಗಿತ್ತು. ಇದೀಗ ಸರ್ಕಾರ ಲಾಕ್ ಡೌನ್ ಸಮಯದಲ್ಲಿ ತಮ್ಮ ಕೆಲಸವನ್ನು ಕಳೆದುಕೊಂಡವರಿಗೆ ಪರಿಹಾರವನ್ನು ವಿತರಿಸಿದೆ. ದಿನಗೂಲಿ ನೌಕರ ವರ್ಗಕ್ಕೆ ಸರ್ಕಾರ ಪರಿಹಾರ ಧನವನ್ನು ವಿತರಿಸಿದೆ ಅದರಲ್ಲಿ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ 3,000 ರೂಪಾಯಿ ಪರಿಹಾರಧನವನ್ನು ವಿತರಿಸಿದೆ. ಈ ಪರಿಹಾರವನ್ನು ಪಡೆದುಕೊಳ್ಳಬೇಕಾದರೆ ಆಟೋ, ಟ್ಯಾಕ್ಸಿ, ಕ್ಯಾಬ್ ಚಾಲಕರು ಅರ್ಜಿಯನ್ನು ತುಂಬಬೇಕಾಗುತ್ತದೆ. ಹಾಗಾದರೆ ಆನ್ಲೈನ್ ಮೂಲಕ ಹೇಗೆ ಅರ್ಜಿ ಸಲ್ಲಿಸಬಹುದು ಎಂಬ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.
ಕೋವಿಡ್ 19 2ನೇ ಅಲೆಯ ತೀವ್ರತೆಯ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಯ ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ ಚಾಲಕರು, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ಮೂರು ಸಾವಿರ ರೂಪಾಯಿ ಪರಿಹಾರವನ್ನು ಕರ್ನಾಟಕ ಸರ್ಕಾರದಿಂದ ಘೋಷಿಸಲಾಗಿದೆ. ಆಟೋರಿಕ್ಷಾ ಚಾಲಕರು, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರು ಪರಿಹಾರ ಪಡೆಯಲು ಆನ್ಲೈನ್ ಅರ್ಜಿ ಸಲ್ಲಿಸಬೇಕಾಗುತ್ತದೆ. ಕಂಪ್ಯೂಟರ್ ನಲ್ಲಿ ಮೊದಲು ಸೇವಾ ಸಿಂಧು ಸರ್ವಿಸ್ ಪೋರ್ಟಲ್ ಅನ್ನು ಓಪನ್ ಮಾಡಿಕೊಳ್ಳಬೇಕು. ಮೊದಲ ಬಾರಿಗೆ ಸೇವಾ ಸಿಂಧು ಸರ್ವಿಸ್ ವೆಬ್ ಸೈಟ್ ಓಪನ್ ಆಗುವುದಿಲ್ಲ ರಿಜಿಸ್ಟರ್ ಮಾಡಿಕೊಳ್ಳಬೇಕಾಗುತ್ತದೆ. ವೆಬ್ ಸೈಟ್ ಓಪನ್ ಆದನಂತರ ಎಡಗಡೆ ಅಪ್ಲೈ ಫಾರ್ ಸರ್ವಿಸ್ ಎಂದು ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು ಆಗ ವ್ಯೂ ಆಲ್ ಅವೈಲೇಬಲ್ ಸರ್ವಿಸಸ್ ಎಂಬ ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಬೇಕು. ನಂತರ ಸರ್ಚ್ ಬಾಕ್ಸ್ ಕಂಡುಬರುತ್ತದೆ ಅಲ್ಲಿ ಆಟೋ ಎಂದು ಟೈಪ್ ಮಾಡಬೇಕು. ಆಗ ಕೆಳಗಡೆ ಎರಡು ಆಪ್ಷನ್ ಬರುತ್ತದೆ, ಎರಡನೇ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ಆಗ ಕೆಳಗಡೆ ನೋಟ್ ಇರುತ್ತದೆ ಅದರಲ್ಲಿ ಈ ಅರ್ಜಿಯನ್ನು ಇಂಗ್ಲಿಷ್ ನಲ್ಲಿ ಭರ್ತಿ ಮಾಡಬೇಕು ಎಂದು ಇರುತ್ತದೆ.
ನಂತರ ಅರ್ಜಿದಾರನ ಹೆಸರು, ಆಧಾರ್ ಕಾರ್ಡ್ ನಂಬರ್ ಹಾಕಬೇಕು. ನಂತರ ಪರಿಹಾರ ನಿಧಿ ಪಡೆಯುವ ವರ್ಷ ಎಂದು ಇರುತ್ತದೆ ಅದರ ಮುಂದೆ 2021-2022 ಎಂದು ಸೆಲೆಕ್ಟ್ ಮಾಡಬೇಕು. ನಂತರ ಅರ್ಜಿದಾರನ ಮೊಬೈಲ್ ನಂಬರ್ ಹಾಕಬೇಕು ಆಗ ಮೊಬೈಲ್ ಗೆ ಓಟಿಪಿ ಬರುತ್ತದೆ ಅದನ್ನು ಎಂಟರ್ ಓಟಿಪಿ ಎಂಬಲ್ಲಿ ಹಾಕಿ ವ್ಯಾಲಿಡಿಟಿ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ನಂತರ ವಿಳಾಸ ಇದ್ದಲ್ಲಿ ವಿಳಾಸ ಹಾಕಬೇಕು. ನಂತರ ಜಿಲ್ಲೆಯ ಹೆಸರನ್ನು ಹಾಕಬೇಕು ನಂತರ ತಾಲೂಕನ್ನು ಸೆಲೆಕ್ಟ್ ಮಾಡಬೇಕು. ಕೆಟಗೆರಿ ಕೇಳುತ್ತದೆ ಎಸ್ಸಿ-ಎಸ್ಟಿ ಅಥವಾ ಬೇರೆ ಯಾವುದು ಎಂಬುದನ್ನು ಸೆಲೆಕ್ಟ್ ಮಾಡಬೇಕು. ನಂತರ ನಿಮ್ಮ ಮಾಹಿತಿಯನ್ನು ಹಂಚಿಕೊಳ್ಳಲು ಇಷ್ಟಪಡುತ್ತೀರಾ ಎಂದು ಕೇಳುತ್ತದೆ ಯಸ್ ಎಂದು ಸೆಲೆಕ್ಟ್ ಮಾಡಬೇಕು. ನಂತರ ಡ್ರೈವಿಂಗ್ ಲೈಸೆನ್ಸ್ ಬಗ್ಗೆ ಮಾಹಿತಿಯನ್ನು ತುಂಬಬೇಕು. ಮೊದಲು ಡಿಎಲ್ ನಂಬರ್ ಹಾಕಬೇಕು. ನಂತರ ಡಿಎಲ್ ವ್ಯಾಲಿಡಿಟಿ ಡೇಟ್ ಇರುತ್ತದೆ ಅದನ್ನು ಹಾಕಬೇಕು. ನಂತರ ಅರ್ಜಿದಾರನ ಹೆಸರು ಡ್ರೈವಿಂಗ್ ಲೈಸೆನ್ಸ್ ನಲ್ಲಿ ಯಾವ ರೀತಿ ಇರುತ್ತದೆಯೋ ಅದೇ ರೀತಿ ಹಾಕಬೇಕು.
ನಂತರ ಬ್ಯಾಡ್ಜ್ ನಂಬರ್ ಹಾಗೂ ವಾಹನ ಯಾವ ವರ್ಗಕ್ಕೆ ಸೇರಿದೆ ಎಂಬುದನ್ನು ಡ್ರೈವಿಂಗ್ ಲೈಸನ್ಸ್ ನಲ್ಲಿ ಕೊಟ್ಟಿರುತ್ತಾರೆ ಅದನ್ನು ಹಾಕಬೇಕು. ನಂತರ ಲಾಕ್ ಡೌನ್ ಆಗುವ ಮೊದಲು ಚಲಾಯಿಸಿದ ವಾಹನದ ವಿವರವನ್ನು ಕೊಡಬೇಕು. ವಾಹನದ ನಂಬರ್ ಹಾಕಬೇಕು ನಂತರ ವಾಹನದ ಚಾಸಿಸ್ ಸಂಖ್ಯೆಯ ಕೊನೆಯ ಐದು ಸಂಖ್ಯೆ ಅಥವಾ ಅಕ್ಷರಗಳನ್ನು ಹಾಕಬೇಕು. ನಂತರ ಅರ್ಜಿದಾರನ ಹೆಸರು ಆರ್ಸಿ ಕಾರ್ಡ್ ನಲ್ಲಿ ಯಾವ ರೀತಿ ಇರುತ್ತದೆಯೋ ಅದೇ ರೀತಿ ಹಾಕಬೇಕು. ವಾಹನದ ವರ್ಗ ಯಾವುದು ಎಂಬುದನ್ನು ಹಾಕಬೇಕು. ನಂತರ ವಾಹನದ ಸೀಟಿಂಗ್ ಕೆಪ್ಯಾಸಿಟಿ ಮತ್ತು ಫಿಟ್ನೆಸ್ ಸರ್ಟಿಫಿಕೇಟ್ ನ ವ್ಯಾಲಿಡಿಟಿ ಡೇಟ್ ಅನ್ನು ಹಾಕಬೇಕು. ನಂತರ ಅರ್ಜಿದಾರನ ಬ್ಯಾಂಕ್ ಅಕೌಂಟ್ ವಿವರವನ್ನು ಕೊಡಬೇಕಾಗುತ್ತದೆ. ಬ್ಯಾಂಕ್ ಹೆಸರು ಮತ್ತು ಶಾಖೆಯ ಜಿಲ್ಲೆ, ಶಾಖೆಯ ಹೆಸರನ್ನು ಹಾಕಬೇಕು ನಂತರ ಅರ್ಜಿದಾರನ ಹೆಸರು ಬ್ಯಾಂಕ್ ಖಾತೆಯಲ್ಲಿ ಯಾವ ರೀತಿ ಇರುತ್ತದೆಯೋ ಅದೇ ರೀತಿ ಹಾಕಬೇಕು.
ನಂತರ ಅಕೌಂಟ್ ನಂಬರ್ ಮತ್ತು ಬ್ಯಾಂಕಿನ ಐಎಫ್ಎಸ್ ಸಿ ಕೋಡ್ ನಂಬರ್ ಅನ್ನು ಹಾಕಬೇಕು. ನಂತರ ಘೋಷಣಾ ಪತ್ರದಲ್ಲಿ ಲಾಕ್ ಡೌನ್ ಆದಂತಹ ಸಮಯದಲ್ಲಿ ನಮ್ಮ ದಿನಗೂಲಿಯನ್ನು ಕಳೆದುಕೊಂಡಿದ್ದೇವೆ, ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ ಎಂದು ಈ ಮೂಲಕ ದೃಢೀಕರಿಸುತ್ತೇನೆ ಎಂದು ಇರುತ್ತದೆ ಅದಕ್ಕೆ ಎಸ್ ಎಂದು ಸೆಲೆಕ್ಟ್ ಮಾಡಬೇಕು. ನಂತರ ನಾನು ಮೇಲೆ ಹೇಳಿದ ಎಲ್ಲಾ ವಿವರಗಳು ಸತ್ಯವಾಗಿರುತ್ತದೆ, ಒಂದು ವೇಳೆ ತಪ್ಪಾಗಿದ್ದಲ್ಲಿ ಶಿಕ್ಷೆಗೆ ಒಳಪಡುತ್ತೇನೆ ಎಂದು ಇರುತ್ತದೆ ಅದಕ್ಕೆ ಎಸ್ ಸೆಲೆಕ್ಟ್ ಮಾಡಬೇಕು. ನಂತರ ಕೆಳಗಡೆ ವರ್ಲ್ಡ್ ವೆರಿಫಿಕೇಷನ್ ನಂಬರ್ ಇರುತ್ತದೆ ಅದನ್ನು ಒಂದು ಬಾಕ್ಸ್ ನಲ್ಲಿ ಇದ್ದಹಾಗೆ ಟೈಪ್ ಮಾಡಬೇಕು. ನಂತರ ಸಬ್ಮಿಟ್ ಎಂಬ ಆಪ್ಷನ್ ಇರುತ್ತದೆ ಅದನ್ನು ಕ್ಲಿಕ್ ಮಾಡಬೇಕು. ಅರ್ಜಿದಾರನ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಬ್ಯಾಂಕ್ ಪಾಸ್ ಬುಕ್ ಗಳು ಪಿಡಿಎಫ್ ಫಾರ್ಮೆಟ್ ನಲ್ಲಿ ಇದ್ದು ಅಪ್ಲೋಡ್ ಮಾಡಬೇಕಾಗುತ್ತದೆ, ಮಾಡಿದ ನಂತರ ಸಬ್ಮಿಟ್ ಎಂಬ ಆಪ್ಷನ್ ಬರುತ್ತದೆ ಅದನ್ನು ಕ್ಲಿಕ್ ಮಾಡಬೇಕು. ನಂತರ ಆಧಾರ್ ಇ ಅಥೆಂಟಿಕೇಷನ್ ಎಂಬ ಆಪ್ಷನ್ ಬರುತ್ತದೆ, ನಂತರ ಪೇಮೆಂಟ್ ಮಾಡಬೇಕಾಗುತ್ತದೆ. ಆನ್ಲೈನ್ ಮೂಲಕ ಪೇಮೆಂಟ್ ಆದ ನಂತರ ನೀವು ತುಂಬಿದ ಅರ್ಜಿಯ ಪ್ರಿಂಟ್ ಔಟ್ ಅನ್ನು ತೆಗೆದುಕೊಳ್ಳಬೇಕು.
ಪ್ರಿಂಟೌಟ್ ನಲ್ಲಿರುವ ರೆಫರೆನ್ಸ್ ನಂಬರ್ ಮೂಲಕ ನೀವು ಹಾಕಿರುವ ಅರ್ಜಿ ಸ್ಟೇಟಸ್ ನೋಡಬಹುದು. ಸ್ಟೇಟಸ್ ನೋಡುವುದಾದರೆ ಸೇವಾ ಸಿಂಧು ಸರ್ವಿಸ್ ವೆಬ್ಸೈಟ್ ಓಪನ್ ಮಾಡಿ ವ್ಯೂ ಸ್ಟೇಟಸ್ ಆಫ್ ಅಪ್ಲಿಕೇಷನ್ ಎಂದು ಇರುತ್ತದೆ, ಅದರ ಮೇಲೆ ಕ್ಲಿಕ್ ಮಾಡಿದರೆ ಟ್ರ್ಯಾಕ್ ಅಪ್ಲಿಕೇಷನ್ ಸ್ಟೇಟಸ್ ಎಂದು ಬರುತ್ತದೆ, ಅದನ್ನು ಕ್ಲಿಕ್ ಮಾಡಿದಾಗ ಒಂದು ಪೇಜ್ ಓಪನ್ ಆಗುತ್ತದೆ ಅಲ್ಲಿ ರೆಫರೆನ್ಸ್ ನಂಬರ್ ಎಂದು ಇರುತ್ತದೆ ಅಲ್ಲಿ ನಿಮ್ಮ ಅರ್ಜಿಯ ರೆಫರೆನ್ಸ್ ನಂಬರ್ ಅನ್ನು ಹಾಕಿ ಗೆಟ್ ಡಾಟಾ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿದಾಗ ನಿಮ್ಮ ಅರ್ಜಿ ಅಪ್ರೂವಲ್ ಆಗಿದೆಯೋ ಇಲ್ಲವೋ ಎಂಬುದನ್ನು ನೋಡಬಹುದು. ಈ ಮಾಹಿತಿ ಉಪಯುಕ್ತವಾಗಿದ್ದು ನಿಮಗೆ ಗೊತ್ತಿರುವ ಆಟೋ, ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಚಾಲಕರಿಗೆ ತಿಳಿಸಿ. ಸರ್ಕಾರದಿಂದ ಪರಿಹಾರಧನವನ್ನು ಚಾಲಕರು ಪಡೆಯಲು ಸಹಾಯ ಮಾಡಿ.