ದಿನ ದಿನ ಹೋದಂತೆ ಕರೊನ ಆರ್ಭಟ ಹೆಚ್ಚುತ್ತಲೇ ಇದೆ ವಿನಹ ಕಡಿಮೆ ಏನೂ ಆಗುತ್ತಿಲ್ಲ. ಇದಕ್ಕೆಲ್ಲ ನೇರವಾಗಿ ನಾವೇ ನಮ್ಮ ಬೇಜವಾಬ್ಧಾರಿ ತನವೇ ಕಾರಣ ಎಂದರೆ ತಪ್ಪೇನೂ ಇಲ್ಲ. ಈಗಾಗಲೇ ಸಾಕಾಹತು ಜನರಿಗೆ ಕರೊನ ಬಂದಿದ್ದು ಹಲವಾರು ಸಾವು ಕೂಡಾ ಆಗಿದೆ. ಕರೊನ ಬರೋಕೆ ಮುಖ್ಯ ಕಾರಣ ಎಂದರೆ ದೇಹದಲ್ಲಿ ಇರಿವ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು. ಈ ಸಂದರ್ಭದಲ್ಲಿ ನಾವು ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಅದಕ್ಕಾಗಿ ಖ್ಯಾತ ಆಯುರ್ವೇದ ತಜ್ಞರಾದ ಡಾಕ್ಟರ್ ಗಿರಿಧರ್ ಕಜೆ ಅವರು ಈ ಮೂರು ಸೂತ್ರಗಳನ್ನು ತಿಳಿಸಿದ್ದಾರೆ ಅದೇನು ಅಂತ ನೋಡೋಣ.
ಮೊದಲಿಗೆ ಪ್ರತೀ ದಿನ ಒಬ್ಬ ಮನುಷ್ಯ ಒಂದು ಲೀಟರ್ ತುಳಸಿ ನೀರನ್ನು ಕುಡಿಯಬೇಕು. ಅದಕ್ಕಾಗಿ ಒಂದು ಲೀಟರ್ ನೀರನ್ನ ತೆಗೆದುಕೊಂಡು ಮೊದಲು ಸ್ವಲ್ಪ ಕುದಿಸಿಕೊಂಡು ನಂತರ ಅದಕ್ಕೆ ತುಳಸಿ ಎಲೆಗಳನ್ನು ಹಾಕಿ ಮತ್ತೆ ಸ್ವಲ್ಪ ಕುದಿಸಿ ಆ ನೀರನ್ನು ಕುಡಿಯಲು ಬಳಕೆ ಮಾಡಬೇಕು. ಎರಡನೆಯದಾಗಿ ಹಾಲು ಮತ್ತು ಅರಿಶಿನ. ಮೊದಲೇ ಬಿಸಿ ಆಗಿರುವ ಹಾಲಿಗೆ ಕಾಲು ಚಮಚದಿಂದ ಅರ್ಧ ಚಮಚ ಅರಿಶಿನ ಹಾಕಿ ಮತ್ತೆ ಕುದಿಸಿ ನಂತರ ಅದನ್ನ ಸೋಸಿ ಕುಡಿಯಬೇಕು. ಅರಿಶಿನವನ್ನು ಯಾರಿಗೆ ದೇಹದಲ್ಲಿ ಉಷ್ಣ ಜಾಸ್ತಿ ಇರುತ್ತದೆ ಅವರು ಕಾಲು ಚಮಚ ಹಾಗೂ ಕಫ ಇರುವವರು ಅರ್ಧ ಚಮಚ ಹಾಕಿಕೊಳ್ಳಬಹುದು. ಡಯಾಬಿಟಿಸ್ ಇಲ್ಲದವರು ಸಕ್ಕರೆ ಅಥವಾ ಬೆಲ್ಲ ಹಾಕಿಕೊಂಡು ಕುಡಿಯಬಹುದು. ಇದನ್ನು ಪ್ರತೀ ದಿನ ಸಂಜೆ ಸಮಯದಲ್ಲಿ ಅಥವಾ ರಾತ್ರಿ ತೆಗೆದುಕೊಳ್ಳಬೇಕು. ನಮಗೆ ಯಾವುದೇ ರೀತಿಯ ವೈರಲ್ ಅಟ್ಯಾಕ್ ಆಗದೆ ಇರುವ ಹಾಗೆ ನೋಡಿಕೊಳ್ಳಲು ಮೊದಲು ನಮಗೆ ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚು ಇರಬೇಕು. ಇದನ್ನು ಹೆಚ್ಚಿಸಿಕೊಳ್ಳಲು ಮೇಲೆ ತಿಳಿಸಿದ ಎರಡು ಮನೆ ಮದ್ದನ್ನು ಬಿಟ್ಟು ಇನ್ನೊಂದು ಏನು ಅಂದರೆ, ಆಂಟಿ ವೈರಲ್ ಗುಣಗಳು ಇರುವಂತಹ ಔಷಧೀಯ ಸಸ್ಯಗಳು ಮುಖ್ಯವಾಗಿ “ನೆಲನೆಲ್ಲಿ” ಸಸ್ಯ ಇದು ಹೆಚ್ಚಾಗಿ ಆಂಟಿ ವೈರಲ್ ಗುಣವನ್ನು ಹೊಂದಿದ್ದು, ಇದು ಉತ್ತಮ ಉತ್ತಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣವನ್ನು ಹೊಂದಿದೆ. ಇದು ಸಾಮಾನ್ಯವಾಗಿ ಹಳ್ಳಿಯ ಕಡೆ ಹೆಚ್ಚು ಲಭ್ಯ ಇರುತ್ತದೆ. ಇನ್ನು ಸಿಟಿ ಕಡೆ ಇರುವವರು ಆಯುರ್ವೇದ ಅಂಗಡಿಗಳಲ್ಲಿ ಇದರ ಚೂರ್ಣವನ್ನು ತೆಗೆದುಕೊಂಡು ಬಳಸಬಹುದು. ಇದರ ಸಸ್ಯ ಸಿಕ್ಕಿದರೆ ಪೂರ್ತಿ ಸಸ್ಯವೂ ಪ್ರಯೋಜನಕಾರಿ ಆಗಿದೆ. ಯಾವುದೇ ಒಂದು ಭಾಗ ಇದು ಬೇಡ ಎಂದು ಒಗೆಯುವ ಹಾಗೇ ಇಲ್ಲ.
ಇನ್ನು ಎರಡನೆಯದು ಭದ್ರ ಮುಷ್ಟಿ ಸಸ್ಯ. ಇದೂ ಸಹ ಹಳ್ಳಿಗಳಲ್ಲಿ ಸಿಗುತ್ತದೆ. ಇದರ ಗದ್ದೆಯನ್ನು ಉಪಯೋಗ ಮಾಡಬೇಕು. ಮೂರನೆಯದಾಗಿ ಎಲ್ಲರಿಗೂ ತಿಳಿದೇ ಇರುವುದು ಅಮೃತ ಬಳ್ಳಿ ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಜೊತೆಗೆ ಉತ್ತಮ ಆಂಟಿ ವೈರಲ್ ಕೂಡಾ ಹೌದೂ. ಅಮೃತ ಬಳ್ಳಿಯ ಕಾಂಡ ಬಹಳ ಪ್ರಯೋಜನಕಾರಿ ಆಗಿ ಕೆಲಸ ಮಾಡುತ್ತದೆ ಹಾಗಾಗಿ ಎರಡು ಇಂಚಿನಷ್ಟು ಅಮೃತ ಬಳ್ಳಿ ಕಾಂಡವನ್ನು ಬಳಸಬೇಕು. ಈ ಮೂರು ಸಸ್ಯಗಳಲ್ಲಿ ಯಾವುದೇ ಒಂದನ್ನು ತೆಗೆದುಕೊಂಡು ಇದರ ಕಷಾಯ ತಯಾರಿಸಿಕೊಳ್ಳಬೇಕು. ಕಷಾಯ ಮಾಡಲು ಒಂದು ಲೋಟ ನೀರು ತೆಗೆದುಕೊಂಡರೆ ಅದು ಕಾಲು ಲೋಟ ಆಗುವಷ್ಟು ಕುದಿಸಬೇಕು. ಇಂದು ದಿನಕ್ಕೆ ಸುಮಾರು 40ml ಅಷ್ಟು ಒಬ್ಬ ವ್ಯಕ್ತಿ ಇವುಗಳ ಕಷಾಯವನ್ನು ಕುಡಿಯಬೇಕು. ಈ ಮೂರರಲ್ಲಿ ಯಾವುದೇ ಒಂದು ಕಷಾಯವನ್ನು ಪ್ರತೀ ದಿನವೂ ಕುಡಿಯಲೇಬೇಕು
ಈ ಮೂರು ಸೂತ್ರಗಳನ್ನು ಯಾರು ಪಾಲಿಸುತ್ತಾರೆ, ಅವರಿಗೆ ಈ ಕರೊನ ವೈರಸ್ ಬಂದರೂ ಸಹ ಇದು ಕರೊನ ವೈರಸ್ ಹೆಚ್ಚು ದಿನ ಕೆಲಸ ಮಾಡದ ಹಾಗೆ ತಡೆಯುತ್ತದೆ. ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚುತ್ತ ಹೋದಂತೇ ವೈರಸ್ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಸಧ್ಯದ ಪರಿಸ್ಥಿತಿಯಲ್ಲಿ ಈ ಕರೊನ ವೈರಸ್ ನ ಗುರಿ ಯಾರ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇದೆ ಅಂತವರಿಗೆ ಬೇಗ ಬರುತ್ತದೆ. ಈಗಿನ ವಾತಾವರಣ, ಜನರಲ್ಲಿ ಸಾಮಾಜಿಕ ಅಂತರ ಇಲ್ಲದೆಯೇ ಇರುವುದು ಇವೆಲ್ಲ ಈಗ ಕರೊನ ಇನ್ನೂ ಹೆಚ್ಚಾಗಲು ಮುಖ್ಯ ಕಾರಣ ಎನ್ನಬಹುದು ಆದರೆ ಇದಕ್ಕೂ ಮುಖ್ಯವಾಗಿ ನಮ್ಮಲ್ಲಿ ಇರುವ ಅಜಾಗರೂಕತೆ. ತಿಳಿದೂ ನಾವು ನಿರ್ಲಕ್ಷ್ಯ ಮಾಡುವುದು. ಆದರೆ ಕರೊನ ಬಂದರೆ ಹೆದರದೆ ಅದನ್ನ ಧೈರ್ಯದಿಂದ ಎದುರಿಸಬೇಕು. ಡಾಕ್ಟರ್ ಗಿರಿಧರ್ ಕಜೆ ಅವರು ಈ ಮೇಲಿನ ಔಷಧಗಳನ್ನು ತಿಳಿಸಿ, ಕರೊನ ವೈರಸ್ ಗೆ ಹೋಲಿಸಿದರೆ, ಮನುಷ್ಯರೇ ವೈರಸ್ ಗಿಂತ ಅತೀ ಹೆಚ್ಚು ಶಕ್ತಿಶಾಲಿ ಇದ್ದಾರೆ ಹೊರತು ವೈರಸ್ ಅಲ್ಲ ಅಂತ ಹೇಳುತ್ತಾರೆ. ಆದರೂ ನಮ್ಮ ಜಾಗ್ರತೆಯಲ್ಲಿ ನಾವು ಇರಬೇಕು ಹೆಚ್ಚು ಭಯ ಬೀಳದೆ “ಧೈರ್ಯo ಸರ್ವತ್ರ ಸಾಧನಂ ” ಎಂಬ ಮಾತಿನಂತೆ ಏನೇ ಬಂದರೂ ಸಹ ಧೈರ್ಯವಾಗಿ ಎದುರಿಸಿ ಜಯಿಸಬೇಕು. ಇದನ್ನು ನಿಮ್ಮ ಸ್ನೇಹಿತರಿಗೂ ಹಂಚಿಕೊಳ್ಳಿ ಈ ಕೋರನ ಟೈಮ್ ನಲ್ಲಿ ಇದರ ಸದುಪಯೋಗವನ್ನು ಪಡೆದುಕೊಳ್ಳಲಿ.